Udayavni Special

ಪುರಸಭೆ ಗದ್ದುಗೆಗೆ ಬಿಜೆಪಿಯಲ್ಲಿ ಪೈಪೋಟಿ

ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಆಕಾಂಕ್ಷಿಗಳು

Team Udayavani, Nov 3, 2020, 2:28 PM IST

ಪುರಸಭೆ ಗದ್ದುಗೆಗೆ ಬಿಜೆಪಿಯಲ್ಲಿ ಪೈಪೋಟಿ

ಗಜೇಂದ್ರಗಡ: ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಗದ್ದುಗೆಗಾಗಿ ಬಿಜೆಪಿ ವಲಯದಲ್ಲಿ ಭಾರೀ ಪೈಪೋಟಿ ಶುರುವಾಗಿದೆ. ಕಳೆದೆರಡು ವರ್ಷಗಳಿಂದ ಆಡಳಿತ ಯಂತ್ರ ಇಲ್ಲದಂತಾಗಿದ್ದ ಪುರಸಭೆಗೆ ರಾಜ್ಯ ಸರ್ಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಬಿಡುಗಡೆಗೊಳಿಸಿದೆ. ಅದರನ್ವಯ ನ.5ರಂದು ಚುನಾವಣೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕಮಲ ಪಾಳಯದಲ್ಲಿ ಭರ್ಜರಿ ಲಾಬಿ ನಡೆದಿದೆ. ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಬಿಜೆಪಿ18 ಸ್ಥಾನ ಹೊಂದಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮೀಸಲಾಗಿದ್ದರಿಂದ ಪುರುಷ ಸದಸ್ಯರುಒಳಗೊಳಗೆ ಕಸರತ್ತು ನಡೆಸಿದ್ದಾರೆಂದು ಕೇಳಿ ಬರುತ್ತಿವೆ. ಇನ್ನು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮೀಸಲಾಗಿದ್ದು, ಅಲ್ಲಿಯೂ ಪೈಪೋಟಿ ಏರ್ಪಟ್ಟಿದೆ.

ಪುರುಷರಿಗೆ ಅಧ್ಯಕ್ಷ ಪಟ್ಟ?: ಹಿಂದಿನ ಎರಡು ಅವಧಿಯಲ್ಲಿ ಪುರಸಭೆ ಅಧ್ಯಕ್ಷ ಗಾದಿಯನ್ನು ಮಹಿಳೆಯರೇ ಅಲಂಕರಿಸಿದ್ದರು. ಕಳೆದ ಅವಧಿಯಲ್ಲಿ ಸಾಮಾನ್ಯ ಮಹಿಳೆ, ನಂತರ ಹಿಂದುಳಿದ ವರ್ಗ ಎ ಮಹಿಳೆಯರು ಪಟ್ಟಣದಲ್ಲಿ ಆಳ್ವಿಕೆ ನಡೆಸಿದ್ದರು. ಆದರೆ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆಸಾಮಾನ್ಯ ಮೀಸಲಾತಿಯುಳ್ಳ ಪುರುಷ ಮತ್ತು ಮಹಿಳೆಯಾದರೂ ಸ್ಪರ್ಧಿಸಲು ಅವಕಾಶ ಬಂದೊದಗಿದೆ. ಆದರೆ ಬಹುತೇಕ ಅಧ್ಯಕ್ಷ ಸ್ಥಾನ ಈ ಬಾರಿ ಪುರುಷರ ಪಾಲಾಗಲಿದೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ.

ಮೊದಲ ಬಾರಿಗೆ ಸಮಾನ್ಯ ಮೀಸಲಾತಿ: ಗಜೇಂದ್ರಗಡ ಪುರಸಭೆ ಅಧ್ಯಕ್ಷ ಸ್ಥಾನ ಈ ಹಿಂದೆ ಮಹಿಳೆಯರಿಗೆ ನೀಡಲಾಗಿತ್ತು. ಆದರೆ ಇದೇಮೊದಲ ಬಾರಿಗೆ ಸಾಮಾನ್ಯ ಮೀಸಲಾತಿ ಬಂದಿರುವುದರಿಂದಾಗಿ ಅಧ್ಯಕ್ಷ ಗದ್ದುಗೆ ಪುರುಷರುದೊಡ್ಡ ಮಟ್ಟದಲ್ಲಿ ಪೈಪೋಟಿ ನಡೆಸಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.

ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ಪುರಪುತ್ರರ ಜೊತೆ ಮಹಿಳಾ ಮಣಿಗಳು ಸಹ ಭರ್ಜರಿಯಾಗಿ ಪೈಪೋಟಿ ನಡೆಸಿದ್ದಾರೆ. ಇನ್ನೊಂದು ಬಾರಿ ಸ್ತ್ರೀಯರಿಗೆ ಅವಕಾಶ ಕಲ್ಪಿಸಿ ಎಂದು ವರಿಷ್ಠರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆಂಬ ಮಾತುಗಳು ಸಹ ಪ್ರಬಲವಾಗಿ ಕೇಳಿ ಬರುತ್ತಿವೆ. ಆದರೆ ಎರಡುಸ್ಥಾನಗಳು ಮತ್ತೆ ಮಹಿಳೆಯರ ಪಾಲಾಗುತ್ತವೆಯೋ, ಅಥವಾ ಪುರುಷರಿಗೂ ಸ್ಥಾನ ಕಲ್ಪಿಸುತ್ತಾರೋ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. ಬಿಜೆಪಿ ಹೈಕಮಾಂಡ್‌ ಯಾರ ಹೆಸರನ್ನು ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೆ ಸೂಚಿಸುವರೋ, ಸೇವೆ ಸಲ್ಲಿಸುತ್ತೇವೆ ಎನ್ನುವ ಮಾತುಗಳೂಬಿಜೆಪಿ ವಲಯದಲ್ಲಿ ಸುಳಿದಾಡುತ್ತಿವೆ. ಆದರೂ ಅಧ್ಯಕ್ಷ ಆಯ್ಕೆ ಮಾತ್ರ ಬಿಜೆಪಿಗೆ ಕಗ್ಗಂಟಾಗುವ ಲಕ್ಷಣಗಳು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದೇವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಎಲ್ಲರ ಚಿತ್ತ ನ.5 ರತ್ತ :  ಗಜೇಂದ್ರಗಡ ಪುರಸಭೆ ಚುನಾವಣೆ2018ರಲ್ಲಿಯೇ ನಡೆದು ಇಂದಿಗೆ ಎರಡು ವರ್ಷಗಳು ಕಳೆದಿವೆ. ಧೀರ್ಘ‌ ಕಾಲದ ನಂತರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ. ನ. 5ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಯಾರು, ಯಾವ ಸ್ಥಾನ ಅಲಂಕರಿಸಲಿದ್ದಾರೆ ಎನ್ನುವ ಕುತೂಹಲ ಕೋಟೆ ನಾಡಿನ ಜನರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಡಿ.ಜಿ. ಮೋಮಿನ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್: ಹೊಸ ಮಾರ್ಗಸೂಚಿ: ರಾತ್ರಿ ಕರ್ಫ್ಯೂ ವಿಧಿಸಲು ರಾಜ್ಯಗಳಿಗೆ ಅವಕಾಶ

ಕೋವಿಡ್: ಹೊಸ ಮಾರ್ಗಸೂಚಿ: ರಾತ್ರಿ ಕರ್ಫ್ಯೂ ವಿಧಿಸಲು ರಾಜ್ಯಗಳಿಗೆ ಅವಕಾಶ

ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನ ಇನ್ನಿಲ್ಲ..

ಫುಟ್ಬಾಲ್ ದಂತಕಥೆ ಡಿಗೋ ಮರಡೋನ ಇನ್ನಿಲ್ಲ

ರೈಲ್ವೆ ಇಲಾಖೆಯ ವೆಬ್‌ಸೈಟ್‌ ಹ್ಯಾಕ್ ‌ಮಾಡಿ ವಂಚನೆ ಪ್ರಕರಣ: ಸಿಬಿಐ ತನಿಖೆ ಆರಂಭ

ರೈಲ್ವೆ ಇಲಾಖೆಯ ವೆಬ್‌ಸೈಟ್‌ ಹ್ಯಾಕ್ ‌ಮಾಡಿ ವಂಚನೆ ಪ್ರಕರಣ: ಸಿಬಿಐ ತನಿಖೆ ಆರಂಭ

ಪ.ಬಂಗಾಳ: BJP ಅಧಿಕಾರಕ್ಕೆ ಬಂದರೆ ಪೊಲೀಸರು ಬೂಟು ನೆಕ್ಕುವಂತೆ ಮಾಡುವೆ: ರಾಜು ಬ್ಯಾನರ್ಜಿ

ಪ.ಬಂಗಾಳ: BJP ಅಧಿಕಾರಕ್ಕೆ ಬಂದರೆ ಪೊಲೀಸರು ಬೂಟು ನೆಕ್ಕುವಂತೆ ಮಾಡುವೆ: ರಾಜು ಬ್ಯಾನರ್ಜಿ

ಪಂಚಲಿಂಗ ದರ್ಶನಕ್ಕೆ ಒಂದು ಸಾವಿರ ಮಂದಿಗೆ ಮಾತ್ರ ಅವಕಾಶ ನೀಡಲು ಸಿಎಂ ಸೂಚನೆ

ಪಂಚಲಿಂಗ ದರ್ಶನಕ್ಕೆ ಒಂದು ಸಾವಿರ ಮಂದಿಗೆ ಮಾತ್ರ ಅವಕಾಶ ನೀಡಲು ಸಿಎಂ ಸೂಚನೆ

Cyclone Nivar in Mamallapuram

ರಾತ್ರಿ 2 ಗಂಟೆಗೆ ಅಪ್ಪಳಿಸಲಿರುವ ನಿವಾರ್ ಚಂಡಮಾರುತ; NDRF ಸನ್ನದ್ಧ, 1 ಲಕ್ಷ ಮಂದಿ ಶಿಫ್ಟ್

CRpf

#Wesaluteyou: ರಕ್ತದಾನ ಮಾಡಿ ಯುವತಿಯ ಜೀವ ಉಳಿಸಿದ CRPF ಯೋಧರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ ಬಸ್ ನಿಲ್ದಾಣಕ್ಕೆ ಶ್ರೀ ಪುಟ್ಟರಾಜ ಗವಾಯಿ ಹೆಸರು: ಡಿಸಿಎಂ ಸವದಿ

ಗದಗ ಬಸ್ ನಿಲ್ದಾಣಕ್ಕೆ ಶ್ರೀ ಪುಟ್ಟರಾಜ ಗವಾಯಿ ಹೆಸರು: ಡಿಸಿಎಂ ಸವದಿ

ರಾಜ ಕಾಲುವೆ ಮೇಲೆ ತಲೆ ಎತ್ತಿವೆ ಕಟ್ಟಡಗಳು!

ರಾಜ ಕಾಲುವೆ ಮೇಲೆ ತಲೆ ಎತ್ತಿವೆ ಕಟ್ಟಡಗಳು!

ಪಶು ವೈದ್ಯ ಕಾಲೇಜು ಕಟ್ಟಡ ದುಸ್ಥಿತಿಗೆ ಸಚಿವರ ಅಸಮಾಧಾನ

ಪಶು ವೈದ್ಯ ಕಾಲೇಜು ಕಟ್ಟಡ ದುಸ್ಥಿತಿಗೆ ಸಚಿವರ ಅಸಮಾಧಾನ

ಕನ್ನಡಪರ ಸಂಘಟನೆಗಳ ಬಗ್ಗೆ ಶಾಸಕ ಯತ್ನಾಳ‌ ಹೇಳಿಕೆ ಖಂಡಿಸಿ ಪ್ರತಿಭಟನೆ

ಕನ್ನಡಪರ ಸಂಘಟನೆಗಳ ಬಗ್ಗೆ ಶಾಸಕ ಯತ್ನಾಳ‌ ಹೇಳಿಕೆ ಖಂಡಿಸಿ ಪ್ರತಿಭಟನೆ

gadaga-tdy-1

ಪಶು ಇಲಾಖೆಯಲ್ಲಿ ಖಾಲಿ ಕುರ್ಚಿ ಸ್ವಾಗತ!

MUST WATCH

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

ಹೊಸ ಸೇರ್ಪಡೆ

ಕೋವಿಡ್: ಹೊಸ ಮಾರ್ಗಸೂಚಿ: ರಾತ್ರಿ ಕರ್ಫ್ಯೂ ವಿಧಿಸಲು ರಾಜ್ಯಗಳಿಗೆ ಅವಕಾಶ

ಕೋವಿಡ್: ಹೊಸ ಮಾರ್ಗಸೂಚಿ: ರಾತ್ರಿ ಕರ್ಫ್ಯೂ ವಿಧಿಸಲು ರಾಜ್ಯಗಳಿಗೆ ಅವಕಾಶ

ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನ ಇನ್ನಿಲ್ಲ..

ಫುಟ್ಬಾಲ್ ದಂತಕಥೆ ಡಿಗೋ ಮರಡೋನ ಇನ್ನಿಲ್ಲ

ವಿಜಯಪುರ: ಕಬ್ಬಿನ‌ ಗದ್ದೆಯಲ್ಲಿ 2 ಚಿರತೆ ಮರಿಗಳು ಪತ್ತೆ

ವಿಜಯಪುರ: ಕಬ್ಬಿನ‌ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆ

ರೈಲ್ವೆ ಇಲಾಖೆಯ ವೆಬ್‌ಸೈಟ್‌ ಹ್ಯಾಕ್ ‌ಮಾಡಿ ವಂಚನೆ ಪ್ರಕರಣ: ಸಿಬಿಐ ತನಿಖೆ ಆರಂಭ

ರೈಲ್ವೆ ಇಲಾಖೆಯ ವೆಬ್‌ಸೈಟ್‌ ಹ್ಯಾಕ್ ‌ಮಾಡಿ ವಂಚನೆ ಪ್ರಕರಣ: ಸಿಬಿಐ ತನಿಖೆ ಆರಂಭ

ಪ.ಬಂಗಾಳ: BJP ಅಧಿಕಾರಕ್ಕೆ ಬಂದರೆ ಪೊಲೀಸರು ಬೂಟು ನೆಕ್ಕುವಂತೆ ಮಾಡುವೆ: ರಾಜು ಬ್ಯಾನರ್ಜಿ

ಪ.ಬಂಗಾಳ: BJP ಅಧಿಕಾರಕ್ಕೆ ಬಂದರೆ ಪೊಲೀಸರು ಬೂಟು ನೆಕ್ಕುವಂತೆ ಮಾಡುವೆ: ರಾಜು ಬ್ಯಾನರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.