ಆಹಾರ ಉತ್ಪಾದನೆಗಳ ಮೌಲ್ಯವರ್ಧನೆ ಮಾಹಿತಿ
Team Udayavani, Dec 19, 2020, 4:09 PM IST
ಗದಗ: ವಿಶ್ವವಿದ್ಯಾಲಯವನ್ನು ಇಟ್ಟಿಗೆ ಹಾಗೂ ಸಿಮೆಂಟಿನಿಂದ ಕಟ್ಟಲು ಸಾಧ್ಯವಿಲ್ಲ. ಬದಲಾಗಿ ಉತ್ತಮ ಬೋಧಕರು ಹಾಗೂ ವಿದ್ಯಾರ್ಥಿಗಳಿಂದ ಉತ್ಕೃಷ್ಟವಿಶ್ವವಿದ್ಯಾಲಯ ಕಟ್ಟಬಹುದು ಎಂದು ವಿಶ್ವವಿದ್ಯಾಲಯದ ಕುಲಪತಿಪ್ರೊ| ವಿಷ್ಣುಕಾಂತ ಚಟಪಲ್ಲಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕರಾಜ್ಯ ಗ್ರಾಮೀಣಾಭಿವೃದ್ಧಿಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾಲಯದ ಆಂತರಿಕಗುಣಮಟ್ಟ ಭರವಸೆ ಕೋಶದಿಂದ3ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಓರಿಯಂಟೆಷನ್ ಕಾರ್ಯಕ್ರಮ ಉದ್ಘಾಟಿಸಿ ಮತ್ತು ವಿಶ್ವವಿದ್ಯಾಲಯದ 6ನೇ ಇನ್ಫೋಗ್ರಾಫಿಕ್ಸ್ “ಆಹಾರ ಉತ್ಪಾದನೆಗಳ ಮೌಲ್ಯವರ್ಧನೆ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಳೆದ 9 ತಿಂಗಳುಗಳಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿದೇಸಿ ಯೋಜನೆ, ಸ್ಮೃತಿವನ, ಸ್ವದೇಶಿ ಯೋಜನೆ, ಸಮಗ್ರ ಪಶು ಕೃಷಿ ಯೋಜನೆ ಅಂತಹ ಹಲವಾರು ಚಟುವಟಿಕೆಗಳು ಪ್ರಾರಂಭಿಸಲಾಗಿವೆ. ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದು,ಈ ಎಲ್ಲ ಚಟುವಟಿಕೆಗಳಲ್ಲಿಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಬಳಿಕ ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಗಳು ನಡೆಯುತ್ತಿರುವ ಸ್ಥಳಗಳಿಗೆ ಕರೆದುಕೊಂಡು ಹೋಗಿಪ್ರಾತ್ಯಕ್ಷಿಕೆ ನೀಡಲಾಯಿತು. ಡಾ|ಅಭಯಕುಮಾರ ಗಸ್ತಿ, ಎಂ.ಕಾಂ.ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಗ್ರಾವಿವಿಸ್ವರೂಪ, ವಿ.ವಿ.ಯಲ್ಲಿ ಜರಗುತ್ತಿರುವ ವಿವಿಧ ಚಟುವಟಿಕೆಗಳಾದ ನೈಪುಣ್ಯಕೇಂದ್ರ, ಉದ್ಯಮಶೀಲತೆ ಕೋಶ, ಆತ್ಮವಿಶ್ವಾಸ ಕೋಶ, ದೇಶಿಯೋಜನೆ, ಮಾದರಿ ಸಸ್ಯ ಶಿಶು ಪಾಲನಾ ಯೋಜನೆ, ಯೋಗಕ್ಷೇಮ ಯೋಗಕೇಂದ್ರ, ಮೂಕ್ಕುಮ ಯೋಜನೆ, ಸೋಶಿಯಲ್ ಮಿಡಿಯಾ ಕೋಶ, ತರಬೇತಿ, ಪ್ರಕಟಣೆ ಮತ್ತು ಮೇಲ್ವಿಚಾರಣೆ ಕೇಂದ್ ಹಾಗೂ ಸಂಶೋಧನೆ, ಅನ್ವೇಷಣೆ ಮತ್ತು ಮೌಲ್ಯಮಾಪನಾ ಕೇಂದ್ರ, ಇನ್ಫೊಗ್ರಾಫಿಕ್ಸ್ ಮುಂತಾದವುಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮಹೇಶ ಡಿ.ಬಿ., ವಿವಿಧ ಯೋಜನೆಗಳ ಸಂಯೋಜಕರು ಇದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರೈತರೇ, ಕಾಂಗ್ರೆಸ್ ನಿಮ್ಮ ಹೆಗಲ ಮೇಲೆ ಬಂದೂಕಿಟ್ಟು ಗುಂಡು ಹಾರಿಸುತ್ತಿದೆ: ಶ್ರೀರಾಮುಲು
ಶೇ.7.3ರ ದರದಲ್ಲಿ ಭಾರತದ ಅರ್ಥ ವ್ಯವಸ್ಥೆ ಬೆಳವಣಿಗೆ: ವಿಶ್ವಸಂಸ್ಥೆ
ರಫೇಲ್ ವಿರಾಟ ರೂಪ, ವೈವಿಧ್ಯತೆಯ ವೈಭವ : ಗಣರಾಜ್ಯ ಪರೇಡ್ ನಲ್ಲಿ ರಕ್ಷಣಾಪಡೆಗಳ ಬಲಪ್ರದರ್ಶನ
ರೈತರು, ಕಾರ್ಮಿಕರು, ಜನರ ಧ್ವನಿಯಾಗಿ ಕಾಂಗ್ರೇಸ್ ಕೆಲಸ ಮಾಡಲಿದೆ : ಡಿಕೆಶಿ
ಅನ್ನದಾತ ಎಂದೂ ನೆತ್ತರು ಹರಿಸುವುದಿಲ್ಲ; ‘ಕಾಣದ ಕೈಗಳು’ ಅವರ ದಿಕ್ಕು ತಪ್ಪಿಸಿವೆ: ಸುಧಾಕರ್