ಮುಂದುವರೆದ ಭೂಕುಸಿತ

Team Udayavani, Jun 10, 2019, 2:33 PM IST

ನರಗುಂದ: ಪಟ್ಟಣದ ಕಸಬಾ ಓಣಿಯ ಮನೆಯೊಂದರಲ್ಲಿ ಅಂತರ್ಜಲ ಹೆಚ್ಚಳದಿಂದ ಮತ್ತೂಂದೆಡೆ ಭೂಕುಸಿತ ಉಂಟಾಗಿದೆ.

ನರಗುಂದ: ಪಟ್ಟಣದ ನಾಲ್ಕು ಬಡಾವಣೆ ನಿವಾಸಿಗಳ ನಿದ್ದೆಗೆಡಿಸಿದ ಭೂಕುಸಿತ ಮತ್ತೇ ಮುಂದುವರೆದಿದೆ. ರವಿವಾರ ಸ್ಥಳೀಯ ಕಸಬಾ ಬಡಾವಣೆಯಲ್ಲಿ ಎರಡು ಮನೆಗಳ ನಡುವಿನ ಗೋಡೆಯ ಅಡಿಯಲ್ಲೇ ಭೂಕುಸಿತ ಉಂಟಾಗಿದೆ.

ಚನ್ನಬಸಪ್ಪ ಹಾದಿಮನಿ ಎಂಬುವರ ಮನೆ ಮತ್ತು ಯಲ್ಲವ್ವ ಮಟಗೇರ ಅವರ ಮನೆಗಳ ನಡುವಿನ ಗೋಡೆಯ ತಳಭಾಗದಲ್ಲಿ ಭೂಮಿ ಕುಸಿದಿದೆ. ಶನಿವಾರ ಮಧ್ಯರಾತ್ರಿ ಸಂಭವಿಸಿದೆ ಎನ್ನಲಾಗಿದೆ. ಎರಡೂ ಮನೆಗಳ ಗೋಡೆಯ ತಳದಲ್ಲಿ ಭೂಕುಸಿತ ಉಂಟಾಗಿ ಆಳವಾದ ಗುಂಡಿ ಬಿದ್ದಿದೆ. ವಿಚಿತ್ರವೆಂದರೆ ಭೂಕುಸಿತ ಉಂಟಾದ ಗುಂಡಿಯ ತಳದಲ್ಲಿ ಸಣ್ಣಗೆ ನೀರು ಹರಿಯುತ್ತಿರುವುದು ಕಂಡುಬಂದಿದೆ.

ಹೀಗಾಗಿ ಈ ಬಡಾವಣೆಗಳಲ್ಲಿ ಅಂತರ್ಜಲ ಹೆಚ್ಚಳದ ಭೀತಿ ಸಾರ್ವಜನಿಕರನ್ನು ನಿದ್ದೆಗೆಡಿಸಿದೆ.ಬೆಳಗ್ಗೆ ಪುರಸಭೆಯಿಂದ ಮುರಂ ಹಾಕಲಾಗಿದೆ. ಪಟ್ಟಣದ ಬಡಾವಣೆಗಳಲ್ಲಿ ಅಂತರ್ಜಲ ಹೆಚ್ಚಳದಿಂದ ಉಂಟಾಗುತ್ತಿರುವ ಭೂಕುಸಿತ ಜನರ ನಿದ್ದೆಗೆಡಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ