ಅಣ್ಣಿಗೇರಿ ಗುರುಗಳು ಜ್ಞಾನದ ಅಕ್ಷಯ ಪಾತ್ರೆ

•ಫೇಲಾದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಕ್ಲಾಸ್‌ ನಡೆಸಿದ್ದರು•ನಯಾಪೈಸೆ ಇಲ್ಲದೇ ಶಿಕ್ಷಣ ನೀಡುತ್ತಿದ್ದ ದಾಸೋಹಿ

Team Udayavani, Sep 7, 2019, 10:56 AM IST

Udayavani Kannada Newspaper

ಗದಗ: ಜಿಲ್ಲೆಯ ಬಡ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಬಿ.ಜಿ. ಅಣ್ಣಿಗೇರಿ ಗುರುಗಳು ಜ್ಞಾನದ ಅಕ್ಷಯ ಪಾತ್ರೆಯಾಗಿದ್ದರು. ಎಲ್ಲೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ ಎಂಬಂತೆ ಏನೂ ಬರದಿದ್ದವರೂ ಗುರುಗಳ ಆಶ್ರಮಕ್ಕೆ ಸೇರಿದ ಬಳಿಕ ಜ್ಞಾನವಂತರಾಗುತ್ತಿದ್ದರು. ಎಸ್‌ಎಸ್‌ಎಲ್ಸಿಯಲ್ಲಿ ಅನುತ್ತೀರ್ಣನಾಗಿ ಆಶ್ರಮದಲ್ಲಿ ಅಕ್ಷರ ಜ್ಞಾನ ಪಡೆದಿದ್ದ ಬಾಲಕನೊಬ್ಬ ಈಗ ಪ್ರಾಥಮಿಕ ಶಾಲೆಯೊಂದರ ಮುಖ್ಯಗುರು. ಇಂತಹ ಉದಾಹರಣೆ ಅನೇಕ.

ಬಿ.ಜಿ. ಅಣ್ಣಿಗೇರಿ ಗುರುಗಳ ಬಳಿ ಕಲಿತ ಅನೇಕರು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರಲ್ಲಿ ಲಕ್ಕುಂಡಿ ನಿವಾಸಿಯಾಗಿದ್ದ ಹಾಗೂ ಸದ್ಯ ತೋಂಟದಾರ್ಯ ವಿದ್ಯಾಪೀಠದ ತೋಂಟದಾರ್ಯ ಪ್ರಾಥಮಿಕ ಶಾಲೆಯ ಮುಖ್ಯಗುರು ಕೊಟ್ರೇಶ ಮೆಣಸಿನಕಾಯಿ ಉತ್ತಮ ಉದಾಹರಣೆ.

ಹೌದು. 1996-97ನೇ ಸಾಲಿನಲ್ಲಿ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊಟ್ರೇಶ್‌ ಮೆಣಸಿನಕಾಯಿ ಅನ್ನುತ್ತೀರ್ಣರಾಗಿದ್ದರು. ಹೀಗಾಗಿ ಮನೆಯವರ ಒತ್ತಡಕ್ಕೆ ದನಗಳನ್ನು ಮೇಯಿಸಲು ತೆರಳುತ್ತಿದ್ದರು. ಈ ನಡುವೆ ಅಣ್ಣಿಗೇರಿ ಗುರುಗಳ ಸಂಪರ್ಕಕ್ಕೆ ಬಂದ್ದ ಕೊಟ್ರೇಶ್‌ ಅವರನ್ನು ಕ್ಲಾಸ್‌ಗೆ ಬರುವಂತೆ ಗುರುಗಳು ಸೂಚಿಸಿದರು.

ಆದರೆ, ಅದಾಗಲೇ 10ನೇ ತಗರತಿ ಅನುತ್ತೀರ್ಣರಾಗಿದ್ದರಿಂದ ಮನೆ ಕೆಲಸಗಳು ಹೆಗಲೇರಿದ್ದವು. ಬೆಳಗ್ಗೆ 8ರಿಂದ 10 ಗಂಟೆ ವರೆಗಿನ ಟ್ಯೂಷನ್‌ಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡಿದ್ದ ಅಣ್ಣಿಗೇರಿ ಗುರುಗಳು 11ರಿಂದ ಕ್ಲಾಸಿಗೆ ವಿಶೇಷ ತರಗತಿ ತೆಗೆದುಕೊಳ್ಳುತ್ತೇನೆ. ಕಡ್ಡಾಯವಾಗಿ ಬರುವಂತೆ ಸೂಚಿಸಿದರು. ಗುರುಗಳ ಪ್ರೀತಿ ಭರಿತ ಆದೇಶವನ್ನು ತಿರಸ್ಕರಿಸಲಾಗದೇ ಕೊಟ್ರೇಶ ಮನೆ ಪಾಠಕ್ಕೆ ಬರುತ್ತಿದ್ದರು.

ಈ ಸಮಯದಲ್ಲಿ ಇವರೊಬ್ಬರೇ ವಿದ್ಯಾರ್ಥಿ. ಆದರೂ ಬೇಸರಿಸಿಕೊಳ್ಳದೇ ಪಾಠ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಫೇಲಾದ 15 ವಿದ್ಯಾರ್ಥಿಗಳು ಇದೇ ತರಗತಿಗೆ ಬರಲಾರಂಭಿಸಿದರು. ಸುಮಾರು 6 ತಿಂಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವಷ್ಟು ಸಮರ್ಥರಾದರು. ಬಳಿಕ ನಡೆದ ಎಸ್‌ಎಸ್‌ಎಲ್ಸಿ ಪೂರಕ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾದರು. ನಾನಾ ಕಾಲೇಜುಗಳಲ್ಲಿ ಪ್ರವೇಶ ಪಡೆದು, ಈಗ ನಾನಾ ಹುದ್ದೆ, ವ್ಯಾಪಾರಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಭಾವುಕರಾಗುತ್ತಾರೆ ಹಳೇ ವಿದ್ಯಾರ್ಥಿ ಕೊಟ್ರೇಶ ಮೆಣಸಿನಕಾಯಿ.

 

•ವಿಶೇಷ ವರದಿ

ಟಾಪ್ ನ್ಯೂಸ್

kannada actress prema

ವಕಾಲತ್ತು ವಹಿಸಿ ಬಂದರು ಪ್ರೇಮಾ

1-ghate

ಬಿಜೆಪಿ ಹಿರಿಯ ನಾಯಕ,ಉದ್ಯಮಿ ಸುಧೀರ್ ಘಾಟೆ ವಿಧಿವಶ

1-11

ಮುಂಬಯಿಯ 60 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ

sakath movie

ಅ. 24ಕ್ಕೆ ಗಣಿ-ಸುನಿ ಕಾಂಬಿನೇಶನ್‌ “ಸಖತ್‌’ ಟೀಸರ್‌

ishwarappa-15

ಕಾಂಗ್ರೆಸ್‍ಗೆ ನಾಯಕತ್ವ, ಸಂಘಟನೆ, ಸಾಧನೆ ಇಲ್ಲ: ಈಶ್ವರಪ್ಪ

ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

ಸರಕಾರದ ನಿರ್ಲಕ್ಷದಿಂದಾಗಿ 50 ಲಕ್ಷ ಜನರು ಕೋವಿಡ್ ದಿಂದಾಗಿ ಮೃತಪಟ್ಟಿದ್ದಾರೆ: ಸಿದ್ದರಾಮಯ್ಯ

ಸರಕಾರದ ನಿರ್ಲಕ್ಷದಿಂದಾಗಿ 50 ಲಕ್ಷ ಜನರು ಕೋವಿಡ್ ದಿಂದಾಗಿ ಮೃತಪಟ್ಟಿದ್ದಾರೆ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಮಮಂದಿರ ದೇಣಿಗೆ ಲೆಕ್ಕ ಹಾದಿಬೀದಿಯಲ್ಲಿ ಕೇಳುವ ಅಗತ್ಯವೇನು?  

ರಾಮಮಂದಿರ ದೇಣಿಗೆ ಲೆಕ್ಕ ಹಾದಿಬೀದಿಯಲ್ಲಿ ಕೇಳುವ ಅಗತ್ಯವೇನು?  

chfghtf

ಅನ್ನದಾನೇಶ್ವರ ಮಠದ ಪಟ್ಟಾಧಿಕಾರ ಮಹೋತ್ಸವ

1-ram

ಮತಾಂತರಿಗಳ ಸದೆಬಡಿಯಲು ಶ್ರೀರಾಮ ಸೇನೆ ಸಿದ್ಧ

1tola

ತೋಳ ಕೊಂದು ಬೈಕ್‌ಗೆ ಕಟ್ಟಿ ಎಳೆದೊಯ್ದ ಯುವಕರು

Vijaya Dashami celebration

ವಿಜಯ ದಶಮಿ ಸಂಭ್ರಮ: ರಾವಣನ ಪ್ರತಿಕೃತಿ ದಹನ

MUST WATCH

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

ಹೊಸ ಸೇರ್ಪಡೆ

shivamogga news

ಮೂಡಿ ನೀರಾವರಿ ಯೋಜನೆ ಪೂರ್ಣಗೊಳಿಸಿ

chitradurga news

ಚನ್ನಮ್ಮ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

eye-17

ನೇತ್ರ ಆರೋಗ್ಯ ಜಾಗೃತಿ ಮೂಡಿಸಿದ ಜಾಥಾ

chikkamagalore news

ವರುಣಾರ್ಭಟಕ್ಕೆ ಜನ ತತ್ತರ

hampi news

ಹಂಪಿ ಸ್ಮಾರಕಕ್ಕೆ ಬೆಳಕಿನ ಚಿತ್ತಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.