ಮಹಾತ್ಮ ಗಾಂಧಿ ಬಯಲು ಭವನ ವ್ಯರ್ಥ

Team Udayavani, Nov 13, 2019, 12:48 PM IST

ನರೇಗಲ್ಲ: ಸ್ಥಳೀಯ ಪಟ್ಟಣ ಪಂಚಾಯತ್‌ ಹಾಗೂ ನಾಡ ಕಚೇರಿ ಮೈದಾನದಲ್ಲಿ ವಿವಿಧ ಅನುದಾನ ಪಡೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ.ಪಂ ವತಿಯಿಂದ ನಿರ್ಮಿಸಿರುವ ಬಯಲು ಮಹಾತ್ಮ ಗಾಂಧಿ ಭವನ ನಿರ್ಮಾಣಗೊಂಡು ದಶಕಗಳೇ ಕಳೆದರೂ ಸಾರ್ವಜನಿಕರ ಇಚ್ಛಾಶಕ್ತಿ ಕೊರತೆಯಿಂದ ವ್ಯರ್ಥವಾಗಿ ನಿಂತಿದೆ.

ಇಲ್ಲಿ ಇತ್ತೀಚೆಗೆ ಒಂದೇ ಒಂದು ಕಾರ್ಯಕ್ರಮ ನಡೆದ ಉದಾಹರಣೆ ಇಲ್ಲ. ರೈತರು ಬೆಳೆದ ಈರುಳ್ಳಿ ಕಟಾವಿಗಾಗಿ, ಮಳೆಗಾಲಯದಲ್ಲಿ ವಿವಿಧ ಬೆಳೆಗಳನ್ನು ಸಂರಕ್ಷಣೆ ಮಾಡಿ ಇಡಲು ಬಳಕೆ ಆಗುವುದನ್ನು ಬಿಟ್ಟರೆ ಉಳಿದಂತೆ ಹಗಲು ರಾತ್ರಿ ವೇಳೆಯಲ್ಲಿ ಅಕ್ರಮ ಚಟುವಟಿಕೆ ಎಗ್ಗಿಲ್ಲದೆ ನಡೆಯುತ್ತವೆ.

ಮಳೆಯಾದರೆ ಸಾಕು ಭವನದ ಆವರಣದಲ್ಲಿ ನೀರು ಭವನವನ್ನು ತುಂಬುತ್ತದೆ. ರಾತ್ರಿಯಾಯಿತೆಂದರೆ ಅನೈತಿಕ ಚಟುವಟಿಕೆ ತಾಣ, ಜೂಜಾಟದ ಅಡ್ಡೆ, ಸಾರಾಯಿ ಕುಡಿಯವ ಕ್ಲಬ್‌ ಆಗಿ ಮಾರ್ಪಡುತ್ತದೆ. ಆದ್ದರಿಂದ ಇದು ಗಾಂಧಿ ಭವನವೋ, ಕುಡುಕರ ತಾಣವೋ ತಿಳಿಯದಂತಾಗಿದೆ. ಮೂಲ ಸೌಕರ್ಯಗಳಿಂದ ವಂಚಿತವಾದ ಈ ಭವನದ ಆವರಣದ ಮುಂಭಾಗದಲ್ಲಿ ಹಾಗೂ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಜನರ ಮಲಮೂತ್ರ ವಿಸರ್ಜನೆ ಸಾಮಾನ್ಯವಾಗಿದೆ. ದುರ್ವಾಸನೆಯಿಂದ ಸುತ್ತಮುತ್ತಲಿನ ಪರಿಸರ ಮಲಿನವಾಗುತ್ತಿದ್ದು, ಪಟ್ಟಣದ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳು ಹರಡಬಹುದೆಂಬ ಭೀತಿ ಆವರಿಸಿದೆ.

ಮಹಾತ್ಮ ಗಾಂಧಿ ಭವನ ನಿರ್ಮಾಣ: ಪಟ್ಟಣದಲ್ಲಿ ಹೆಚ್ಚು ಸಾಂಸ್ಕೃತಿ, ಕಲಾ, ನಾಟಕ, ದೊಡ್ಡಾಟ ಸೇರಿದಂತೆ ವಿವಿಧ ಸಾಮಾಜಿಕ ಚಟುವಟಿಕೆಗೆ ಅನುಕೂಲವಾಗಲೆಂದು 2000ರಲ್ಲಿ ಐ.ಜಿ. ಸನದಿ ಸಂಸದರು ಧಾರವಾಡ ದಕ್ಷಿಣ ಭಾಗ ಇವರ ಸಂಸತ್‌ ನಿಧಿಯಿಂದ 2 ಲಕ್ಷ ರೂ. ಗಳಲ್ಲಿ ಮಹಾತ್ಮಗಾಂಧಿ ಭವನ ನಿರ್ಮಿಸಲಾಗಿದೆ. ಆದರೆ, ಭವನವನ್ನು ಅಭಿವೃದ್ಧಿ ಪಡಿಸುವುದಕ್ಕೆ ಇತ್ತೀಚೆಗೆ ಅಂದಾಜು 2 ಲಕ್ಷ ಅನುದಾನ ಬಳಕೆ ಮಾಡಲಾಗಿದೆ.

ಕಿತ್ತು ಹೋದ ನೆಲಹಾಸು-ಒಡೆದ ತಗಡು: ಇಲ್ಲಿನ ಗಾಂಧಿ ಭವನಕ್ಕೆ ಹಾಕಲಾಗದ ನೆಲಹಾಸು ಸಂಪೂರ್ಣವಾಗಿ ಕಿತ್ತು ಹೋಗಿದೆ. ಅಲ್ಲದೆ ಮೇಲ್ಛಾವಣಿಗೆ ಹಾಕಿದ ಸಿಮೆಂಟಿನ್‌ ತಗಡು ಒಡೆದು ಹೋಗಿರುವುದರಿಂದ ಅನೇಕರು ಇಲ್ಲಿ ಕಾರ್ಯಕ್ರಮ ಮಾಡುವುದಕ್ಕೆ ಹಿಂದೆಟ್ಟು ಹಾಕುತ್ತಿದ್ದಾರೆ.

ಗಾಂಧಿ ಭವನದ ಅಭಿವೃದ್ಧಿಗೆ ಪ.ಪಂ ಅಧಿಕಾರಿಗಳು ನಿರ್ಲಕ್ಷ  ವಹಿಸುತ್ತಿದ್ದಾರೆ. ಸದ್ಯ ಭವನದ ಸುತ್ತಲು ತಡೆಗೋಡೆ ನಿರ್ಮಾಣಮಾಡಿ ಸಾಂಸ್ಕೃತಿಕ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲ ಮಾಡಬೇಕು. ಬಿ.ಕೆ. ಪೊಲೀಸ್‌ಪಾಟೀಲ, ಸ್ಥಳೀಯ

 

-ಸಿಕಂದರ ಎಂ. ಆರಿ


ಈ ವಿಭಾಗದಿಂದ ಇನ್ನಷ್ಟು

  • ನರೇಗಲ್ಲ: ರೈತ ಸಂಪರ್ಕ ಕೇಂದ್ರದ ಯಂತ್ರೋಪಕರಣ, ಬೀಜ-ಗೊಬ್ಬರ ಸೇರಿದಂತೆ ರೈತರಿಗೆ ಅನುಕೂಲವಾಗುವ ವಸ್ತುಗಳನ್ನು ದಾಸ್ತಾನು ಮಾಡುವ ಉದ್ದೇಶದಿಂದ ಸರ್ಕಾರ ಲಕ್ಷಾಂತರ...

  • ಗದಗ: ಜಿಲ್ಲೆಯಲ್ಲಿ ಬೆಳೆಯುವ ಹೂವಿಗೆ ರಾಜ್ಯ,ಹೊರ ರಾಜ್ಯದಲ್ಲಿ ಬಹು ಬೇಡಿಕೆಯಿದೆ. ಇಲ್ಲಿನ ವಿವಿಧ ತಳಿಯ ಪುಷ್ಪಗಳು ಮಾರುಕಟ್ಟೆಯಲ್ಲೇ ತನ್ನದೇ ಸ್ಥಾನ ಪಡೆದಿವೆ....

  • ರೋಣ: ಪಟ್ಟಣದ ಗೌಡರ ಓಣಿ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನುಶಿ (ಹುಳ), ಕಲ್ಲು ಇರುವ ಕಳಪೆ ಮಟ್ಟದ ಬಿಸಿಯೂಟ ಪೂರೈಸುತ್ತಿರುವುದರಿಂದ ಮಕ್ಕಳು...

  • ಗಜೇಂದ್ರಗಡ: ಧಾರ್ಮಿಕವಾಗಿ ನಾಡಿನಾದ್ಯಂತ ಪ್ರಸಿದ್ಧಿಯಾದ ಇಟಗಿ ಗ್ರಾಮದ ಗ್ರಂಥಾಲಯ ಅವ್ಯವಸ್ಥೆ ಆಗರವಾಗಿದ್ದು, ಮೂಲ ಸೌಲಭ್ಯಗಳ ಕೊರತೆ ಜೊತೆ ಮೂಲೆ ಸೇರಿದ...

  • ಗಜೇಂದ್ರಗಡ: ಸ್ವಂತ ಕಟ್ಟಡ, ವಿದ್ಯುತ್‌ ಸೌಲಭ್ಯವಿಲ್ಲ, ಪುಸ್ತಕಗಳನ್ನಿಡಲು ರ್ಯಾಕ್‌ಗಳಿಲ್ಲ, ಕಟ್ಟಡ ಸುತ್ತಲೂ ಅಶುಚಿತ್ವದಿಂದಾಗಿ ಆಟಕುಂಟು ಲೆಕ್ಕಕ್ಕಿಲ ಎಂಬಂತಾಗಿದೆ...

ಹೊಸ ಸೇರ್ಪಡೆ