ಒಂದೇ ದಿನಕೆ 250 ಕೇಸ್‌: 1.25 ಲಕ್ಷ ರೂ. ದಂಡ

Team Udayavani, Oct 18, 2021, 2:29 PM IST

250 cases in a single day: Rs 1.25 lakh Fine

ಚನ್ನರಾಯಪಟ್ಟಣ: ಪಟ್ಟಣದಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದೆ ವಾಹನ ಸಂಚಾರ ಮಾಡುತ್ತಿದ್ದು 250 ಮಂದಿ ಬೈಕ್‌ ಚಾಲಕರಿಂದ ಸುಮಾರು 1.25 ಲಕ್ಷ ರೂ. ದಂಡವನ್ನು ಸಂಚಾರಿ ಪೊಲೀಸರು ವಸೂಲಿ ಮಾಡುವ ಮೂಲಕ ಇನ್ನು ಮುಂದೆ ಪಟ್ಟಣದಲ್ಲಿ ಹೆಲ್ಮಟ್‌ ಕಡ್ಡಾಯ ಮಾಡಿದ್ದಾರೆ.

ಪಟ್ಟಣದ ಸಂಚಾರಿ ಪೊಲೀಸರ ನಾಲ್ಕು ತಂಡವು ಏಕಕಾಲದಲ್ಲಿ ರಸ್ತೆಗೆ ಇಳಿದಿದ್ದು ನವೋದಯ ವೃತ್ತ, ಶ್ರೀಕಂಠಯ್ಯವೃತ್ತ, ಮೈಸೂರು ರಸ್ತೆ, ಹಳೆಬಸ್‌ ನಿಲ್ದಾಣದಲ್ಲಿ ಹೆಲ್ಮೆಟ್‌ ಧರಿಸದೆ ಬೈಕ್‌ ಚಾಲನೆ ಮಾಡುವವರ ತಡೆದು ಒರ್ವ ಚಾಲಕನಿಗೆ 500 ರೂ. ದಂಡ ಹಾಕಿದಲ್ಲದೆ ಬೈಕ್‌ ದಾಖಲಾತಿ, ಚಾಲನಾ ಪರವಾನಗಿ, ವಿಮೆ ಸೇರಿದಂತೆ ಇತರ ತಪಾಸಣೆಗಳನ್ನು ಮುಂದಿನ ದಿವಸಗಳಲ್ಲಿ ಮಾಡುವ ಮೂಲಕ ಹೆಚ್ಚುವರಿ ದಂಡ ಹಾಕಲಾಗುವುದು ಎಂದು ಎಚ್ಚರಿಸಿದರು.

ಪ್ರಭಾವಿಗಳಿಗೆ ಮೊರೆ: ನವೋದಯ ವೃತ್ತದಲ್ಲಿ ಬೈಕ್‌ ತಡೆದು ಹೆಲ್ಮೆಟ್‌ ಧರಿಸದ ಹಿನ್ನೆಲೆಯಲ್ಲಿ 500 ರೂ. ದಂಡ ಕಟ್ಟುವಂತೆ ಸಂಚಾರಿ ಠಾಣೆ ಪಿಎಸ್‌ಐ ಬ್ಯಾಟರಾಯಿಗೌ ಡರಿಗೆ ತಿಳಿಸಿದಾಗ ಆನೇಕರೆ ಗ್ರಾಮದ ವ್ಯಕ್ತಿಯೋರ್ವ ನಾನು ದಂಡ ನೀಡುವುದಿಲ್ಲ ಎಂದು ಕೂಡಲೆ ಮಾಜಿ ಮಂತ್ರಿ ರೇವಣ್ಣರ ಪತ್ನಿ ಭವಾನಿ ರೇವಣ್ಣ ಅವರಿಗೆ ದೂರವಾಣಿ ಕರೆ ಮಾಡಿ ಪೋನ್‌ ಪಿಎಸ್‌ಐಗೆ ಪೋಸ್‌ ನೀಡಿದರು. ಪೋನಿನಲ್ಲಿ ಮತನಾಡಿದ ಪಿಎಸ್‌ಐ ಮೇಡಂ ಇವರ ಬೈಕ್‌ ವಿಮೆ ಇಲ್ಲ, ರಸ್ತೆ ಸಂಚಾರಿ ನಿಮಯ ಉಲ್ಲಂಘನೆ ಮಾಡಿ ದ್ದಾರೆ. ಇನ್ನು ಹೆಲ್ಮೆಟ್‌ ಧರಿಸಿಲ್ಲ ಒಟ್ಟಾರೆಗಾಗಿ 3 ಸಾವಿರ ದಂಡ ಕಟ್ಟಬೇಕು ಎಂದು ಪೋನ್‌ ಕರೆ ಕಟ್ಟು ಮಾಡಿದರು.

ಇದನ್ನೂ ಓದಿ:- ಹಿಂದೂ ಜೂನಿಯರ್‌ ಕಾಲೇಜು ಶಿರ್ವ: ಜೇಸಿಐ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ದಂಡ ಪಾವತಿ: ಈ ವೇಳೆ ಬೈಕ್‌ ಚಾಲಕ ಹಾಗೂ ಪೊಲೀಸರ ನಡುವೆ ಮಾತಿಗೆ ಮಾತು ಬೆಳೆಯಿತು. ನೀವು ನ್ಯಾಯಾಲಯಕ್ಕೆ ತೆರಳಿ ದಂಡ ಕಟ್ಟಿ ಬಂದು ನಿಮ್ಮ ಬೈಕ್‌ ಪಡೆದುಕೊಂಡು ಹೋಗಿ ಅಲ್ಲಿಯವರೆಗೆ ಠಾಣೆಯಲ್ಲಿ ನಿಮ್ಮ ಬೈಕ್‌ ಇರುತ್ತದೆ. ಎಂದಾಗ ಆತ ಸ್ಥಳದಲ್ಲಿ ದಂಡ ನೀಡಿ ತಮ್ಮ ಬೈಕ್‌ ಪಡೆದುಕೊಂಡು ಗ್ರಾಮಕ್ಕೆ ತೆರಳಿದರು.

ಸಂಚಾರಿ ಠಾಣೆ ಎಎಸ್‌ಐಗಳಾದ ಪ್ರೇಮರಾಜ್‌, ರತ್ನಕುಮಾರ್‌, ಶ್ರೀನಿವಾಸಮೂರ್ತಿ ತಂಡಗಳು ಕಾರ್ಯಚರಣೆ ಮಾಡಿದ್ದು, ಸಾಕಷ್ಟು ಮಂದಿಗೆ ದಂಡ ಹಾಕಿದ್ದಾರೆ. ಈ ವೇಳೆ ಪಿಎಸ್‌ಐ ಬ್ಯಾಟರಾಯಗೌಡ ಮಾತನಾಡಿ, ನಾವು ಏಕಾಏಕಿ ದಂಡ ಹಾಕಲು ಮುಂದಾಗುತ್ತಿಲ್ಲ, ಕಳೆದ 15 ದಿವಸಗಳಿಂದ ನಿರಂತರವಾಗಿ ಪಟ್ಟಣದ ಪ್ರತಿ ವಾರ್ಡಿನಲ್ಲಿ ಆಟೋ ಪ್ರಚಾರ ಮಾಡಿಸಿದ್ದೇವೆ, ಪಟ್ಟಣದ ಪ್ರತಿ ವೃತ್ತದಲ್ಲಿ ಮೈಕ್‌ ಮೂಲಕ ದಿನದ 24 ತಾಸು ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ಹೇಳಿದರು.

ಏಕಾಏಕಿ ದಂಡ ವಿಧಿಸುತ್ತಿಲ್ಲ-  ಸಾಕಷ್ಟು ದಿವಸ ಕಾಲಾವಕಾಶ ನೀಡಲಾಗಿದ್ದು ಜಾಗೃತಿ ಮೂಡಿಸಿದ್ದರೂ ಬೈಕ್‌ ಸವಾರರು ಹೆಲ್ಮಟ್‌ ಧರಿಸದ ಹಿನ್ನೆಲೆಯಲ್ಲಿ ದಂಡ ಹಾಕಲು ಮುಂದಾಗುತ್ತಿದ್ದೇವೆ ಹೊರತು ಏಕಾಏಕಿ ದಂಡ ವಿಧಿಸುತ್ತಿಲ್ಲ, ಒಂದು ದಿವಸಕ್ಕೆ ಸೀಮಿತವಾಗದೆ ನಿರಂತರವಾಗಿ ದಂಡ ಹಾಕಲಾಗುವುದು. ತಾಲೂಕಿನ ಪ್ರತಿಯೋರ್ವ ಬೈಕ್‌ ಸವಾರ ಹೆಲ್ಮಟ್‌ ಧರಿಸಿ ಬೈಕ್‌ ಚಾಲನೆ ಮಾಡುವುದರಿಂದ ಅಪಘಾತ ತಡೆಯಬಹುದು ಎಂದು ಪಿಎಸ್‌ಐ ಬ್ಯಾಟರಾಯಗೌಡ ತಿಳಿಸಿದರು.

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.