Udayavni Special

ಕುಸಿದ ಮೇಲ್ಸೇತುವೆ ದುರಸ್ತಿ ಯಾವಾಗ?

ಲಕ್ಷ್ಮೇಶ್ವರ-ಹುಬ್ಬಳ್ಳಿ ರಾಜ್ಯ ಹೆದ್ದಾರಿ ದುಸ್ಥಿ ತಿ­ಶಿರೂರ ಹತ್ತಿರ ರೈಲ್ವೆ ಮಾರ್ಗಕ್ಕೆ ನಿರ್ಮಾಣ

Team Udayavani, Jun 7, 2021, 8:23 PM IST

6 lxr 2

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ -ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಶಿರೂರ ಹತ್ತಿರ ರೈಲ್ವೆ ಮಾರ್ಗಕ್ಕೆ ನಿರ್ಮಿಸಿದ ಮೇಲ್ಸೇತುವೆ ಕುಸಿದು ಒಂದೂವರೆ ತಿಂಗಳು ಕಳೆದರೂ ಸಂಬಂಧಪಟ್ಟವರು ಪರ್ಯಾಯ ವ್ಯವಸ್ಥೆಗೆ ಮುಂದಾಗದೇ ಇರುವುದರಿಂದ ಲಕ್ಷ್ಮೇಶ್ವರ ಮತ್ತು ಕುಂದಗೋಳ ತಾಲೂಕಿನ ಜನರು ಪರದಾಡುವಂತಾಗಿದೆ.

ಏ.27ರಂದು ರಾತ್ರಿ ಸುರಿದ ಮಳೆಗೆ ಸೇತುವೆ ಕೆಳಗಿನ ತಡೆಗೋಡೆ ಕುಸಿದಿದೆ. ಇದರಿಂದ ವ್ಯಾಪಾರ- ವಹಿವಾಟು, ಆಸ್ಪತ್ರೆ, ಉದ್ಯೋಗ, ಶಿಕ್ಷಣ ಸೇರಿ ಎಲ್ಲದಕ್ಕೂ ಮುಖ್ಯ ಕೇಂದ್ರವಾಗಿರುವ ಲಕ್ಷ್ಮೇಶ್ವರ ಭಾಗದ ಜನರಿಗೆ ಹುಬ್ಬಳ್ಳಿ ಸಂಪರ್ಕವೇ ಕಡಿತಗೊಂಡಂತಾಗಿದ್ದು, ತೊಂದರೆಯಾಗಿದೆ.

ಕೊಂಕಣ ಸುತ್ತಿ ಮೈಲಾರಕ್ಕೆ: ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಹೋಗಬೇಕಾದರೆ ಗುಡಗೇರಿ, ಹುಲಗೂರ ಇಲ್ಲವೇ ಸಂಶಿಯಿಂದ ಬಸಾಪುರ, ನೆರ್ತಿ, ಬೆನಕನಹಳ್ಳಿ ಕುಂದಗೋಳ ರಸ್ತೆ ಸಂಪರ್ಕಿಸಬೇಕು. ಇದರಿಂದ 15 ಕಿ.ಮೀ ಅಂತರ ಹೆಚ್ಚಾಗುತ್ತದೆ. ಆದರೆ ಈ ರಸ್ತೆ ಅತ್ಯಂತ ಕಿರಿದಾಗಿದ್ದು ಮತ್ತು ಹದಗೆಟ್ಟಿದ್ದು ದೊಡ್ಡ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಮಾರ್ಗದಲ್ಲಿನ ಹಳ್ಳಿಗಳ ಜನರು ಮರಳು, ಸಿಲಿಂಡರ್‌, ಕೃಷಿ ಉತ್ಪನ್ನ ಸೇರಿ ಇತರೆ ದೊಡ್ಡ ವಾಹನಗಳ ಸಂಚಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಸವಣೂರು-ಶಿಗ್ಗಾಂವ ಮೂಲಕ ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವಂತಾಗಿದೆ.

ವ್ಯಾಪಾರ-ವಹಿವಾಟಿಗೆ ತೊಂದರೆ: ಲಕ್ಷ್ಮೇಶ್ವರ ಸೇರಿ ತಾಲೂಕಿನ ಎಲ್ಲ ಭಾಗದ ಜನರು ಕಿರಾಣಿ, ಕಟ್ಟಡ ಸಾಮಗ್ರಿ, ಆಹಾರ ಪದಾರ್ಥ, ಔಷಧ, ಕೃಷಿ ಉತ್ಪನ್ನ, ದಿನಪತ್ರಿಕೆ ಸೇರಿ ಇತರೆ ಜೀವನಾವಶ್ಯಕ ವಸ್ತುಗಳ ಸಾಗಾಟಕ್ಕೆ ಈ ಮಾರ್ಗವೇ ಆಧಾರ. ಆದರೆ ಒಂದೂವರೆ ತಿಂಗಳಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಮತ್ತು ಕೊರೊನಾ ಸಂಕಷ್ಟದಲ್ಲಿ ಅಗತ್ಯ ವಸ್ತುಗಳ ಕೊರತೆ ಜತೆಗೆ ಬೆಲೆ ಹೆಚ್ಚಳಕ್ಕೂ ಕಾರಣವಾಗಿದೆ. ಇದರಿಂದ ಎಲ್ಲ ಬಗೆಯ ವ್ಯಾಪಾರಸ್ಥರಿಗೆ ಪೆಟ್ಟು ಬಿದ್ದಿದೆ. ರಸಗೊಬ್ಬರ ಸರಬರಾಜಿಗೆ ತೊಂದರೆಯಾಗಿ ರೈತರು ಗೊಬ್ಬರವಿಲ್ಲದೇ ಪರದಾಡುವಂತಾಗಿದೆ.

ರೋಗಿಗಳ ಪರದಾಟ: ಲಕ್ಷ್ಮೇಶ್ವರ ಮತ್ತು ಕುಂದಗೋಳ ತಾಲೂಕಿನ ಕೆಲ ಭಾಗದ ರೋಗಿಗಳಿಗೆ ಹುಬ್ಬಳ್ಳಿಯೇ ಸಂಜೀವಿನಿ. ಸದ್ಯ ಹೆಚ್ಚುತ್ತಿರುವ ಕೊರೊನಾ ಸೋಂಕಿತರು, ಅಪಘಾತಕ್ಕೀಡಾದವರು, ತೀವ್ರ ಆರೋಗ್ಯ ತೊಂದರೆಗೀಡಾದವರು ಹುಬ್ಬಳ್ಳಿ ತಲುಪಲು ಹೆಚ್ಚು ಸಮಯ ಬೇಕಾಗುವುದರಿಂದ ಪ್ರಾಣಕ್ಕೂ ಕುತ್ತು ಬರುವಂತಾಗಿದೆ. ರಸ್ತೆ ಸಮಸ್ಯೆಯಿಂದ ಬಾಡಿಗೆ ವಾಹನದವರೂ ಹುಬ್ಬಳ್ಳಿಗೆ ಹೋಗಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಮತ್ತಷ್ಟು ಸಮಸ್ಯೆ ಹೆಚ್ಚಾಗಿದೆ.

ಟಾಪ್ ನ್ಯೂಸ್

ಈಶ್ವರಪ್ಪ ಓಪನ್ ಹಾರ್ಟ್ ಮನುಷ್ಯ, ವಲಸಿಗರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ: ರಮೇಶ ಜಾರಕಿಹೊಳಿ

ಈಶ್ವರಪ್ಪ ಓಪನ್ ಹಾರ್ಟ್ ಮನುಷ್ಯ, ವಲಸಿಗರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ: ರಮೇಶ ಜಾರಕಿಹೊಳಿ

h vishwanath

ಆಡಳಿತದಲ್ಲಿ ಹಸ್ತಕ್ಷೇಪ, ಭ್ರಷ್ಟಚಾರ ಹೆಚ್ಚಾಗಿದೆ. ಸಿಎಂ ಬದಲಾವಣೆ ಮಾಡಬೇಕು: ವಿಶ್ವನಾಥ್

ನಾಳೆಯಿಂದ ಹೊಸ ಯಡಿಯೂರಪ್ಪ ಬರುತ್ತಾರೆ: ಬಿಎಸ್‌ವೈ ಪರ ಸಾಹುಕಾರ್ ಬ್ಯಾಟಿಂಗ್

ನಾಳೆಯಿಂದ ಹೊಸ ಯಡಿಯೂರಪ್ಪ ಬರುತ್ತಾರೆ: ಬಿಎಸ್‌ವೈ ಪರ ಸಾಹುಕಾರ್ ಬ್ಯಾಟಿಂಗ್

ಕೋವಿಡ್ ಎರಡನೇ ಅಲೆಯಿಂದ 2 ಲಕ್ಷ ಕೋಟಿ ಆರ್ಥಿಕ ನಷ್ಟ ಸಾಧ್ಯತೆ: ಆರ್ ಬಿಐ ವರದಿ

ಕೋವಿಡ್ ಎರಡನೇ ಅಲೆಯಿಂದ 2 ಲಕ್ಷ ಕೋಟಿ ಆರ್ಥಿಕ ನಷ್ಟ ಸಾಧ್ಯತೆ: ಆರ್ ಬಿಐ ವರದಿ

somashekar reddy

ಬೆಂಗಳೂರಿಗೆ ಹೋಗಿ ಯಾರನ್ನು ಭೇಟಿಯಾಗಿ ಏನು ಮಾಡಲಿ: ಸೋಮಶೇಖರ ರೆಡ್ಡಿ ಅಸಮಾಧಾನ

ಮಲೆನಾಡಲ್ಲಿ ಮುಂದುವರೆದ ಮಳೆಯಬ್ಬರ: ಕುಸಿಯುವ ಹಂತದಲ್ಲಿದೆ ಮುಗ್ರಹಳ್ಳಿ ಸೇತುವೆ

ಮಲೆನಾಡಲ್ಲಿ ಮುಂದುವರೆದ ಮಳೆಯಬ್ಬರ: ಕುಸಿಯುವ ಹಂತದಲ್ಲಿದೆ ಮುಗ್ರಹಳ್ಳಿ ಸೇತುವೆ

ಟಿಎಂಸಿ ಸೇರ್ಪಡೆ ಬೆನ್ನಲ್ಲೇ ಮುಕುಲ್ ರಾಯ್ ಝಡ್ ಶ್ರೇಣಿ ಭದ್ರತೆ ವಾಪಸ್ ಪಡೆದ ಕೇಂದ್ರ

ಟಿಎಂಸಿ ಸೇರ್ಪಡೆ ಬೆನ್ನಲ್ಲೇ ಮುಕುಲ್ ರಾಯ್ ಝಡ್ ಶ್ರೇಣಿ ಭದ್ರತೆ ವಾಪಸ್ ಪಡೆದ ಕೇಂದ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈಶ್ವರಪ್ಪ ಓಪನ್ ಹಾರ್ಟ್ ಮನುಷ್ಯ, ವಲಸಿಗರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ: ರಮೇಶ ಜಾರಕಿಹೊಳಿ

ಈಶ್ವರಪ್ಪ ಓಪನ್ ಹಾರ್ಟ್ ಮನುಷ್ಯ, ವಲಸಿಗರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ: ರಮೇಶ ಜಾರಕಿಹೊಳಿ

ನಾಳೆಯಿಂದ ಹೊಸ ಯಡಿಯೂರಪ್ಪ ಬರುತ್ತಾರೆ: ಬಿಎಸ್‌ವೈ ಪರ ಸಾಹುಕಾರ್ ಬ್ಯಾಟಿಂಗ್

ನಾಳೆಯಿಂದ ಹೊಸ ಯಡಿಯೂರಪ್ಪ ಬರುತ್ತಾರೆ: ಬಿಎಸ್‌ವೈ ಪರ ಸಾಹುಕಾರ್ ಬ್ಯಾಟಿಂಗ್

ಬಂಟ್ವಾಳ: ನಿಯಂತ್ರಣ ತಪ್ಪಿ ರಸ್ತೆ ಬದಿ ದಂಡೆಗೆ ಢಿಕ್ಕಿ ಹೊಡೆದ ಅಕ್ಕಿ ತುಂಬಿದ್ದ ಲಾರಿ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ದಂಡೆಗೆ ಢಿಕ್ಕಿ ಹೊಡೆದ ಅಕ್ಕಿ ತುಂಬಿದ್ದ ಲಾರಿ

somashekar reddy

ಬೆಂಗಳೂರಿಗೆ ಹೋಗಿ ಯಾರನ್ನು ಭೇಟಿಯಾಗಿ ಏನು ಮಾಡಲಿ: ಸೋಮಶೇಖರ ರೆಡ್ಡಿ ಅಸಮಾಧಾನ

ಮಲೆನಾಡಲ್ಲಿ ಮುಂದುವರೆದ ಮಳೆಯಬ್ಬರ: ಕುಸಿಯುವ ಹಂತದಲ್ಲಿದೆ ಮುಗ್ರಹಳ್ಳಿ ಸೇತುವೆ

ಮಲೆನಾಡಲ್ಲಿ ಮುಂದುವರೆದ ಮಳೆಯಬ್ಬರ: ಕುಸಿಯುವ ಹಂತದಲ್ಲಿದೆ ಮುಗ್ರಹಳ್ಳಿ ಸೇತುವೆ

MUST WATCH

udayavani youtube

ಕೃಷ್ಣ ನದಿ ಪಾತ್ರದಲ್ಲಿ ಹಸುವನ್ನು ಬಲಿ ಪಡೆದ ಮೊಸಳೆ ಅ ಅ

udayavani youtube

2 ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ, : ಕಟೀಲ್

udayavani youtube

ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ : ನಟಿ ರಾಗಿಣಿ

udayavani youtube

ಬೋರ್ ವೆಲ್ ಪಂಪ್ ಹೊಡೆದು ದಾಹ ನೀಗಿಸಿಕೊಂಡ ಮರಿ ಆನೆ

udayavani youtube

ಹೈನುಗಾರಿಕೆಯಲ್ಲಿ ಖುಷಿ ಕಂಡ ರಾಜಕಾರಣಿ

ಹೊಸ ಸೇರ್ಪಡೆ

anivasi kannadiga

“ಮೀನುಗಾರರ ಸಮಸ್ಯೆಗಳಿಗೆ ತತ್‌ಕ್ಷಣ ಕ್ರಮ”

Anjata – Ellora Open

ಅಂಜತಾ -ಎಲ್ಲೋರಾ ಓಪನ್‌

ಈಶ್ವರಪ್ಪ ಓಪನ್ ಹಾರ್ಟ್ ಮನುಷ್ಯ, ವಲಸಿಗರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ: ರಮೇಶ ಜಾರಕಿಹೊಳಿ

ಈಶ್ವರಪ್ಪ ಓಪನ್ ಹಾರ್ಟ್ ಮನುಷ್ಯ, ವಲಸಿಗರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ: ರಮೇಶ ಜಾರಕಿಹೊಳಿ

ಕೋವಿಡ್ ಬಿಕ್ಕಟ್ಟಿನ ನಿವಾರಣೆಯಲ್ಲಿ ಭಾರತದ ಭರವಸೆ-ಸ್ಪುಟ್ನಿಕ್ ವಿ

ಕೋವಿಡ್ ಬಿಕ್ಕಟ್ಟಿನ ನಿವಾರಣೆಯಲ್ಲಿ ಭಾರತದ ಭರವಸೆ-ಸ್ಪುಟ್ನಿಕ್ ವಿ

h vishwanath

ಆಡಳಿತದಲ್ಲಿ ಹಸ್ತಕ್ಷೇಪ, ಭ್ರಷ್ಟಚಾರ ಹೆಚ್ಚಾಗಿದೆ. ಸಿಎಂ ಬದಲಾವಣೆ ಮಾಡಬೇಕು: ವಿಶ್ವನಾಥ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.