60ದೇವಾಲಯ ಜೀರ್ಣೋದ್ಧಾರ
ನೀರಾವರಿ ಇಲಾಖೆ ಹಣದಲ್ಲಿದೇಗುಲಗಳ ಅಭಿವೃದ್ಧಿ: ಶಾಸಕ ಎಚ್.ಡಿ.ರೇವಣ್ಣ
Team Udayavani, Nov 25, 2020, 1:14 PM IST
ಹೊಳೆನರಸೀಪುರ: ತಾಲೂಕಿನ ಗ್ರಾಮೀಣ ಪ್ರದೇಶದ 60ಕ್ಕೂ ಹೆಚ್ಚು ದೇಗುಲ ಪುನರುಜ್ಜೀವನಕ್ಕೆ ನೀರಾವರಿ ಇಲಾಖೆಯಿಂದ ಹಣ ನೀಡಲಾಗಿದೆ ಎಂದು ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ನುಡಿದರು.
ತಾಲೂಕಿನ ಹಳೇಕೋಟೆ ಹೋಬಳಿ ಚನ್ನಾಪುರ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿ ದೇವಾಲಯ ಉದ್ಘಾಟನೆ ಹಾಗೂ ದೇವತಾ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಚನ್ನಾಪುರ ತಮ್ಮ ತಂದೆಯವರ ರಾಜಕೀಯ ಜೀವನಕ್ಕೆ ಹೆಚ್ಚು ಒತ್ತಾಸೆ ನೀಡಿದ ಗ್ರಾಮ. ಅದೇ ರೀತಿ ತಮಗೂ 30 ವರ್ಷಗಳಿಂದ ಒತ್ತಾಸೆ ನೀಡುತ್ತಿದೆ ಎಂದು ತಿಳಿಸಿದರು.
ಇತರೆ ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಇಲಾಖೆಯ ಅನುದಾನದಲಿ ದೇವಾ ಲಯಗಳ ಅಭಿವೃದ್ಧಿ ಆಗಿಲ್ಲ, ಆ ಕಾರ್ಯ ಹೊಳೆನರಸೀಪುರದಲ್ಲಿ ನೆರವೇರಿದೆ. ತಾವು, ತಮ್ಮ ಕುಟುಂಬ ಜಿಲ್ಲೆಯಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದೆ. ಅದರಲ್ಲೂ ಪಟ್ಟಣದಲ್ಲಿರುವ ಕಾಲೇಜುಗಳು, ಬೇರೆ ದೊಡ್ಡ ನಗರಗಳಲ್ಲೂ ಇರಲು ಸಾಧ್ಯವಿಲ್ಲ, ಅಂತಹ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುವ ನೆಪದಲ್ಲಿ ಲಕ್ಷಾಂತರ ರೂ. ಸುಲಿಗೆ ಮಾಡುತ್ತಿವೆ. ಇದನ್ನು ಅರಿತ ತಾವು , ಸರ್ಕಾರಿ ಕಾಲೇಜುಗಳನ್ನು ತಂದು, ಗ್ರಾಮೀಣಪ್ರದೇಶದ ಶ್ರೀಸಾಮಾನ್ಯನ ಮಕ್ಕಳು ಸಹ ಉನ್ನತ ವ್ಯಾಸಂಗ ಮಾಡಿ, ಅವರಿಗೂ ಸೂಕ್ತ ಸ್ಥಾನಮಾನ ಸಿಗಲಿ ಎಂಬುದು ತಮ್ಮ ಆಶಯ ತಮ್ಮದಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಗೋವಾದಲ್ಲಿ ಸೋನಿಯಾ ಗಾಂಧಿ ಸೈಕ್ಲಿಂಗ್: ವಿಡಿಯೋ ವೈರಲ್
ಶ್ರೀಗುರು ಸಿದ್ದರಾಮೇಶ್ವರ, ಶ್ರೀರಾಮಯೋಗೇಶ್ವರ, ಬೇಬಿ ಮಠದ ಮಲ್ಲಿಕಾರ್ಜನ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಪೂಜಾ ಕಾರ್ಯದ ನೇತೃತ್ವವನ್ನು ತೇಜೂರು ಸಿದ್ದ ರಾಮೇಶ್ವರ ಶಿವಯೋಗಿ ಮಠದ ಕಲ್ಯಾಣ ಸ್ವಾಮೀಜಿ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಎಚ್.ಎನ್. ದೇವೇಗೌಡ, ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್, ತಾಲೂಕು ಪಂಚಾಯಿತಿ ಇಒ ಕೆ.ಯೋಗೇಶ್, ಹಳ್ಳಿಮೈಸೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎಸ್. ಪ್ರಭುಶಂಕರ್, ಗ್ರಾಮ¨ ಮುಖಂಡ, ಗ್ರಾಪಂ ಸದಸ್ಯ ವಿರೂಪಾಕ್ಷ, ಸಿ.ಎನ್.ಬಸಪ್ಪ, ವಿಶ್ವನಾಥ್, ಗುರುರಾಜ್ ಮತ್ತಿತರರು ಭಾಗಹಿಸಿದ್ದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ ಅವರು ಆಶೀರ್ವಚನನೀಡಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.
ಭಕ್ತರಿಗೆ ತೊಂದರೆ ಆಗದಂತೆ ಪೂಜೆಕಾರ್ಯ ಮುಂದುವರಿಸಿ
ಮುಜರಾಯಿ ದೇವಾಲಯಗಳ ಅರ್ಚಕರು ಭಕ್ತರಿಗೆ ತೊಂದರೆ ಆಗದಂತೆ ತಮ್ಮ ದೈನಂದಿನ ಕರ್ತವ್ಯ ನಡೆಸಿಕೊಂಡು ಹೋಗಬೇಕೆಂದು ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ನುಡಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ತಾಲೂಕಿನ 188 ದೇವಾಲಯಗಳ ಅರ್ಚಕರಿಗೆ 36 ಲಕ್ಷ ರೂ. ತಸ್ಥಿಕ್ ಹಣ ವಿತರಣೆ ಮಾಡಿ ಮಾತನಾಡಿದ ಅವರು,ಅರ್ಚಕರು ಭಕ್ತರಿಗೆ ತೊಂದರೆ ಆಗದಂತೆ ಉತ್ತಮವಾಗಿ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್, ಗ್ರೇಡ್-2 ತಹಶೀಲ್ದಾರ್ ರವಿ, ಕಂದಾಯ ಮತ್ತು ಮುಜರಾಯಿ ಇಲಾಖೆ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭದ್ರಾವತಿ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣನೆ; ತೀವ್ರವಾಗಿ ಖಂಡಿಸುತ್ತೇನೆ ಎಂದ ಸಿದ್ದು
ವಿದೇಶದಲ್ಲಿ ಬಸವಣ್ಣನಿಂದ ಗೌರವ, ಕಾಲ್ಪನಿಕ ರಾಮನಿಂದಲ್ಲ: ಶ್ರೀ ನಿಜಗುಣಾನಂದ ಸ್ವಾಮೀಜಿ
HKE- HKCCI ಗೆ ದಿಢೀರ್ ಚುನಾವಣೆ: ಮತದಾರರಲ್ಲಿ ಸಂಚಲನ
ಬೆಳಗಾವಿ : ಬಿಜೆಪಿ ಚಾಣಕ್ಯ ಅಮಿತ್ ಶಾಗೆ ಬೆಳ್ಳಿ ಗದೆ ನೀಡಿ, ರುದ್ರಾಕ್ಷಿ ಹಾರ ಹಾಕಿ ಸ್ವಾಗತ
ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರೋ ಗೊತ್ತಿಲ್ಲ, ಭವಿಷ್ಯ ಮಾತ್ರ ಸುಳ್ಳಾಗುತ್ತಿದೆ;ಈಶ್ವರಪ್ಪ
MUST WATCH
KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani
Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??
ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ
ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು
ಹೊಸ ಸೇರ್ಪಡೆ
ಖ್ಯಾತ ಹಿಂದೂಸ್ತಾನಿ ಗಾಯಕ, ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾಖಾನ್ ವಿಧಿವಶ
ಭದ್ರಾವತಿ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣನೆ; ತೀವ್ರವಾಗಿ ಖಂಡಿಸುತ್ತೇನೆ ಎಂದ ಸಿದ್ದು
ವಿದೇಶದಲ್ಲಿ ಬಸವಣ್ಣನಿಂದ ಗೌರವ, ಕಾಲ್ಪನಿಕ ರಾಮನಿಂದಲ್ಲ: ಶ್ರೀ ನಿಜಗುಣಾನಂದ ಸ್ವಾಮೀಜಿ
ಕೋವಿಡ್ ವಾಸಿಯಾಗಬಲ್ಲ ಸೋಂಕು
ಬಂಟ್ವಾಳ: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸ್ ದಾಳಿ; ಆರೋಪಿಗಳು ವಶಕ್ಕೆ