Udayavni Special

ಕುಂಟೋಜಿ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ


Team Udayavani, Sep 4, 2020, 5:23 PM IST

ಕುಂಟೋಜಿ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ

ಗಜೇಂದ್ರಗಡ: ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸದಸ್ಯರು ಕೈ ಎತ್ತುವ ಮೂಲಕ ಅವಿಶ್ವಾಸ ಗೊತ್ತುವಳಿ ಮಂಡಿಸಿದ ಘಟನೆ ಗುರುವಾರ ಜರುಗಿದೆ.

ಸಮೀಪದ ಕುಂಟೋಜಿ ಗ್ರಾಪಂ ಅಧ್ಯಕ್ಷೆ ರೇಣುಕಾ ಕುಷ್ಟಗಿ ಅವರ ವಿರುದ್ಧ 9 ಜನ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದರು. ಗ್ರಾಮ ಪಂಚಾಯತಿಯಲ್ಲಿ ಒಟ್ಟು 13 ಜನ ಸದಸ್ಯರ ಸಂಖ್ಯಾ ಬಲವಿದ್ದು, ಬಹುತಮಕ್ಕೆ ಬೇಕಾದಷ್ಟು ಸಂಖ್ಯಾಬಲ ಇಲ್ಲದ ಕಾರಣ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಪರ ನಿರ್ಣಯಿಸಿದರು.

ಇದಕ್ಕೂ ಮೊದಲ ಕಳೆದ ಎರಡು ವಾರಗಳ ಹಿಂದೆ ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಕುಂಟೋಜಿ ಗ್ರಾಪಂ ಅಧ್ಯಕ್ಷರನ್ನು ಅಧ್ಯಕ್ಷ ಹುದ್ದೆಯಿಂದ ತೆಗೆದು ಹಾಕಬೇಕೆಂದು 9 ಜನ ಸದಸ್ಯರು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿ ಸಭೆ ನಡೆಯಿತು.

ಈ ವೇಳೆ ಜಿಲ್ಲಾ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ಕುಂಟೋಜಿ ಗ್ರಾಪಂ ಅಧ್ಯಕ್ಷರ ವಿರುದ್ಧ 9 ಜನ ಸದಸ್ಯರು ಅವಿಶ್ವಾಸ ಮಂಡಿಸಿದ್ದಾರೆ. ಕರ್ನಾಟಕ ಪಂಚಾಯತ್‌ ರಾಜ್ಯ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಕೋರಂ ಇದ್ದುದರಿಂದ ಅವಿಶ್ವಾಸ ಮಂಡನೆಯಾಗಿದೆ. ಮೂರನೇ ಎರಡು ಭಾಗಕ್ಕಿಂತಲೂ ಕಡಿಮೆ ಇಲ್ಲದ ಸದಸ್ಯರ ಬೆಂಬಲದೊಂದಿಗೆ ಅಂಗಿಕೃತವಾಗಿರುವುದರಿಂದ ಅಧ್ಯಕ್ಷ ಸ್ಥಾನ ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ರೋಣ ಪುರಸಭೆ ಸದಸ್ಯ ಮಿಥುನ ಪಾಟೀಲ, ನಿರೀಕ್ಷೆಯಂತೆ ಅಧ್ಯಕ್ಷರನ್ನು ಪದಚ್ಯುತಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಮಾಜಿ ಶಾಸಕ ಜಿ.ಎಸ್‌. ಪಾಟೀಲರ ಸೂಚನೆಯಂತೆ ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಅಧ್ಯಕ್ಷರಾಗಲಿದ್ದು, ಎಲ್ಲಾ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿ ಕುಂಟೋಜಿ ಪಂಚಾಯತಿಯಲ್ಲಿಕಾಂಗ್ರೆಸ್‌ ಬೆಂಬಲಿತರ ಆಡಳಿತ ರಚನೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿರಸ್ತೇದಾರ್‌ ವೀರಣ್ಣ ಅಡಗತ್ತಿ, ಗ್ರಾಪಂ ಪಿಡಿಒ ಎಸ್‌.ಎಸ್‌. ವ್ಯಾಪಾರಿ, ತಾಪಂ ಉಪಾಧ್ಯಕ್ಷ ಶಶಿಧರ ಹೂಗಾರ, ವಿ.ಆರ್‌. ಗುಡಿಸಾಗರ, ವೀರಣ್ಣ ಶೆಟ್ಟರ, ಬಸವರಾಜ ಬಂಕದ, ಎ.ಸಿ. ಪಾಟೀಲ, ಶರಣಪ್ಪ ಬೆಟಗೇರಿ, ನೇಮಪ್ಪ ರಾಠೊಡ, ಮುರ್ತುಜಾ ಡಾಲಾಯತ್‌, ಉಮೇಶ ರಾಠೊಡ, ಕಳಕನಗೌಡ ಡೊಳ್ಳಿನ, ಅನೀಲ ಕರ್ಣೆ ಸೇರಿದಂತೆ ಇತರರಿದ್ದರು.

ಟಾಪ್ ನ್ಯೂಸ್

ಕೋಲ್ಕತಾಕ್ಕೆ  ಶರಣಾದ ಮುಂಬೈ

ಕೋಲ್ಕತಾಕ್ಕೆ  ಶರಣಾದ ಮುಂಬೈ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ಮೇಕಪ್‌ ಸಾಮಗ್ರಿ ಕ್ಷೇತ್ರಕ್ಕೆ ರಿಲಯನ್ಸ್‌ ಲಗ್ಗೆ?

ಮೇಕಪ್‌ ಸಾಮಗ್ರಿ ಕ್ಷೇತ್ರಕ್ಕೆ ರಿಲಯನ್ಸ್‌ ಲಗ್ಗೆ?

ಲೋಕಸಭೆ ಸ್ಪೀಕರ್‌ ಭಾಷಣ ಬಹಿಷ್ಕಾರಕ್ಕೆ ಕಾಂಗ್ರೆಸ್‌ ನಿರ್ಧಾರ

ಲೋಕಸಭೆ ಸ್ಪೀಕರ್‌ ಭಾಷಣ ಬಹಿಷ್ಕಾರಕ್ಕೆ ಕಾಂಗ್ರೆಸ್‌ ನಿರ್ಧಾರ

ಮೋದಿ ವಿಚಾರದಲ್ಲಿ ಬಿಎಸ್‌ವೈ ಹೊಗಳಿಕೆ ಸಿದ್ದರಾಮಯ್ಯ ತೆಗಳಿಕೆ

ಮೋದಿ ವಿಚಾರದಲ್ಲಿ ಬಿಎಸ್‌ವೈ ಹೊಗಳಿಕೆ ಸಿದ್ದರಾಮಯ್ಯ ತೆಗಳಿಕೆ

ಬಳಸಿದ ಮಾಸ್ಕನ್ನೇ ಇನ್ನೊಬ್ಬರಿಗೆ ಹಾಕಿದ್ರು!

ಬಳಸಿದ ಮಾಸ್ಕನ್ನೇ ಇನ್ನೊಬ್ಬರಿಗೆ ಹಾಕಿದ್ರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mallakamba Championship

ಮಲ್ಲಕಂಬ ಚಾಂಪಿಯನ್‌ ಶಿಪ್‌ಗೆ ರಾಜ್ಯ ತಂಡ ಆಯ್ಕೆ

fgtytryr

ಮುಂಡರಗಿ:  ಹರ್ಮುಖ್‌ ಪರ್ವತ ಏರಿದ ಕಕ್ಕೂರು ತಾಂಡಾ ಯುವಕ

xfgsdtre

ಬೈಕ್-ಲಾರಿ ಡಿಕ್ಕಿ : ಮೂವರು ಸ್ಥಳದಲ್ಲೇ ಸಾವು

vdfgrre

2 ವರ್ಷ ಹಿಂದೆಯೇ 242 ಧಾರ್ಮಿಕ ಕೇಂದ್ರಗಳ ತೆರವು

ಕಲಕೇರಿ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವ

ಕಲಕೇರಿ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವ

MUST WATCH

udayavani youtube

ಚರಂಡಿಯಲ್ಲಿ ಬಿದ್ದಿದ್ದ ಹೋರಿ ರಕ್ಷಣೆ

udayavani youtube

ಈ ಅಂಗಡಿಯಲ್ಲಿ ದೊರೆಯುವ ಎಲ್ಲಾ ಸಾಮಗ್ರಿಗಳು ಶೇ.100 ರಷ್ಟು ರಾಸಾಯನಿಕ ರಹಿತ!

udayavani youtube

LIVE : ವಿಧಾನಸಭೆ​ ಕಲಾಪ ನೇರ ಪ್ರಸಾರ | 15th Assembly | 10th Session | 23-09-2021

udayavani youtube

ಮಹಿಳೆಯಿಂದ ಮಸಾಜ್‌ ಮಾಡಿಸಿಕೊಂಡ ಶಿಕ್ಷಕ ಅಮಾನತು|

udayavani youtube

ಉಡುಪಿ ಮುಳುಗುತ್ತಾ ?

ಹೊಸ ಸೇರ್ಪಡೆ

Untitled-2

ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ 

ಕೋಲ್ಕತಾಕ್ಕೆ  ಶರಣಾದ ಮುಂಬೈ

ಕೋಲ್ಕತಾಕ್ಕೆ  ಶರಣಾದ ಮುಂಬೈ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.