ನಗರೋತ್ಥಾನ ಆಮೆವೇಗಕ್ಕೆ ಜನರ ಹಿಡಿಶಾಪ


Team Udayavani, Sep 23, 2019, 12:35 PM IST

gadaga-tdy-3

ಗಜೇಂದ್ರಗಡ: ಕಳೆದೊಂದು ವರ್ಷದಿಂದ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಕುಂಟುತ್ತ ಸಾಗುತ್ತಿವೆ.

ಇದರಿಂದಾಗಿ ಆಲ್ಲಿನ ಜನರು ಹಾಗೂ ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುತ್ತ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಪುರಸಭೆ ನಗರೋತ್ಥಾನ ಯೋಜನೆಯಡಿ 2016-17ನೇ ಸಾಲಿನಲ್ಲಿ ಮಂಜೂರಾದ 6.37 ಕೋಟಿ ವೆಚ್ಚದಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ ಕಾಮಗಾರಿಗಳು ಆರಂಭವಾಗಿ ವರ್ಷಗಳೇ ಉರುಳಿವೆ. ಆದರೆ ಕಾಮಗಾರಿಗಳು ಮಾತ್ರ ಮುಗಿದಿಲ್ಲ. ಪುರಸಭೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

ಪಟ್ಟಣದ ಹುಡೇದ ಮಹಾಲಕ್ಷ್ಮೀ ವೃತ್ತದಿಂದ ಉದ್ಯಾನವನ ವರೆಗಿನ ಮುಖ್ಯರಸ್ತೆ ಕಾಮಗಾರಿ ಕೈಗೆತ್ತಿಕೊಂಡು ಹಲವು ತಿಂಗಳುಗಳೇ ಕಳೆದಿವೆ. ಕಾಮಗಾರಿ ಅರ್ಧಕ್ಕೆ ನಿಂತಿದೆ. ಮುಖ್ಯರಸ್ತೆಯಲ್ಲಿ ದೊಡ್ಡ ಜಲ್ಲಿಕಲ್ಲು ಹಾಕಿ ಕೈಬಿಟ್ಟಿರುವ ಗುತ್ತಿಗೆದಾರರ ವಿಳಂಬ ನೀತಿಯಿಂದಾಗಿ ಅಲ್ಲಿ ಸಂಚರಿಸುವ ಬಹುತೇಕ ವಾಹನ ಸವಾರರು ಎದ್ದುಬಿದ್ದು ಸಾಗುವಂತಾಗಿದೆ. ಸರ್ಕಾರಗಳು ಕಚ್ಚಾರಸ್ತೆ ಮುಕ್ತ ಪಟ್ಟಣವನ್ನಾಗಿಸುವ ನಿಟ್ಟಿನಲ್ಲಿ ಕೋಟ್ಯಂತರ ಅನುದಾನ ಬಿಡುಗಡೆ ಮಾಡಿ, ಗುತ್ತಿಗೆದಾರರಿಗೆ ನಿಯಮಗಳನ್ನು ಹೇರುತ್ತದೆ. ಆದರೆ ಗುತ್ತಿಗೆದಾರರು ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ತಮಗೆ ತೋಚಿದಾಗ ಕಾಮಗಾರಿ ನಡೆಸುತ್ತಿರುವುದರಿಂದ ವರ್ಷ ಕಳೆದರೂ ರಸ್ತೆ ಕಾಮಗಾರಿಗಳು ಮುಗಿಯುತ್ತಿಲ್ಲ.

ಪಟ್ಟಣದ 21ನೇ ವಾರ್ಡ್‌ನ ಎರಡು ಪ್ರಮುಖ ರಸ್ತೆಗಳಲ್ಲಿ ಡಾಂಬರೀಕರಣಕ್ಕಾಗಿ ಜಲ್ಲಿಕಲ್ಲುಗಳನ್ನು ಹಾಕಿ ಹಲವು ತಿಂಗಳು ಕಳೆದಿವೆ. ಆದರೆ ಈವರೆಗೂ ಕಾಮಗಾರಿ ಆರಂಭಿಸಿಲ್ಲ. ಈದ್ಗಾ ಮೈದಾನ ಬಳಿ ಚರಂಡಿ ಕಾಮಗಾರಿಯೂ ಅರ್ಧಕ್ಕೆ ನಿಂತಿದೆ. ಇದರಿಂದ ಖಾಸಗಿಯವರ ಜಾಗೆಯಲ್ಲಿ ಚರಂಡಿ ನೀರು ಸಂಗ್ರಹವಾಗುತ್ತಿದೆ. ನಗರೋತ್ಥಾನ ಯೋಜನೆ ನಿಯಮಾವಳಿ ಪ್ರಕಾರ ಒಂಭತ್ತು ತಿಂಗಳಿಗೆ ಎಲ್ಲ ಕಾಮಗಾರಿಗಳೂ ಸಂಪೂರ್ಣವಾಗಿ ಪೂರ್ಣಗೊಳ್ಳಬೇಕು. ಆದರೆ ಇನ್ನೂ ಕೆಲ ವಾರ್ಡ್‌ಗಳಲ್ಲಿ ರಸ್ತೆ ಕಾಮಗಾರಿಯನ್ನೇ ಕೈಗೊಂಡಿಲ್ಲ. ಅಧಿಕಾರಿಗಳು ಮುಗುಮ್ಮಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಟಾಪ್ ನ್ಯೂಸ್

ಪರಮ ಪಾವನೆಯಾಗುವತ್ತ ಗಂಗಾಮಾತೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

2022ರ ಆರಂಭಕ್ಕೆ ಆರೋಗ್ಯವಂತ ಮಕ್ಕಳಿಗೆ ಲಸಿಕೆ?

2022ರ ಆರಂಭಕ್ಕೆ ಆರೋಗ್ಯವಂತ ಮಕ್ಕಳಿಗೆ ಲಸಿಕೆ?

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇನ್ನು ವಾಹನ ಎನ್‌ಒಸಿ

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇನ್ನು ವಾಹನ ಎನ್‌ಒಸಿ

ಶಂಕಿತ ಐಸಿಸ್‌ ಉಗ್ರ ಸೆರೆ; ಉಗ್ರ ಸಂಘಟನೆಗೆ ಯುವಕರ ನೇಮಕ ಆರೋಪ

ಶಂಕಿತ ಐಸಿಸ್‌ ಉಗ್ರ ಸೆರೆ; ಉಗ್ರ ಸಂಘಟನೆಗೆ ಯುವಕರ ನೇಮಕ ಆರೋಪ

ಕನ್ನಡದಲ್ಲಿ ಪದವಿ ಮಾತ್ರ ಸಾಲದು, ಉದ್ಯೋಗವೂ ಬೇಕು

ಕನ್ನಡದಲ್ಲಿ ಪದವಿ ಮಾತ್ರ ಸಾಲದು, ಉದ್ಯೋಗವೂ ಬೇಕು

ಭಯೋತ್ಪಾದನೆ: ಕಠಿನ ಸಂದೇಶ ರವಾನಿಸಿದ ಅಮಿತ್‌ ಶಾ

ಭಯೋತ್ಪಾದನೆ: ಕಠಿನ ಸಂದೇಶ ರವಾನಿಸಿದ ಅಮಿತ್‌ ಶಾ

ವಿಧಾನಸಭೆ ಮಹಾಸಮರಕ್ಕೆ ಹಾನಗಲ್‌-ಸಿಂದಗಿ ಶಸ್ತ್ರಾಭ್ಯಾಸ

ವಿಧಾನಸಭೆ ಮಹಾಸಮರಕ್ಕೆ ಹಾನಗಲ್‌-ಸಿಂದಗಿ ಶಸ್ತ್ರಾಭ್ಯಾಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20school

ಗ್ರಾಮಸ್ಥರಿಂದಲೇ ತಲೆಯೆತ್ತುತ್ತಿವೆ ಶಾಲಾ ಕೊಠಡಿಗಳು

ಸಚಿವ ಸಿ.ಸಿ. ಪಾಟೀಲ ಯುವ ನಾಯಕರಿಗೆ ಪ್ರೇರಣೆ

ಸಚಿವ ಸಿ.ಸಿ. ಪಾಟೀಲ ಯುವ ನಾಯಕರಿಗೆ ಪ್ರೇರಣೆ

ಸಿಡಿಲು ಬಡಿದು ಹೊಲದಲ್ಲಿ ಮೇಯುತ್ತಿದ್ದ ಹನ್ನೊಂದು ಕುರಿಗಳ ಸಾವು

ಸಿಡಿಲು ಬಡಿದು ಹೊಲದಲ್ಲಿ ಮೇಯುತ್ತಿದ್ದ ಹನ್ನೊಂದು ಕುರಿಗಳ ಸಾವು

ರಾಮಮಂದಿರ ದೇಣಿಗೆ ಲೆಕ್ಕ ಹಾದಿಬೀದಿಯಲ್ಲಿ ಕೇಳುವ ಅಗತ್ಯವೇನು?  

ರಾಮಮಂದಿರ ದೇಣಿಗೆ ಲೆಕ್ಕ ಹಾದಿಬೀದಿಯಲ್ಲಿ ಕೇಳುವ ಅಗತ್ಯವೇನು?  

chfghtf

ಅನ್ನದಾನೇಶ್ವರ ಮಠದ ಪಟ್ಟಾಧಿಕಾರ ಮಹೋತ್ಸವ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

ಸಿಒಪಿ26 ಶೃಂಗ, ಏನು ಎತ್ತ?

ಸಿಒಪಿ26 ಶೃಂಗ, ಏನು ಎತ್ತ?

ಡ್ರಗ್ಸ್‌ ಕೇಸಿಗೆ ಲಂಚದ ಟ್ವಿಸ್ಟ್‌

ಡ್ರಗ್ಸ್‌ ಕೇಸಿಗೆ ಲಂಚದ ಟ್ವಿಸ್ಟ್‌

1-5ನೇ ತರಗತಿ ಇಂದು ಆರಂಭ

1-5ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಇಂದು ಆರಂಭ

2022ರ ಆರಂಭಕ್ಕೆ ಆರೋಗ್ಯವಂತ ಮಕ್ಕಳಿಗೆ ಲಸಿಕೆ?

2022ರ ಆರಂಭಕ್ಕೆ ಆರೋಗ್ಯವಂತ ಮಕ್ಕಳಿಗೆ ಲಸಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.