40 ಕಿಮೀ ಚಕ್ಕಡಿ ಎಳೆದು ಸಾಗಿ ಯಲ್ಲಮ್ಮ ನ ದರ್ಶನ ಪಡೆದ ಸಾಹಸಿ
Team Udayavani, Jan 25, 2021, 7:00 PM IST
ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಯುವಕನೊಬ್ಬ ಕಬ್ಬಿಣದ ಚಕ್ಕಡಿ ಎಳೆದುಕೊಂಡು ಸುಕ್ಷೇತ್ರ ಯಲ್ಲಮ್ಮಗುಡ್ಡ ತಲುಪಿ ಸಾಹಸ ಮೆರೆದಿದ್ದಾನೆ. ಭೈರನಹಟ್ಟಿ ಗ್ರಾಮದ ಮುತ್ತಪ್ಪ ಮರಿನಾಯ್ಕರ ಕಬ್ಬಿಣದ ಚಕ್ಕಡಿಯೊಂದನ್ನು ಭೈರನಹಟ್ಟಿ ಗ್ರಾಮದಿಂದ ಸುಮಾರು 40 ಕಿಮೀ ಎಳೆದೊಯ್ದು, ಯಲ್ಲಮ್ಮಗುಡ್ಡದ ರೇಣುಕಾದೇವಿ ದರ್ಶನ ಪಡೆದಿದ್ದಾನೆ.
ಇದನ್ನೂ ಓದಿ:ಜಮೀನುಗಳಲ್ಲಿ ಅರಣ್ಯ ಕೃಷಿ ಮಾಡಿ
ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಪೂಜೆ ಸಲ್ಲಿಸಿ ಶನಿವಾರ ಸಂಜೆ 5:30ಕ್ಕೆ ಶ್ರೀಮಠದ ಆವರಣದಿಂದ ಹೊರಟಿದ್ದು, ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ನರಗುಂದ ಮೂಲಕ ಹಾಯ್ದು ಯಲ್ಲಮ್ಮಗುಡ್ಡವನ್ನು ತಡರಾತ್ರಿ 12:30ಕ್ಕೆ ತಲುಪಿದ್ದಾನೆ. ಈತನಿಗೆ ದೊರೆಸ್ವಾಮಿ ವಿರಕ್ತಮಠದ ಶ್ರೀ ಗೌರವಿಸಿದರು