Udayavni Special

ಗದುಗಿನಲ್ಲಿ ರಡಾರ್‌ ಕೇಂದ್ರ ಕಾರ್ಯಾರಂಭ

•ಕನಿಷ್ಟ 25 ಪ್ರತಿಫಲನ ಶಕ್ತಿಗಿಂತ ಹೆಚ್ಚು ಮೋಡಗಳಿದ್ದರೆ ಮಾತ್ರ ಮೋಡ ಬಿತ್ತನೆ ಯಶಸ್ವಿ

Team Udayavani, Aug 2, 2019, 10:11 AM IST

gadaga-tdy-2

ಗದಗ: ನಗರದ ಇಂಡಸ್ಟ್ರೀಯಲ್ ಎಸ್ಟೇಟ್‌ನಲ್ಲಿ ಸ್ಥಾಪಿಸಿರುವ ರಡಾರ್‌ ಕೇಂದ್ರ.

ಗದಗ: ಜಿಲ್ಲೆಯ ಸುತ್ತಮುತ್ತಲಿನ 200 ಕಿಮೀ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ಮಾಡುವ ಉದ್ದೇಶದಿಂದ ಇಲ್ಲಿನ ಹುಬ್ಬಳ್ಳಿ ರಸ್ತೆಯಲ್ಲಿರುವ ಗದಗ ಇಂಡಸ್ಟ್ರೀಯಲ್ ಎಸ್ಟೇಟ್‌ನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಟ್ಟಡದಲ್ಲಿ ರಡಾರ್‌ ಕೇಂದ್ರ ಸ್ಥಾಪಿಸಲಾಗಿದ್ದು, ಅದು ಗುರುವಾರದಿಂದ ಕಾರ್ಯಾರಂಭ ಮಾಡಲಿದೆ.

ರಾಜ್ಯ ಸರಕಾರದ ‘ವರ್ಷಧಾರೆ’ ಯೋಜನೆಯಡಿ ಉತ್ತರ ಕರ್ನಾಟಕ ಭಾಗದಲ್ಲಿ ಬುಧವಾರ ಸಂಜೆ ಪ್ರಾಯೋಗಿಕವಾಗಿ ಮೋಡ ಬಿತ್ತನೆ ನಡೆಸಲಾಗಿದೆ. ಹವಾಮಾನ ಇಲಾಖೆಯ ನಿವೃತ್ತ ಹವಾಮಾನ ತಜ್ಞ ಜಿ.ಆರ್‌.ನದಾಫ್‌, ಸಹಾಯಕ ಅಭಿಯಂತರ ಎಂ.ಪಿ. ಮಂಜುನಾಥ, ರಾಜ್ಯದಲ್ಲಿ ಮೋಡ ಬಿತ್ತನೆ ಗುತ್ತಿಗೆ ಪಡೆದಿರುವ ‘ಕ್ಯಾತಿ ಕ್ಲೈಮೇಟ್ ಮೊಡಿಫಿಕೇಷನ್‌’ ಕಂಪನಿಯ ರಷ್ಯಾ ಮೂಲದ ಹವಾಮಾನ ತಜ್ಞ ಆಂಡ್ರಿ ಹಾಗೂ ತಾಂತ್ರಿಕ ಸಹಾಯಕ ಸುರೇಶ್‌ ಅವರು ಬೆಳಗ್ಗೆ 10.30ರಿಂದ ಸೂರ್ಯಾಸ್ತದವರೆಗೆ ಅದಕ್ಕೆ ಪೂರಕವಾಗಿ ಈ ಭಾಗದ ಮೋಡಗಳು ಹೊಂದಿರುವ ನೀರಿನ ಸಾಂದ್ರತೆ ಹಾಗೂ ಎತ್ತರ, ಮೋಡಗಳಿರುವ ದಿಕ್ಕು, ತೇವಾಂಶ ಕುರಿತು ವೈಜ್ಞಾನಿಕವಾಗಿ ಸಮಗ್ರ ಅಧ್ಯಯನ ನಡೆಸಿ ಮೋಡ ಬಿತ್ತನೆ ಮಾಡುವ ತಾಂತ್ರಿಕ ತಂಡಕ್ಕೆ ಮೋಡಗಳಚಿತ್ರ ಹಾಗೂ ದತ್ತಾಂಶ ಸಮೇತ ಮಾಹಿತಿ ನೀಡಲಿದೆ.

ರಡಾರ್‌ ಕೇಂದ್ರದ ಮಾಹಿತಿ ಆಧರಿಸಿ, ಹಿರಿಯ ಅಧಿಕಾರಿಗಳು ಹಾಗೂ ಎಟಿಸಿ(ಏರ್‌ ಟ್ರಾಫಿಕ್‌ ಕಂಟ್ರೋಲ್) ನಿರ್ದೇಶನದಂತೆ ವಿಮಾನ ಮೂಲಕ ಮೋಡ ಬಿತ್ತನೆ ಮಾಡಲಾಗುತ್ತದೆ. ಅದರಲ್ಲೂ ಕನಿಷ್ಠ 25 ಡಿಬಿಝಡ್‌ (ಪ್ರತಿಫಲನ ಶಕ್ತಿ)ಗಿಂತ ಹೆಚ್ಚು ಮೋಡಗಳಿದ್ದರೆ ಮಾತ್ರ ಮೋಡ ಬಿತ್ತನೆ ಯಶಸ್ವಿಯಾಗುತ್ತದೆ. ಮೋಡ ಬಿತ್ತನೆ ಮಾಡಿದ 15 ನಿಮಿಷಗಳಲ್ಲಿ ಮಳೆಯಾಗುತ್ತದೆ.

ಈ ಕೇಂದ್ರದಿಂದ ಸುತ್ತಲಿನ 200 ಕಿಮೀ ವ್ಯಾಪ್ತಿಯ ಮೋಡಗಳ ಅಧ್ಯಯನ ನಡೆಸಲಾಗುತ್ತಿದ್ದು, ಇದೀಗ ಬೆಳಗಾವಿ, ಗದಗ, ವಿಜಯಪುರ ಸೇರಿದಂತೆ ವಾಯವ್ಯ ಭಾಗದಲ್ಲಿ ಮೋಡಗಳು ದಟ್ಟವಾಗಿ ಕಂಡು ಬರುತ್ತಿದ್ದು, ಸುಮಾರು 50 ರಿಂದ 100ರಷ್ಟು ಡಿಬಿಝಡ್‌ ಸಾಂದ್ರತೆ ಹೊಂದಿವೆ. ಆ ಪೈಕಿ ಕೆಲವು ಒಂದೂವರೆ ಕಿಮೀ ನಷ್ಟು ಉದ್ದ ಹಾಗೂ ಐದಾರು ಕಿಮೀನಷ್ಟು ಎತ್ತರಕ್ಕೆ ಚಾಚಿಕೊಂಡಿರುತ್ತವೆ. ಅಂತಹ ಮೋಡಗಳಲ್ಲಿ ವಿಮಾನ ಮೂಲಕ ಸಿಲಿವರ್‌ ಐಯೋಡೆಡ್‌ ಉರಿಸುವುದರಿಂದ ನಿರೀಕ್ಷಿತ ಮಳೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ಈ ಹಿಂದೆ 2017ರ ಸೆಪ್ಟೆಂಬರ್‌ನಲ್ಲಿ ನಡೆದ ಮೋಡ ಬಿತ್ತನೆ ಸಮಯದಲ್ಲೂ ಇದೇ ಕಟ್ಟಡದಲ್ಲಿ ರಡಾರ್‌ ಕೇಂದ್ರ ಸ್ಥಾಪಿಸಲಾಗಿತ್ತು. ಈ ಬಾರಿ ಮೋಡ ಬಿತ್ತನೆ ಮಾಡುವ ಉದ್ದೇಶದಿಂದ ಜು.25ರಿಂದ ರಡಾರ್‌ ಕೇಂದ್ರದಲ್ಲಿ ತಾಂತ್ರಿಕ ಉಪಕರಣಗಳ ಅಳವಡಿಕೆ ಹಾಗೂ ಸಿದ್ಧತೆ ಪೂರ್ಣಗೊಳಿಸಲಾಗಿದೆ. ರಡಾರ್‌ ಕೇಂದ್ರದ ಮಾಹಿತಿ ಮೇರೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬುಧವಾರ ಸಂಜೆ ವಿಮಾನಗಳು ಗಗನಕ್ಕೆ ಹಾರಿ ಪ್ರಾಯೋಗಿಕವಾಗಿ ಯಶಸ್ವಿಯಾಗಿ ಮೋಡ ಬಿತ್ತನೆ ಕಾರ್ಯ ನಡೆಸಿವೆ ಎಂದು ಹೇಳಲಾಗಿದೆ.

ಈಗಾಗಲೇ ನಿರಂತರ ಬರ ಎದುರಿಸಿರುವ ಉತ್ತರ ಕರ್ನಾಟಕ ಭಾಗದಲ್ಲಿ ಇತ್ತೀಚೆಗೆ ಅಲ್ಪಸ್ವಲ್ಪ ಮಳೆಯಾಗುತ್ತಿದೆ. ಅದರೊಂದಿಗೆ ಮೋಡ ಬಿತ್ತನೆ ಆರಂಭಿಸಿದ್ದರಿಂದ ಮತ್ತಷ್ಟು ಮಳೆ ನಿರೀಕ್ಷಿಸಬಹುದಾಗಿದ್ದು, ರೈತಾಪಿ ಜನರಲ್ಲಿ ಹರ್ಷ ಮೂಡಿಸಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

US-ELECTION

ಹೇಗಿದೆ ಅಮೆರಿಕನ್‌ ಚುನಾವಣ ಕಣ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gadag

ಗದಗ: ಬೆಳ್ಳಂಬೆಳಗ್ಗೆ ಪಿಡಿ ಎಸ್.ಎನ್ ರುದ್ರೇಶ್ ನಿವಾಸದ ಮೇಲೆ ಎಸಿಬಿ ದಾಳಿ

ತೆನೆಯಲ್ಲಿ ಮೊಳಕೆಯೊಡೆಯುತ್ತಿದೆ ಮೆಕ್ಕೆ ಜೋಳ ! ಮೆಕ್ಕೆಜೋಳ ದರ ಕುಸಿತ ರೈತರು ಆತಂಕ

ತೆನೆಯಲ್ಲಿ ಮೊಳಕೆಯೊಡೆಯುತ್ತಿದೆ ಮೆಕ್ಕೆ ಜೋಳ ! ಮೆಕ್ಕೆಜೋಳ ದರ ಕುಸಿತ ರೈತರು ಆತಂಕ

ಮನೆಯ ಹಿತ್ತಲಲ್ಲಿ ಗಾಂಜಾ ಬೆಳೆದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

ಮನೆಯ ಹಿತ್ತಲಲ್ಲಿ ಗಾಂಜಾ ಬೆಳೆ : ಪೊಲೀಸರಿಂದ ಓರ್ವನ ಬಂಧನ, ಗಾಂಜಾ ಬೆಳೆ ವಶ!

ಕಾಂಗ್ರೆಸ್ ನ ತಂತ್ರ- ಕುತಂತ್ರಗಳನ್ನು ಬಿಜೆಪಿ ಛಿದ್ರ ಮಾಡಲಿದೆ: ಶ್ರೀರಾಮುಲು

ಕಾಂಗ್ರೆಸ್ ನ ತಂತ್ರ- ಕುತಂತ್ರಗಳನ್ನು ಬಿಜೆಪಿ ಛಿದ್ರ ಮಾಡಲಿದೆ: ಶ್ರೀರಾಮುಲು

gadaga-tdy-2

ಪದವೀಧರರ ಸೇವೆಗೆ ಮತ್ತೂಮ್ಮೆ ಅವಕಾಶ ನೀಡಿ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.