ಭಾವೈಕ್ಯತೆಯ ಪ್ರತೀಕ ಮೆಹಬೂಬ್‌ ಸುಬ್ಹಾನಿ ಉರುಸ್‌


Team Udayavani, Dec 19, 2018, 4:47 PM IST

19-december-19.gif

ಗಜೇಂದ್ರಗಡ: ಮತೀಯ ಭಾವನೆ ಹೋಗಲಾಡಿಸಿ ಭಾತೃತ್ವದ ಮಧುರ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸುವ ಅಪರೂಪದ ತಾಣಗಳಲ್ಲಿ ಒಂದಾದ ಪಟ್ಟಣದ ಗುಡ್ಡದ ಮೇಲ್ಭಾಗದಲ್ಲಿರುವ ಹಜರತ್‌ ಸೈಯ್ಯದ್‌ ಶಹಾ ಮೆಹಬೂಬ ಸುಬ್ಹಾನಿ ಅವರ ಉರುಸು ಸೌಹಾರ್ದತೆಗೆ ಸಾಕ್ಷಿಯಾಗಿದೆ.

ಗಜೇಂದ್ರಗಡ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಅಲ್ಲದೇ ಭಾತೃತ್ವದ ಕೇಂದ್ರ ಸ್ಥಳವಾಗಿದೆ. ಈ ಪುಣ್ಯ ಭೂಮಿಯಲ್ಲಿ ಆಡಳಿತ ನಡೆಸಿದ ಮರಾಠ ಸಾಮಂತರು ಸರ್ವ ಧರ್ಮಿಯರೂ ಒಟ್ಟಾಗಿ ಬದುಕು ನಡೆಯಬೇಕೆನ್ನುವ ಉದ್ದೇಶದಿಂದ 18 ಮಠ, 18 ಮಸೀದಿ, 18 ಬಾವಿಗಳನ್ನು ನಿರ್ಮಿಸಿದ್ದರು. ಅಂತೆಯೇ ಬೆಟ್ಟದ ಮೇಲ್ಭಾಗದಲ್ಲಿಯೂ ಹಿಂದು ಮತ್ತು ಮುಸ್ಲಿಂ ದೇವಾಲಯ ನಿರ್ಮಾಣ ಮಾಡುವ ಮೂಲಕ ಭಾವೈಕ್ಯತೆಗೆ ಮುನ್ನುಡಿ ಬರೆದಿದ್ದಾರೆ.

ಉರುಸು ಎಂಬಂದು ಸಾಧುಗಳ ಪುಣ್ಯತಿಥಿ. ಹೀಗಾಗಿ ಜಾತ್ರೆಯಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗುವುದು. ಪ್ರಸ್ತುತ ದಿನಗಳಲ್ಲಿ ಜಾತೀಯತೆಯ ವಾದ ಪ್ರತಿವಾದಗಳ ಮಧ್ಯೆಯೇ ಪಟ್ಟಣದ ಗುಡ್ಡದ ಮೇಲ್ಭಾಗದಲ್ಲಿ ನಡೆಯುವ ಮೆಹಬೂಬ ಸುಬ್ಹಾನಿ ಉರುಸು ವಿಶೇಷತೆಗಳಿಗೆ ಕಾರಣವಾಗಿದೆ. ಇಲ್ಲಿ ಹಿಂದೂ-ಮುಸ್ಲಿಮರು ಭೇಟಿ ನೀಡಿ ಶರಣರ ಸಮಾಧಿ ಸ್ಥಳಕ್ಕೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಾರೆ.

ದರ್ಗಾಕ್ಕೆ ಪ್ರತಿ ಗುರುವಾರ ಮತ್ತು ಅಮವಾಸೆ ದಿನದಂದು ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಹರಕೆ, ಪೂಜೆ ಸಲ್ಲಿಸುತ್ತಾರೆ. ಸೂಫಿ ಪಂಥದವರಾದ ಹಜರತ್‌ ಸೈಯ್ಯದ್‌ ಶಹಾ ಮೆಹಬೂಬ ಸುಬ್ಹಾನಿ ಅವರು ಹಲವು ದಶಕಗಳ ಹಿಂದೆ ಗಜೇಂದ್ರಗಡಕ್ಕೆ ಭೇಟಿ ನೀಡಿದ್ದರು. ಧರ್ಮ ಪ್ರಚಾರಕ್ಕಿಂತ ಸೌಹಾರ್ದತೆ, ಸಹಬಾಳ್ವೆಗೆ ಒತ್ತು ನೀಡಿ, ಸತ್ಯ ನಿಷ್ಠೆಗೆ ಹೆಸರಾಗಿ ಸಮಾನತೆಯ ಸಂದೇಶ ಸಾರಿದ್ದಾರೆ ಎಂಬುದು ಇತಿಹಾಸ ಪ್ರತೀತ.

ಹಜರತ್‌ ಸೈಯ್ಯದ್‌ ಶಹಾ ಮೆಹಬೂಬ ಸುಬ್ಹಾನಿ ಅವರು ಈ ಭಾಗದ ಹಳ್ಳಿಗಳಲ್ಲಿ ಭಾವೈಕ್ಯತೆಯ ಸಂದೇಶ ಪಸರಿಸಿದ ಕೀರ್ತಿ ಅವರದ್ದಾಗಿದೆ. ನಂತರ ಅವರು ಗಜೇಂದ್ರಗಡ ಬೆಟ್ಟ ಮೇಲೆ ನೆಲೆ ನಿಂತರು. ಅವರ ಕಾಲಾ ನಂತರ ಅಲ್ಲಿಯೇ ಅವರ ಗದ್ದುಗೆ ಸ್ಥಾಪಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ ಸರ್ವ ಸಮುದಾಯ ಜನರು ಉರುಸು ದಿನದಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಉರುಸು ಆಚರಣೆ
ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಟ್ಟದ ಮೇಲಿನ ಮೆಹಬೂಬ್‌ ಸುಬ್ಹಾನಿ ಅವರ ಭಾವೈಕ್ಯತಾ ಉರುಸು ಕಾರ್ಯಕ್ರಮ ಈಗಾಲೇ ಪ್ರಾರಂಭವಾಗಿದೆ. ಡಿ. 19ರಂದು ಭಾವೈಕ್ಯತಾ ಉರುಸು, ಡಿ. 20 ರಂದು ಜಿಯಾರತ್‌ ನಡೆಯಲಿದೆ. ಇಲ್ಲಿ ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಜನಾಂಗ ಮತ್ತು ಧರ್ಮಿಯರು ಒಟ್ಟುಗೂಡಿ ಹತ್ತಾರು ದಶಕದಿಂದ ಉರುಸು ಆಚರಿಸುತ್ತಿದ್ದಾರೆ. 

ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಗಜೇಂದ್ರಗಡದಲ್ಲಿ ಎಲ್ಲ ಧರ್ಮಿಯರು ಭಾವ್ಯಕ್ಯತೆಯಿಂದ ಜಾತ್ರೆಗಳು, ಉರುಸುಗಳನ್ನು ಆಚರಿಸುತ್ತಾ ಬರಲಾಗಿದೆ. ಅಂತೆಯೇ ಗುಡ್ಡದ ಮೇಲ್ಭಾಗದಲ್ಲಿರುವ ಹಜರತ್‌ ಮೆಹಬೂಬ ಸುಬ್ಹಾನಿ ಅವರ ಉರುಸು ಸೌಹಾರ್ದತೆ ಪ್ರತೀಕವಾಗಿದೆ.
 ಐ.ಎ. ರೇವಡಿ,ಕಸಾಪ ತಾಲೂಕಾಧ್ಯಕ್ಷ 

ಟಾಪ್ ನ್ಯೂಸ್

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

1-ewrwe

ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸವಿದ ಆಹಾರ ನಿಗಮದ ಅಧ್ಯಕ್ಷ ನಡಹಳ್ಳಿ

ಕನ್ನಡದಲ್ಲೇ ಸಹಿ ಸಂಪೂರ್ಣ ಜಾರಿಗೆ ಬಂದರೆ ಸ್ವಾಗತಾರ್ಹ : ಶ್ರೀನಿವಾಸ ಮೂರ್ತಿ ಕುಲಕರ್ಣಿ

ಕನ್ನಡದಲ್ಲೇ ಸಹಿ ಸಂಪೂರ್ಣ ಜಾರಿಗೆ ಬಂದರೆ ಸ್ವಾಗತಾರ್ಹ : ಶ್ರೀನಿವಾಸ ಮೂರ್ತಿ ಕುಲಕರ್ಣಿ

1-rrr

ಕೈಗಾರಿಕೆಗಳಿಗೆ ಭೂಮಿ ನೀಡಲು ಶೀಘ್ರದಲ್ಲೇ ಹೊಸ ನೀತಿ: ಸಚಿವ ನಿರಾಣಿ

1-trtr

ಟಿಕೆಟ್ ಇಲ್ಲದೇ ಪರದಾಟ: 1300 ಭಕ್ತರಿಗೆ ತಿಮ್ಮಪ್ಪನ ದರ್ಶನ ಮಾಡಿಸಿದ ಎಸ್.ಆರ್.ವಿಶ್ವನಾಥ್

1-www

15 ಕೋಟಿ ಸದಸ್ಯರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿ : ಸಚಿವ ಹಾಲಪ್ಪ ಆಚಾರ್

congress

ಗೃಹಸಚಿವರ ತವರಿನಲ್ಲಿ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಾಲು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚನ್ನಮ್ಮಾಜಿ ದೇಶಪ್ರೇಮ ಮಾದರಿ

ಚನ್ನಮ್ಮಾಜಿ ದೇಶಪ್ರೇಮ ಮಾದರಿ

20school

ಗ್ರಾಮಸ್ಥರಿಂದಲೇ ತಲೆಯೆತ್ತುತ್ತಿವೆ ಶಾಲಾ ಕೊಠಡಿಗಳು

ಸಚಿವ ಸಿ.ಸಿ. ಪಾಟೀಲ ಯುವ ನಾಯಕರಿಗೆ ಪ್ರೇರಣೆ

ಸಚಿವ ಸಿ.ಸಿ. ಪಾಟೀಲ ಯುವ ನಾಯಕರಿಗೆ ಪ್ರೇರಣೆ

ಸಿಡಿಲು ಬಡಿದು ಹೊಲದಲ್ಲಿ ಮೇಯುತ್ತಿದ್ದ ಹನ್ನೊಂದು ಕುರಿಗಳ ಸಾವು

ಸಿಡಿಲು ಬಡಿದು ಹೊಲದಲ್ಲಿ ಮೇಯುತ್ತಿದ್ದ ಹನ್ನೊಂದು ಕುರಿಗಳ ಸಾವು

ರಾಮಮಂದಿರ ದೇಣಿಗೆ ಲೆಕ್ಕ ಹಾದಿಬೀದಿಯಲ್ಲಿ ಕೇಳುವ ಅಗತ್ಯವೇನು?  

ರಾಮಮಂದಿರ ದೇಣಿಗೆ ಲೆಕ್ಕ ಹಾದಿಬೀದಿಯಲ್ಲಿ ಕೇಳುವ ಅಗತ್ಯವೇನು?  

MUST WATCH

udayavani youtube

ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಆದಾಯಕ್ಕೊಂದು ದಾರಿ

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

ಹೊಸ ಸೇರ್ಪಡೆ

davanagere news

30 ರಿಂದ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿ ವಿತರಣೆ: ಶೆಣೈ

kottigehara news

ಗ್ರಾಪಂ ಸಂಕೀರ್ಣಕ್ಕೆ ಜಿಪಂ ಸಿಇಒ ಭೇಟಿ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

Vehicle parking

ವಾಹನ ನಿಲುಗಡೆಗೆ ಶುಲ್ಕ

shivamogga news

ಸರ್ಕಾರದಿಂದ ಕುಡಿಯುವ ನೀರೂ ಮಾರಾಟ: ಆರೋಪ-ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.