ಸರ್ವಪಲ್ಲಿ ರಾಧಾಕೃಷ್ಣನ್‌ ಆದರ್ಶ ಪಾಲಿಸಿ

Team Udayavani, Sep 6, 2019, 11:41 AM IST

ಗಜೇಂದ್ರಗಡ: ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಗಜೇಂದ್ರಗಡ: ರಾಷ್ಟ್ರ ನಿರ್ಮಾಪಕರಾಗಿರುವ ಶಿಕ್ಷಕ ಸಮೂಹ ಮಕ್ಕಳಲ್ಲಿನ ಪರಿಪೂರ್ಣತೆಯ ಜ್ಞಾನ ಹೊರತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಶಿಕ್ಷಣ ಪ್ರೇಮ ಅಮೋಘವಾದದ್ದು ಎಂದು ಓಂ ಸಾಯಿ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಆನಂದ ಮಂತ್ರಿ ಹೇಳಿದರು.

ಪಟ್ಟಣದ ಓಂ ಸಾಯಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ವೇದ, ಉಪನಿಷತ್ತು, ಗೀತೆ, ವಚನಗಳಿಗೆ ಐರೋಪ್ಯ ರಾಷ್ಟ್ರಗಳ ತತ್ವಜ್ಞಾನಿಗಳು ಮರುಳಾಗಿ, ಅವುಗಳ ಜಾಡಿನಲ್ಲಿ, ಗ್ರೀಕ್‌ನ ಪೈಥಾಗೋರಸ್‌, ಸಾಕ್ರೆಟಿಸ್‌, ಪ್ಲೇಟೋ ಮುಂತಾದ ದಾರ್ಶನಿಕ ಚಿಂತಕರು, ಭಾರತೀಯ ಸಂಸ್ಕೃತಿಯನ್ನು ಸಾವಿರಾರು ವರ್ಷಗಳ ಹಿಂದೆಯೇ ಮೆಚ್ಚಿಕೊಂಡಿದ್ದಾರೆ. ನಮ್ಮ ಅತ್ಯಂತ ಪ್ರಾಚೀನವಾದ ಭಾರತೀಯ ಸಂಸೃ್ಕತಿಯ ತತ್ವಗಳನ್ನು ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಬೇಕಿದೆ. ಬಹುತೇಕ ಶಿಕ್ಷಕರು, ವಿದ್ಯಾರ್ಥಿಗಳು ಪರೀಕ್ಷೆಗಾಗಿ ಬದುಕಿ, ಪರೀಕ್ಷೆಗಾಗಿಯೇ ಸಾಯುತ್ತಾರೆ. ಶಿಕ್ಷಕ ಕುದುರೆ ತರಬೇತು ದಾರನಲ್ಲ. ಕುದುರೆ ತರಬೇತುದಾರನಂತೆ ಕೆಲಸ ಮಾಡಿದರೆ ಆತ ಶಿಕ್ಷಕನಾಗುವುದಿಲ್ಲ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉತ್ತಮ ಸ್ನೇಹಿತರಾಗಿರಬೇಕು. ದುರಹಂಕಾರದ, ಅರ್ಥಹೀನ ಮಾತುಗಳನ್ನು ಶಿಕ್ಷಕರು ಬಿಡದಿದ್ದರೆ ವಿದ್ಯಾರ್ಥಿಗಳಲ್ಲಿ ಮನುಷ್ಯತ್ವ ಬೆಳೆಸಲು ಸಾಧ್ಯವಾಗುವುದಿಲ್ಲ ಎಂದರು.

ಸಂಸ್ಥೆ ಉಪಾಧ್ಯಕ್ಷ ಮೋಹನ ಕನಕೇರಿ ಮಾತನಾಡಿ, ಶಿಕ್ಷಕರ ದಿನಾಚರಣೆ ಎಂಬುದು ಇತ್ತೀಚೆಗೆ ಯಾಂತ್ರಿಕವಾಗುತ್ತಿದೆ. ಗುರುವನ್ನು ಮೇರು ಸ್ಥಾನದಲ್ಲಿಟ್ಟಿದ್ದೇವೆ. ಆದರೆ, ಗುರುವಾದವನು ನಿಜವಾಗಿಯೂ ಗುರುವಿನ ಕೆಲಸ ಮಾಡುತ್ತಿದ್ದಾನೇಯೇ, ಗುರುವಿನ ಜವಾಬ್ದಾರಿ ಏನು? ನಾವು ಮಾಡಬೇಕಾದ ಎಷ್ಟು ಕೆಲಸಗಳನ್ನು ಬಿಟ್ಟು ಹೋಗಿದ್ದೇವೆ ಎಂಬ ಬಗ್ಗೆ ಯೋಚಿಸಬೇಕಿದೆ ಎಂದರು.

ಕಾರ್ಯದರ್ಶಿ ಗಿರೀಶ ವೆರ್ಣೆಕರ, ಮುಖ್ಯ ಶಿಕ್ಷಕಿ ಡಾ. ಮಂಜುಳಾ ಹಳಕಟ್ಟಿ, ಕವಿತಾ ಹಾದಿಮನಿ, ಫರ್ಜಾನಾ ಮುಧೋಳ, ಸಿದ್ದು ವಿ. ಜಿ, ಸುನಂದಾ ದಿವಟೆ, ಮಂಜುಳಾ ದವೆ, ಕವಿತಾ ಸಂಚಾಲಿ, ಮಲ್ಲಪ್ಪ ಮಾಟರಂಗಿ, ವಿಜಯಲಕ್ಷ್ಮಿ ಮುಲ್ಕಿಪಾಟೀಲ, ನಂದಾ ರಂಗ್ರೇಜಿ, ಯಲ್ಲಮ್ಮ ಕಟ್ಟಿಮನಿ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ