Udayavni Special

ರೈತರ ನಿದ್ದೆಗೆಡಿಸಿದ ಜಿಂಕೆಗಳ ಹಿಂಡು

•ಸಾಕಾಯ್ತಪ್ಪ ಕಾಟ•ಬೆಳೆ ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವ ರೈತರು

Team Udayavani, Jul 19, 2019, 9:44 AM IST

gadaga-tdy-1

ಲಕ್ಷ್ಮೇಶ್ವರ: ಕೃಷಿ ಜಮೀನಿನಲ್ಲಿ ಕಂಡು ಬಂದ ಜಿಂಕೆಗಳು.

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಸೇರಿ ತಾಲೂಕಿನ ಗೋವನಾಳ, ಶಿಗ್ಲಿ, ಸೂರಣಗಿ, ಬಾಲೇಹೊಸೂರ, ಯಳವತ್ತಿ, ಯತ್ನಳ್ಳಿ, ಗೊಜನೂರ, ಅಕ್ಕಿಗುಂದ ಸೇರಿದಂತೆ ಅನೇಕ ಕಡೆಗಳ ಜಿಂಕೆಗಳ ಹಾವಳಿ ಹೆಚ್ಚಿದ್ದು, ಬೆಳೆ ರಕ್ಷಿಸಿಕೊಳ್ಳಲು ರೈತರು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಜಿಂಕೆಗಳ ಹಿಂಡು ಬೆಳಗಿನ ಜಾವ ಮತ್ತು ಸಂಜೆ ಹೊಲದಲ್ಲಿನ ಎಳೆಯ ಪೈರುಗಳನ್ನು ತಿನ್ನುವುದರ ಜತೆಗೆ ಬೆಳೆ ಹಾಳು ಮಾಡುತ್ತಿವೆ. ಸತತ ಬರದಿಂದ ತತ್ತರಿಸಿದ್ದ ರೈತ ಸಮುದಾಯಕ್ಕೆ ಈ ವರ್ಷ ತಡವಾದರೂ ಹದವಾದ ಮಳೆಯಾಗಿದ್ದರಿಂದ ಬಿತ್ತನೆ ಮಾಡಿದ ರೈತರು ಹೊಲದಲ್ಲಿನ ಬೆಳೆ ಕಂಡು ಹರ್ಷಿತರಾಗಿದ್ದಾರೆ. ಆದರೆ ಈಗ ಜಿಂಕೆಗಳು ಬೆಳೆ ಹಾನಿ ಮಾಡುತ್ತಿರುವುದರಿಂದ ರೈತರ ಹರ್ಷಕ್ಕೆ ಕೊಡಲಿ ಪೆಟ್ಟು ಬಿದ್ದಿದೆ.

ಇದೀಗ ತಾನೇ ಭೂ ತಾಯಿಯ ಒಡಲಿನಿಂದ ಚಿಗುರು ಮೊಳಕೆಯೊಡೆದು ಎಲ್ಲೆಡೆ ಹಸಿರು ಕಾಣ ತೊಡಗಿದೆ. ಈ ಹಸಿರನ್ನು ಮೂರ್‍ನಾಲ್ಕು ವರ್ಷಗಳಿಂದ ಕಾಣದ ಜಿಂಕೆಗಳು ಬೆಳೆಗಳಲ್ಲಿ ಚೆಲ್ಲಾಟ ವಾಡುವುದರ ಜತೆಗೆ ಎಳೆಯ ಪೈರನ್ನು ತಿನ್ನುತ್ತಿವೆ. ತಾಲೂಕೊಂದರಲ್ಲಿಯೇ 10 ಸಾವಿರಕ್ಕೂ ಹೆಚ್ಚು ಜಿಂಕೆಗಳಿವೆ ಎಂದು ಅರಣ್ಯ ಇಲಾಖೆ ಅಂದಾಜಿಸಿದ್ದು ಇದೀಗ ಜಿಂಕೆಗಳ ಹಾವಳಿಯಿಂದ ಬೆಳೆ ಹಾಳಾಗುತ್ತಿವೆ ಎಂದು ಅವಲೊತ್ತುಕೊಳ್ಳುತ್ತಿದ್ದರೆ ಅರಣ್ಯ ಅಧಿಕಾರಿಗಳು ಮಾತ್ರ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಇದರಿಂದಾಗಿ ರೈತರು ಬೆಳೆ ರಕ್ಷಿಸಿಕೊಳ್ಳಲು ಮಾರ್ಗೋಪಾಯ ಕಂಡುಕೊಳ್ಳುತ್ತಿದ್ದಾರೆ. ಜಮೀನುಗಳಲ್ಲಿ ಜಿಂಕೆಗಳು ಬರದಂತೆ ಪ್ಲಾಸ್ಟಿಕ್‌ ಹಾಳೆ, ಬಟ್ಟೆಗಳನ್ನು ಹಾರಾಡುವಂತೆ ಕಟ್ಟುತ್ತಿದ್ದಾರೆ. ಇನ್ನು ಕೆಲವು ಕಡೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಧ್ವಜಗಳೂ ಅಲ್ಲಲ್ಲಿ ಹಾರಾಡುತ್ತಿವೆ. ಬೆದರು ಬೊಂಬೆಗಳನ್ನೂ ನಿಲ್ಲಿಸುತ್ತಿದ್ದಾರೆ ಜತೆಗೆ ಸಂಜೆ ಮತ್ತು ಬೆಳಿಗ್ಗೆ ಜಮೀನುಗಳಿಗೆ ತಪ್ಪದೇ ಕಾವಲು ಕಾಯುತ್ತಿದ್ದಾರೆ. ಪಟಾಕಿ ಸಿಡಿಸುವ, ತಗಡಿನ ಡಬ್ಬಿ ಬಾರಿಸುವ ಮೂಲಕ ಜಿಂಕೆಗಳು ಜಮೀನಿನ ಹತ್ತಿರ ಸುಳಿಯದಂತೆ ಮುಂಜಾಗ್ರತ ಕ್ರಮ ಕೈಗೊಳ್ಳುತ್ತಿದ್ದಾರೆ.

ಇಷ್ಟಾಗಿಯೂ ಜಿಂಕೆಗಳ ಹಾವಳಿ ತಪ್ಪದ್ದರಿಂದ ಗೋವನಾಳ ಗ್ರಾಮದ ರೈತ ರಾಮನಗೌಡ ಕೊರಡೂರ ತನ್ನ ಒಂದು ಎಕಗೆ ಜಮೀನಿನಲ್ಲಿ ಬೆಳೆದಿರುವ ನೀರಾವರಿ ಮೆಣಸಿನಕಾಯಿ ಬೆಳೆ ರಕ್ಷಿಸಲು ಜಮೀನಿನ ಸುತ್ತಲೂ ಹತ್ತಾರು ಸಾವಿರ ರೂ ಖರ್ಚು ಮಾಡಿ ಜಾಳಗಿ ಪರದೆ ಅಳವಡಿಸುವ ಮೂಲಕ ಬೆಳೆ ರಕ್ಷಣೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ. ನೀರಾವರಿ ಇದ್ದ ರೈತರು ವರ್ಷಕ್ಕೆ ಮೂರ್‍ನಾಲ್ಕು ಬೆಳೆ ಬೆಳೆಯುವುದರಿಂದ ಅವರು ಸಾವಿರಾರು ಖರ್ಚು ಮಾಡಿ ಜಾಳಗಿ ಮತ್ತು ತಂತಿ ಬೇಲಿ ಹಾಕಿಸುತ್ತಾರೆ. ಆದರೆ ಮಳೆಯಾಧಾರಿತ ಖುಷ್ಕಿ ಜಮೀನಿನಲ್ಲಿ ಒಂದು ಬೆಳೆ ಬರುವುದೇ ಕಷ್ಟ. ಇನ್ನು ಸಾವಿರಾರೂ ಖರ್ಚು ಮಾಡಿ ಬೆಳೆ ರಕ್ಷಿಸಿಕೊಳ್ಳುವುದು ಅಸಾಧ್ಯ ಎಂದು ಅವಲೊತ್ತುಕೊಳ್ಳುತ್ತಾರೆ ರೈತರಾದ ರಾಮನಗೌಡ ಕೊರಡೂರ, ನೀಲಪ್ಪಗೌಡ ಮರಿಲಿಂಗನಗೌಡ, ಬಸಮ್ಮ ಕರೆಗೌಡ್ರ, ಶೇಖರಗೌಡ ಕೊರಡೂರ.

ಜಿಂಕೆಗಳ ಹಾವಳಿಯಿಂದ ಬೆಳೆ ಹಾನಿಯಾಗಿದ್ದರೆ ರೈತರು ಸೂಕ್ತ ದಾಖಲೆಗಳೊಂದಿಗೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಇಲಾಖೆ ಸಿಬ್ಬಂದಿ ಬೆಳೆ ಹಾನಿ ಪ್ರದೇಶ ಪರಿಶೀಲಿಸಿ ನಿಯಮಾವಳಿಯಂತೆ ಹಾನಿಗೀಡಾದ ಪ್ರಮಾಣ ಗುರುತಿಸಿ ಅರ್ಜಿ ಅಪ್‌ಲೋಡ್‌ ಮಾಡುತ್ತಾರೆ. ಬೆಳೆಹಾನಿಗೊಳಗಾದ ರೈತರ ಖಾತೆಗೆ ನೇರವಾಗಿ ಪರಿಹಾರ ಮೊತ್ತ ಜಮೆಯಾಗುತ್ತದೆ ಎನ್ನುತ್ತಾರೆ ತಾಲೂಕು ಅರಣ್ಯಾಧಿಕಾರಿ ಎಸ್‌.ಎಚ್.ಪೂಜಾರ.

• ಅಸಹಾಯಕತೆ ವ್ಯಕ್ತಪಡಿಸಿದ ಅರಣ್ಯಾಧಿಕಾರಿಗಳು

• ಬೆಳ್ಳಂಬೆಳಿಗ್ಗೆ-ಸಂಜೆ ಹೊಲಗಳಿಗೆ ಇವುಗಳ ದಾಳಿ

• ಹೊಲದಲ್ಲಿನ ಎಳೆಯ ಪೈರು ತಿಂದು ಮಾಡುತ್ತವೆ ಹಾಳು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರೈಲ್ವೇ ಯೋಜನೆಗಳಿಗೂ ಕೋವಿಡ್-19 ಕಾಟ?

ರೈಲ್ವೇ ಯೋಜನೆಗಳಿಗೂ ಕೋವಿಡ್-19 ಕಾಟ?

IPL-2020

ಮುಚ್ಚಿದ ಬಾಗಿಲಲ್ಲಿ ಐಪಿಎಲ್‌ಗೆ ಒತ್ತಡ!

ASIAN-CUP-TROPHY

ಎಎಫ್ ಸಿ ಏಶ್ಯನ್‌ ಕಪ್‌ ಆತಿಥ್ಯಕ್ಕೆ ಭಾರತ ಬಿಡ್‌

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಭಾರತದಿಂದ ಔಷಧ ಕೋರಿದ ಅಮೆರಿಕ

ಭಾರತದಿಂದ ಔಷಧ ಕೋರಿದ ಅಮೆರಿಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತರಕಾರಿ ಖರೀದಿಗೆ ಜನಜಂಗುಳಿ

ತರಕಾರಿ ಖರೀದಿಗೆ ಜನಜಂಗುಳಿ

ನ್ಯಾಯಾಧೀಶರಿಂದ ನಗರ ಪ್ರದಕ್ಷಿಣೆ

ನ್ಯಾಯಾಧೀಶರಿಂದ ನಗರ ಪ್ರದಕ್ಷಿಣೆ

ಜನರಿಗೆ ಅಗತ್ಯ ವಸ್ತು ಪೂರೈಕೆ

ಜನರಿಗೆ ಅಗತ್ಯ ವಸ್ತು ಪೂರೈಕೆ

ದೆಹಲಿಗೆ ತೆರಳಿದ್ದ ಗದಗ ಜಿಲ್ಲೆಯವರಿಗೆ ಸೋಂಕಿಲ್ಲ

ದೆಹಲಿಗೆ ತೆರಳಿದ್ದ ಗದಗ ಜಿಲ್ಲೆಯವರಿಗೆ ಸೋಂಕಿಲ್ಲ

ಸ್ವಸಹಾಯ ಸಂಘ ಗಳಲ್ಲಿಮಾಸ್ಕ್ ತಯಾರಿ

ಸ್ವಸಹಾಯ ಸಂಘ ಗಳಲ್ಲಿ ಮಾಸ್ಕ್ ತಯಾರಿ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಪ್ರಥಮ ದರ್ಜೆ ಕ್ರಿಕೆಟಿಗೆ ಬೌಲರ್‌ ಓ’ಕೀಫ್ ವಿದಾಯ

ಪ್ರಥಮ ದರ್ಜೆ ಕ್ರಿಕೆಟಿಗೆ ಬೌಲರ್‌ ಓ’ಕೀಫ್ ವಿದಾಯ

ರೈಲ್ವೇ ಯೋಜನೆಗಳಿಗೂ ಕೋವಿಡ್-19 ಕಾಟ?

ರೈಲ್ವೇ ಯೋಜನೆಗಳಿಗೂ ಕೋವಿಡ್-19 ಕಾಟ?

51 ವರ್ಷಗಳ ದಾಂಪತ್ಯ ಆರೇ ನಿಮಿಷ ಆಂತರದಲ್ಲಿ ಕೋವಿಡ್ 19 ವೈರಸ್ ಗೆ ಬಲಿಯಾಯ್ತು!

51 ವರ್ಷಗಳ ದಾಂಪತ್ಯ ಆರೇ ನಿಮಿಷ ಆಂತರದಲ್ಲಿ ಕೋವಿಡ್ 19 ವೈರಸ್ ಗೆ ಬಲಿಯಾಯ್ತು!

ರೊನಾಲ್ಡೊಗೆ ಗೆಳತಿಯಿಂದಲೇ ಕ್ಷೌರ

ರೊನಾಲ್ಡೊಗೆ ಗೆಳತಿಯಿಂದಲೇ ಕ್ಷೌರ

IPL-2020

ಮುಚ್ಚಿದ ಬಾಗಿಲಲ್ಲಿ ಐಪಿಎಲ್‌ಗೆ ಒತ್ತಡ!