ಜಿಲ್ಲೆಯ ವಿವಿಧೆಡೆ ಯೋಗ ದಿನಾಚರಣೆ

•ಶಾಲಾ-ಕಾಲೇಜುಗಳಲ್ಲಿ ಯೋಗಾಭ್ಯಾಸ •ಬೀದಿಗಳಲ್ಲಿ ಜಾಗೃತಿ ಜಾಥಾ •ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ

Team Udayavani, Jun 23, 2019, 10:34 AM IST

ನರೇಗಲ್ಲ: ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸಾಮೂಹಿಕ ಯೋಗ ಮಾಡಲಾಯಿತು.

ನರೇಗಲ್ಲ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಪಟ್ಟಣದ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ ದಿನ ಆಚರಿಸಲಾಯಿತು.

ಪ್ರಾರ್ಚಾಯ ವೈ.ಸಿ. ಪಾಟೀಲ ಮಾತನಾಡಿದರು. ಉಪನ್ಯಾಸಕರಾದ ಪಿ.ಎನ್‌. ಬಳೂಟಗಿ, ವಿದ್ಯಾಸಾಗರ ಎಂ., ಎಫ್‌.ಎನ್‌. ಹುಡೇದ, ಶಿವನಾಂದ ಕುರಿ, ಪೂರ್ಣಿಮಾ ಮೊರಬದ, ಕಸ್ತೂರಿ ಕುಂಬಾರ ಸೇರಿದಂತೆ ವಿದ್ಯಾರ್ಥಿಗಳು ಸಾಮೂಹಿಕ ಯೋಗದಲ್ಲಿ ಪಾಲ್ಗೊಂಡಿದ್ದರು.

ಅನ್ನದಾನ ವಿಜಯ ಬಾಲಕರ ಪ್ರೌಢಶಾಲೆ: ಪಟ್ಟಣದ ಅನ್ನದಾನ ವಿಜಯ ಬಾಲಕರ ಪ್ರೌಢಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ಮುಖ್ಯಶಿಕ್ಷಕ ಎಸ್‌.ಎಚ್. ಅಬ್ಬಿಗೇರಿ ಮಾತನಾಡಿದರು. ಶಿಕ್ಷಕ ಎಂ.ವಿ. ವೀರಾಪುರ, ಎಂ.ವಿ. ಬಿಂಗಿ, ಇಸ್ಮಾಯಿಲ್ ಆರಿ, ಎಸ್‌.ಬಿ. ಬೂದಿಹಾಳ, ಎಸ್‌.ಕೆ. ಗಾಣಿಗೇರ, ಆರ್‌.ಎಂ. ನದಾಫ್‌, ಎ.ಎಂ. ರಾಠೊಡ, ಎಲ್.ಎನ್‌. ನಾಯಕ, ಆರ್‌.ಎಂ. ಗುಳಬಾಳ, ಟಿ.ಬಿ. ಆಡೂರ, ಬಿ.ಎನ್‌. ನಾಗನಗೌಡ್ರ, ಯಶವಂತ ಬೇವಿನಕಟ್ಟಿ ಸೇರಿದಂತೆ ವಿದ್ಯಾರ್ಥಿಗಳು ಸಾಮೂಹಿಕ ಯೋಗದಲ್ಲಿ ಪಾಲ್ಗೊಂಡಿದ್ದರು.

ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆ: ಪಟ್ಟಣದ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ಮುಖ್ಯಶಿಕ್ಷಕ ಎ.ಟಿ. ಮಳ್ಳಳ್ಳಿ, ಕೆ.ಸಿ. ಜೋಗಿ, ಎಂ.ಎಂ. ಅತ್ತಾರ, ಬಿ.ಡಿ. ಯರಗೋಪ್ಪ, ಎಸ್‌. ಶಿವಮೂರ್ತಿ, ಎಸ್‌.ಎಫ್‌. ಧರ್ಮಾಯತ, ಆರ್‌.ಕೆ. ರಡ್ಡೇರ, ಸಂಗಪ್ಪ ಕುರಡಗಿ ಸೇರಿದಂತೆ ವಿದ್ಯಾರ್ಥಿಗಳು ಸಾಮೂಹಿಕ ಯೋಗದಲ್ಲಿ ಪಾಲ್ಗೊಂಡಿದ್ದರು.

ಬಸವೇಶ್ವರ ಪ್ರಾಥಮಿಕ ಶಾಲೆ: ಪಟ್ಟಣದ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ಮುಖ್ಯಶಿಕ್ಷಕಿ ಬಿ.ಜೆ. ಶಿರ್ಸಿ, ಶಿಕ್ಷಕ ಎಂ.ಎಂ. ಕಡೆತೋಟದ, ವಿದ್ಯಾವತಿ ಗ್ರಾಮಪುರೋಹಿತ, ವಿಜಯಲಕ್ಷ್ಮೀ ಜಾಧವ, ಸುವರ್ಣ ಹಿರೇಮಠ, ಸೀತಾ ಕುಲಕುರ್ಣಿ, ಐ.ಬಿ. ಒಂಟೇಲಿ, ಪೂರ್ಣಿಮಾ ಅಂಗಡಿ, ಎ.ಐ. ಕೋಳಿವಾಡ, ಸಾವಿತ್ರಿ ಮಾನ್ವಿ, ಗೀತಾ ಬೇಳಗಾಂಕರ, ಮಲ್ಲಮ್ಮ ಸೀಳಿನ, ರೇಖಾ ಸಜ್ಜನವರ, ರಾಜೇಶ್ವರಿ ತೋಟಗಂಟಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಪಿಎಸ್‌ಎಸ್‌ ಶಾಲೆ: ಪಟ್ಟಣದ ಪಿ.ಎಸ್‌.ಎಸ್‌. ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ಡಾ| ಕೆ.ಬಿ. ಧನ್ನೂರ ಯೋಗ ಮಾಡಿಸಿದರು. ಮುಖ್ಯಶಿಕ್ಷಕ ಮಂಜುನಾಥ ಗ್ರಾಮಪುರೋಹಿತ, ಎಸ್‌.ಎಸ್‌. ಮಲ್ಲನಗೌಡ್ರ, ಆರ್‌.ಐ. ನಾಗಠಾಣ, ಕೆ.ಬಿ. ಕುರಿ, ಎಂ.ವಿ. ವಾಲ್ಮೀಕಿ, ಬಿ.ಎಫ್‌. ನೀರಲಗಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ: ಪಟ್ಟಣದ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ಈಶ್ವರ ಬೇಟಗೇರಿ ಯೋಗದ ಮಹತ್ವ ಕುರಿತು ಮಾತನಾಡಿದರು. ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ, ಬಸವರಾಜ ಹೂಗಾರ, ಅಕ್ಕಮ್ಮ ಬೆಟಗೇರಿ, ಜಯಶ್ರೀ ಗಂರಡೊಂಡ, ವಿಜಯಲಕ್ಷಿ ್ಮೕ ಹಿರೇಮಠ, ರೇಖಾ ಪಾಯಪ್ಪಗೌಡ್ರ, ರೇಣುಕಾ ರಾಮಣ್ಣವರ, ಜ್ಯೋತಿ ಗಾಣಿಗೇರ, ಮಂಜುಳಾ ಸೂಡಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಜಕ್ಕಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ಸಮೀಪದ ಜಕ್ಕಲಿ ಗ್ರಾಮದ ಬಾಲಕರ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ದೈಹಿಕ ಶಿಕ್ಷಕಿ ಸುನಂದ ಐಲಿ, ವಿ.ಎ. ಕುಂಬಾರ, ಎಂ.ವಿ. ತಾಳಿಕೋಟಿ, ಎಸ್‌.ಎ. ಪಲ್ಲೇದ, ಎಂ.ಎನ್‌, ಅಂಗಡಿ, ಸಿ.ಬಿ. ಜುಟ್ಲದ, ಎಸ್‌.ಎಸ್‌. ಯಲ್ಲರಡ್ಡಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಅಬ್ಬಿಗೇರಿ ಅನ್ನದಾನ ವಿಜಯ ಪ್ರೌಢಶಾಲೆ:ಸಮೀಪದ ಅಬ್ಬಿಗೇರಿಯ ಅನ್ನದಾನ ವಿಜಯ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ ಜರುಗಿತು. ಯೋಗ ಶಿಕ್ಷಕಿ ಪವಿತ್ರಾ ಬಾಸಲಾಪುರ ಯೋಗದ ಮಹತ್ವ ತಿಳಿಸಿದರು. ಪ್ರಭಾರಿ ಮುಖ್ಯ ಶಿಕ್ಷಕ ಎಸ್‌.ಎನ್‌. ಹೂಲಗೇರಿ, ಎಂ.ಬಿ. ಸಜ್ಜನರ, ಎಂ.ಎಂ. ಗುಗ್ಗರಿ, ಎಚ್.ಎಂ. ರತ್ನಮ್ಮ, ಐ. ಜ್ಞಾನೇಶ್ವರಿ, ಎಸ್‌.ಜಿ. ಗಿರಿತಿಮ್ಮಣ್ಣವರ, ನಾಗರಾಜ ರಡ್ಡೇರ ಇದ್ದರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ