ಅವಘಡ ಸಂಭವಿಸಿ ವರ್ಷ ಕಳೆದರೂ ದೊರೆಯದ ಪರಿಹಾರ

Team Udayavani, Nov 26, 2019, 3:04 PM IST

gadaga-tdy-2

ಮುಂಡರಗಿ: ಬರದೂರು ಗ್ರಾಮದ ಜನತಾ (ಹುಡ್ಕೊ) ಪ್ಲಾಟ್‌ನ ಮನೆಯೊಂದರಲ್ಲಿ ವಿದ್ಯುತ್‌ ಅವಘಡ ಸಂಭವಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿ, ಮಹಿಳೆ ಪಾದಗಳು ಸುಟ್ಟು ವರ್ಷ ಉರುಳಿದರೂ ಪರಿಹಾರ ಮರೀಚಿಕೆಯಾಗಿದೆ. ಇದರಿಂದ ಕುಟುಂಬ ಪರಿತಪಿಸುವಂತಾಗಿದ್ದು, ಹೆಸ್ಕಾಂ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಬರದೂರು ಗ್ರಾಮದ (ಹುಡ್ಕೊ) ಹೈತಾಪುರ ರಸ್ತೆಯಲ್ಲಿರುವ ಪ್ಲಾಟ್‌ನಲ್ಲಿ ಮನೆಯ ಮೇಲೆ ಇದ್ದ ಹೈಟೆನ್ಷನ್ ವಿದ್ಯುತ್‌ ತಂತಿಯಿಂದಾಗಿ ಅವಘಡವು ಸಂಭವಿಸಿ ಸಂಬಂಧಿ ಕರಾದ ಶಿವಪ್ಪ ಹೆಗ್ಗಣ್ಣವರ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಜೊತೆಗೆ ಜಯಶ್ರೀ ಯಲ್ಲಪ್ಪ ನಿಟ್ಟಾಲಿ ಕಾಲುಗಳಿಗೆ ಸುಟ್ಟ ಗಾಯಗಳು ಆಗಿದ್ದವು. ಪತ್ನಿ ಜಯಶ್ರೀಯನ್ನು ಗದಗ, ಹುಬ್ಬಳ್ಳಿ, ದಾವಣಗೆರೆಯ ಖಾಸಗಿ ಆಸ್ಪತ್ರೆಗಳಲ್ಲಿ ಪತಿಯಲ್ಲಪ್ಪನು ಚಿಕಿತ್ಸೆ ಕೊಡಿಸಿದ್ದನು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಏನಿಲ್ಲವೆಂದರೂ 4 ಲಕ್ಷ ರೂ. ಖರ್ಚು ಆಗಿದೆ. ಕುಟುಂಬದ ಬಿಪಿಎಲ್‌ ಕಾರ್ಡ್‌ ಇರುವುದರಿಂದಾಗಿ ಆಸ್ಪತ್ರೆಗಳಲ್ಲಿ ಬರೀ 70 ಸಾವಿರ ರೂ.ಗಳಷ್ಟು ಖರ್ಚಿನಲ್ಲಿ ರಿಯಾಯತಿ ದೊರಕಿದೆ. ಉಳಿದಂತೆ ಈವರೆಗೂ ಹೆಸ್ಕಾಂನಿಂದ ಚಿಕ್ಕಾಸಿನ ಪರಿಹಾರವು ದೊರಕಿಲ್ಲ.

ಕಳೆದ ವರ್ಷ ದುರಂತ: 2018ರ ನವೆಂಬರ್‌ನಲ್ಲಿ ಹುಡ್ಕೊ ಪ್ಲಾಟ್‌ನಲ್ಲಿ ನಿಟ್ಟಾಲಿ ಕುಟುಂಬದವರು ಕಟ್ಟುತ್ತಿದ್ದ ಮನೆಯ ಕುಂಬಿಯ ಮೇಲೆ ಹೆಸ್ಕಾಂನ ತ್ರೀ ಪೇಸ್‌ ತಂತಿಯು ಹಾಯ್ದು ಹೋಗಿತ್ತು. ಮನೆಯ ಮೇಲ್ಛಾವಣಿಯ ಮೇಲೆ ನೋಡಲು ಹೋಗಿದ್ದ ಸಂಬಂಧಿ ಶಿವಪ್ಪ ಹೆಗ್ಗಣ್ಣವರ ವಿದ್ಯುತ್‌ ತಂತಿಯು ತಾಗಿದೆ. ಪಕ್ಕದಲ್ಲಿಯೇ ಇದ್ದ ಜಯಶ್ರೀ ಬಿಡಿಸಲು ಹೋದಾಗ ಶಿವಪ್ಪನ ಮೃತ ದೇಹವು ಆಕೆಯ ಕಾಲುಗಳ ಮೇಲೆ ಬಿದ್ದು ಸುಟ್ಟು ಹೋಗಿತ್ತು.

ಚಿಕಿತ್ಸೆಗಾಗಿ ಸಾಲಸೋಲ: ದುರ್ಘ‌ಟನೆ ಸಂಭವಿಸಿದಾಗ ಜಯಶ್ರೀಯನ್ನು ಗದಗ ಜಿಲ್ಲಾಸ್ಪತ್ರೆಗೆ, ನಂತರ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ಸೂಕ್ತವಾದ ಚಿಕಿತ್ಸೆ ದೊರಕದೇ ಇದ್ದಾಗ ಅನಿವಾರ್ಯವಾಗಿ ನಿಟ್ಟಾಲಿ ಕುಟುಂಬವು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದೆ. ಜಯಶ್ರೀಯನ್ನು ಪತಿ ಯಲ್ಲಪ್ಪನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ಪತ್ನಿಯ ಚಿಕಿತ್ಸೆಗಾಗಿ ಯಲ್ಲಪ್ಪನು ಸಾಲಸೋಲ ಮಾಡಿದ್ದು, ಏನಿಲ್ಲವೆಂದರೂ ಕನಿಷ್ಠ 4 ಲಕ್ಷ ರೂ. ಖರ್ಚಾಗಿದೆ. ಸಾಲದಲ್ಲಿ ಸಿಲುಕಿ ಅಸಹಾಯಕ ಸ್ಥಿತಿಯಲ್ಲಿರುವ ನಿಟ್ಟಾಲಿ ಕುಟುಂಬಕ್ಕೆ ಹೆಸ್ಕಾಂನವರು ಮಾನವೀಯತೆ ದೃಷ್ಟಿಯಿಂದ ನೆರವಾಗಬೇಕಿದೆ. ಶೀಘ್ರ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕಿದೆ.

ಪ್ರತಿದಿನವೂ ಕೂಲಿಯಿಂದಲೇ ಜೀವನ ಸಾಗಿಸಬೇಕು. ನಡೆಯಲು ಬಾರದ ಹೆಂಡತಿ,ಇಬ್ಬರು ಮಕ್ಕಳ ಸಂಸಾರವನ್ನು ಸಾಗಿಸಬೇಕು. ಜಯಶ್ರೀಯ ಚಿಕಿತ್ಸೆಗಾಗಿ 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದೇನೆ. ಘಟನೆಯ ಸಂಭವಿಸಿದಾಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಸ್ಕಾಂನ ಅಧಿ ಕಾರಿಗಳು ಗ್ರಾಮಕ್ಕೆ ಬಂದು ಪರಿಹಾರದ ಭರವಸೆ ನೀಡಿ ಹೋದರೂ ಈವರೆಗೂ ಯಾವುದೇ ಪರಿಹಾರ ದೊರಕಿಲ್ಲ. ಸಾಲದಲ್ಲಿ ಸಿಲುಕಿ ಸಂಸಾರ ಸಾಗಿಸಲು ಅಸಹಾಯಕನಾಗಿದ್ದೇನೆ. -ಯಲ್ಲಪ್ಪ ನಿಟ್ಟಾಲಿ, ಸಂತ್ರಸ್ತ

-ಹು.ಬಾ. ವಡ್ಡಟಿ

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.