ಅಕ್ಕಿಆಲೂರು ಜಾನುವಾರು ಮಾರುಕಟ್ಟೆ ಅಭಿವೃದ್ಧಿಗೆ ಕ್ರಮ

ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ 80 ಲಕ್ಷ ರೂ.ಗಳ ಕಾಂಕ್ರೀಟ್‌ ರಸ್ತೆ

Team Udayavani, Aug 29, 2019, 3:05 PM IST

29-Agust-29

ಹಾನಗಲ್ಲ: ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಸಿ.ಎಂ. ಉದಾಸಿ ಚಾಲನೆ ನೀಡಿದರು.

ಹಾನಗಲ್ಲ: ಹತ್ತಿ, ಶೇಂಗಾ, ಮೆಣಸಿನಕಾಯಿ ಹೊರತಾಗಿ ಇನ್ನುಳಿದ ಯಾವುದೇ ಕೃಷಿ ಉತ್ಪನ್ನಗಳು, ಆಹಾರ ಧಾನ್ಯಗಳು ಬರುವುದು ವಿರಳವಾಗುತ್ತಿದೆ. ಆದಾಗ್ಯೂ ಜಿಎಸ್‌ಟಿ ಜಾರಿ ಯಾದ ಮೇಲೆ ತೆರಿಗೆ ಪ್ರಮಾಣವೂ ಹೆಚ್ಚಾಗುತ್ತಿದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ 80 ಲಕ್ಷ ರೂ.ಗಳ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಹಾನಗಲ್ಲ ಕೃಷಿ ಉತ್ಪನ್ನ ಮಾರುಕಟ್ಟೆಗೆ ಯಾವುದೇ ಧಾನ್ಯಗಳು ಮಾರಾಟಕ್ಕೆ ಬರುತ್ತಿಲ್ಲ. ಸ್ಥಳೀಯ ವ್ಯಾಪಾರಸ್ಥರ ಮೂಲಕ ಖರೀದಿಗಳು ನಡೆಯುತ್ತಿವೆ. ಅವುಗಳ ಮೇಲಿನ ತೆರಿಗೆ ವಸೂಲಾತಿಗೆ ಎಪಿಎಂಸಿ ಅಧಿಕಾರಿಗಳು ತೀವ್ರ ಕ್ರಮ ಕೈಗೊಂಡರೆ ಸಂಸ್ಥೆಯ ಆದಾಯ ಇನ್ನಷ್ಟು ಹೆಚ್ಚಲಿದೆ ಎಂದರು.

ಹಾವೇರಿ ಜಾನುವಾರು ಮಾರುಕಟ್ಟೆಗಿಂತ ಹೆಚ್ಚು ವ್ಯವಹಾರ ಅಕ್ಕಿಆಲೂರಿನಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಅಕ್ಕಿಆಲೂರಿನ ಜಾನುವಾರು ಮಾರುಕಟ್ಟೆ ಅಭಿವೃದ್ಧಿಗಾಗಿ ಹಣದ ಲಭ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಜಾನುವಾರು ಮಾರುಕಟ್ಟೆಯಿಂದ ಆದಾಯ ನಿರೀಕ್ಷಿಸಲಾಗದು. ರೈತರ ಜಾನುವಾರು ಖರೀದಿ ವ್ಯವಹಾರಕ್ಕೆ ಸಹಾಯವಾಗಲೆಂದು ಈ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಸ್‌.ಅಕ್ಕಿವಳ್ಳಿ ಮಾತನಾಡಿ, 1998ರಲ್ಲಿ ಎಪಿಎಂಸಿ ಮಾರುಕಟ್ಟೆಯ ವಾರ್ಷಿಕ ಆದಾಯ ಕೇವಲ 3 ಲಕ್ಷದಷ್ಟಿತ್ತು. ಈಗ 3.50 ಕೋಟಿಗೂ ಹೆಚ್ಚಾಗಿದೆ. ಇತ್ತೀಚಿನ ಮಳೆ-ಪ್ರವಾಹದಿಂದಾಗಿ ರೈತರ ಹೊಲಗಳ ರಸ್ತೆಗಳು ಕೊಚ್ಚಿಹೋಗಿವೆ. ಸರ್ಕಾರ ಈ ರಸ್ತೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಬೇಕು ಎಂದು ಶಾಸಕರೆದುರು ಬೇಡಿಕೆಯಿಟ್ಟರು.

ಎಪಿಎಂಸಿ ಅಧ್ಯಕ್ಷ ಶೇಕಣ್ಣ ಮಹರಾಜಪೇಟ ಮಾತನಾಡಿ, ಅಕ್ಕಿಆಲೂರಿನ ಜಾನುವಾರು ಮಾರುಕಟ್ಟೆಗೆ ಎಲ್ಲ ಮೂಲ ಸೌಲಭ್ಯ ಕೈಗೊಳ್ಳಲು 15 ಕೋಟಿ ರೂ.ಗಳ ಅಗತ್ಯವಿದೆ. ಇದರೊಂದಿಗೆ ರೈತರ ವಿಶ್ರಾಂತಿ ಭವನ ನಿರ್ಮಾಣಕ್ಕೆ 5 ಕೋಟಿರೂ ಅಗತ್ಯವಿದೆ. ಇದಕ್ಕಾಗಿ ಸಂಸ್ಥೆಯಿಂದ 3 ಕೋಟಿ ರೂ.ಮೀಸಲಿಡಲಾಗಿದೆ. ಚಿಕ್ಕಾಂಶಿಹೊಸೂರ ಗ್ರಾಮದ ರೈತ ಸಂತೆ ಪ್ರಾಂಗಣದಲ್ಲಿ ರಸ್ತೆ ಕಾಮಗಾರಿಗೆ 1.70 ಕೋಟಿ ಅನುದಾನ ಬಿಡುಗಡೆಯಾಗಿದೆ. ಸದ್ಯ ಟೆಂಡರ್‌ ಹಂತದಲ್ಲಿದೆ. ಇನ್ನೂ ಪ್ರಮುಖ ಗ್ರಾಮಗಳಲ್ಲಿ ಸಂತೆ ಕಟ್ಟೆ ನಿರ್ಮಾಣ ಕೈಗೊಳ್ಳಬೇಕಿದೆ. ಸರ್ಕಾರದ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಎಪಿಎಂಸಿ ಸದಸ್ಯ ಶಿವಯೋಗಿ ವಡೆಯರ ಮಾತನಾಡಿದರು. ಉಪಾಧ್ಯಕ್ಷೆ ಸುಜಾತಾ ಪಸಾರದ, ಗೀತಾ ಕೋರಿ, ದಯಾನಂದ ನಾಗನೂರ, ನಾಗಪ್ಪ ಶಿವಣ್ಣನವರ, ರಾಮಪ್ಪ ಮಾದಪ್ಪನವರ, ಕೂಬೆಪ್ಪ ಲಮಾಣಿ, ಶಿದ್ದಪ್ಪ ಬಂಗಾರೇರ, ರಾಜಣ್ಣ ಪಟ್ಟಣದ, ಹನುಮಂತಪ್ಪ ಗಂಜೀಗಟ್ಟಿ, ಚಂದ್ರಶೇಖರ ಹೊಳಲದ ಇದ್ದರು. ಕಾರ್ಯದರ್ಶಿ ಬಸವರಾಜ ಪರಮಶೆಟ್ಟಿ ನಿರೂಪಿಸಿದರು.

ಟಾಪ್ ನ್ಯೂಸ್

ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ

ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ

10-15 ಜನ ಕಾಂಗ್ರೆಸ್‌ ತೊರೆಯಲಿದ್ದಾರೆ: ಆರ್‌.ಅಶೋಕ್‌

10-15 ಜನ ಕಾಂಗ್ರೆಸ್‌ ತೊರೆಯಲಿದ್ದಾರೆ: ಆರ್‌.ಅಶೋಕ್‌

ಪರ್ತ್‌ ಸ್ಕಾರ್ಚರ್ ಬಿಗ್‌ ಬಾಶ್‌ ಚಾಂಪಿಯನ್‌

ಪರ್ತ್‌ ಸ್ಕಾರ್ಚರ್ ಬಿಗ್‌ ಬಾಶ್‌ ಚಾಂಪಿಯನ್‌

ಟಿಕೆಟ್‌ ಯಂತ್ರ ಸ್ಫೋಟ: ಕಂಡಕ್ಟರ್‌ಗೆ ಗಾಯ

ಟಿಕೆಟ್‌ ಯಂತ್ರ ಸ್ಫೋಟ: ಕಂಡಕ್ಟರ್‌ಗೆ ಗಾಯ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ನಟಿ ಶ್ವೇತಾ ತಿವಾರಿ ವಿರುದ್ಧ ದೂರು

ಕಿರುತೆರೆ ನಟಿ ಶ್ವೇತಾ ತಿವಾರಿ ವಿರುದ್ಧ ಎಫ್​ಐಆರ್​ ದಾಖಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dds

ಸೊರಬ ಪುರಸಭೆ : ಪುನಃ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

chikkamagalore news

ಹುಲಿ ಗಣತಿಯಲ್ಲಿ ಕಾಫಿ ನಾಡಿಗೆ ಪ್ರಥಮ ಸ್ಥಾನ?

sagara news

ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಮನವಿ

chitradurga news

ಸುಶಿಕ್ಷಿತರಿಂದಲೇ ರಸ್ತೆ ಒತ್ತುವರಿ ಸರಿಯೇ?: ತಿಪ್ಪಾರೆಡ್ಡಿ

1-ddsfsdf

ನಾಗರ ಹಾವು ಮತ್ತು ನಾಯಿ ನಡುವೆ ಘೋರ ಕಾದಾಟ: ಎರಡೂ ಜೀವ ಅಂತ್ಯ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ

ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ

10-15 ಜನ ಕಾಂಗ್ರೆಸ್‌ ತೊರೆಯಲಿದ್ದಾರೆ: ಆರ್‌.ಅಶೋಕ್‌

10-15 ಜನ ಕಾಂಗ್ರೆಸ್‌ ತೊರೆಯಲಿದ್ದಾರೆ: ಆರ್‌.ಅಶೋಕ್‌

ಪರ್ತ್‌ ಸ್ಕಾರ್ಚರ್ ಬಿಗ್‌ ಬಾಶ್‌ ಚಾಂಪಿಯನ್‌

ಪರ್ತ್‌ ಸ್ಕಾರ್ಚರ್ ಬಿಗ್‌ ಬಾಶ್‌ ಚಾಂಪಿಯನ್‌

ಟಿಕೆಟ್‌ ಯಂತ್ರ ಸ್ಫೋಟ: ಕಂಡಕ್ಟರ್‌ಗೆ ಗಾಯ

ಟಿಕೆಟ್‌ ಯಂತ್ರ ಸ್ಫೋಟ: ಕಂಡಕ್ಟರ್‌ಗೆ ಗಾಯ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.