ಮಲ್ಲಾಪುರ ಗ್ರಾಮದಲ್ಲೇ ಪಡಿತರ ವಿತರಣೆಗೆ ಕ್ರಮ: ಶಾಸಕರ ಭರವಸೆ

Team Udayavani, Dec 7, 2019, 1:09 PM IST

ರಾಮನಾಥಪುರ: ಹೋಬಳಿ ಮಲ್ಲಾಪುರ ಗ್ರಾಮದಲ್ಲಿ ಪಡಿತರ ಆಹಾರ ವಿತರಣೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಶಾಸಕ ಎ.ಟಿ.ರಾಮಸ್ವಾಮಿ ಭರವಸೆ ನೀಡಿದರು. ಗ್ರಾಮದಲ್ಲಿ 55 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಗ್ರಾಮಸ್ಥರು ಪಡಿತರ ಆಹಾರಕ್ಕಾಗಿ ಸುಮಾರು ಮೂರು ಕಿ.ಮೀ. ಗಟ್ಟಲೆ ನೆಡೆದು ಲಕ್ಕೂರು ನ್ಯಾಯ ಬೆಲೆ ಅಂಗಡಿಯಿಂದ ತರ ಬೇಕಿದೆ. ಈ ಬಗ್ಗೆ ಈಗಾಗಲೇ ಸಾರ್ವಜನಿಕರಿಂದ ದೂರುಗಳು ಬಂದಿವೆ. ಅಂಗಡಿ ಮಾಲೀಕರಿಗೆ ತಿಳಿಸಲಾಗುವುದು ಎಂದು ಹೇಳಿದರು.

ಗ್ರಾಮದ ಮುಖ್ಯ ರಸ್ತೆಯನ್ನು 50 ಲಕ್ಷ ವೆಚ್ಚದಲ್ಲಿ ಕಾಂಕ್ರೀಟಿನಿಂದ ನಿರ್ಮಾಣ ಮಾಡಲಾಗುವುದು. 5 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಕಾಲೋನಿ ಕಾಂಕ್ರೀಟ್‌ ಮಾಡಿಸಲಾಗುವುದು. ಗುತ್ತಿಗೆದಾರರು ಉತ್ತಮ ರೀತಿ ರಸ್ತೆ ಕಾಮಗಾರಿ ಮಾಡುವಂತೆ ಸೂಚಿಸಿದರು.

ರಾಮನಾಥಪುರದ ಫಾರೆಸ್ಟ್‌ ಚೆಕ್‌ ಪೋಸ್ಟ್‌ ಪಕ್ಕದಲ್ಲಿನ ರಸ್ತೆಗೆ 10 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಶುದ್ಧ ಕುಡಿ‌ವ ನೀರಿನ್ನು ಒದಗಿಸುವ ಸಲುವಾಗಿ ಈಗಾಗಲೇ 43 ಶುದ್ಧ ಕುಡಿಯುವ ನೀರು ಘಟಕ ಆರಂಭಿಸಲಾಗಿದೆ. ಅಣ್ಣಿಗನ ಹಳ್ಳಿಹರದೂರುಪುರಮಾರ್ಗದ ರಸ್ತೆಯಲ್ಲಿರುವ ಕಿರು ಸೇತುವೆ ಕಾಮಗಾರಿಯನ್ನು 30 ಲಕ್ಷ ವೆಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂದರು.

ಗ್ರಾಮದ ಮುಖಂಡರಾದ ಹಾರಂಗಿ ಮಹಾಮಂಡಳಿಯ ಧ್ಯಕ್ಷ ಚೌಡೇಗೌಡ, ಮುಖಂಡ ಉಪ್ಪಾರಿಕೆ ಗೌಡ, ಪ್ರಭಾಕರ್‌, ಎಂ.ಜಿ. ರಾಜಪ್ಪ, ಗೋವಿಂದ ರಾಜ್‌, ಪಂಚಾಕ್ಷರಿ, ದೋರಕ ನಾಥ, ನಾಗರಾಜು, ಮಂಜುನಾಥ್‌ ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ