ನಾಳೆಯಿಂದ ಗದಗ ಉತ್ಸವ

•ಕೈಗಾರಿಕಾ ವಸ್ತು ಪ್ರದರ್ಶನ-ಮಾರಾಟ •ಗುಡಿ-ಮಧ್ಯಮ ಕೈಗಾರಿಕೆ ಉತ್ಪನ್ನಗಳಿಗೆ ವೇದಿಕೆ

Team Udayavani, Aug 22, 2019, 1:13 PM IST

ಗದಗ: ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿ.ಪಂ. ಹಾಗೂ ನಬಾರ್ಡ್‌ ಆಶ್ರಯದಲ್ಲಿ ಆ. 23ರಿಂದ 27ರ ವರೆಗೆ ಐದು ದಿನಗಳ ಕಾಲ ನಗರದಲ್ಲಿ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟದ ‘ಗದಗ ಉತ್ಸವ-2019’ ಆಯೋಜಿಸಲಾಗಿದೆ ಎಂದು ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ ಚೇರಮನ್‌ ಆನಂದ ಎಲ್. ಪೊತ್ನೀಸ್‌ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 23 ರಂದು ಸಂಜೆ 5.30ಕ್ಕೆ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಗದಗ ಉತ್ಸವ ಉದ್ಘಾಟಿಸುವರು. ಜ| ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ಹಾಗೂ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಂ.ಬಿ. ಸುರಕೋಡ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಜಿ.ಪಂ. ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ, ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ, ಶಾಸಕರಾದ ಎಚ್.ಕೆ. ಪಾಟೀಲ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಎಸ್‌.ವಿ. ಸಂಕನೂರ, ಪ್ರದೀಪ ಶೆಟ್ಟರ, ಜಿ.ಪಂ. ಉಪಾಧ್ಯಕ್ಷೆ ಶಕುಂತ ಲಾ ಮೂಲಿಮನಿ, ತಾ.ಪಂ. ಅಧ್ಯಕ್ಷ ಮೋಹನ ದುರಗಣ್ಣವರ, ಉಪಾಧ್ಯಕ್ಷೆ ಸುಜತಾ ಖಂಡು, ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿ.ಪಿ. ಲಿಂಗನಗೌಡ್ರ, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಟಿ. ದಿನೇಶ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.

100 ಮಳಿಗೆ ನಿರ್ಮಾಣ: ಗುಡಿ ಹಾಗೂ ಮಧ್ಯಮ ಕೈಗಾರಿಕೆ ಉತ್ಪನ್ನಗಳಿಗೆ ವೇದಿಕೆ ಕಲ್ಪಿಸಲು ಈ ಉತ್ಸವ ಆಯೋಜಿಸಲಾಗುತ್ತಿದ್ದು, ಈ ಬಾರಿ 100 ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಇದರಲ್ಲಿ ಶೇ. 50ರಷ್ಟು ಗುಡಿ ಕೈಗಾರಿಕೆ ಮಳಿಗೆಗಳು, ಜಿಲ್ಲಾ ಕೈಗಾರಿಕಾ ಕೇಂದ್ರ, ನಬಾರ್ಡ್‌ ಹಾಗೂ ಜಿ.ಪಂ. ಪ್ರಚಾರ ಮಳಿಗೆಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಇನ್ನುಳಿದಂತೆ ಕೈಗಾರಿಕಾ ಉತ್ಪನ್ನಗಳಿಗೆ ಬಾಡಿಗೆ ದರದಲ್ಲಿ ನೀಡಲಾಗುವುದು.

ಉತ್ಸವಕ್ಕೆ ಜಿಲ್ಲಾ ಕೈಗಾರಿಕಾ ಕೇಂದ್ರ 5 ಲಕ್ಷ ರೂ., ಜಿ.ಪಂ. 3 ಲಕ್ಷ ರೂ. ಹಾಗೂ ನಬಾರ್ಡ್‌ 50 ಸಾವಿರ ರೂ. ಅನುದಾನ ನೀಡುತ್ತದೆ. ಈ ಉತ್ಸವದಲ್ಲಿ ರಾಮನಗರ, ಮೈಸೂರು, ಚೆನ್ನಪಟ್ಟಣ, ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳ ಉತ್ಪನ್ನಗಳು ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತದೆ. ಉತ್ಸವಕ್ಕೆ ಸುಮಾರು 30 ರಿಂದ 40 ಸಾವಿರ ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಶ್ರೇಷ್ಠ ಉದ್ಯಮಿ, ವರ್ತಕ ಪ್ರಶಸ್ತಿ: ಆ. 25ರಂದು ಸಂಜೆ 5.30ಕ್ಕೆ ಶ್ರೇಷ್ಠ ಉದ್ಯಮಿ, ಶ್ರೇಷ್ಠ ವರ್ತಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸ್ಥಳೀಯ ಉದ್ಯಮಿ ಅಲಿರಝಾ ಎಂ. ಭಾವನಗರಿ, ಗಜೇಂದ್ರಗಡದ ಸ್ಟೋನ್‌ ಕ್ರಷರ್‌ ಉದ್ಯಮಿ ಹಾಗೂ ಶಾಸಕ ಕಳಕಪ್ಪ ಬಂಡಿ , ಅವರಿಗೆ ಶ್ರೇಷ್ಠ ಉದ್ಯಮಿ, ಶರಣು ವಿರೂಪಾಕ್ಷಪ್ಪ ಗದಗ (ಗದಗ), ಬಾಬುಲಾಲ ಜೈನ್‌ (ಮುಂಡರಗಿ), ವಿಜಯಕುಮಾರ ಮಾದಿನೂರ, (ನರಗುಂದ), ಶಿವಪ್ರಕಾಶ ಮಹಾಂತಶೆಟ್ಟರ (ಲಕ್ಷೆ ್ಮೕಶ್ವರ) ಅವರಿಗೆ ಶ್ರೇಷ್ಠ ವರ್ತಕ ಪ್ರಶಸ್ತಿಗಳನ್ನು ಕೇಂದ್ರದ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಲಾØದ ಜೋಶಿ, ಉದ್ಯಮಿ ಡಾ| ವಿಜಯ ಸಂಕೇಶ್ವರ, ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಸಿ.ಆರ್‌. ಜನಾರ್ದನ ಪ್ರದಾನ ಮಾಡಲಿದ್ದಾರೆ.

ಆ. 27 ರಂದು ಸಂಜೆ 5.30ಕ್ಕೆ ಶ್ರೇಷ್ಠ ಮಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಂ.ಬಿ. ಸುರಕೋಡ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಜಿ.ಪಂ. ಸಿಇಒ ಮಂಜುನಾಥ ಚವ್ಹಾಣ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಾಮನ್‌ ಜಗದೀಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಂ.ಬಿ. ಸುರಕೋಡ, ಉಪಾಧ್ಯಕ್ಷ ಅರವಿಂದ ಪಟೇಲ, ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ ಕೋ-ಚೇರಮನ್‌ ಜಯದೇವ ಮೆಣಸಗಿ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ವಿ. ಶಾನುಭೋಗರ, ಮಧುಸೂದನ ಪುಣೇಕರ ಮಸೇರಿ ಉಪಸ್ಥಿತರಿದ್ದರು.

ನೆರೆ ಸಂತ್ರಸ್ತರಿಗೆ ಪರಿಹಾರ
ಪ್ರವಾಹದ ನಿಮಿತ್ತ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟದ ಗದಗ ಉತ್ಸವದಲ್ಲಿ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ಮೊಟಕುಗೊಳಿಸಲಾಗಿದೆ. ಜೊತೆಗೆ ಉತ್ಸವದಿಂದ ಬಂದ ಲಾಭದಲ್ಲಿ ಕನಿಷ್ಠ ಒಂದು ಲಕ್ಷ ರೂ. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಲಾಗಿದೆ.
ಆನಂದ ಎಲ್. ಪೊತ್ನೀಸ್‌,
 ಚೇರಮನ್‌, ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ