ಪಡಿತರ ಪಡೆಯಲು ಜನರ ಪರದಾಟ

ಬ್ಯಾಲವಾಡಗಿ-ಶಿರೋಳ ವಾರ್ಡ್‌ನ ಜನರ ಗೋಳು­!ಅಂಗಡಿಯಿದೆ ನಾಲ್ಕು ಕಿಮೀ ದೂರ

Team Udayavani, Apr 27, 2021, 6:20 PM IST

fghyr

ವರದಿ: ಹು.ಬಾ. ವಡ್ಡಟ್ಟಿ

ಮುಂಡರಗಿ: ಪಟ್ಟಣ ವ್ಯಾಪ್ತಿಯ ಬ್ಯಾಲವಾಡಗಿ-ಶಿರೋಳ ವಾರ್ಡ್‌ನ ಜನರು ಸರಕಾರದ ಪಡಿತರಕ್ಕಾಗಿ ನಾಲ್ಕು ಕಿಮೀ ದೂರ ಕ್ರಮಿಸಿ ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ.

ಬ್ಯಾಲವಾಡಗಿಯ 300 ಪಡಿತರ ಚೀಟಿದಾರರು, ಉಸ್ತಾದ್‌ ಪ್ಲಾಟ್‌ ಮತ್ತು ಕೆಇಬಿಯ ಹಿಂದುಗಡೆ ಇರುವ ಮನೆಗಳ ಪಡಿತರ ಚೀಟಿದಾರರು ಸೇರಿದಂತೆ ಕನಿಷ್ಠ 500 ಪಡಿತರ ಚೀಟಿದಾರರು ಪಡಿತರಕ್ಕಾಗಿ ಹಳೆಯ ಎಪಿಎಂಸಿಗೆ ಹೊಂದಿಕೊಂಡಂತೆ ಇರುವ ಟಿಎಪಿಎಂಸಿ ಸೊಸೈಟಿಯ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳಬೇಕಾಗುತ್ತದೆ.

ಬ್ಯಾಲವಾಡಗಿಯ ಹೊಸ ಪಡಿತರ ಚೀಟಿದಾರರು ಎಸ್‌.ಎಸ್‌. ಪಾಟೀಲ ನಗರದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳಬೇಕು. ಅಲ್ಲದೇ ಶಿರೋಳ ವಾರ್ಡ್‌ನ 500ರಷ್ಟು ಇರುವ ಪಡಿತರ ಚೀಟಿದಾರರೂ ಕೃಷಿ ಸಹಕಾರ ಸೊಸೈಟಿ ಮತ್ತು ಎಸ್‌.ಎಸ್‌. ಪಾಟೀಲ ನಗರದ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಪಡೆದುಕೊಳ್ಳಬೇಕಾಗುತ್ತದೆ. ಬ್ಯಾಲವಾಡಗಿ, ಶಿರೋಳ ಗ್ರಾಮಸ್ಥರು ಪಡಿತರ ಪಡೆದುಕೊಳ್ಳಲು ಟಿಎಪಿಎಂಸಿ ಸೊಸೈಟಿ ಆವರಣದಲ್ಲಿರುವ ನ್ಯಾಯಬೆಲೆ ಅಂಗಡಿ ಇಲ್ಲವೇ ಎಸ್‌.ಎಸ್‌. ಪಾಟೀಲ ನಗರದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ತರಬೇಕೆಂದರೆ ನಾಲ್ಕು ಕಿಮೀವರೆಗೆ ಕ್ರಮಿಸಿದ ನಂತರವೇ ಪಡಿತರ ಸಿಗುತ್ತದೆ.

ಟಿಎಪಿಎಂಸಿನ ಸೊಸೈಟಿಯ ನ್ಯಾಯಬೆಲೆ ಅಂಗಡಿ ತಲುಪಲು ಎರಡು ಕಿಮೀ ದೂರ, ಎಸ್‌.ಎಸ್‌. ಪಾಟೀಲ ನಗರದ ನ್ಯಾಯಬೆಲೆ ಅಂಗಡಿ ತಲುಪಿ ಪಡಿತರ ತರಲು ನಾಲ್ಕು ಕಿಮೀ ಕ್ರಮಿಸುವ ಅನಿವಾರ್ಯತೆ ಇದೆ. ಅಲ್ಲದೇ ವೃದ್ಧರು, ಮಹಿಳೆಯರು, ಹಿರಿಯ ನಾಗರಿಕರು ನಡೆದುಕೊಂಡು ಇಲ್ಲವೇ ಬಸ್‌ ಹಿಡಿದು ಸೊಸೈಟಿಗೂ ಮತ್ತು ಎಸ್‌.ಎಸ್‌. ಪಾಟೀಲರ ನಗರದ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ತರಬೇಕಾಗುತ್ತದೆ.

ಬ್ಯಾಲವಾಡಗಿ, ಶಿರೋಳ ಗ್ರಾಮದಲ್ಲಿಯೇ ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ವಿತರಣೆ ಮಾಡಿದರೆ ಪಡಿತರ ಚೀಟಿದಾರರ ಪ್ರಯಾಸ ಪಡುವುದು ತಪ್ಪುತ್ತದೆ. ಜೊತೆಗೆ ಕೆಲ ಪಡಿತರ ಚೀಟಿದಾರರು ನಾಲ್ಕು ಕಿಮೀ ದೂರದಿಂದ ತರುವ ಪಡಿತರವನ್ನು ಮಾರ್ಗ ಮಧ್ಯದಲ್ಲಿಯೇ ಕಿರಾಣಿ ಅಂಗಡಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಿ ಮನೆ ತಲುಪುತ್ತಾರೆ. ಇದರಿಂದ ಕುಟುಂಬಕ್ಕೆ ತಲುಪಬೇಕಾಗಿರುವ ಪಡಿತರ ಕಾಳ ಸಂತೆಕೋರರ ಪಾಲಾಗುತ್ತಿದೆ. ಕೆಲ ಮಧ್ಯವರ್ತಿಗಳು ಓಣಿಯಲ್ಲಿರುವ 10-15 ಪಡಿತರ ಚೀಟಿ ಕೂಡಿಸಿಕೊಂಡು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಆಹಾರ ಇಲಾಖೆ ಅಧಿಕಾರಗಳು ಈ ಕುರಿತು ಗಮನಹರಿಸಬೇಕಾಗಿದೆ.

ಟಾಪ್ ನ್ಯೂಸ್

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

ಕೈದಿಗಳಿಗೆ ಬಿಡುಗಡೆ ಭಾಗ್ಯ: ಕೇಂದ್ರ ಸರಕಾರದ ನಿರ್ಧಾರ

ಕೈದಿಗಳಿಗೆ ಬಿಡುಗಡೆ ಭಾಗ್ಯ: ಕೇಂದ್ರ ಸರಕಾರದ ನಿರ್ಧಾರ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

ಭಾರತೀಯ ವಾಯುಪಡೆಯಲ್ಲಿ ಮೊದಲನೇ ಬಾರಿಗೆ ಅಪ್ಪ-ಮಗಳ ಸಾಧನೆ

ಭಾರತೀಯ ವಾಯುಪಡೆಯಲ್ಲಿ ಮೊದಲನೇ ಬಾರಿಗೆ ಅಪ್ಪ-ಮಗಳ ಸಾಧನೆ

ನಾಯಿಗಳ ಮೂಲ ಯಾವುದು ಎಂಬುದು ಗೊತ್ತಾ?

ನಾಯಿಗಳ ಮೂಲ ಯಾವುದು ಎಂಬುದು ಗೊತ್ತಾ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಸಚಿವ ಸಂಪುಟದಲ್ಲಿ “ಉದ್ಯೋಗ ನೀತಿ’ ಅನುಮೋದನೆ?

ಸಚಿವ ಸಂಪುಟದಲ್ಲಿ “ಉದ್ಯೋಗ ನೀತಿ’ ಅನುಮೋದನೆ?

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ದ್ವಿತೀಯ ಪಿಯು ಪರೀಕ್ಷೆ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಲಭ್ಯ

ದ್ವಿತೀಯ ಪಿಯು ಪರೀಕ್ಷೆ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಲಭ್ಯ

ಕಾಮೆಡ್‌ ಕೆ ಫ‌ಲಿತಾಂಶ ಪ್ರಕಟ: ಟಾಪ್‌ 10ರಲ್ಲಿ ರಾಜ್ಯದ ಐವರಿಗೆ ಸ್ಥಾನ

ಕಾಮೆಡ್‌ ಕೆ ಫ‌ಲಿತಾಂಶ ಪ್ರಕಟ: ಟಾಪ್‌ 10ರಲ್ಲಿ ರಾಜ್ಯದ ಐವರಿಗೆ ಸ್ಥಾನ

MUST WATCH

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

udayavani youtube

ವಿಟ್ಲ ಸಾರಡ್ಕ ಬಳಿ ಕುಸಿದ ಗುಡ್ಡ : ಕರ್ನಾಟಕ – ಕೇರಳ ಸಂಚಾರ ಬಂದ್

ಹೊಸ ಸೇರ್ಪಡೆ

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

ಕೈದಿಗಳಿಗೆ ಬಿಡುಗಡೆ ಭಾಗ್ಯ: ಕೇಂದ್ರ ಸರಕಾರದ ನಿರ್ಧಾರ

ಕೈದಿಗಳಿಗೆ ಬಿಡುಗಡೆ ಭಾಗ್ಯ: ಕೇಂದ್ರ ಸರಕಾರದ ನಿರ್ಧಾರ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.