
ಕ್ರಿಕೆಟ್ ಕೂಟದಲ್ಲಿ ಜವಾಬ್ದಾರಿ ನೀಡಿಲ್ಲವೆಂದು ಸೆಲ್ಫಿ ವಿಡಿಯೋ ಮಾಡಿ ನದಿಗೆ ಹಾರಿದ ಯುವಕ
Team Udayavani, Jul 21, 2022, 8:29 AM IST

ಗದಗ (ಮುಂಡರಗಿ): ವೈಯಕ್ತಿಕ ಕಾರಣ ಹಾಗೂ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಜವಾಬ್ದಾರಿ ನೀಡಿಲ್ಲ ಎನ್ನುವ ಕಾರಣಕ್ಕೆ ಮನನೊಂದು ಯುವಕನೊಬ್ಬ ತುಂಗಭದ್ರಾ ನದಿಗೆ ಹಾರಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸೇತುವೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಮುಂಡರಗಿ ಪಟ್ಟಣದ ಗೋಂದಳಿ ಸಮಾಜದ ಯುವಕ ವಿಶ್ವನಾಥ ಧರ್ಮರಾಜ ಗಣಾಚಾರಿ (25 ವ) ನದಿಗೆ ಹಾರಿರುವ ಯುವಕ. ನದಿಗೆ ಹಾರುವ ಮುನ್ನ ಕೊರ್ಲಹಳ್ಳಿ ಸೇತುವೆ ಬಳಿ ತಾನು ಸಾಯುವುದಾಗಿ ನಿರ್ಧಾರ ಮಾಡಿದ್ದು, ಸಾಯುತ್ತಿದ್ದೇನೆ ಎಂದು ತಿಳಿಸಿ ಸೆಲ್ಫಿ ವಿಡಿಯೋ ಮಾಡಿ ನದಿಗೆ ಹಾರಿದ್ದಾನೆ.
ಸೆಲ್ಫಿ ವಿಡಿಯೋ ದಲ್ಲಿ ತಾನು ಸ್ಥಳೀಯ ಸಮಿತಿಯ ಕ್ರಿಕೆಟ್ ತಂಡದ ಆಟಗಾರನಾಗಿದ್ದು, ಸಮಿತಿ ಹಾಗೂ ಟೂರ್ನಮೆಂಟ್ ನಲ್ಲಿ ತನಗೆ ಜವಾಬ್ದಾರಿ ನೀಡುತ್ತಿಲ್ಲ. ಹಾಗೂ ನನಗೆ ವೈಯಕ್ತಿಕವಾಗಿ ಸಮಸ್ಯೆ ಇರುವುದರಿಂದ ನದಿಯಲ್ಲಿ ಹಾರುತ್ತಿದ್ದೇನೆ ಎಂಬ ವಿಷಯ ತಿಳಿಸಿದ್ದಾನೆ.
ಇದನ್ನೂ ಓದಿ:ಈಗ ರಿಷಿ ವರ್ಸಸ್ ಟ್ರಸ್: ಅಂತಿಮ ಹಂತದಲ್ಲಿ ಉಳಿದ ಇಬ್ಬರು ನಾಯಕರು
ಸ್ಥಳೀಯ ಮೀನುಗಾರರು ನದಿಯಲ್ಲಿ ಯುವಕನ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಸ್ಥಳಕ್ಕೆ ತಹಸೀಲ್ದಾರ್ ಆಶಪ್ಪ ಪೂಜಾರ, ಸಿಪಿಐ ಸುನಿಲ್ ಸವದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
