Udayavni Special

ಅಳಿವಿನ ಅಂಚಿನತ್ತ ಸಾಗುತ್ತಿದೆ ದೊಡ್ಡಾಟ-ಬಯಲಾಟ


Team Udayavani, Mar 30, 2019, 4:38 PM IST

30-March-10
ನರಗುಂದ: ಇಂದಿನ ಆಧುನೀಕರಣದ ಭರಾಟೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ದೊಡ್ಡಾಟ, ಬಯಲಾಟಗಳಂತಹ ರಂಗ ಕಲೆಗಳು ನಶಿಸಿ ಹೋಗುತ್ತಿರುವುದು ದುರ್ದೈವದ ಸಂಗತಿ ಎಂದು ಬಯಲಾಟ ಅಕಾಡೆಮಿ ಸದಸ್ಯ ಆಶೋಕ ಸುತಾರ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕರ್ನಾಟಕ ರಂಗಭೂಮಿ ದಿನಾಚರಣೆ ನಿಮಿತ್ತ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಟಕ ಪುಸ್ತಕಗಳ ಹಾಗೂ ರಂಗಭೂಮಿ ಕಲಾವಿದರ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜನಪದ ಕಲೆಗಳು ಮನುಷ್ಯನಷ್ಟೇ ಪ್ರಾಚೀನತೆ ಹೊಂದಿದ ವಿಶಿಷ್ಟವಾದ ಕಲೆ. ಸಮಾಜದಲ್ಲಿರುವ ಅಂಕುಡೊಂಕು ತಿದ್ದುವ ಶಕ್ತಿ ಜನಪದ ಕಲೆಯಲ್ಲಿ ಅಡಗಿದೆ. ಜಾನಪದ ಕಲೆಗಳು ಮನರಂಜನೆ ಜೊತೆಗೆ ಬುದ್ಧಿಶಕ್ತಿ ಹಾಗೂ ಮಾರ್ಗದರ್ಶನ ನೀಡುವ ಮಾಧ್ಯಮವಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಜನಪದ ನೃತ್ಯ ಪ್ರಕಾರಗಳು ರೂಢಿಯಲ್ಲಿವೆ. ಕಲೆಗಳು ಪರಂಪರೆಯಿಂದ ಉಳಿದ ಸಂಪ್ರದಾಯ. ಗ್ರಾಮೀಣ ಜನರ ಬದುಕಿನ ಅವಿಭಾಜ್ಯ ಅಂಗವಾದ ಜನಪದ ಸಂಸ್ಕೃತಿ ಉಳಿದರೆ ಮಾತ್ರ ಮಾನವ ಸಂಕುಲ ಉಳಿಯಲು ಸಾಧ್ಯ. ವಿಶಿಷ್ಟ ನಂಬಿಕೆ, ಆಚರಣೆ ಪ್ರಾತಿನಿಧಿಕ ಸಂಕೇತವಾಗಿ ರೂಪಗೊಂಡ ಜನಪದ ಸಾಂಸ್ಕೃತಿಕ ಪರಂಪರೆ ಅತ್ಯಂತ ಮಹತ್ವದ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ನಮ್ಮ ಪೂರ್ವಜರು ತಾವಾಡುವ ಭಾಷೆಯಲ್ಲೇ ಕಟ್ಟಿ ಉಳಿಸಿಕೊಂಡು ಬಂದಿರುವ ಸಾಹಿತ್ಯ ಸಂಪನ್ಮೂಲ ಅದುವೇ ಜನಪದ ಸಾಹಿತ್ಯ. ಅದೊಂದು ಮೌಖಿಕ ಪರಂಪರೆಯ ಅಭಿವ್ಯಕ್ತ ರೂಪವಾಗಿದೆ. ಇಂದಿನ ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಕಲೆಯ ಮೂಲಕ ಪುರಾತನ ಇತಿಹಾಸದ ದೊಡ್ಡಾಟ, ಬಯಲಾಟ ಕಲೆಗಳು ನಿರ್ಲಕ್ಷಕ್ಕೆ ಒಳಗಾಗುತ್ತಿವೆ ಎಂದು ವಿಷಾದಿಸಿದರು.
ಪ್ರಾಚೀನ ಕಲೆಯನ್ನು ಪ್ರದರ್ಶಿಸಿ, ಉಳಿಸಿ ಬೆಳೆಸಿ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಬೇಕಾಗಿದೆ. ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ರಂಗಕಲೆಯಾದ ದೊಡ್ಡಾಟ, ಬಯಲಾಟ ಅಂತಹ ಜನಪದ ಕಲೆಗಳಿಗೆ ಸರಕಾರ ಇನ್ನೂ ಹೆಚ್ಚು ಪ್ರೋತ್ಸಾಹ ನೀಡಬೇಕಾಗಿದೆ ಎಂದು ಆಗ್ರಹಿಸಿದರು. ಹಿರಿಯ ರಂಗಭೂಮಿ ಕಲಾವಿದ ರುದ್ರಪ್ಪ ಮಾಸ್ತರ ಮತ್ತಿಗಟ್ಟಿ, ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚನ್ನಬಸಯ್ಯ ಕಾಡದೇವರಮಠ, ರುದ್ರಯ್ಯ ಹಿರೇಮಠ, ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅದ್ಯಕ್ಷ ಸಿ.ಜಿ. ಕಂಠಿ, ಜೆ.ಆರ್‌. ಕದಂ, ಗಂಗಯ್ಯ ಕಾಡದೇವರಮಠ, ಸಾಹಿತಿ ವೀರನಗೌಡ ಮರಿಗೌಡ್ರ, ಲಯ ಕಲಾಮನೆಯ ಶಂಕರಗೌಡ ಪಾಟೀಲ, ಮಹಾಂತೇಶ ಸಾಲಿಮಠ
ವೇದಿಕೆಯಲ್ಲಿದ್ದರು.
ಗಮನ ಸೆಳೆದ ದೊಡ್ಡಾಟ- ಬಯಲಾಟ
ಭೈರನಹಟ್ಟಿಯಲ್ಲಿ ಬೋಪಳಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ದೊಡ್ಡಾಟ ಪ್ರದರ್ಶನ, ಯಾವಗಲ್ಲ ಗ್ರಾಮದ ಚನ್ನಬಸಯ್ಯ ಕಾಡದೇವರಮಠ ತಂಡದಿಂದ ದೊಡ್ಡಾಟ ಮತ್ತು ರಂಗಗೀತೆ ಗಾಯನ ಪ್ರೇಕ್ಷಕರ ಮನಸೂರೆಗೊಂಡಿತು. ಗದುಗಿನ ಲಯ ಕಲಾಮನೆಯ ಶಂಕರಗೌಡ ಪಾಟೀಲ ಸಂಗ್ರಹಿಸಿದ ಹಳೆಯ ನಾಟಕ ಪುಸ್ತಕ ಹಾಗೂ ರಂಗಭೂಮಿ ಕಲಾವಿದರ ಛಾಯಾಚಿತ್ರ, ಲೇಖನಗಳ ಪ್ರದರ್ಶನ ಗಮನ ಸೆಳೆಯಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಅಸ್ಪೃಶ್ಯತೆ ವಿರುದ್ಧ ಪ್ರತಿಜ್ಞೆ ; ಸೋಂಕು ಪೀಡಿತರ ಅವಗಣನೆ ಮಾಡದಿರಲು ಹೊಸ ಯತ್ನ

ಕೋವಿಡ್ ಅಸ್ಪೃಶ್ಯತೆ ವಿರುದ್ಧ ಪ್ರತಿಜ್ಞೆ ; ಸೋಂಕು ಪೀಡಿತರ ಅವಗಣನೆ ಮಾಡದಿರಲು ಹೊಸ ಯತ್ನ

ನಗರ ಆಸ್ತಿ ತೆರಿಗೆ ಸಲ್ಲಿಕೆಗೆ ಜುಲೈ 31ರವರೆಗೂ ಅವಕಾಶ

ನಗರ ಆಸ್ತಿ ತೆರಿಗೆ ಸಲ್ಲಿಕೆಗೆ ಜುಲೈ 31ರವರೆಗೂ ಅವಕಾಶ

ಕಾಂಗ್ರೆಸ್ ಮನಸ್ಥಿತಿ ದಾಸ್ಯದ್ದು: ಎಸ್.ಆರ್. ವಿಶ್ವನಾಥ್ ಲೇವಡಿ

ಕಾಂಗ್ರೆಸ್ ಮನಸ್ಥಿತಿ ದಾಸ್ಯದ್ದು: ಎಸ್.ಆರ್. ವಿಶ್ವನಾಥ್ ಲೇವಡಿ

ಎಲ್ಲಾ ಯೋಜನೆಗಳಿಗೆ ನೆಹರೂ, ಗಾಂಧಿ ಹೆಸರನ್ನೇ ಇಡೋಕಾಗುತ್ತಾ?: ಸಚಿವ ಅಶೋಕ್ ತಿರುಗೇಟು

ಎಲ್ಲಾ ಯೋಜನೆಗಳಿಗೆ ನೆಹರೂ, ಗಾಂಧಿ ಹೆಸರನ್ನೇ ಇಡೋಕಾಗುತ್ತಾ?: ಸಚಿವ ಅಶೋಕ್ ತಿರುಗೇಟು

ಸಂಬಳ ಇಲ್ಲ, ಕೆಲಸವೂ ಇಲ್ಲ…ಈಗ ಕಾರು ಮಾರಾಟ ಅನಿವಾರ್ಯ: ನಟ ಮಾನಸ್ ಶಾ!

ಸಂಬಳ ಇಲ್ಲ, ಕೆಲಸವೂ ಇಲ್ಲ…ಈಗ ಕಾರು ಮಾರಾಟ ಅನಿವಾರ್ಯ: ನಟ ಮಾನಸ್ ಶಾ!

ಹಾವೇರಿ ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಕೋವಿಡ್-19 ಸೋಂಕು ಪತ್ತೆ

ಹಾವೇರಿ ಜಿಲ್ಲೆ: 2 ವರ್ಷದ ಮಗು ಸೇರಿದಂತೆ ನಾಲ್ವರಿಗೆ ಕೋವಿಡ್-19 ಸೋಂಕು ಪತ್ತೆ

ಶುಂಠಿಯ ಸವಿರುಚಿ

ರುಚಿಕರವಾದ ಅಡುಗೆ…ಶುಂಠಿ ತಂಬುಳಿ, ಶುಂಠಿ ಬರ್ಫಿ ಮಾಡೋದು ಹೇಗೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿವಿ ಕುಲಪತಿಯಾಗಿ ಚಟಪಲ್ಲಿ ಅಧಿಕಾರ ಸ್ವೀಕಾರ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿವಿ ಕುಲಪತಿಯಾಗಿ ಚಟಪಲ್ಲಿ ಅಧಿಕಾರ ಸ್ವೀಕಾರ

adag-APMC

ಗದಗ ಎಪಿಎಂಸಿಗೆ ಬಡ್ನಿ ಅವಿರೋಧ ಆಯ್ಕೆ

ಮಂಜುನಾಥ ತಾಪಂ ಪ್ರಭಾರಿ ಅಧ್ಯಕ್ಷ

ಮಂಜುನಾಥ ತಾಪಂ ಪ್ರಭಾರಿ ಅಧ್ಯಕ್ಷ

ಲಂಚ ಸ್ವೀಕಾರ: ಅಧಿಕಾರಿ ಎಸಿಬಿ ಬಲೆಗೆ

ಲಂಚ ಸ್ವೀಕಾರ: ಅಧಿಕಾರಿ ಎಸಿಬಿ ಬಲೆಗೆ

ಬೇಸಿಗೆಯಲ್ಲೂ ನೀರಿಗಿಲ್ಲ ಕೊರತೆ

ಬೇಸಿಗೆಯಲ್ಲೂ ನೀರಿಗಿಲ್ಲ ಕೊರತೆ

MUST WATCH

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

ಹೊಸ ಸೇರ್ಪಡೆ

PM Caresಗೆ ಕಾರ್ಪೊರೇಟ್‌ ಬಲ; ಕೋವಿಡ್ ನಿರ್ವಹಣಾ ನಿಧಿಗೆ ಹೆಚ್ಚಿನ ದೇಣಿಗೆಗೆ ಕೇಂದ್ರದ ಕ್ರಮ

PM Caresಗೆ ಕಾರ್ಪೊರೇಟ್‌ ಬಲ; ಕೋವಿಡ್ ನಿರ್ವಹಣಾ ನಿಧಿಗೆ ಹೆಚ್ಚಿನ ದೇಣಿಗೆಗೆ ಕೇಂದ್ರದ ಕ್ರಮ

ಕೋವಿಡ್ ಅಸ್ಪೃಶ್ಯತೆ ವಿರುದ್ಧ ಪ್ರತಿಜ್ಞೆ ; ಸೋಂಕು ಪೀಡಿತರ ಅವಗಣನೆ ಮಾಡದಿರಲು ಹೊಸ ಯತ್ನ

ಕೋವಿಡ್ ಅಸ್ಪೃಶ್ಯತೆ ವಿರುದ್ಧ ಪ್ರತಿಜ್ಞೆ ; ಸೋಂಕು ಪೀಡಿತರ ಅವಗಣನೆ ಮಾಡದಿರಲು ಹೊಸ ಯತ್ನ

ಚಂಡಮಾರುತ ಪರಿಹಾರ ಕಾರ್ಯ ಟಿಎಂಸಿ ಸಚಿವರಿಂದಲೇ ಆಕ್ಷೇಪ

ಚಂಡಮಾರುತ ಪರಿಹಾರ ಕಾರ್ಯ ಟಿಎಂಸಿ ಸಚಿವರಿಂದಲೇ ಆಕ್ಷೇಪ

ತೈಲ ಬೆಲೆ ಕುಸಿತ: ಭಾರತಕ್ಕೆ 25,000 ಕೋ.ರೂ. ಲಾಭ

ತೈಲ ಬೆಲೆ ಕುಸಿತ: ಭಾರತಕ್ಕೆ 25,000 ಕೋ.ರೂ. ಲಾಭ

ಜಗತ್ತಿನ 10 ಹೆಚ್ಚು ತಾಪದ ಸ್ಥಳ ಇರುವುದು ಭಾರತದಲ್ಲಿ

ಜಗತ್ತಿನ 10 ಹೆಚ್ಚು ತಾಪದ ಸ್ಥಳ ಇರುವುದು ಭಾರತದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.