ವನ್ಯಜೀವಿಧಾಮ ಉಳಿವಿಗೆ ಸಹಿ ಸಂಗ್ರಹ ಆಂದೋಲನ

Team Udayavani, Sep 20, 2019, 1:16 PM IST

gadaga-tdy-2

ಮುಂಡರಗಿ: ಅಮೂಲ್ಯ ಸಸ್ಯಸಂಪತ್ತಿನ ಕಪ್ಪತಗುಡ್ಡವನ್ನು ಉಳಿಸಬೇಕೆಂದು ಪರಿಸರವಾದಿಗಳು ಹೋರಾಟ ಮಾಡಿದ್ದಾರೆ. ಸರಕಾರವು ಕಪ್ಪತಗುಡ್ಡವನ್ನು ವನ್ಯಜೀವಿಧಾಮವಾಗಿ ಘೋಷಿಸಿದೆ. ವನ್ಯಜೀವಿಧಾಮವನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಕಪ್ಪತ್ತಗುಡ್ಡವು ತಂದೆ-ತಾಯಿಯ ಸ್ಥಾನದಲ್ಲಿದೆ ಎಂದು ಜಗದ್ಗುರು ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಸರ್ಕಾರ ಕಪ್ಪತಗುಡ್ಡಕ್ಕೆ ನೀಡಿರುವ ವನ್ಯಜೀವಿಧಾಮ ಸ್ಥಾನಮಾನ ಮುಂದುವರಿಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿ ಪಟ್ಟಣದ ವಿವಿಧ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಯಾವುದೇ ಕಾರಣಕ್ಕೂ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಬೇಡ. ಕಪ್ಪತ್ತಗುಡ್ಡದಲ್ಲಿರುವ ಔಷಧಿಧೀಯ ಸಸ್ಯಗಳು, ಪರಿಸರವು ಅಮೂಲ್ಯವಾದ ಸಂಪತ್ತು ಆಗಿದೆ. ಕಪ್ಪತ್ತಗುಡ್ಡದಿಂದಾಗಿ ಚೆನ್ನಾಗಿ ಮಳೆಯಾಗಿ ಬೆಳೆ ಬೆಳೆಯುವಂತೆ ಆಗಿದೆ. ಕಪ್ಪತ್ತಗುಡ್ಡದಲ್ಲಿ ನೆಲ-ಜಲ, ಪರಿಸರದ ಸಂರಕ್ಷಣೆಯಾಗಬೇಕು ಎಂದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ನಮ್ಮ ಹೋರಾಟವನ್ನು ಮನಗಂಡು ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಅರಣ್ಯ ಸಚಿವರಾಗಿದ್ದ ಸತೀಶ್‌ ಜಾರಕಿಹೊಳಿ ಅವರು ಕಪ್ಪತಗುಡ್ಡಕ್ಕೆ ವನ್ಯಜೀವಿ ಧಾಮ ಎಂದು ಘೋಷಿಸಿ ಆದೇಶ ಹೊರಡಿಸಿದ್ದರು. ಸರ್ಕಾರ ಅದನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗಬೇಕು. ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಯು ಬೇಡವೇ ಬೇಡ. ಅಲ್ಲಿ ನೆಲೆಸಿರುವ ಜನರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ. 480 ಎಕರೆ ಭೂಮಿ ಬಗರ್‌ ಹುಕುಂ ಸಾಗುವಳಿ ಭೂಮಿಗೆ ಪಟ್ಟಾ ವಿತರಿಸಲಾಗಿದೆ ಎಂದು ಹೇಳಿದರು.

ವೈ.ಎನ್‌. ಗೌಡರ ಮಾತನಾಡಿ, ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೋಷಿಸಿರುವುದರಿಂದ ಅರಣ್ಯಕ್ಕೆ ಧಕ್ಕೆ ಬಾರದಂತೆ ಅಲ್ಲಿ ನಾವು ಎಂದಿನಂತೆ ಚಟುವಟಿಕೆ ಕೈಗೊಳ್ಳಬಹುದು. ಆದರೆ ಕೆಲವರು ಅಲ್ಲಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಜನರ ಹಾದಿ ತಪ್ಪಿಸಲಾಗುತ್ತಿದ್ದಾರೆ. ಅಂತಹ ಹೇಳಿಕೆಗಳಿಗೆ ಜನರು ಕಿವಿಗೊಡಬಾರದು ಎಂದರು.

ಮುಖಂಡರಾದ ಕರಬಸಪ್ಪ ಹಂಚಿನಾಳ, ಮಂಜುನಾಥ ಇಟಗಿ, ಸಿ.ಎಸ್‌. ಅರಸನಾಳ, ಡಾ.ಪಿ.ಬಿ.ಹಿರೇಗೌಡರ ಮಾತನಾಡಿ, ಕಪ್ಪತಗುಡ್ಡ ಉಳಿಸಬೇಕು ಎಂದರು. ಎ.ಕೆ.ಬೆಲ್ಲದ, ಡಾ.ಡಿ.ಸಿ.ಮಠದ, ಕೊಟ್ರೇಶ ಅಂಗಡಿ, ಕೆ.ಎ.ಹಿರೇಮಠ, ಆರ್‌ಎಫ್‌ಒ ಶಿವರಾತ್ರೇಶ್ವರಯ್ಯಸ್ವಾಮಿ, ಭರಮಪ್ಪ ಕಿಲಾರಿ, ಜಿ.ವಿ.ಹಿರೇಮಠ, ಪ್ರಕಾಶ ಪಾಟೀಲ, ಭಾಗ್ಯಲಕ್ಷ್ಮಿ ಇನಾಮತಿ, ಆರ್‌.ಆರ್ .ಇನಾಮದಾರ, ಶೋಭಾ ಪಾಟೀಲ, ಆನಂದ ರಾಮೇನಹಳ್ಳಿ, ಮಹೇಶ ಜಂತ್ಲಿ, ಮೈಲಾರೆಪ್ಪ ಕಲಕೇರಿ, ಮಂಜುನಾಥ ಮುಧೋಳ ಮತ್ತಿತರರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಕೆನಡಾಕ್ಕೆ ಭಾರತ ಮೂಲದ ರಕ್ಷಣಾ ಸಚಿವೆ

ಕೆನಡಾಕ್ಕೆ ಭಾರತ ಮೂಲದ ರಕ್ಷಣಾ ಸಚಿವೆ

ಟೀವಿ ಕಾರ್ಯಕ್ರಮದ ನಡುವೆಯೇ ಹೊರ ನಡೆದ ಶೋಯಿಬ್‌ ಅಖ್ತರ್‌

ಟೀವಿ ಕಾರ್ಯಕ್ರಮದ ನಡುವೆಯೇ ಹೊರ ನಡೆದ ಶೋಯಿಬ್‌ ಅಖ್ತರ್‌

ದೀಪಾವಳಿ ದಿನ ದೇವಸ್ಥಾನಗಳಲ್ಲಿ ಗೋಪೂಜೆ : ಜೊಲ್ಲೆಗೆ ಪ್ರಭು ಚೌವ್ಹಾಣ್‌ ಅಭಿನಂದನೆ

ದೀಪಾವಳಿ ದಿನ ದೇವಸ್ಥಾನಗಳಲ್ಲಿ ಗೋಪೂಜೆ : ಜೊಲ್ಲೆಗೆ ಪ್ರಭು ಚೌವ್ಹಾಣ್‌ ಅಭಿನಂದನೆ

ಮುಂಬೈ ಕ್ರಿಕೆಟ್‌ ತಂಡದ ನಾಲ್ವರಿಗೆ ಕೋವಿಡ್‌

ಮುಂಬೈ ಕ್ರಿಕೆಟ್‌ ತಂಡದ ನಾಲ್ವರಿಗೆ ಕೋವಿಡ್‌

ಟಿ20 ಶ್ರೇಯಾಂಕ: ಕೊಹ್ಲಿ, ರಾಹುಲ್‌ ಕುಸಿತ

ಟಿ20 ಶ್ರೇಯಾಂಕ: ಕೊಹ್ಲಿ, ರಾಹುಲ್‌ ಕುಸಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚನ್ನಮ್ಮಾಜಿ ದೇಶಪ್ರೇಮ ಮಾದರಿ

ಚನ್ನಮ್ಮಾಜಿ ದೇಶಪ್ರೇಮ ಮಾದರಿ

20school

ಗ್ರಾಮಸ್ಥರಿಂದಲೇ ತಲೆಯೆತ್ತುತ್ತಿವೆ ಶಾಲಾ ಕೊಠಡಿಗಳು

ಸಚಿವ ಸಿ.ಸಿ. ಪಾಟೀಲ ಯುವ ನಾಯಕರಿಗೆ ಪ್ರೇರಣೆ

ಸಚಿವ ಸಿ.ಸಿ. ಪಾಟೀಲ ಯುವ ನಾಯಕರಿಗೆ ಪ್ರೇರಣೆ

ಸಿಡಿಲು ಬಡಿದು ಹೊಲದಲ್ಲಿ ಮೇಯುತ್ತಿದ್ದ ಹನ್ನೊಂದು ಕುರಿಗಳ ಸಾವು

ಸಿಡಿಲು ಬಡಿದು ಹೊಲದಲ್ಲಿ ಮೇಯುತ್ತಿದ್ದ ಹನ್ನೊಂದು ಕುರಿಗಳ ಸಾವು

ರಾಮಮಂದಿರ ದೇಣಿಗೆ ಲೆಕ್ಕ ಹಾದಿಬೀದಿಯಲ್ಲಿ ಕೇಳುವ ಅಗತ್ಯವೇನು?  

ರಾಮಮಂದಿರ ದೇಣಿಗೆ ಲೆಕ್ಕ ಹಾದಿಬೀದಿಯಲ್ಲಿ ಕೇಳುವ ಅಗತ್ಯವೇನು?  

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಕೆನಡಾಕ್ಕೆ ಭಾರತ ಮೂಲದ ರಕ್ಷಣಾ ಸಚಿವೆ

ಕೆನಡಾಕ್ಕೆ ಭಾರತ ಮೂಲದ ರಕ್ಷಣಾ ಸಚಿವೆ

ಟೀವಿ ಕಾರ್ಯಕ್ರಮದ ನಡುವೆಯೇ ಹೊರ ನಡೆದ ಶೋಯಿಬ್‌ ಅಖ್ತರ್‌

ಟೀವಿ ಕಾರ್ಯಕ್ರಮದ ನಡುವೆಯೇ ಹೊರ ನಡೆದ ಶೋಯಿಬ್‌ ಅಖ್ತರ್‌

ದೀಪಾವಳಿ ದಿನ ದೇವಸ್ಥಾನಗಳಲ್ಲಿ ಗೋಪೂಜೆ : ಜೊಲ್ಲೆಗೆ ಪ್ರಭು ಚೌವ್ಹಾಣ್‌ ಅಭಿನಂದನೆ

ದೀಪಾವಳಿ ದಿನ ದೇವಸ್ಥಾನಗಳಲ್ಲಿ ಗೋಪೂಜೆ : ಜೊಲ್ಲೆಗೆ ಪ್ರಭು ಚೌವ್ಹಾಣ್‌ ಅಭಿನಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.