ಹೊಳೆ ನರಸೀಪುರದಲ್ಲಿ ಶೇ.48 ಕೊಳಚೆ ಪ್ರದೇಶ

Team Udayavani, Nov 6, 2019, 3:00 AM IST

ಹೊಳೆನರಸೀಪುರ: ಪಟ್ಟಣದಲ್ಲಿನ ಜನಸಂಖ್ಯಾವಾರು ಲೆಕ್ಕಾಚಾರದಲ್ಲಿ ಶೇ.48 ರಷ್ಟು ಮಂದಿ ಕೊಳಚೆ ಪ್ರದೇಶದಲ್ಲಿ ವಾಸವಾಗಿದೆ ಎಂಬುದು ತನಿಖಾ ವರದಿಯಿಂದ ವ್ಯಕ್ತವಾಗಿದೆ ಎಂದು ಬೆಂಗಳೂರಿನ ಎಸ್ಟಿಇಎಂ ಸಂಸ್ಥೆಯ ಮುಖ್ಯಸ್ಥರಾದ ಸ್ವಪ್ನ ನುಡಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಒಂದು ದಿನದ ಸ್ವತ್ಛತಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಪ್ರಸ್ತುತ 20 ಕೊಳಚೆ ಪ್ರದೇಶಗಗಳಿವೆ. ಈ ಪ್ರದೇಶಗಳಿಗೆ ಪುರಸಭೆಯಿಂದ ಅಗತ್ಯ ಮೂಲ ಸೌಕರ್ಯ ಕಲ್ಪಿಸಿದ ನಂತರ ನಂತರ ಕೊಳಚೆ ಪ್ರದೇಶ ಪಟ್ಟಿಯಿಂದ ತಗೆದು ಹಾಕದ ಪರಿಣಾಮ ಈಗಲೂ ದಾಖಲೆಗಳಲ್ಲಿ ಕೊಳಚೆ ಪ್ರದೇಶ ಎಂದೇ ಮುಂದುವರೆದಿದೆ ಎಂದು ವಿವರಿಸಿದರು.

ನೈರ್ಮಲ್ಯ ಯೋಜನೆ ನಕ್ಷೆ ಸಿದ್ಧ: ಹೊಳೆನರಸೀಪುರ ಪಟ್ಟಣಕ್ಕೆ ಸ್ವತ್ಛ ಭಾರತ ಯೋಜನೆಯಲ್ಲಿ ನಗರ ನೈರ್ಮಲ್ಯ ಯೋಜನೆ ನಕ್ಷೆ ಸಿದ್ಧಪಡಿಸಲಾಗಿದೆ. ಮುಂದಿನ 20 ವರ್ಷಗಳಲ್ಲಿ ಪಟ್ಟಣಕ್ಕೆ ಬೇಕಾದ ಸವಲತ್ತುಗಳನ್ನು ಯಾವ ರೀತಿ ಅನುಸರಿಸಬೇಕೆಂಬ ವರದಿಯನ್ನು ತಾವು ಸಿದ್ಧಪಡಿಸಿದ್ದೇವೆ. ಆದರೆ ಈ ಯೋಜನೆಯೆ ಅಂತಿಮವಲ್ಲ. ನಾವು ಪ್ರಸ್ತುತ ಪಡಿಸುತ್ತಿರುವ ಯೋಜನೆಯಲ್ಲಿ ಮತ್ತಷ್ಟು ಸೇರ್ಪಡೆಗೆ ಅವಕಾಶವಿದೆ ಎಂದರು.

ನೈರ್ಮಲ್ಯ ಯೋಜನೆ: 2011 ಜನ ಸಂಖ್ಯಾ ಅಧರಿಸಿದಂತೆ ಪಟ್ಟಣದಲ್ಲಿ 30 ಸಾವಿರ ಜನಸಂಖ್ಯೆ ಇದೆ ಆದರೆ 2019 ಕ್ಕೆ ಅಂದಾಜು 35 ಸಾವಿರ ಆಗಿರಬಹುದು. ಅದರಂತೆ ನಾವುಗಳು ಬರುವ 2040ರವೇಳೆಗೆ 48 ಸಾವಿರದಿಂದ 50 ಸಾವಿರಕ್ಕೆ ಬರಬಹುದೆಂಬ ಅಂದಾಜಿನ ಮೇಲೆ ಪಟ್ಟಣಕ್ಕೆ ಅವಶ್ಯವಾಗಿ ಬೇಕಾಗಿರುವ ನೈರ್ಮಲ್ಯ ಯೋಜನೆ ರೂಪಿಸುತ್ತಿರುವುದಾಗಿ ತಿಳಿಸಿದರು.

ನೀರಿನ ಸಮಸ್ಯೆಯಿಲ್ಲ: ನಿಮ್ಮ ನಗರಕ್ಕೆ ಸನಿಹದಲ್ಲಿ ನದಿ ಹರಿಯುತ್ತಿರುವುದರಿಂದ ನೀರಿನ ಸಮಸ್ಯೆ ನಿಮ್ಮ ನಗರದ ಜನತೆಗೆ ಅಷ್ಟಾಗಿ ಇಲ್ಲ ಎಂಬುದು ತಾವು ಪಟ್ಟಣ ಪ್ರದಕ್ಷಿಣೆ ಹಾಕಿ ಮಾಹಿತಿ ಸಂಗ್ರಹಿಸುವಾಗಿ ಬಂದ ಮಾಹಿತಿಯಾಗಿದೆ.

ಶೌಚಾಲಯ ನಿರ್ವಹಣೆ: ಪ್ರಸ್ತುತ ಪಟ್ಟಣದ ಐದು ಕಡೆ ಸಾರ್ವಜನಿಕ ಶೌಚಾಲಯಗಳು ಅದರಲ್ಲಿ ಒಂದೆರಡು ಸರಿಯಾಗಿ ಉಪಯೋಗಿಸುತ್ತಿಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ ಶೌಚಾಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಅವೈಜ್ಞಾನಿಕ ಚರಂಡಿ ವ್ಯವಸ್ಥೆ: ಪುರಸಭೆ ನೈರ್ಮಲ್ಯ ಸಮಿತಿ ಸದಸ್ಯ ಜೈಪ್ರಕಾಶ್‌ ಮಾತನಾಡಿ, ಪ್ರಸ್ತುತ ಪಟ್ಟಣರುವ ಬಾಕ್ಸ್‌ ಚರಂಡಿಗಳು ಮತ್ತು ಒಳಚರಂಡಿಗಳು ಅವೈಜ್ಞಾನಿಕವಾಗಿ ಇರುವುದರಿಂದ ಅನಾರೋಗ್ಯ ತಾಂಡವವಾಡುತ್ತಿದೆ. ಮೊದಲು ಇರುವ ಸಮಸ್ಯೆಯನ್ನು ಪರಿಹರಿಸಿದ್ದಲ್ಲಿ ಈಗ ತಾವು ಹೇಳುತ್ತಿರುವ ಮಾಹಿತಿಗಳು ಸರಾಗವಾಗಿ ಅನುಷ್ಠಾನಕ್ಕೆ ತರಲು ಸಾಧ್ಯ ಎಂದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ