300 ಚೀಲ ಅಕ್ರಮ ರಾಗಿ ಸಾಗಿಸುತ್ತಿದ್ದ ಲಾರಿ ವಶ

Team Udayavani, Sep 21, 2022, 7:18 PM IST

300 ಚೀಲ ಅಕ್ರಮ ರಾಗಿ ಸಾಗಿಸುತ್ತಿದ್ದ ಲಾರಿ ವಶ

ಹಾಸನ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಕಾರ್ಡ್‌ದಾರರಿಗೆ ವಿತರಣೆ ಮಾಡಬೇಕಿದ್ದು ಎನ್ನಲಾದ 300 ಚೀಲ ರಾಗಿಯ ಅ ಕ್ರಮ ಸಾಗಣೆಯನ್ನು ಆಮ್‌ ಆದ್ಮಿ ಪಕ್ಷದ ಜಿಲ್ಲಾ ಮುಖಂಡರು ಪತ್ತೆ ಹಚ್ಚಿ ಆಹಾರ ಮತ್ತು ಸಾರ್ವಜನಿಕ ಪೂರೈಕೆ ಇಲಾಖೆ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.

ಪಡಿತರ ವ್ಯವಸ್ಥೆಯಡಿ ಕಾರ್ಡುದಾರರಿಗೆ ಹಂಚಿಕೆ ಯಾಗಬೇಕಾಗಿದ್ದ ಆಹಾರ ಧಾನ್ಯ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲವಿದೆ ಎಂಬ ಮಾಹಿತಿ ಪಡೆದ ಆಮ್‌ಆದ್ಮಿ ಪಕ್ಷದ ಜಿಲ್ಲಾ ಮುಖಂಡರು ರಹಸ್ಯ ಕಾರ್ಯಾಚರಣೆ ನಡೆಸಿ ಹಾಸನಕ್ಕೆ 300ಕ್ಕೂ ಹೆಚ್ಚು ಚೀಲ ರಾಗಿಯನ್ನು ಹೊತ್ತು ತಂದ ಲಾರಿಯನ್ನು ಹಾಸನದ ಡೇರಿ ವೃತ್ತದ ಬಳಿ ತಡೆದು ಪರೀಕ್ಷಿಸಿದಾಗ ಭಾರತೀಯ ಆಹಾರ ನಿಗದ ಮುದ್ರೆಗಳಿದ್ದ ಚೀಲಗಳು ಪತ್ತೆಯಾದವು. ಆನಂತರ ಪೊಲೀಸರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರನ್ನು ಸ್ಥಳಕ್ಕೆ ಕರೆಸಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಗಿ ತುಂಬಿದ ಲಾರಿಯನ್ನು ಅಧಿಕಾರಿಗಳ ವಶಕ್ಕೆ ನೀಡಿದರು.

ಎಎಪಿ ಚುಟುಕು ಕಾರ್ಯಾಚರಣೆ: ಸ್ಥಳಕ್ಕೆ ಹೋದ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಆಮ್‌ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಶಿವಕುಮಾರ್‌ ಅವರು, ಭಾರತೀಯ ಆಹಾರ ನಿಗಮದಿಂದ ಪಡಿತರ ವ್ಯವಸ್ಥೆ ಯಡಿ ವಿತರಣೆಯಾಗಬೇಕಾಗಿದ್ದ ಆಹಾರ ಧಾನ್ಯಗಳು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದ್ದು, ಅದ ಕ್ಕೊಂದು ದೊಡ್ಡ ಜಾಲವೇ ಇದೆ ಎಂಬ ಮಾಹಿತಿ ಲಭ್ಯ ವಾಯಿತು. ಪಡಿತರ ಕಾರ್ಡುದಾರರಿಗೆ 4 ಕೆ.ಜಿ. ರಾಗಿ ವಿತರಿಸಬೇಕಾಗಿದ್ದರೂ ಒಂದು ಕೆ.ಜಿ. ಮಾತ್ರ ವಿತರಣೆ ಮಾಡಿ ಉಳಿದ ರಾಗಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಕುಟುಕು ಕಾರ್ಯಾಚರಣೆ ನಡೆಸಲು ಮುಂದಾದೆವು ಎಂದು ವಿವರ ನೀಡಿದರು.

ಆರೋಪಿಯೊಂದಿಗೆ ರಾಗಿ ಖರೀದಿ ಡೀಲ್‌: ಹಾಸನಕ್ಕೂ ಪಡಿತರ ವ್ಯವಸ್ಥೆಯಡಿ ಹಂಚಿಕೆಯಾಗ ಬೇಕಾದ ಆಹಾರ ಧಾನ್ಯ ಅಕ್ರಮವಾಗಿ ಪೂರೈಕೆಯಾ ಗುತ್ತಿದೆ ಎಂದು, ಕೋಲಾರ ಜಿಲ್ಲೆ ಬಂಗಾರಪೇಟೆಯ ಮೂಲದ ಹರೀಶ್‌ ಎಂಬ ವರ್ತಕ ಪೂರೈಕೆ ಮಾಡು ತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿತು. ಹಾಸನದ ವರ್ತಕರು ಎಂದು ಹರೀಶ್‌ಗೆ ಫೋನ್‌ ಮಾಡಿ ನಮಗೆ 100ಟನ್‌ ರಾಗಿ ಬೇಕು ಎಂದು ಕೇಳಿದೆವು. ಪೂರೈಕೆ ಮಾಡುವು ದಾಗಿ ಒಪ್ಪಿಕೊಂಡ ಹರೀಶ್‌ ಭಾರತೀಯ ಆಹಾರ ನಿಗಮದ ಮುದ್ರೆಯಿರುವ ಚೀಲಗಳಲ್ಲಿಯೇ ರಾಗಿ ಪೂರೈಕೆಯಾಗಲಿದೆ. ಕ್ವಿಂಟಲ್‌ಗೆ 1850 ರೂ. ದರದಲ್ಲಿ ಮೊದಲ ಕಂತಿನಲ್ಲಿ 30 ಟನ್‌ ಕಳುಹಿಸುವುದಾಗಿ ಹೇಳಿದ ಹರೀಶ್‌ಗೆ ರಾಗಿ ಪೂರೈಕೆಯಾದ ತಕ್ಷಣ ಲಾರಿ ಚಾಲಕನ ಮೂಲಕವೇ ಹಣ ಕಳುಹಿಸುವುದಾಗಿ ನಂಬಿಸಿದೆವು. ಅದರಂತೆ, ಮಂಗಳವಾರ ಒಂದು ಲಾರಿ ಲೋಡ್‌ ರಾಗಿ ಹಾಸನಕ್ಕೆ ಬಂದಿದೆ. ಆ ಲಾರಿ ಯನ್ನು ಹಿಡಿದು ಅಧಿಕಾರಿಗಳಿಗೆ ಒಪ್ಪಿಸಿದ್ದೇವೆ. ಈ ಕಾರ್ಯಾಚರಣೆಯಲ್ಲಿ ವರ್ತಕ ಹರೀಶ್‌ನೊಂದಿಗೆ ನಡೆಸಿದ ಸಂಭಾಷಣೆ ಆಡಿಯೋ ರೆಕಾರ್ಡ್‌ ಆಗಿದೆ ಎಂದು ಶಿವಕುಮಾರ್‌ ಅವರು ತಿಳಿಸಿದರು.

ಅಕ್ಕಿ ಮಾರಾಟದ ಶಂಕೆ: ಪಡಿತರ ಕಾರ್ಡುದಾರರಿಗೆ ಹಂಚಿಕೆಯಾಗಬೇಕಾಗಿದ್ದ ರಾಗಿಯು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬುದಕ್ಕೆ ಇದೊಂದು ಉದಾ ಹರಣೆ. ರಾಗಿ ಯಂತೆಯೇ ಅಕ್ಕಿಯೂ ಮಾರಾಟವಾ ಗುತ್ತಿರಬಹುದು. ಈ ಅಕ್ರಮದಲ್ಲಿ ಉಗ್ರಾಣ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು, ಪಡಿತರ ಸಾಗಾ ಣೆಯ ಗುತ್ತಿಗೆದಾರರು, ರಾಜಕಾರಣಿ ಗಳು ಭಾಗಿಯಾಗಿರುವ ಶಂಕೆಯಿದೆ. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತವೂ ಇಂತಹ ಅಕ್ರಮಗಳಿಗೆ ಕಾರಣವಾಗಿದೆ ಎಂದು ಆಮ್‌ ಆದ್ಮಿ ಪಕ್ಷದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಶಿವ ಕುಮಾರ್‌ ಅವರು ಆರೋಪಿಸಿದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌, ಮುಖಂಡ ಚಂದ್ರಶೇಖರ್‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಾಧ್ಯಮದವರಿಗೂ ಆಮಿಷ: ಆಮ್‌ಆದ್ಮಿ ಪಕ್ಷದ ಮುಖಂಡರು ಅಕ್ರಮವಾಗಿ ರಾಗಿ ಸಾಗಾಣೆ ಮಾಡುತ್ತಿದ್ದ ಲಾರಿಯ ಬಳಿ ಮಾಧ್ಯಮ ಪ್ರತಿನಿಧಿಗಳು ತೆರಳಿ ಮಾಹಿತಿ ಪಡೆದು ವೀಡಿ ಯೋ ಚಿತ್ರೀಕರಣ ಮಾಡಿ ಕೊಳ್ಳುತ್ತಿದ್ದಾಗ ಕಾರಿನಲ್ಲಿ ಬಂದಿಳಿದ ಇಬ್ಬರು ಇದನ್ನು ಸುದ್ದಿ ಮಾಡುವುದು ಬೇಡ. ಅದೇನು ಕೊಡಬೇಕೋ ಕೊಡುತ್ತೇವೆ ಎಂದು ಆಮಿಷ ಒಡ್ಡಿ ದರು. ಆಮ್‌ ಆದ್ಮಿ ಪಕ್ಷದ ಮುಖಂಡರ ಬಳಿಯೂ ಮಾತನಾಡು ತ್ತೇವೆ ಎಂದೂ ಹೇಳಿದರು. ಆದರೆ ಮಾಧ್ಯಮ ಪ್ರತಿ ನಿಧಿಗಳು ಅವರ ಆಮಿಷಕ್ಕೆ ಬಗ್ಗದೆ ಸುದ್ದಿ ಬಿತ್ತರಿಸಿದರು.

ಅಕ್ರಮವೆಂಬುದಕ್ಕೆ ದರವೇ ಸಾಕ್ಷಿ: ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ರೈತರಿಂದ ಕ್ವಿಂಟಲ್‌ಗೆ 3360 ರೂ. ದರಲ್ಲಿ ರಾಗಿಯನ್ನು ಖರೀದಿಸಿತ್ತು. ಆದರೆ, ಬಂಗಾರಪೇಟೆ ವರ್ತಕ ಹರೀಶ್‌ ಆಮ್‌ ಆದ್ಮಿ ಪಕ್ಷದ ಮುಖಂಡರೊಂದಿಗೆ ಮಾತನಾಡುವಾಗ ಕ್ವಿಂಟಲ್‌ಗೆ 1850 ರೂ. ದರಕ್ಕೆ ಪೂರೈಕೆ ಮಾಡುವು ದಾಗಿ ಒಪ್ಪಿಕೊಂಡಿದ್ದಾನೆ. ಅಂದರೆ ಪಡಿತರ ಕಾರ್ಡು ದಾರರಿಗೆ ವಿತರಣೆ ಮಾಡಬೇಕಾಗಿದ್ದ ರಾಗಿಯನ್ನು ವಿತರಣೆ ಮಾಡದೆ ಕಡಿಮೆ ದರಕ್ಕೆ ಕಾಳ ಸಂತೆಯಲ್ಲಿ ಪೂರೈಕೆ ಮಾಡುತ್ತಿರುವುದಕ್ಕೆ ಬೆಂಬಲ ಬೆಲೆಗಿಂತ 1500 ರೂಗಿಂತಲೂ ಕಡಿಮೆ ದರಕ್ಕೆ ಮಾರಾಟ ಮಾಡಲು ಮುಂದಾಗಿರುವುದೇ ಅಕ್ರಮ ಸಾಗಾಣೆಗೆ ಸಾಕ್ಷಿಯಾಗಿದೆ.

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.