ಕುತೂಹಲ ಕೆರಳಿಸಿದ ಚುನಾವಣಾ ಆಯೋಗ

ಜಿಪಂ 24 ಕ್ಷೇತ್ರಗಳು!7 ತಾಪಂಗಳ 79 ಮೀಸಲು ಕ್ಷೇತ್ರಗಳಲ್ಲಿ ಮಹಿಳೆಯರದ್ದೇ ಪ್ರಾಬಲ್ಯ

Team Udayavani, May 2, 2021, 7:26 PM IST

jyutut6

ಗದಗ: ಇತ್ತೀಚೆಗಷ್ಟೇ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಸರಕಾರ ಎಲ್ಲ ಚುನಾವಣೆಗಳನ್ನು 6 ತಿಂಗಳ ಕಾಲ ಮುಂದೂಡಿಕೆ ಮಾಡಿ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಚುನಾವಣಾ ಆಯೋಗ ಜಿಪಂ-ತಾಪಂ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದೆ. ಇದರಿಂದ ಜಿಲ್ಲೆಯ ಚುನಾವಣಾ ಸ್ಪರ್ಧಾಕಾಂಕ್ಷಿಗಳು ಮತ್ತು ಸ್ಥಳೀಯ ರಾಜಕೀಯ ವಲಯಲ್ಲಿ ಕುತೂಹಲ ಕೆರಳಿಸಿದೆ.

ಎರಡು ತಿಂಗಳ ಹಿಂದೆಯೇ ಚುನಾವಣಾ ಆಯೋಗ ಜಿಪಂ, ತಾಪಂ ಚುನಾವಣೆಯ ಸಿದ್ಧತೆ ಆರಂಭಿಸಿತ್ತು. ಜಿಲ್ಲೆಯ ಜನಸಂಖ್ಯೆಗೆ ಅನುಸಾರವಾಗಿ ಕ್ಷೇತ್ರ ಪುನರ್‌ ವಿಂಗಡಣೆ ಪೂರ್ಣಗೊಳಿಸಲಾಗಿದೆ. ಜತೆಗೆ ಜಿಪಂನ ಐವರು ಸದಸ್ಯ ಬಲ ಹೆಚ್ಚಿಸಿದ್ದು, 19 ಸದಸ್ಯರಿಂದ 24ಕ್ಕೆ ಏರಿಕೆಯಾಗಿದೆ.

ನರಗುಂದ-ಗಜೇಂದ್ರಗಡ ತಾಲೂಕುಗಳನ್ನು ಹೊರತುಪಡಿಸಿ, ಇನ್ನುಳಿದ 5 ತಾಲೂಕುಗಳಿಗೆ ತಲಾ ಒಂದು ಜಿಪಂ ಕ್ಷೇತ್ರ ಹೆಚ್ಚಿಸಿದೆ. ಕೇತ್ರ ಪುನರ್‌ ವಿಂಗಡಣೆ ಬಳಿಕ ಗದಗ 15, ಮುಂಡರಗಿ 9, ನರಗುಂದ, ರೋಣ, ಗಜೇಂದ್ರಗಡ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕು ಪಂಚಾಯಿತಿಗಳು ತಲಾ 11 ಸದಸ್ಯ ಬಲ ಹೊಂದಿವೆ. ಈ ಮೂಲಕ ಹಿಂದೆ ಇದ್ದ 79 ತಾಪಂ ಕ್ಷೇತ್ರಗಳಲ್ಲೇ ಎಲ್ಲ 7 ತಾಲೂಕುಗಳನ್ನು ಸರಿದೂಗಿಸಲಾಗಿದೆ.

ಮೀಸಲು ಕ್ಷೇತ್ರಗಳಲ್ಲಿ ನಾರಿಯರು: ಕ್ಷೇತ್ರ ಪುನರ್‌ ವಿಂಗಡಣೆ ಪೂರ್ಣಗೊಳಿಸಿರುವ ಬೆನ್ನಲ್ಲೇ ಇದೀಗ ರಾಜ್ಯ ಚುನಾವಣಾ ಆಯೋಗ ಜಿಪಂ, ತಾಪಂ ಒಟ್ಟು ಸ್ಥಾನಗಳನ್ನು ಸಾಮಾಜಿಕ ಮೀಸಲಾತಿ ಅನ್ವಯ ವರ್ಗೀಕರಿಸಿದೆ. ಪಂಚಾಯತ್‌ನ ಒಟ್ಟು ಸದಸ್ಯ ಸಂಖ್ಯೆ ಆಧರಿಸಿ ಮಹಿಳೆಯರಿಗೆ ಶೇ.50 ಸ್ಥಾನಗಳನ್ನು ನಿಗದಿಪಡಿಸಿದೆ. ಜತೆಗೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ “ಅ’, ಹಿಂದಳಿದ ವರ್ಗ “ಬ’ ಮತ್ತು ಸಾಮಾನ್ಯ ವರ್ಗದ ಸ್ಥಾನಗಳನ್ನು ನಿಗದಿಗೊಳಿಸಿ ಅಧಿಸೂಚನೆ ಹೊರಡಿಸಿದೆ. ಜಿಪಂ ಒಟ್ಟು 24 ಸ್ಥಾನಗಳಲ್ಲಿ 12 ಮಹಿಳೆಯರಿಗೆ ಮೀಸಲು ಕಲ್ಪಿಸಿದೆ.

ಅನುಸೂಚಿತ ಜಾತಿ 4(2), ಅನುಸೂಚಿತ ಪಂಗಡ 2(1), ಹಿಂದುಳಿದ ವರ್ಗ “ಅ’ 5(2), ಹಿಂದಳಿದ ವರ್ಗ “ಬ’ 1(1) ಮತ್ತು 12(6) ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ನಿಗದಿಗೊಳಿಸಿದೆ. ಜಿಲ್ಲೆಯ 7 ತಾಪಂನ ಒಟ್ಟು 79 ಸ್ಥಾನಗಳಲ್ಲಿ 43 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಅನುಸೂಚಿತ ಜಾತಿಗೆ ಮೀಸಲಿರುವ 15 ಸ್ಥಾನಗಳಲ್ಲಿ 10, ಅನುಸೂಚಿತ ಪಂಗಡಕ್ಕೆ ಸಿಕ್ಕಿರುವ 7 ಕ್ಷೇತ್ರಗಳು ಮಹಿಳಾ ಮೀಸಲಾಗಿವೆ. ಹಿಂದುಳಿದ ವರ್ಗ ಮೀಸಲು ಕ್ಷೇತ್ರದ 11ರಲ್ಲಿ 10 ಮಹಿಳೆಯರ ಪಾಲಾಗಿರುವುದು ವಿಶೇಷ. ಆದರೆ ಕ್ಷೇತ್ರವಾರು ಮೀಸಲಾತಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

ಟಾಪ್ ನ್ಯೂಸ್

ವಿಟ್ಲ: ಅಕ್ರಮವಾಗಿ ಮಾದಕ ವಸ್ತು ಸಾಗಾಟ: ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳ ಬಂಧನ

ವಿಟ್ಲ: ಅಕ್ರಮವಾಗಿ ಮಾದಕ ವಸ್ತು ಸಾಗಾಟ; ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳ ಬಂಧನ

ಶೀಘ್ರವೇ BJP ಸೇರ್ಪಡೆ; ಕ್ಯಾ.ಅಮರೀಂದರ್ ಸಿಂಗ್ NDA ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ?

ಶೀಘ್ರವೇ BJP ಸೇರ್ಪಡೆ; ಕ್ಯಾ.ಅಮರೀಂದರ್ ಸಿಂಗ್ NDA ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ?

ಸಿಎಂ ಅಭ್ಯರ್ಥಿಗಳನ್ನು ಘೋಷಿಸಿ: ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಿ.ಎಂ.ಇಬ್ರಾಹಿಂ ಸವಾಲು

ಸಿಎಂ ಅಭ್ಯರ್ಥಿಗಳನ್ನು ಘೋಷಿಸಿ: ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಿ.ಎಂ.ಇಬ್ರಾಹಿಂ ಸವಾಲು

ಬುಮ್ರಾ ವಿಶ್ವದಾಖಲೆ; ಬ್ರಾಡ್ ಒಂದೇ ಓವರ್ ನಲ್ಲಿ 35 ರನ್ ಚಚ್ಚಿದ ಬೂಮ್ ಬೂಮ್ ಬುಮ್ರಾ

ಬುಮ್ರಾ ವಿಶ್ವದಾಖಲೆ; ಬ್ರಾಡ್ ಒಂದೇ ಓವರ್ ನಲ್ಲಿ 35 ರನ್ ಚಚ್ಚಿದ ಬೂಮ್ ಬೂಮ್ ಬುಮ್ರಾ

ಉದಯಪುರ ಆಯ್ತು, ಪ್ರವಾದಿ ಬಗ್ಗೆ ಹೇಳಿಕೆ ನೀಡಿ ಕೊಲೆಯಾಗಿದ್ದ ತಿವಾರಿ ಪತ್ನಿಗೆ ಬೆದರಿಕೆ ಪತ್ರ

ಉದಯಪುರ ಆಯ್ತು, ಪ್ರವಾದಿ ಬಗ್ಗೆ ಹೇಳಿಕೆ ನೀಡಿ ಕೊಲೆಯಾಗಿದ್ದ ತಿವಾರಿ ಪತ್ನಿಗೆ ಬೆದರಿಕೆ ಪತ್ರ

ಪೌರ ಕಾರ್ಮಿಕರ ಬೇಡಿಕೆ ಈಡೇರಿಸಿ ಅಧಿಕೃತ ಆದೇಶ ಹೊರಡಿಸಿ: ಸಿದ್ದರಾಮಯ್ಯ ಆಗ್ರಹ

ಪೌರ ಕಾರ್ಮಿಕರ ಬೇಡಿಕೆ ಈಡೇರಿಸಿ ಅಧಿಕೃತ ಆದೇಶ ಹೊರಡಿಸಿ: ಸಿದ್ದರಾಮಯ್ಯ ಆಗ್ರಹ

ಸಾಗರ : ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ : ಪೇಪರ್ ವಿತರಣೆಗೆ ಹೋಗಿದ್ದ ಯುವಕ ಸ್ಥಳದಲ್ಲೇ ಸಾವು

ಸಾಗರ : ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ : ಪೇಪರ್ ವಿತರಣೆಗೆ ಹೋಗಿದ್ದ ಯುವಕ ಸ್ಥಳದಲ್ಲೇ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾಗರ : ಪೌರ ಕಾರ್ಮಿಕರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ; ಕಾಗೋಡು ಹಾಜರಿ

ಸಾಗರ : ಪೌರ ಕಾರ್ಮಿಕರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ; ಕಾಗೋಡು ಹಾಜರಿ

tdy-26

ಅರಣ್ಯ ಸಿಬ್ಬಂದಿ- ರೈತರ ಜಟಾಪಟಿ

1-sdd

ಉದಯವಾಣಿ ವರದಿಗಾರ ಸಿ.ವೈ.ಮೆಣಶಿನಕಾಯಿರಿಗೆ ಪ್ರಜಾಭೂಷಣ ಪ್ರಶಸ್ತಿ

ತಲೆ ಕೂದಲು ಉದುರಿದ್ದಕ್ಕೆ ನೊಂದು ಯುವತಿ ಆತ್ಮಹತ್ಯೆ

ತಲೆ ಕೂದಲು ಉದುರಿದ್ದಕ್ಕೆ ನೊಂದು ಯುವತಿ ಆತ್ಮಹತ್ಯೆ

ನಾಗರಿಕರ ಸುಲಿಗೆಗೆ ನಿಂತ ನಗರಸಭೆ

ನಾಗರಿಕರ ಸುಲಿಗೆಗೆ ನಿಂತ ನಗರಸಭೆ

MUST WATCH

udayavani youtube

ದೇಶದ ಮೊದಲ ಮಾನವ ರಹಿತ ವಿಮಾನ ಹಾರಾಟ ಯಶಸ್ವಿ

udayavani youtube

ಭಗವಂತನ ಅನುಗ್ರಹ ಸಂಪಾದಿಸುವುದು ಹೇಗೆ?

udayavani youtube

NEWS BULLETIN 01-07-2022

udayavani youtube

ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು

udayavani youtube

ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್

ಹೊಸ ಸೇರ್ಪಡೆ

ಸಾಗರ : ಪೌರ ಕಾರ್ಮಿಕರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ; ಕಾಗೋಡು ಹಾಜರಿ

ಸಾಗರ : ಪೌರ ಕಾರ್ಮಿಕರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ; ಕಾಗೋಡು ಹಾಜರಿ

tdy-26

ಅರಣ್ಯ ಸಿಬ್ಬಂದಿ- ರೈತರ ಜಟಾಪಟಿ

ವಿಟ್ಲ: ಅಕ್ರಮವಾಗಿ ಮಾದಕ ವಸ್ತು ಸಾಗಾಟ: ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳ ಬಂಧನ

ವಿಟ್ಲ: ಅಕ್ರಮವಾಗಿ ಮಾದಕ ವಸ್ತು ಸಾಗಾಟ; ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳ ಬಂಧನ

ಶೀತ -ಕೆಮ್ಮಿಗೆ ಈರುಳ್ಳಿಯೇ ಮದ್ದು

ಮಳೆಗಾಲ; ಶೀತ -ಕೆಮ್ಮಿಗೆ ಈರುಳ್ಳಿಯೇ ಮದ್ದು

ಶೀಘ್ರವೇ BJP ಸೇರ್ಪಡೆ; ಕ್ಯಾ.ಅಮರೀಂದರ್ ಸಿಂಗ್ NDA ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ?

ಶೀಘ್ರವೇ BJP ಸೇರ್ಪಡೆ; ಕ್ಯಾ.ಅಮರೀಂದರ್ ಸಿಂಗ್ NDA ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.