ಉತ್ಖನನದಲ್ಲಿ20 ವಿಗ್ರಹ ಪತ್ತೆ

ವಿಗ್ರಹಗಳ ಸಂರಕ್ಷಣೆ ಮಾಡಲು ಅಗತ್ಯ ಕ್ರಮ: ಪುರಾತತ್ವ ಅಧಿಕಾರಿ ಮೂರ್ತೆಶ್ವರಿ

Team Udayavani, Jul 8, 2019, 12:22 PM IST

ಹಳೇಬೀಡು ಸಮೀಪದ ಬಸದಿಹಳ್ಳಿ ಉತ್ಖನನ ಕಾರ್ಯವನ್ನು ಪರಿಶೀಲನೆ ನಡೆಸುತ್ತಿರುವ ಪುರಾತತ್ವ ಸಂರಕ್ಷಣಾ ಅಧೀಕ್ಷಕರಾದ ಮೂರ್ತೇಶ್ವರಿ .

ಹಳೇಬೀಡು: ಬಸದಿಹಳ್ಳಿಯಲ್ಲಿರುವ ಜೈನ ಬಸದಿ ಬಳಿ ಉತ್ಖನನ ಮಾಡುವಾಗ ಸುಮಾರು 20 ಕ್ಕೂ ಹೆಚ್ಚು ವಿಗ್ರಹಗಳು ದೊರೆತಿದ್ದು, ಇವುಗಳನ್ನು ವ್ಯವಸ್ಥಿತವಾಗಿ ಸಂರಕ್ಷಣೆ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಪುರಾತತ್ವ ಸಂರಕ್ಷಣಾ ಅಧೀಕ್ಷಕರಾದ ಮೂರ್ತೇಶ್ವರಿ ತಿಳಿಸಿದ್ದಾರೆ.

ಪಟ್ಟಣದ ಸಮೀಪದ ಬಸದಿಹಳ್ಳಿ ಬಳಿ ಇರುವ ಜೈನ ಬಸದಿಯ ಹಿಂಭಾಗದಲ್ಲಿ ಸತತ 10 ದಿನಗಳಿಂದಲೂ ಉತ್ಖನನ ಕಾರ್ಯ ಪರಿಶೀಲಿಸಿ ಮಾತನಾಡಿದರು.

ವೈಷ್ಣವ, ಜೈನರ ಪ್ರಮುಖ ಕೇಂದ್ರ ಸ್ಥಾನ: ವಿಶ್ವ ಭೂಪಟದಲ್ಲಿ ಹೆಸರು ಮಾಡಿರುವ ಹೊಯ್ಸಳರ ನಾಡು ಹಳೇಬೀಡು. ಇದು ವೈಷ್ಣವ ಮತ್ತು ಜೈನರ ಪ್ರಮುಖ ಕೇಂದ್ರ ಸ್ಥಾನ . ಹಳೇಬೀಡಿನ ಪಕ್ಕದಲ್ಲಿರುವ ಬಸದಿಹಳ್ಳಿ ಗ್ರಾಮ ಇಲ್ಲಿ ದೊರೆತಿರುವ ಪ್ರತಿಯೊಂದು ವಿಗ್ರಹಗಳು ನಯನ ಮನೋಹರವಾಗಿರುವುದು ವಿಶೇಷವಾಗಿದೆ. ಈ ವಿಶೇಷ ಸ್ಥಳದಲ್ಲಿ ಜೈನ ಧರ್ಮಕ್ಕೆ ಮತ್ತು ವೈಷ್ಣವ ಧಮಕ್ಕೆ ಸೇರಿದ ಸುಮಾರು 20 ಕ್ಕೂ ಹೆಚ್ಚು ವಿಗ್ರಹಗಳು ದೊರೆತಿದ್ದು, ಅವುಗಳನ್ನು ಸಂರಕ್ಷಣೆ ಮಾಡುವ ಕಾರ್ಯವನ್ನು ಸುಮಾರು 15 ರಿಂದ 20ಹೆಚ್ಚು ಮಂದಿ ಬಳಸಿಕೊಂಡು ವಿಗ್ರಹ ವಿರೂಪಗೊಳ್ಳದಂತೆ ನಿರಂತರವಾಗಿ ಉತVಲ ಮಾಡಲಾಗುತ್ತದೆ ಎಂದರು.

ಕೇಂದ್ರ ಪುರಾತ್ವ ಇಲಾಖೆ ಗಮನಕ್ಕೆ: ದ್ವಾರ ಮುದ್ರಕ್ಕೆ ಹೊಯ್ಸಳರು ಬರುವ ಮೊದಲು ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು ಆಡಳಿತ ನಡೆಸಿದ್ದಾರೆ. ಹೊಯ್ಸಳರ ಬಿಟ್ಟಿದೇವ (ವಿಷ್ಣುವರ್ಧನ) ನ ಕಾಲದವರೆಗೂ ಕಲ್ಯಾಣ ಚಾಲುಕ್ಯರ ಸಾಮಂತರಾಗಿದ್ದರು ಎಂದು ಇತಿಹಾಸದಲ್ಲಿ ತಿಳಿಸಲಾಗಿದೆ. ಹೀಗಾಗಿ ಈ ಸ್ಥಳದಲ್ಲಿ ಉತ್ಖನನ ಮಾಡಿದರೆ ಹಲವು ರಾಜ ಮನೆತನಗಳ ಆಡಳಿತ ಶೈಲಿ ಕಲೆ ವಾಸ್ತು ಶಿಲ್ಪ, ಶೀಕ್ಷಣ ಆರ್ಥಿಕ ವ್ಯವಸ್ಥೆ ಮತ್ತು ಅಂದಿನ ಜನಜೀವನದ ಬಗ್ಗೆ ಮಾಹಿತಿ ಕೂಡ ದೊರೆಯುವ ಸಾಧ್ಯತೆ ಇದೆ ಎಂದರು.

ಮ್ಯೂಸಿಯಂ ಆರಂಭ: ಇಲ್ಲಿಯ ಉತ್ಖನನ ಕಾರ್ಯದ ಬಗ್ಗೆ ಹಂತ ಹಂತವಾಗಿ ವಿವರಗಳನ್ನು ಪುರಾತತ್ವ ಇಲಾಖೆ ಗಮನಕ್ಕೆ ತರಲಾಗುತ್ತದೆ. ಸದ್ಯ ಈಗ ದೊರೆತಿರುವ ವಿಗ್ರಹಗಳಲ್ಲಿ ಜೈನ ದೇವಾಲಯದ ಹೆಬ್ಟಾಗಿನ ಅಂದರೆ ದ್ವಾರಬಾಗಿಲಿನ ಮೇಲ್ಭಾಗದಲ್ಲಿ ಸುಮಾರು ಆರು ಮಂದಿ ಜೈನ ತೀರ್ಥಂಕರರ ಸುಂದರ ಮೂರ್ತಿಯನ್ನು ದೊರೆತಿದ್ದು, ಅವುಗಳನ್ನು ಸದ್ಯದಲ್ಲಿಯೇ ಮ್ಯೂಸಿಯಂ ತೆರೆದು ಸಂರಕ್ಷಣೆ ಮಾಡಲು ಕೇಂದ್ರದ ಪುರಾತತ್ವ ಇಲಾಖೆ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಜೈನ ಸಮಾಧಿಗಳ ಕಣ್ಮರೆ: ವೃತ್ತ ಪ್ರಾಂಶುಪಾಲ ಡಾ. ಡಿ.ಜಿ. ಕೃಷ್ಣೇಗೌಡ ಮಾತನಾಡಿ, ಶತಮಾನಗಳ ಹಿಂದೆ ಮಣ್ಣಿನಲ್ಲಿ ಹುದುಗಿರುವ ಬಸದಿಗಳ ಸ್ಮಾರಕ ನಾಲ್ಕೈದು ಜೈನ ಬಸದಿಗಳಿರುವ ಸ್ಥಳ ಹೊಯ್ಸಳರ ಕಾಲದಲ್ಲಿ ವಿಶೇಷ ಸ್ಥಳವಾಗಿತ್ತು. ಬಾಲ ಚಂದ್ರ ಮುನಿ ಬಸದಿಗಳ ಸಮೀಪದಲ್ಲಿಯೇ ಸಮಾಧಿ ಮಾಡಲಾಗಿದೆ ಎಂಬುದರ ಬಗ್ಗೆ ಇದೇ ಬಸದಿ ಬಳಿಯಲ್ಲಿರುವ ಶಿಲಾ ಶಾಸನದಲ್ಲಿ ಉಲ್ಲೇಖ ಮಾಡಲಾಗಿದೆ. ಆದ್ದರಿಂದ ಜೈನ ಬಸದಿ ಸುತ್ತಮುತ್ತಲು ಉತ್ಖನನ ಮಾಡಿ ಶೀಘ್ರದಲ್ಲಿ ಅವಶೇಷಗಳು, ಜೈನ ಬಸದಿಗಳು ಮತ್ತು ದೇವಾಲಯ ಗಳನ್ನು ಸಂರಕ್ಷಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ