ಲೋಕ ಕಲ್ಯಾಣಾರ್ಥಕ್ಕೆ ಸಿದ್ಧಿ ಸಮಾಧಿ ಯೋಗ

ಅಂತೂರ-ಬೆಂತೂರ ಗ್ರಾಮದ ಡಾ| ರಾಚೋಟೇಶ್ವರ ಶ್ರೀಗಳು

Team Udayavani, Jul 16, 2019, 10:20 AM IST

gadaga-tdy-2..

ಮುಂಡರಗಿ: ಮಾನವ ಕುಲಕ್ಕೆ ಒಳಿತು ಆಗಬೇಕು. ವಿಶೇಷವಾಗಿ ರೈತ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದುವರಿಯಲು ಉತ್ತಮ ಬೆಳೆ ಬೆಳೆದು ಸಬಲರಾಗಬೇಕು. ಇಂತಹ ಸದುದ್ದೇಶ ಸೇರಿದಂತೆ ಲೋಕ ಕಲ್ಯಾಣಾರ್ಥವಾಗಿ ಅಂತೂರ-ಬೆಂತೂರ ಗ್ರಾಮದ ಶ್ರೀ ಬೂದೀಶ್ವರ ಸಂಸ್ಥಾನ ಮಠದ ಡಾ| ರಾಚೋಟೇಶ್ವರ ಶಿವಾಚಾರ್ಯರು ಸ್ವಾಮೀಜಿ 21 ದಿನಗಳ ಮೌನಾನುಷ್ಠಾನ ಹಾಗೂ 21 ದಿನಗಳ ಸಿದ್ಧಿ ಸಮಾಧಿಯೋಗದ ಸ್ಥಿತಿಯಲ್ಲಿ ಗುಹೆಯಲ್ಲಿ ಕುಳಿತಿದ್ದಾರೆ.

ತಾಲೂಕಿನ ಕಪ್ಪತ್ತಗುಡ್ಡದ ಗೊಲಗೇರಿಮಠದ ಪಾರ್ವತಿ-ಪರಮೇಶ್ವರ ಗುಹೆಯಲ್ಲಿ ಮೌನಾನುಷ್ಠಾನ ಕುಳಿತಿದ್ದು, ಯಾರೊಂದಿಗೂ ಮಾತನಾಡುವುದಿಲ್ಲ. ಆಹಾರ ಸೇವನೆ ಮಾಡದೇ ನಿರಾಹಾರಿಗಳಾಗಿ ಶಿವನ ಜ್ಞಾನದಲ್ಲಿ ಅನುಷ್ಠಾನ ಕುಳಿತಿದ್ದಾರೆ. ವಿಶೇಷವೆಂದರೆ ಶ್ರೀಗಳು ಕುಳಿತಿರುವ ಅನುಷ್ಠಾನದ ಗುಹೆಯ ಒಳಗೆ ಪ್ರವೇಶ ಮಾಡುವ ಮಾರ್ಗವನ್ನು ಸಿಮೆಂಟ್ ಮತ್ತು ಇಟ್ಟಿಗೆಯಿಂದ ಮುಚ್ಚಿ ಗಾಳಿ-ಬೆಳಕು ಆಡದಂತೆ ಬಂದೋಬಸ್ತ್ ಮಾಡಲಾಗಿದೆ.

ಡಾ| ರಾಚೋಟೇಶ್ವರ ಶ್ರೀಗಳು ಅನುಷ್ಠಾನಕ್ಕೆ ಕುಳಿತಿರುವ ಗುಹೆಯೊಳಗೆ ಗಾಳಿ ಬೆಳಕು ಇಲ್ಲದೆ ಕತ್ತಲ ಕೋಣೆಯಾಗಿದೆ. ಶ್ರೀಗಳ ಅನುಷ್ಠಾನವು ಜೂನ್‌ 7ರಿಂದ ಪ್ರಾರಂಭವಾಗಿದೆ. ಸಿದ್ಧಿ ಸಮಾಧಿಸ್ಥಿತಿಯ ಅನುಷ್ಠಾನವು ಜೂನ್‌ 27ರಿಂದ ಪ್ರಾರಂಭಿಸಿದ್ದು, ಜುಲೈ 18ಕ್ಕೆ ಮುಕ್ತಾಯವಾಗಲಿದೆ. ಈ ಅನುಷ್ಠಾನಕ್ಕೆ ತನ್ನದೆ ಆದ ಇತಿಹಾಸ, ಧಾರ್ಮಿಕ ಹಿನ್ನೆಲೆಯಿದೆ. ಮೌನಾನುಷ್ಠಾನದ ಕೊನೆಯ ದಿನ ಭಕ್ತರು ಬಾಗಿಲು ಒಡೆದು ಸ್ವಾಮೀಜಿಗಳನ್ನು ಬರಮಾಡಿಕೊಳ್ಳಲಿದ್ದಾರೆ. ಇದೊಂದು ತಪಸ್ಸಾಗಿದ್ದು, ಅವರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎನ್ನುತ್ತಾರೆ ಡೋಣಿ ಗ್ರಾಮಸ್ಥ ಶಂಕರಗೌಡ ಜಾಯನಗೌಡರ.

ಡಾ.ರಾಚೋಟೇಶ್ವರರ ಸ್ವಾಮೀಜಿಗಳ ಅನುಷ್ಠಾನದ ದರ್ಶನ ಪಡೆಯಲು ನೂರಾರು ಭಕ್ತರು ಪ್ರತಿದಿನ ಆಗಮಿಸುತ್ತಿದ್ದಾರೆ. ಪ್ರತಿದಿನವೂ ಬರುವ ಭಕ್ತರು ಗುಹೆಯ ಮುಂಭಾಗದಲ್ಲಿ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಮರಳುತ್ತಿದ್ದಾರೆ.

ಸಾಧಕರು ಯೋಗ ಸಾಧನೆಯ ಮೂಲಕ ಸಮಾಧಿ ಸ್ಥಿತಿಯನ್ನು ತಲುಪಬಹುದಾಗಿದೆ. ಪ್ರಾಣಾಯಾಮದ ಕೊನೆಯ ಹಂತವು ಸ್ಥಿತಿಯಾಗಿದೆ. ಸಹಜ ಮನುಷ್ಯನ ಉಸಿರಾಟವು ಒಂದು ನಿಮಿಷಕ್ಕೆ 18 ಬಾರಿ ಆದರೆ, ಅನುಲೋಮ-ವಿಲೋಮದಲ್ಲಿ ಒಂದು ನಿಮಿಷದಲ್ಲಿ 4ರಿಂದ 5 ಸಲ ಉಸಿರಾಡಬಹುದು. ಕುಂಭಯುಕ್ತ ಪ್ರಾಣಾಯಾಮದಲ್ಲಿ ಸಾಧಕರು 1ನಿಮಿಷಕ್ಕೆ ಒಂದೇ ಸಲ ಉಸಿರಾಟವನ್ನು ನಡೆಸುತ್ತಾರೆ. ಕುಂಭಯುಕ್ತ ಪ್ರಾಣಾಯಾಮವೇ ಸಮಾಧಿ ಸ್ಥಿತಿಯಲ್ಲಿ ಸಾಧಕರು ಇರುವಂತೆ ನೋಡಿಕೊಂಡು ಅನುಷ್ಠಾನ ಕುಳಿತುಕೊಳ್ಳಬಹುದಾಗಿದೆ ಎಂದು ಯೋಗ ಸಾಧಕರಾದ ಡಂಬಳದ ಜಿ.ವಿ. ಹಿರೇಮಠ ಅಭಿಪ್ರಾಯಪಡುತ್ತಾರೆ.
•ಹು.ಬಾ.ವಡ್ಡಟ್ಟಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ

Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ

ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ

ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ

ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್

Gadag; ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್

Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್

Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.