Udayavni Special

ಹತ್ತು ಮೆಟ್ಟಿಲು ಹತ್ತಲು ಹತ್ತು ಅಂಶ


Team Udayavani, Nov 25, 2019, 1:07 PM IST

gadaga-tdy-2

ಗದಗ: ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಬರೋಬ್ಬರಿ ಒಂದು ದಶಕದಷ್ಟು ಹಿನ್ನಡೆದಿದೆ. 2013, 2014ರಲ್ಲಿ ಕ್ರಮವಾಗಿ ಗರಿಷ್ಠ ಶೇ.81.85ರಷ್ಟು ಅಂಕಗಳಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದ ಗದಗ ಜಿಲ್ಲೆ, ಕಳೆದ 2-3 ವರ್ಷಗಳಿಂದ ಪಾತಾಳದತ್ತ ಜಾರುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಫಲಿತಾಂಶ ಪ್ರಕಟಗೊಂಡಾಗ ಕೇಳಿ ಬಂದ ಸುಧಾರಣೆಯ ಮಾತುಗಳು ಕಾರ್ಯರೂಪಕ್ಕೆ ಬಂದಿರಲಿಲ್ಲ. ಅದಕ್ಕೀಗ ಜಿಪಂ ಅಧ್ಯಕ್ಷ ಸಿದ್ದು ಪಾಟೀಲ ಬಿಸಿ ಮುಟ್ಟಿಸಿದ್ದಾರೆ. ಜಿಪಂ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಫಲಿತಾಂಶವನ್ನು ಮೇಲೆತ್ತಲು ಹಲವು ಕಾರ್ಯಕ್ರಮಗಳ ಕ್ರಿಯಾ ಯೋಜನೆ ರೂಪಿಸಲಾಗಿದೆ.

ಕಳೆದ ಏಪ್ರಿಲ್‌ನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡು, ಶೇ.74.05ರಷ್ಟು ಅಂಕಗಳೊಂದಿಗೆ ರಾಜ್ಯಮಟ್ಟದ ಶ್ರೇಣಿಯಲ್ಲಿ 31ನೇ ಸ್ಥಾನಕ್ಕೆ ಕುಸಿದಿತ್ತು. ಫಲಿತಾಂಶ ಪ್ರಕಟಗೊಂಡ ದಿನವೇ ಡಿಡಿಪಿಐ ಎನ್‌.ಎಚ್‌. ನಾಗೂರು ಸುಮಾರು 20 ಅಂಶಗಳ ಕಾರ್ಯಕ್ರಮ ಪ್ರಕಟಿಸಿದ್ದರು. ಆರಂಭದಲ್ಲಿ ಅವು ಜಾರಿಗೊಂಡಂತೆ ಕಂಡು ಬಂದರೂ, ನಂತರದ ದಿನಗಳಲ್ಲಿ ಅದೇ ಹಾಡು, ಅದೇ ರಾಗ ಎನ್ನುವಂತಾಗಿದೆ ಎಂಬ ಮಾತು ಶಿಕ್ಷಕರ ವಲಯದಲ್ಲೇ ಕೇಳಿ ಬಂದಿತ್ತು ಎನ್ನಲಾಗಿದೆ. ಹೀಗಾಗಿ ಶನಿವಾರ ಸಂಜೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಇಲಾಖೆ ಕಾರ್ಯವೈಖರಿಗೆ ಜಿ.ಪಂ. ಅಧ್ಯಕ್ಷ ಸಿದ್ದು ಪಾಟೀಲ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅಧ್ಯಕ್ಷರ ಸಮ್ಮುಖದಲ್ಲೇ, ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದ ರೂಪರೇಷಗಳನ್ನು ಸಿದ್ಧಗೊಳಿಸಿದ್ದಾರೆ. ಈ ಮೂಲಕ ಪ್ರಾಥಮಿಕ ಶಿಕ್ಷಣವನ್ನೂ ಬಲ ಪಡಿಸುವ ನಿಟ್ಟಿನಲ್ಲಿ ಹಲವು ನಿರ್ಧಾರ ಕೈಗೊಳ್ಳಲಾಗಿದೆ.

ಫಲಿತಾಂಶ ಸುಧಾರಣೆಗೆ ಕಾರ್ಯಕ್ರಮಗಳೇನು?: ಈಗ ನಡೆಯುತ್ತಿರುವ ಪಾಕ್ಷಿಕ ಪರೀಕ್ಷೆ, ಫೋನ್‌ ಇನ್‌ ಕಾರ್ಯಕ್ರಮ, ವಿಷಯವಾರು ಸೆಮಿನಾರ್‌, ರಸಪ್ರಶ್ನೆ ಕಾರ್ಯಕ್ರಮ ಮುಂದುವರಿಕೆ. ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಸಿಕ ತಮ್ಮ ವ್ಯಾಪ್ತಿಯ ಸರಕಾರಿ ಶಾಲೆಯೊಂದರಲ್ಲಿ ವಾಸ್ತವ್ಯ ಮಾಡುವುದು ಕಡ್ಡಾಯ. ಆಯಾ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಶಿಕ್ಷಣ ಮಟ್ಟವನ್ನು ಪರಿಶೀಲಿಸಿ, ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು. ಶಿಕ್ಷಣದ ಮಹತ್ವದ ಕುರಿತು ವಿದ್ಯಾರ್ಥಿಗಳು, ಪಾಲಕರಿಗೆ ಮನವರಿಕೆ ಮಾಡುವುದು.

ಪ್ರತಿದಿನ ವಿಶೇಷ ತರಗತಿಗಳು, ಗುಂಪು ಅಧ್ಯಯನ ನಡೆಸಬೇಕು. ಹೋಬಳಿ ಮಟ್ಟದಲ್ಲಿ ಮಕ್ಕಳ ಜೊತೆಗೆ ಸಂವಾದ ನಡೆಸಬೇಕು. 16-11-2019 ರಿಂದ ಆರಂಭಿಸಲಾದ ನಿಧಾನ ಗತಿಯ ಮಕ್ಕಳಿಗೆ ಪ್ರತಿದಿನ ಮಧ್ಯಾಹ್ನ 3.30 ರಿಂದ 5.30 ರ ವರೆಗೆ ಎರಡು ಗಂಟೆ ಅವ ಗೆ ಬರವಣಿಗೆ ಕಲೆ ರೂಢಿಸುವುದು. 16-12-2019 ರಂದು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರೀಕ್ಷೆ ನಡೆಸಿ, ಪ್ರಗತಿ ಪರಿಶೀಲನೆ ಮಾಡಬೇಕು ಎಂದು ನಿರ್ದೇಶಿಸಿದರು. ಬಿಇಒ ಅವರು ಪ್ರತಿ ವಾರ ಫಲಿತಾಂಶದಲ್ಲಿ ಹಿಂದುಳಿದ ನಾಲ್ಕು ಹೈಸ್ಕೂಲ್‌ ಭೇಟಿ ನೀಡಿ, 10ನೇ ತರಗತಿ ಮಕ್ಕಳ ಕಲಿಕಾ ಪ್ರಗತಿ ಅವಲೋಕಿಸಿ ವರದಿ ನೀಡಬೇಕು.

ಪ್ರತಿ ತಿಂಗಳಿಗೊಮ್ಮೆ ಡಿಡಿಪಿಐ ಅವರು ಬಿಇಒ ಅವರ ಸಭೆ ನಡೆಸಿ, ಪ್ರಗತಿ ಅವಲೋಕಿಸಬೇಕು. ಫೆಬ್ರವರಿ-2020ರ ಮೊದಲ ವಾರದಲ್ಲಿ ವಾರ್ಷಿಕ ಪರೀಕ್ಷೆ ಮಾದರಿಯಲ್ಲಿ ಒಂದು ಪರೀಕ್ಷೆ ನಡೆಸಿ, ಮಕ್ಕಳಲ್ಲಿರುವ ಪರೀಕ್ಷಾ ಭಯವನ್ನು ನಿವಾರಿಸಬೇಕು ಎಂದು ಸೂಚಿಸಿದೆ. ಡಿ.1 ರಿಂದ ಓದಿನ ಮನೆ ಸ್ಥಾಪಿಸಿ ಕೆಲವು ವಿದ್ಯಾರ್ಥಿಗಳಿಗೆ ತಮ್ಮ ಮನೆಗಳಲ್ಲಿ ಓದಲು ಅವಕಾಶ ಇಲ್ಲದವರು ಸಂಜೆ 6 ರಿಂದ ರಾತ್ರಿ 9 ಗಂಟೆ ವರೆಗೆ ಪ್ರತಿ ಗ್ರಾಮದ ಪ್ರಾಥಮಿಕ ಅಥವಾ ಪ್ರೌಢ ಶಾಲೆಯಲ್ಲಿ (ಬಾಲಕರು ಮಾತ್ರ) ಒಂದು ಕೊಠಡಿಯಲ್ಲಿ ಬೆಳಕಿನ ವ್ಯವಸ್ಥೆ ಮಾಡಲಾಗುವುದು.

 

-ವಿಶೇಷ ವರದಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನನ್ನಿಷ್ಟದ ಸಿನೆಮಾ ಯುವ ಜನರ ಅಯ್ಕೆ: ಮುತ್ತಿನ ಹಾರ ; ಬದುಕಿನ ಸವಾಲು ತೆರೆದಿಡುವ ಚಿತ್ರ

ನನ್ನಿಷ್ಟದ ಸಿನೆಮಾ ಯುವ ಜನರ ಅಯ್ಕೆ: ಮುತ್ತಿನ ಹಾರ ; ಬದುಕಿನ ಸವಾಲು ತೆರೆದಿಡುವ ಚಿತ್ರ

nternet-slow-2

ನಿಮ್ಮ ಇಂಟರ್ನೆಟ್ ಸ್ಲೋನಾ..? ಹಾಗಾದ್ರೆ ಹೀಗೆ ಮಾಡಿ

ಗುಲ್ವಾಡಿ; ಬಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ

ಗುಲ್ವಾಡಿ; ಭಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ

ಸಾಮಾಜಿಕ ಅಂತರ ಮರೆತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬರ್ತ್ ಡೇ ಪಾರ್ಟಿ!

ಸಾಮಾಜಿಕ ಅಂತರ ಮರೆತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬರ್ತ್ ಡೇ ಪಾರ್ಟಿ!

ಮಲ್ಲಾರು : ಅಕ್ರಮ ಗೋವಧಾ ಕೇಂದ್ರಕ್ಕೆ ದಾಳಿ ; ಹತ್ತು ಜಾನುವಾರುಗಳ ರಕ್ಷಣೆ

ಮಲ್ಲಾರು : ಅಕ್ರಮ ಗೋವಧಾ ಕೇಂದ್ರಕ್ಕೆ ದಾಳಿ ; ಹತ್ತು ಜಾನುವಾರುಗಳ ರಕ್ಷಣೆ

ಕುರ್ಕಾಲು : ಗಿರಿನಗರದ ಒಂದೇ ಕುಟುಂಬದ ಐದು ಮಂದಿಯಲ್ಲಿ ಸೋಂಕು ದೃಢ‌ ; 12 ಮನೆ ಸೀಲ್‌ ಡೌನ್‌

ಕುರ್ಕಾಲು :ಗಿರಿನಗರದ ಒಂದೇ ಕುಟುಂಬದ ಐದು ಮಂದಿಯಲ್ಲಿ ಸೋಂಕು ದೃಢ‌ ; 12 ಮನೆ ಸೀಲ್‌ಡೌನ್‌

ನೂರ್ತಾಡಿ ಯುವಕರಿಂದ ಸಾಂಪ್ರಾದಾಯಿಕ ಪದ್ಧತಿ ಬೇಸಾಯ

ನೂರ್ತಾಡಿ ಯುವಕರಿಂದ ಸಾಂಪ್ರಾದಾಯಿಕ ಪದ್ಧತಿ ಬೇಸಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಎಂಟಿಸಿ ಕಂಡಕ್ಟರ್‌ನಿಂದ 7 ಜನರಿಗೆ ಸೋಂಕು

ಬಿಎಂಟಿಸಿ ಕಂಡಕ್ಟರ್‌ನಿಂದ 7 ಜನರಿಗೆ ಸೋಂಕು

ಗದಗ ಜಿಲ್ಲೆಯ 7 ಜನರಿಗೆ ಕೋವಿಡ್ ಸೋಂಕು ದೃಢ

ಗದಗ ಜಿಲ್ಲೆಯ 7 ಜನರಿಗೆ ಕೋವಿಡ್ ಸೋಂಕು ದೃಢ

ಬಿಜೆಪಿ ಮಂಡಲ ಪದಾಧಿಕಾರಿಗಳ ಪದಗ್ರಹಣ

ಬಿಜೆಪಿ ಮಂಡಲ ಪದಾಧಿಕಾರಿಗಳ ಪದಗ್ರಹಣ

ಸೈನಿಕ ಕೀಟ ಬಾಧೆ ನಿರ್ವಹಣೆ ಮಾಹಿತಿ

ಸೈನಿಕ ಕೀಟ ಬಾಧೆ ನಿರ್ವಹಣೆ ಮಾಹಿತಿ

ಪೌರಕಾರ್ಮಿಕರ ಗಂಟಲು ದ್ರವ ಸಂಗ್ರಹ

ಪೌರಕಾರ್ಮಿಕರ ಗಂಟಲು ದ್ರವ ಸಂಗ್ರಹ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

ಶ್ರೀ ಕ್ಷೇತ್ರ ಕಾನ ಬೆಳುವಾಯಿ: ಕಿಟ್ ವಿತರಣಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಕಾನ ಬೆಳುವಾಯಿ: ಕಿಟ್ ವಿತರಣಾ ಕಾರ್ಯಕ್ರಮ

ನನ್ನಿಷ್ಟದ ಸಿನೆಮಾ ಯುವ ಜನರ ಅಯ್ಕೆ: ಮುತ್ತಿನ ಹಾರ ; ಬದುಕಿನ ಸವಾಲು ತೆರೆದಿಡುವ ಚಿತ್ರ

ನನ್ನಿಷ್ಟದ ಸಿನೆಮಾ ಯುವ ಜನರ ಅಯ್ಕೆ: ಮುತ್ತಿನ ಹಾರ ; ಬದುಕಿನ ಸವಾಲು ತೆರೆದಿಡುವ ಚಿತ್ರ

nternet-slow-2

ನಿಮ್ಮ ಇಂಟರ್ನೆಟ್ ಸ್ಲೋನಾ..? ಹಾಗಾದ್ರೆ ಹೀಗೆ ಮಾಡಿ

ಗುಲ್ವಾಡಿ; ಬಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ

ಗುಲ್ವಾಡಿ; ಭಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ

ಸಾಮಾಜಿಕ ಅಂತರ ಮರೆತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬರ್ತ್ ಡೇ ಪಾರ್ಟಿ!

ಸಾಮಾಜಿಕ ಅಂತರ ಮರೆತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬರ್ತ್ ಡೇ ಪಾರ್ಟಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.