ಮಳಿಗೆ ಹಂಚಿಕೆಯಲ್ಲಿ ಕ್ಷೌರಿಕರಿಗೆ ಮೊದಲಾದ್ಯತೆ ನೀಡಿ

Team Udayavani, Jul 17, 2019, 2:20 PM IST

ಗದಗ: ಕ್ಷೌರಿಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದಿಂದ ಡಿಸಿಗೆ ಮನವಿ ಸಲ್ಲಿಸಲಾಯಿತು.

ಗದಗ: ಜಿಲ್ಲಾಡಳಿತದಿಂದ ಮುಂದಿನ ದಿನಗಳಲ್ಲಿ ನಿರ್ಮಿಸಲಾಗುವ ವಾಣಿಜ್ಯ ಸಮುಚ್ಛಯದ ಮಳಿಗೆಗಳ ಹಂಚಿಕೆಯಲ್ಲಿ ಇಲ್ಲಿನ ವಕಾರ ಸಾಲು ತೆರವು ಕಾರ್ಯಾಚಾರಣೆಯಲ್ಲಿ ಅಂಗಡಿಗಳನ್ನು ಕಳೆದುಕೊಂಡಿರುವ ಬಡ ಕ್ಷೌರಿಕರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟ ಆಗ್ರಹಿಸಿದೆ.

ಈ ಕುರಿತು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಹಳೇ ಬಸ್‌ ನಿಲ್ದಾಣ ಮತ್ತು ಕಾಟನ್‌ ಮಾರ್ಕೆಟ್ ರೋಡ್‌ ಸಮೀಪದ ವಕಾರಗಳ ಲೀಜ್‌ ಅವಧಿ ಮುಕ್ತಾಯಗೊಂಡಿದ್ದರಿಂದ ಇತ್ತೀಚೆಗೆ ನಗರಸಭೆ ತೆರವು ಕಾರ್ಯಾಚರಣೆ ನಡೆಸಿದೆ. ಆದರೆ ಯಾವುದೇ ಮುನ್ಸೂಚನೆ ನೀಡದೆ ತೆರವು ಕಾರ್ಯಾ ನಡೆಸಿದ್ದರಿಂದ ಸವಿತಾ ಸಮಾಜದ 22 ಕ್ಷೌರದ ಅಂಗಡಿಗಳು ನೆಲಸಮಗೊಂಡಿದ್ದರಿಂದ ಅವರ ಬದುಕು ಬೀದಿಗೆ ಬಂದಿದೆ. ಈ ಪೈಕಿ ಸವಿತಾ ಸಮಾಜದ ವಿಕಲಚೇತನ ಗಿರಿರಾಜ ಕೋಟೆಕಲ್, ಆಂಜನೇಯ ಆದೋನಿ, ಕೃಷ್ಣಾ ಬಾಯಲಗುಡ್ಡ, ಶ್ರೀನಿವಾಸ ಕೋಟೆಕಲ್ಲ, ಶ್ರೀನಿವಾಸ ರಾಂಪುರ, ಜೀವಣ್ಣ ಮುಕ್ಕಣ್ಣ ರಾಮಪುರ ಎಂಬುವವರು ಸೇರಿದಂತೆ 22 ಕ್ಷೌರಿಕ ಅಂಗಡಿಗಳು ತೆರವು ಗೊಂಡಿದ್ದು, ಅವರ ನಿತ್ಯ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ದೂರಿದರು.

ವಕಾರ ಸಾಲು ತೆರವು ಪ್ರದೇಶದಲ್ಲಿ ಮುಂಬರುವ ದಿನಗಳಲ್ಲಿ ಸರಕಾರ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದರೆ, ಈ ಭಾಗದಲ್ಲಿ ಅಂಗಡಿಗಳನ್ನು ಕಳೆದುಕೊಂಡಿರುವ ಸವಿತಾ ಸಮಾಜದ ಕ್ಷೌರಿಕರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಜಿಲ್ಲಾಧ್ಯಕ್ಷ ಕೃಷ್ಣ ಎಚ್. ಹಡಪದ, ಸಮಾಜದ ಹಿರಿಯರಾದ ಹನಮಂತಪ್ಪ ರಾಂಪುರ, ಬಾಲರಾಜ ಕೋಟೆಕಲ್, ಕೃಷ್ಣಾ ಬಾಯಲಗುಡ್ಡ, ಪರಶುರಾಮ ಕೋಟೆಕಲ್ಲ, ರಮೇಶ ರಾಂಪೂರ, ಪಾಂಡು ಕಾಳೆ, ಪಂಪಣ್ಣ ರಾಯಚೂರ, ದಿಲೀಪ ಸೋಳಂಕಿ, ವಿಷ್ಣು ಮಾನೆ, ರಾಮ ಮಾನೆ, ಜಂಬಣ್ಣ ಕಡಮೂರ ಹಾಗೂ ಸುರೇಶ ಬೂದೂರ, ಕುಮಾರ ಆದೋನಿ, ಅರುಣ ರಾಮಪುರ, ರಾಘವೇಂದ್ರ ರಾಂಪೂರ, ಶ್ರೀನಿವಾಸ ಶಿಕಾರಿಪುರ, ನವೀನ ಕೋಟೆಕಲ್ಲ, ದೀಪಕ ಗಂಗಾಧರ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ