ಮಲಪ್ರಭಾ-ಬೆಣ್ಣಿಹಳ್ಳ ಪ್ರವಾಹಕ್ಕೆ ಸಾವಿರಾರು ಹೆಕ್ಟೇರ್‌ ಬೆಳೆ ಹಾನಿ

ವಿವಿಧ ಬೆಳೆಗಳು ಜಲಾವೃತ-ಅಂದಾಜು 4.21 ಕೋಟಿ ರೂ.ನಷ್ಟ

Team Udayavani, Aug 19, 2019, 11:57 AM IST

ನರಗುಂದ: ತಾಲೂಕಿನ ಇತಿಹಾಸದಲ್ಲೇ ಉಕ್ಕಿ ಹರಿದ ಮಲಪ್ರಭಾ ನದಿ ಮತ್ತು ಬೆಣ್ಣಿಹಳ್ಳ ಪ್ರವಾಹ ಭೀಕರತೆ ಸಾವಿರಾರು ಎಕರೆ ಪ್ರದೇಶದ ಕೃಷಿ ಬೆಳೆಗಳನ್ನು ನೀರು ಪಾಲಾಗಿಸಿದೆ.

ನರಗುಂದ ತಾಲೂಕಿನಲ್ಲಿ ಪ್ರವಾಹ ವಿಕೋಪದಿಂದಾಗಿ ಸುಮಾರು 4.21 ಕೋಟಿ ರೂ. ಬೆಳೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

2007 ಮತ್ತು 2009ರಲ್ಲಿ ಮಲಪ್ರಭಾ-ಬೆಣ್ಣಿಹಳ್ಳ ಪ್ರವಾಹ ತಾಲೂಕಿನಲ್ಲಿ ಸಾಕಷ್ಟು ಬೆಳೆಗಳನ್ನು ಜಲಾವೃತಗೊಳಿಸಿತ್ತು. ಅದಕ್ಕಿಂತಲೂ ಮಿಗಿಲಾದ ಪರಿಸ್ಥಿತಿ ದಶಕದ ವೇಳೆಗೆ ಮತ್ತೂಮ್ಮೆ ಅಪ್ಪಳಿಸಿದೆ.

ಮಲಪ್ರಭಾ ನದಿ ದಂಡದ ಲಖಮಾಪುರ, ವಾಸನ, ಬೆಳ್ಳೇರಿ, ಕೊಣ್ಣೂರು, ಬೂದಿಹಾಳ, ಕಪ್ಪಲಿ, ಕಲ್ಲಾಪುರ, ಶಿರೋಳ ಹಾಗೂ ಬೆಣ್ಣಿಹಳ್ಳ ದಂಡದ ಮೂಗನೂರ, ಬನಹಟ್ಟಿ, ಕುರ್ಲಗೇರಿ, ಸುರಕೋಡ, ಹದಲಿ, ಖಾನಾಪುರ, ಗಂಗಾಪುರ, ರಡ್ಡೇರನಾಗನೂರ ಸೇರಿ 16 ಗ್ರಾಮಗಳ ಸಾವಿರಾರು ಎಕರೆ ಪ್ರದೇಶ ಕೃಷಿ ಬೆಳೆಗಳು ಪ್ರವಾಹ ರುದ್ರ ನರ್ತನಕ್ಕೆ ನೀರಿನಲ್ಲಿ ಹಾನಿಯಾಗಿವೆ. ಗೋವಿನಜೋಳ, ಹತ್ತಿ, ಹೆಸರು, ಕಬ್ಬು, ಸೂರ್ಯಕಾಂತಿ, ಶೇಂಗಾ ಬೆಳೆಗಳು ಸೇರಿ ಅಂದಾಜು ಮೂರೂವರೆ ಸಾವಿರ ಹೆಕ್ಟೇರ್‌ ಪ್ರದೇಶ ಕೃಷಿ ಬೆಳೆಗಳು ಹಾನಿಗೀಡಾಗಿವೆ. ಸುಮಾರು 4.21 ಕೋಟಿ ರೂ.ನಷ್ಟವಾಗಿದೆ ಎಂದು ಕೃಷಿ ಇಲಾಖೆ ಸರಕಾರಕ್ಕೆ ವರದಿ ಸಲ್ಲಿಸಿದೆ ಎನ್ನಲಾಗಿದೆ.

ಸುಮಾರು 10 ದಿನಗಳ ಕಾಲ ನಿರಂತರ ಸುರಿದ ಮಳೆಯಿಂದಾಗಿ ಪ್ರವಾಹ ಹೊರತುಪಡಿಸಿ ತಾಲೂಕಿನ ಬಯಲು ಸೀಮೆ ಪ್ರದೇಶದ ಸಾಕಷ್ಟು ಬೆಳೆಗಳು ಕೂಡ ತೇವಾಂಶ ಹೆಚ್ಚಳದಿಂದ ಹಳದಿ ವರ್ಣಕ್ಕೆ ತಿರುಗಿ ಹಾನಿಗೀಡಾಗಿವೆ.

ಪ್ರವಾಹಕ್ಕೆ ಕೋಟ್ಯಂತರ ನಷ್ಟ: ಮಲಪ್ರಭಾ ಮತ್ತು ಬೆಣ್ಣಿಹಳ್ಳ ಪ್ರವಾಹದಿಂದಾಗಿ 16 ಗ್ರಾಮಗಳಲ್ಲಿ ಪ್ರಾಥಮಿಕ ಸಮೀಕ್ಷೆ ಪ್ರಕಾರ 3.5 ಸಾವಿರ ಹೆಕ್ಟೇರ್‌ ಪ್ರದೇಶದ ಬೆಳೆಗಳು ಹಾನಿಗೀಡಾಗಿವೆ. ಸುಮಾರು 4.21 ಕೋಟಿ ರೂ.ನಷ್ಟ ಅಂದಾಜಿಸಲಾಗಿದೆ. ಉಳಿದೆಡೆ ಮಳೆ ಕೊರತೆಯಿಂದ ತಾಲೂಕಿನಲ್ಲಿ ಶೇ.45ರಷ್ಟು ಮಾತ್ರ ಬಿತ್ತನೆಯಾಗಿತ್ತು. •ಚನ್ನಪ್ಪ ಅಂಗಡಿ,ಸಹಾಯಕ ಕೃಷಿ ನಿರ್ದೇಶಕರು, ನರಗುಂದ

 

•ಸಿದ್ಧಲಿಂಗಯ್ಯ ಮಣ್ಣೂರಮಠ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಗದಗ: ಕೋವಿಡ್ 19 ಬಗ್ಗೆ ಜಿಲ್ಲೆಯಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿದೆ. ಆದರೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಈ ಬಗ್ಗೆ ಗಂಭೀರತೆ...

  • ಲಕ್ಷ್ಮೇಶ್ವರ: ಕೋವಿಡ್ 19 ವೈರಸ್‌ ಹರಡದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತಾಲೂಕಾಡಳಿತ ಕಟ್ಟಿನಿಟ್ಟಿನ ಕ್ರಮಕೈಗೊಳ್ಳುತ್ತಿದ್ದರೂ ಜನರ ಅಸಹಕಾರ ಮುಂದುವರಿದಿದ್ದು,...

  • ಗದಗ: ಕೋವಿಡ್ 19 ವೈರಾಣು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಲಾಕ್‌ಡೌನ್‌ಗೆ ಜಿಲ್ಲೆಯ ಜನತೆ ದಿನದಿಂದ ದಿನಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ....

  • ಗಜೇಂದ್ರಗಡ: ಪಟ್ಟಣದಲ್ಲಿ ಪುರಸಭೆ ವತಿಯಿಂದ ಸ್ಥಳೀಯ ಪ್ರಮುಖ ರಸ್ತೆಗಳಲ್ಲಿ ಮಂಗಳವಾರ ಕ್ರಿಮಿನಾಶಕ ಸಿಂಪಡಿಸಲಾಯಿತು. ಕೋವಿಡ್ 19 ವೈರಸ್‌ ಸೋಂಕಿತರು ಜಿಲ್ಲೆಗೆ...

  • ಮುಂಡರಗಿ: ಕೇಂದ್ರ, ರಾಜ್ಯ ಸರಕಾರಗಳು ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಸಹಕಾರ ಮಹಾಮಂಡಳ ಸಹಯೋಗದಲ್ಲಿ ರೈತರು ಬೆಳೆದ ಬೆಳೆಗಳನ್ನು ಯೋಗ್ಯ ಬೆಲೆಯಲ್ಲಿ...

ಹೊಸ ಸೇರ್ಪಡೆ