ವಾರದಿಂದ ಬನಹಟ್ಟಿ ಗ್ರಾಮಕ್ಕಿಲ್ಲ ಬಸ್‌ ಸಂಚಾರ


Team Udayavani, Oct 27, 2019, 1:00 PM IST

gadaga-tdy-2

ನರಗುಂದ: ಹಿರೇಹಳ್ಳದ ಸೇತುವೆ ನಿರ್ಮಾಣ ಕಾಮಗಾರಿಯಿಂದಾಗಿ ಪರ್ಯಾಯ ರಸ್ತೆಯೂ ಸುಸಜ್ಜಿತ ಇಲ್ಲದೇ ಬನಹಟ್ಟಿ ಗ್ರಾಮಕ್ಕೆ ಸಾರಿಗೆ ಸಂಸ್ಥೆ ಬಸ್‌ ಸಂಚಾರ ಸ್ಥಗಿತಗೊಂಡಿದೆ.ಹೀಗಾಗಿ ಗ್ರಾಮಸ್ಥರಿಗೆ ಟಂಟಂ ಅಥವಾ ದ್ವಿಚಕ್ರ ವಾಹನಗಳೇ ಗತಿಯಾಗಿದೆ.

ನರಗುಂದ ಕೇಂದ್ರ ಸ್ಥಾನದಿಂದ 8 ಕಿಮೀ ದೂರದ ತಾಲೂಕಿನ ಬನಹಟ್ಟಿ ಗ್ರಾಮದ ಜನ ನಿತ್ಯ ಪರದಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ನರಗುಂದದಿಂದ ಬನಹಟ್ಟಿ ಗ್ರಾಮಕ್ಕೆ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಬನಹಟ್ಟಿ ಗ್ರಾಮದ ಮುಂದಿನ ರಸ್ತೆಗೆ ಹೊಂದಿಕೊಂಡ ಹಿರೇಹಳ್ಳದ ಸೇತುವೆ ನಿರ್ಮಾಣ ಕಾಮಗಾರಿ ನಡೆಸಲಾಗಿದೆ. ಬೆಂಗಳೂರು ಮೂಲದ ಬಿಎಸ್‌ಆರ್‌ ಇನ್‌ ಫ್ರಾಟೆಕ್‌ ಏಜೆನ್ಸಿ 1.24 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ. ಕಾಮಗಾರಿ ವಿಳಂಬವಾಗಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಸೇತುವೆ ಪಕ್ಕದಲ್ಲಿ ಪರ್ಯಾಯ ರಸ್ತೆ ನಿರ್ಮಿಸಲಾಗಿದೆ.

ಕಳೆದ ಒಂದು ವಾರದಿಂದ ಸುರಿದ ಮಳೆಗೆ ಹಿರೇಹಳ್ಳ ತುಂಬಿ ಹರಿದ ಪರಿಣಾಮ ಪರ್ಯಾಯ ರಸ್ತೆ ದುಸ್ತರವಾಗಿದೆ. ಸೇತುವೆ ಸಂಪರ್ಕ ರಸ್ತೆ ನಿರ್ಮಾಣವಿಲ್ಲದೇ ಒಂದು ವಾರದಿಂದ ಗ್ರಾಮಕ್ಕೆ ಬಸ್‌ ಸಂಚಾರ ಮೊಟಕುಗೊಂಡಿದೆ. ಶನಿವಾರ ಸೇತುವೆ ಸಂಪರ್ಕದ ಒಂದು ಬದಿಗೆ ಮುರಂ ಹಾಕಿ ರಸ್ತೆ ನಿರ್ಮಿಸಿದ್ದು, ಮತ್ತೂಂದು ಬದಿಗೆ ಅಲ್ಪ ಮುರಂ ಹಾಕಿದ ಪರಿಣಾಮ ಬಸ್‌ ಸೇರಿ ದೊಡ್ಡ ವಾಹನಗಳು ಸಂಚರಿಸಲಾಗದು. ಗ್ರಾಮಸ್ಥರು ನರಗುಂದ ಪಟ್ಟಣಕ್ಕೆ ಬರಲು ಟಂಟಂ, ದ್ವಿಚಕ್ರ ವಾಹನಗಳೇ ಅನಿವಾರ್ಯವಾಗಿದೆ. ಸಾರಿಗೆ ಸಂಸ್ಥೆ ಬಸ್‌ ಸಂಚಾರವಿಲ್ಲದೇ ಶಾಲಾ ಕಾಲೇಜು ವಿದ್ಯಾರ್ಥಿಗಳ ವ್ಯಾಸಂಗಕ್ಕೂ ಹಿನ್ನಡೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಸ್ತೆ ಅವ್ಯವಸ್ಥೆ:ಬನಹಟ್ಟಿ ಮುಖ್ಯರಸ್ತೆ ಅವ್ಯವಸ್ಥೆಗೆ ಗ್ರಾಮಸ್ಥರು ನಿತ್ಯ ಪರದಾಡುವಂತಾಗಿದೆ. ಸುಮಾರು 4, 5 ಕಿಮೀ ಅಂತರದಲ್ಲಿ ಹೆಜ್ಜೆಗೊಂದು ಗುಂಡಿಗಳು ಉದ್ಭವಿಸಿ ದ್ವಿಚಕ್ರ ವಾಹನ ಸವಾರರಂತೂ ಕೈಯಲ್ಲಿ ಜೀವ ಹಿಡಿದು ಸಾಗುವಂತಾಗಿದೆ. ನರಗುಂದ-ಬನಹಟ್ಟಿ ರಸ್ತೆ ಸುಧಾರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಟಾಪ್ ನ್ಯೂಸ್

kejriwal 2

ಅತಿಕ್ರಮಣ ವಿರೋಧಿ ಅಭಿಯಾನ : ಕೇಜ್ರಿವಾಲ್ ಆಕ್ರೋಶ

hd-kumarswaamy

ಸೈದ್ದಾಂತಿಕ ಬದ್ಧತೆಯ ಬಗ್ಗೆ ರಾಹುಲ್ ಗಾಂಧಿ ಬಿಡಿಸಿ ಹೇಳಬೇಕು: ಕುಮಾರಸ್ವಾಮಿ

ct-ravi

ಪಠ್ಯದಲ್ಲಿ ಹೆಗಡೆವಾರ್ ಭಾಷಣ ಸೇರ್ಪಡೆಯಾದರೆ ತಪ್ಪೇನು?: ಸಿ.ಟಿ.ರವಿ

ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ

ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ

ಸಿದ್ದಾಪುರ: ಶಂಕರನಾರಾಯಣ ಸ.ಹಿ.ಪ್ರಾ.ಶಾಲೆ; ಮುಖ್ಯ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ

ಸಿದ್ದಾಪುರ: ಶಂಕರನಾರಾಯಣ ಸ.ಹಿ.ಪ್ರಾ.ಶಾಲೆ; ಮುಖ್ಯ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ

thumb 5

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ ಪತ್ತೆ

ದತ್ತಪೀಠದ ಹೋಮ-ಹವನ ನಡೆಯುವ ಜಾಗದಲ್ಲಿ ಮಾಂಸಾಹಾರ; ಹಿಂದೂ ಪರ ಸಂಘಟನೆಗಳ ಆಕ್ರೋಶ

ದತ್ತಪೀಠದ ಹೋಮ-ಹವನ ನಡೆಯುವ ಜಾಗದಲ್ಲಿ ಮಾಂಸಾಹಾರ; ಹಿಂದೂ ಪರ ಸಂಘಟನೆಗಳ ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಗಾರು ಪೂರ್ವ ಮಳೆಗೆ ತಂಪಾದ ಇಳೆ

ಮುಂಗಾರು ಪೂರ್ವ ಮಳೆಗೆ ತಂಪಾದ ಇಳೆ

15ರಂದು ರಡ್ಡಿ ಯುವ ಚೈತನ್ಯ ಸಮಾವೇಶ

15ರಂದು ರಡ್ಡಿ ಯುವ ಚೈತನ್ಯ ಸಮಾವೇಶ

ಮನೆ ಮಹಾಮನೆ ಆಗಬೇಕೆಂಬುದೇ ಶರಣರ ಆಶಯ

ಮನೆ ಮಹಾಮನೆ ಆಗಬೇಕೆಂಬುದೇ ಶರಣರ ಆಶಯ

10

ತಂತ್ರಜ್ಞಾನ ಬಳಕೆಯಿಂದ ಉದ್ಯಮದಲ್ಲಿ ಪ್ರಗತಿ

8

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಮುಂದಾಗಿ: ಜಿಲ್ಲಾಧಿಕಾರಿ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

13land

ಸಿಪೆಟ್‌ ಭೂಮಿ ವೀಕ್ಷಿಸಿದ ಸಚಿವ ಚವ್ಹಾಣ

8

ಪ್ರತಿ ಜಿಲ್ಲೆಯಲ್ಲೂ ಆರೋಗ್ಯ ಮೇಳ ನಡೆಸಲು ಪ್ರಯತ್ನ

kejriwal 2

ಅತಿಕ್ರಮಣ ವಿರೋಧಿ ಅಭಿಯಾನ : ಕೇಜ್ರಿವಾಲ್ ಆಕ್ರೋಶ

udyoga-khatri

ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರಿಗೆ ಏಕಕಾಲಕ್ಕೆ ವೇತನ

hd-kumarswaamy

ಸೈದ್ದಾಂತಿಕ ಬದ್ಧತೆಯ ಬಗ್ಗೆ ರಾಹುಲ್ ಗಾಂಧಿ ಬಿಡಿಸಿ ಹೇಳಬೇಕು: ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.