ಕೋವಿಡ್ ಸಂದರ್ಭದಲ್ಲಿ ಕಷಾಯ ವಿತರಿಸಿದ ರೈಲ್ವೆ ಸಿಬ್ಬಂದಿಗೆ ಸನ್ಮಾನ


Team Udayavani, Oct 6, 2020, 5:39 PM IST

ಕೋವಿಡ್ ಸಂದರ್ಭದಲ್ಲಿ ಕಷಾಯ ವಿತರಿಸಿದ ರೈಲ್ವೆ ಸಿಬ್ಬಂದಿಗೆ ಸನ್ಮಾನ

ಗದಗ: ಕೊರೊನಾ ನಿವಾರಣೆಗಾಗಿ ಕಳೆದ ನಾಲ್ಕೈದು ತಿಂಗಳಿಂದ ಸಾರ್ವಜನಿಕರಿಗೆ ಉಚಿತವಾಗಿ ಕಷಾಯ ವಿತರಣೆಯಲ್ಲಿ ತೊಡಗಿರುವ ಇಲ್ಲಿನ ರೈಲ್ವೇ ಸುರಕ್ಷಾ ದಳದ ಅಧಿಕಾರಿಗಳನ್ನು ಪತಂಜಲಿ ಯೋಗ ಸಮಿತಿ ಹಾಗೂ ಮುನ್ಸಿಪಲ್‌ ಪ್ರೌಢಶಾಲೆ ವಾಯುವಿಹಾರಿಗಳ ಪರಿವಾರದಿಂದ ಸನ್ಮಾನಿಸಲಾಯಿತು.

ರಾಷ್ಟ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎಸ್‌.ಎನ್‌. ಬಳ್ಳಾರಿ ಮಾತನಾಡಿ, ಮಾನವೀಯ ಸೇವೆಗಿಂತ ಮತ್ತೂಂದು ಸೇವೆ ಇಲ್ಲ. ಸಾರ್ವಜನಿಕರ ಸೇವೆಯಲ್ಲೇ ದೇವರನ್ನು ಕಾಣಬೇಕು. ಮನುಕುಲವನ್ನು ಕಾಡುತ್ತಿರುವ ಕೊರೊನಾ ಸೋಂಕಿನ ಸಂದರ್ಭದಲ್ಲಿ ಆಸ್ಪತ್ರೆಗಳು ಹಣ ಮಾಡುವಲ್ಲಿ ತೊಡಗಿವೆ. ಹಣದಾಸೆ ವೈದ್ಯರ ಲೋಪದಿಂದಾಗಿ ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಏಪ್ರಿಲ್‌ ತಿಂಗಳಲ್ಲಿ ನಗರದ ರಂಗನವಾಡಿಯಲ್ಲಿ ಒಂದೇ ಪ್ರಕರಣ ಕಂಡುಬಂದಾಗ ಭಯದ ವಾತಾವರಣ ನಿರ್ಮಾಣಗೊಂಡಿತ್ತು. ಇಂದು ಮನೆ ಪಕ್ಕದಲ್ಲೇ ಸೋಂಕು ಕಂಡು ಬಂದರೂ, ಹೆದರುವ ಅಗತ್ಯವಿಲ್ಲ. ಕೊರೊನಾ ಸೋಂಕಿಗೆ ಸೂಕ್ತ ಔಷಧ  ಲಭ್ಯವಿಲ್ಲದಿದ್ದರೂ, ಅಗತ್ಯ ಮುಂಜಾಗ್ರತೆ ವಹಿಸಿದರೆ ಸಾಕು. ಸೋಂಕಿನಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿದೆ ಎಂದು ಹೇಳಿದರು. ರೈಲ್ವೇ ಪೊಲೀಸ್‌ ಅ ಧಿಕಾರಿ ವಿ.ಎಚ್‌. ದಿವಾಕರ ಮಾತನಾಡಿ, ಕೊರೊನಾ ಮನುಷ್ಯನ ಜೀವಕ್ಕೆ ಅಪಾಯವಾಗಿದ್ದರೂ, ಮಾನವೀಯ ಸಂಬಂಧ, ಬಾಂಧವ್ಯಗಳನ್ನು ಬೆಸೆದಿದೆ. ದಿನವಿಡೀ ಮನೆಯಿಂದ ಹೊರಗೆ ಉಳಿಯುತ್ತಿದ್ದ ಜನರನ್ನು ಮನೆಯಲ್ಲೇ ಇರುವಂತೆ ಮಾಡಿದೆ. ಆದರೂ, ಕೊರೊನಾ ಸಂಕಷ್ಟದ ಕಾಲದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು. ಅದರಂತೆ ನಮ್ಮ ಇಲಾಖೆಯ ಮೇಲಾಧಿಕಾರಿಗಳಾದ ಹುಬ್ಬಳ್ಳಿ ಡಿಎಸ್‌ಸಿ ಟಿ.ಬಿ.ಥೋಕ್ಲಾ ಅವರ ಮಾರ್ಗದರ್ಶನದಲ್ಲಿ ಠಾಣೆಯ ಮುಂಭಾಗದಲ್ಲಿ ಪ್ರತಿನಿತ್ಯ 6ರಿಂದ 8 ಗಂಟೆವರೆಗೆ ಸುಮಾರು 100ಕ್ಕೂ ಹೆಚ್ಚು ಜನರಿಗೆ ದಿನಕ್ಕೊಂದರಂತೆ 35ಕ್ಕೂ ಹೆಚ್ಚು ಬಗೆಯ ಕಷಾಯ ವಿತರಿಸಿದ್ದೇವೆ. ಅದಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ಮಾತುಗಳು ಸರಕಾರ ನೀಡುವ ಪ್ರಶಸ್ತಿಗಳಿಂತ ದೊಡ್ಡದಾಗಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಆರ್‌ಪಿಎಫ್‌ ಅ ಧಿಕಾರಿಗಳ ವಿ.ಎಚ್‌. ದಿವಾಕರ ಹಾಗೂ ಸಿಬ್ಬಂದಿಗಳಾದ ಎ.ಎ. ಕಲಬುರಗಿ, ಸೋಮಪ್ಪ ಚವ್ಹಾಣ, ಎಸ್‌.ಆರ್‌. ಕಾಂಬ್ಳೆ, ಸಿ.ಬಿ. ರಾಘವೇಂದ್ರ, ಟಾಕಪ್ಪ ಲಮಾಣಿ, ಸೈಯದ್‌ ಸಾಬ್‌, ಎಂ.ಬಿ. ಮೊಕಾಶಿ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಭಾರತ ಸ್ವಾಭಿಮಾನಿ ಟ್ರಸ್ಟ್‌ನ ಜಿಲ್ಲಾ ಪ್ರಭಾರಿ ರುದ್ರಣ್ಣ ಗುಳಗುಳಿ ಅಧ್ಯಕ್ಷ ವಹಿಸಿದ್ದರು.

ಟಾಪ್ ನ್ಯೂಸ್

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್

ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

daily-horoscope

ಈ ರಾಶಿಯವರು ಇಂದು ಬಂಧುಮಿತ್ರರಲ್ಲಿ ವ್ಯವಹರಿಸುವಾಗ ದುಡುಕದಿರಿ. ತಾಳ್ಮೆಯಿಂದ ನಿರ್ಣಯ ನೀಡಿ.

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

300ರ ಬದಲು ಇರುವುದು 22 ಯಂತ್ರಗಳು !

300ರ ಬದಲು ಇರುವುದು 22 ಯಂತ್ರಗಳು !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಮಮಂದಿರ ದೇಣಿಗೆ ಲೆಕ್ಕ ಹಾದಿಬೀದಿಯಲ್ಲಿ ಕೇಳುವ ಅಗತ್ಯವೇನು?  

ರಾಮಮಂದಿರ ದೇಣಿಗೆ ಲೆಕ್ಕ ಹಾದಿಬೀದಿಯಲ್ಲಿ ಕೇಳುವ ಅಗತ್ಯವೇನು?  

chfghtf

ಅನ್ನದಾನೇಶ್ವರ ಮಠದ ಪಟ್ಟಾಧಿಕಾರ ಮಹೋತ್ಸವ

1-ram

ಮತಾಂತರಿಗಳ ಸದೆಬಡಿಯಲು ಶ್ರೀರಾಮ ಸೇನೆ ಸಿದ್ಧ

1tola

ತೋಳ ಕೊಂದು ಬೈಕ್‌ಗೆ ಕಟ್ಟಿ ಎಳೆದೊಯ್ದ ಯುವಕರು

Vijaya Dashami celebration

ವಿಜಯ ದಶಮಿ ಸಂಭ್ರಮ: ರಾವಣನ ಪ್ರತಿಕೃತಿ ದಹನ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ತಂತ್ರಜ್ಞಾನ ಆಧಾರಿತ ಯುದ್ಧ ಎದುರಿಸಲು ಸಜ್ಜಾಗಿ

ತಂತ್ರಜ್ಞಾನ ಆಧಾರಿತ ಯುದ್ಧ ಎದುರಿಸಲು ಸಜ್ಜಾಗಿ

5politics

ಪ್ರಚಾರದ ಅಬ್ಬರ ಜೋರು: ಸಮಸ್ಯೆಗಳ ಚಿಂತನೆ ಚೂರು

ಶಂಕಿತ ಉಗ್ರ ಸದ್ದಾಂ ಹುಸೇನ್‌ ಪತ್ನಿ ಸೆರೆ

ಶಂಕಿತ ಉಗ್ರ ಸದ್ದಾಂ ಹುಸೇನ್‌ ಪತ್ನಿ ಸೆರೆ

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

4former

ದೂರದ ಕಾರ್ಖಾನೆಗೆ ಕಬ್ಬು ಸಾಗಾಟ; ಬೆಳೆಗಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.