ಕಾವೇರಿ ನದಿ ಪ್ರವಾಹದ ನೀರು ತಡೆಗೆ ಕ್ರಮ
ರಾಮನಾಥಪುರಕ್ಕೆ ಪ್ರವಾಹದ ನೀರು ನುಗ್ಗದಂತೆ ತಡೆಗೋಡೆ ನಿರ್ಮಾಣ
Team Udayavani, Feb 3, 2021, 5:10 PM IST
ಹಾಸನ/ರಾಮನಾಥಪುರ: ಅರಕಲಗೂಡು ತಾಲೂಕು ರಾಮನಾಥಪುರ ಪಟ್ಟಣಕ್ಕೆ ಕಾವೇರಿ ನದಿಯ ಪ್ರವಾಹದ ನೀರು ನುಗ್ಗದಂತೆ ನದಿ ದಂಡೆಗೆ ತಡೆಗೋಡೆ ನಿರ್ಮಾಣ ಆರಂಭವಾಗಿದೆ.
ಕಾವೇರಿ ನದಿ ದಂಡೆಯ ರಾಮೇಶ್ವರಸ್ವಾಮಿ ದೇವಾಲಯದ ಹತ್ತಿರ 70 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣವಾಗುತ್ತಿದೆ. ಕಳೆದ ಮೂರು ವರ್ಷದಿಂದ ಮಳೆಗಾಲದಲ್ಲಿ ಪ್ರವಾಹದ ನೀರು ಮನೆಗಳಿಗೆ ನುಗ್ಗುತ್ತಿತ್ತು. ಹಾಗಾಗಿ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಕೆಲವು ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗದೆ ತೊಂದರೆಯಾಗುತ್ತಿದ್ದರೂ ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸಿ ತಡೆಗೋಡೆ ನಿರ್ಮಾಣ ಆರಂಭಿಸಲಾಗಿದೆ.ಇನ್ನೂ ಹೆಚ್ಚು ಅನುದಾನ ಬಿಡುಗಡೆಗೆ ಪ್ರಯತ್ನ ಮುಂದುವರಿಸಿರುವುದಾಗ ಶಾಸಕರು ಸ್ಪಷ್ಟಪಡಿಸಿದರು.
ಇದನ್ನೂ ಓದಿ :ರಾಮ ಮಂದಿರಕ್ಕೆ ದೇಣಿಗೆ ಮಹಾಪೂರ
ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿ ಮಾನವೀಯ ಮೌಲ್ಯಗಳನ್ನು ಬಿತ್ತ ಬೇಕಿರುವ ಈ ಸಂದರ್ಭದಲ್ಲಿ ಅರಸೀಕಟ್ಟೆ ಕ್ಷೇತ್ರಕ್ಕೆ ಬರುವ ಭಕ್ತರಿಗಾಗಿ ಮತ್ತು ಕ್ಷೇತ್ರದ ಆಕರ್ಷಣೆ ಹೆಚ್ಚಿಸುವ ದೃಷ್ಟಿಯಿಂದ ಅನೇಕ ಸೌಲಭ್ಯಗಳಿಗೆ ಚಾಲನೆ ನೀಡಲಾಗುತ್ತಿದೆ. ಶ್ರೀಅರಸೀಕಟ್ಟೆ ಅಮ್ಮನ ದೇವಸ್ಥಾನ ಆವರಣದಲ್ಲಿ ಭಕ್ತರ ಅನುಕೂಲಕ್ಕಾಗಿ 3.6 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021
ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ
ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21
ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಹೊಸ ಸೇರ್ಪಡೆ
ಡ್ರಗ್ಸ್ ಜಾಲದ ಮೇಲೆ ಬೆಳಕು ಚೆಲ್ಲುವ ಆ್ಯಕ್ಸಿಡೆಂಟ್
ಮಂಗಳೂರು ವೈದ್ಯ ಪದ್ಮನಾಭ್ ಕಾಮತ್ ಜನಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ…!
ದಿನೇಶ್ ವಿರುದ್ಧ ಸುಮೊಟೋ ದೂರು ದಾಖಲಿಸಿ: ಎಚ್.ಡಿ.ಕುಮಾರಸ್ವಾಮಿ ಒತ್ತಾಯ
ಕುಟುಂಬ ಯೋಜನೆಗೆ ಇಸ್ಲಾಂನಲ್ಲಿ ವಿರೋಧವಿಲ್ಲ :ಚುನಾವಣಾ ಆಯೋಗದ ಮಾಜಿ ಅಧ್ಯಕ್ಷ ಖುರೇಷಿ ಹೇಳಿಕೆ
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ : ಸಿದ್ದರಾಮಯ್ಯ ಆರೋಪ