ಎಸ್‌ಎಸ್‌ಕೆ ಸಮಾಜದಿಂದ ಬೃಹತ್‌ ರ್ಯಾಲಿ

Team Udayavani, Apr 20, 2019, 2:47 PM IST

ಗದಗ: ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರಿಗೆ ಬೆಂಬಲ ಸೂಚಿಸಿ ನಗರದಲ್ಲಿ ಎಸ್‌ಎಸ್‌ಕೆ ಸಮಾಜದಿಂದ ಗುರುವಾರ ಸಂಜೆ ಬೃಹತ್‌ ಪಾದಯಾತ್ರೆ ನಡೆಸಲಾಯಿತು.

ನಗರದ ಹಳೇ ಸರಾಫ್‌ ಬಜಾರ್‌ನಿಂದ ಅಂಬಾ ಭವಾನಿ ದೇವಸ್ಥಾನದಿಂದ ಚೌವಡಿ ಕೂಟ, ಟಾಂಗಾಕೂಟ, ನಾಮಜೋಶಿ ರಸ್ತೆ, ವೀರೇಶ್ವರ ಲೈಬ್ರರಿ, ಹಳೇ ಬಸ್‌ ನಿಲ್ದಾಣ, ಬ್ಯಾಂಕ್‌ ರೋಡ್‌, ಟಾಂಗಾ ಕೂಟ, ಸ್ಟೇಷನ್‌ ರಸ್ತೆ, ಗಾಂಧಿ ವೃತ್ತ ಮಾರ್ಗವಾಗಿ ಬಿಜೆಪಿ ಚುನಾವಣಾ ಸಂಪರ್ಕ ಕಚೇರಿಗೆ ತಲುಪುವ ಮೂಲಕ ಮುಕ್ತಾಯಗೊಂಡಿತು.

ಮೆರವಣಿಗೆಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಭಾರತ ಮಾತಾಕಿ ಜೈ ಎಂಬ ಘೊಷಣೆ ಕೂಗಿದರು. ಬಿಜೆಪಿ ಮುದ್ರಿಸಿದ್ದ ಕರ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಬಿಜೆಪಿಗೆ ಮತಯಾಚಿಸಿದರು.

ಇದಕ್ಕೂ ಮುನ್ನ ಜಗದಂಬಾ ದೇವವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಹುಬ್ಬಳ್ಳಿಯ ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿದರು. ಸೊಲ್ಲಾಪುರ ಮಾಜಿ ಶಾಸಕ ನರಸಿಂಗ ಮೆಲಜಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಕಾಂತ ಖಟವಟೆ, ನಗರಸಭೆ ಮಾಜಿ ಉಪಾಧ್ಯಕ್ಷ ಶ್ರೀನಿವಾಸ ಭಾಂಡಗೆ, ಪ್ರಕಾಶ ಬಾಕಳೆ, ಬಿಜೆಪಿ ಶಹರ ಘಟಕದ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸುಧೀರ ಕಾಟಿಗರ, ಕಿಶನ ಮೆರವಾಡೆ, ವಿನಾಯಕ ಹಬೀಬ, ದತ್ತು ಪವಾರ, ಮಾಧುಸಾ ಮೇರವಾಡೆ, ತೋಟೋಸಾ ಭಾಂಡಗೆ, ಬಿ.ಎಚ್.ಲದ್ವಾ, ಶಂಕರ ಪವಾರ, ಅನಿಲ ಖಟವಟೆ, ಪಕ್ಕೀರಸಾ ಭಾಂಡಗೆ, ಜಯಶ್ರೀ ಖಟವಟೆ, ರೇಣುಕಾ ಕಲಬುರ್ಗಿ, ಪ್ರಶಾಂತ ಕಾಟವಾ ಹಾಗೂ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ನರಗುಂದ: ವೈದ್ಯಕೀಯ ಸಿಬ್ಬಂದಿ ಗದಗ, ವಿಜಯಪುರ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 24/7 ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ದೇವರ ದಯೆಯಿಂದ ಎರಡೂ...

  • ಗದಗ: ದೆಹಲಿಯ ನಿಜಾಮುದ್ದೀನ್‌ ಮಸೀದಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ಸಾಗಿರುವ ಜಿಲ್ಲೆಯ 6 ಜನರನ್ನು ಗುರುತಿಸಲಾಗಿದ್ದು, ಅವರ ರಕ್ತ ಮತ್ತು ಗಂಟಲು...

  • ಗದಗ: ದೇಶದಲ್ಲಿ ಕೋವಿಡ್ 19 ಭೀತಿ ಶುರುವಾದಾಗಿನಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಮಾಸ್ಕ್ ಪೂರೈಕೆಯಿಲ್ಲದೇ ಗ್ರಾಪಂ ಮಟ್ಟದ ಸ್ವಚ್ಛತಾ...

  • ಗದಗ: ಬಯಲು ಸೀಮೆ ಗದಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಹೆಚ್ಚು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆಯುವ ವಿವಿಧ ಹಣ್ಣುಗಳು ಅಂತಾರಾಷ್ಟ್ರೀಯ...

  • ಗದಗ: ಮಹಾಮಾರಿ ಕೋವಿಡ್ 19 ತಡೆಗಾಗಿ ದೇಶದಲ್ಲಿ ಲಾಕ್‌ಡೌನ್‌ ಜಾರಿ ಮಾಡಿ ಐದು ದಿನಗಳಾದರೂ ಜಿಲ್ಲೆಯಲ್ಲಿ ಅದರ ಗಂಭೀರತೆ ಕಾಣುತ್ತಿಲ್ಲ. ಅನಗತ್ಯವಾಗಿ ಅಲೆದಾಡುವವರ...

ಹೊಸ ಸೇರ್ಪಡೆ