ಶಾಸಕ ಸ್ಥಾನಕ್ಕೆ ಗಂಗಾಧರ್‌ ಬಹುಜನ್‌ಗೆ ಬೇಷರತ್‌ ಬೆಂಬಲ


Team Udayavani, Apr 23, 2022, 3:31 PM IST

Untitled-1

ಬೇಲೂರು: ತಾಲೂಕಿನ ಹಳೇಬೀಡು ಹೋಬಳಿ ಪೊನ್ನಾಥಪುರ ಗ್ರಾಮದಲ್ಲಿ ಡಾ. ಅಂಬೇಡ್ಕರ್‌ ಅವರ 131ನೇ ಜಯಂತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್‌, ಇತ್ತೀಚೆಗೆ ಚರ್ಚೆಯಲ್ಲಿರುವ ವಿಷಯ ಪ್ರಸ್ತಾಪಿಸಿ ಜಿಲ್ಲೆಯಲ್ಲಿ ಗಂಗಾಧರ್‌ ಬಹುಜನ್‌ ಒಬ್ಬ ಪ್ರಾಮಾಣಿಕ ಹೋರಾಟಗಾರ.

ಪ್ರಗತಿಪರ ಚಿಂತಕರಾಗಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜ್ಯ ನಾಯಕರಾದ ಇವರು ಈ ಹಿಂದೆ ಬೇಲೂರು ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರೂ ಸಹ ಶೋಷಿತರು, ರೈತರು ಮತ್ತು ಮಹಿಳೆಯರ ಪರ ಹೋರಾಟ ಮುಂದುವರೆಸಿದ್ದಾರೆ. ಇವರಿಗೆ ಕ್ಷೇತ್ರದ ಸಮಸ್ಯೆ ಬಗ್ಗೆ ಆಳವಾದ ಅರಿವಿದೆ.

ಬೇಷರತ್‌ ಬೆಂಬಲಿಸುತ್ತೇನೆ: ದಲಿತ ಸಮುದಾಯಗಳ ಮತ ಸೆಳೆಯುವ ಸಲುವಾಗಿ ಬೇಲೂರು ಕ್ಷೇತ್ರದ ಹಾಲಿ ಶಾಸಕ ಕೆ.ಎಸ್‌. ಲಿಂಗೇಶ್‌ ಗಂಗಾಧರ್‌ ಬಹುಜನ್‌ ಅವರಿಗೆ ಓಟು ಕೊಟ್ಟು ಶಾಸಕರನ್ನಾಗಿ ಆಯ್ಕೆ ಮಾಡಿ ಎಂದು ಕೇವಲ ಅನುಕಂಪದ ಮಾತುಗಳನ್ನಾಡಿದರೆ ಸಾಲದು. ನಿಜವಾಗಿಯೂ ಈ ಕ್ಷೇತ್ರ ಶಾಸಕರಿಗೆ ಗಂಗಾಧರ್‌ ಬಗ್ಗೆ ಕಾಳಜಿ ಇದ್ದರೆ ಈ ಬಾರಿ ಚುನಾವಣೆ ಯಲ್ಲಿ ಶಾಸ ಕರು ಗಂಗಾಧರ್‌ ಬಹು ಜನ್‌ ವಿರುದ್ಧ ವಾಗಿ ಅಭ್ಯರ್ಥಿ ಹಾಕದೇ ಬೆಂಬಲಿಸುವುದಾದರೆ ನಾನೂ ಕೂಡ ಸ್ಪರ್ಧಿಸದೇ ಗಂಗಾಧರ್‌ ಅವರನ್ನು ಬೆಂಬಲಿಸಲು ಸಿದ್ಧ ಎಂದು ಸವಾಲು ಹಾಕಿದರು.

ಸ್ವ ಕ್ಷೇತ್ರದವರನ್ನೇ ಕೈ ಹಿಡಿಯಿರಿ: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೇಲೂರು ಕ್ಷೇತ್ರದ ಶಾಸಕರಾದ ಲಿಂಗೇಶ್‌ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾ ಡುತ್ತಾ ಮುಂದಿನ ಚುನಾವಣೆಯಲ್ಲಿ ನನ್ನ ಕೆಲಸ ನೋಡಿ ನನಗೆ ಮತಕೊಡಿ. ಇಲ್ಲವಾದರೆ ಗಂಗಾಧರ್‌ ಬಹುಜನ್‌ ಸ್ಥಳೀಯರಾಗಿದ್ದಾರೆ. ಮತ್ತು ಸದಾಕಾಲ ಜನರ ಸಮಸ್ಯೆ ಪರಿಹಾರಕ್ಕಾಗಿ ಟೊಂಕಕಟ್ಟಿ ನಿಂತಿರುವ ಹೋರಾಟಗಾರ. ಇವರಿಗೆ ಓಟು ಕೊಟ್ಟು ಗೆಲ್ಲಿಸಿ ಬೇಲೂರು ಕ್ಷೇತ್ರ ದಲ್ಲಿ ಶಾಸಕರಾಗಿ ಮಾಡೋಣ. ಯಾವುದೇ ಕಾರಣಕ್ಕೂ ಬೇರೆ ಕ್ಷೇತ್ರದಿಂದ ಬರುವ ಅಭ್ಯರ್ಥಿಗಳಿಗೆ ಮಣೆ ಹಾಕು ವುದು ಬೇಡ ಎಂದು ಹೇಳಿದರು.

ಶಾಸಕರಿಗೆ ಸುರೇಶ್‌ ಸವಾಲು: ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್‌ ಆಗಿ ತಾಲೂಕು ಮತ್ತು ಜಿಲ್ಲೆಯಾ ದ್ಯಂತ ಸಾಕಷ್ಟು ಚರ್ಚೆ ಆಗುತ್ತಿರುವ ಹಿನ್ನೆಲೆ ಹುಲ್ಲಳ್ಳಿ ಸುರೇಶ್‌ ಈ ಸವಾಲು ಹಾಕಿದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯ ದರ್ಶಿ ಗಂಗಾಧರ್‌ ಬಹುಜನ್‌ ಅವರು ಅಂಬೇಡ್ಕರ್‌ ಅವರ ಬಗ್ಗೆ ಉಪನ್ಯಾಸ ನೀಡಿದರು.

ಸಭೆಯಲ್ಲಿ ಬಿಜೆಪಿ ಮುಖಂಡರಾದ ಕೊರಟಗೆರೆ ಪ್ರಕಾಶ್‌, ಸಂತೋಷ್‌ ಕೆಂಚಾಂಬ, ಎನ್‌.ಯೋಗೇಶ್‌, ಮಲ್ಲಿಕಾರ್ಜುನ, ಪತ್ರಕರ್ತರಾದ ದಿನೇಶ್‌ ಬೆಳ್ಳಾವರ, ಶಿಕ್ಷಕರಾದ ಹುಲಿಯಪ್ಪ, ಮಲ್ಲೇಶ್‌, ಮುಖಂಡರಾದ ಯೋಗೇಶ್‌, ಕೇಶವಯ್ಯ, ಮಂಜುನಾಥ್‌, ಯತೀಶ್‌, ಟೈ ಕುಮಾರ್‌ ಸೇರಿದಂತೆ ಅಂಬೇಡ್ಕರ್‌ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಟಾಪ್ ನ್ಯೂಸ್

Covid test

ಮಹಾರಾಷ್ಟ್ರದಲ್ಲಿ ಬಿ.ಎ.4 ಮತ್ತು ಬಿ.ಎ.5 ಒಮಿಕ್ರಾನ್ ರೂಪಾಂತರಿ ಪತ್ತೆ

1-ssdd

ಏಷ್ಯಾ ಕಪ್‌ ಹಾಕಿ: ಜಪಾನ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಭಾರತ

ಟೋಪಿ ಧರಿಸಿದ ವಿದ್ಯಾರ್ಥಿಗೆ ಥಳಿತ: ಪಿಎಸ್ ಐ,ಉಪನ್ಯಾಸಕ ಸೇರಿ ಏಳು ಜನರ ವಿರುದ್ಧ ದೂರು ದಾಖಲು

ಟೋಪಿ ಧರಿಸಿದ ವಿದ್ಯಾರ್ಥಿಗೆ ಥಳಿತ: ಪಿಎಸ್ ಐ,ಉಪನ್ಯಾಸಕ ಸೇರಿ ಏಳು ಜನರ ವಿರುದ್ಧ ದೂರು ದಾಖಲು

1-f-ffsdf

ಗುದನಾಳದಲ್ಲಿಟ್ಟು ಚಿನ್ನ ಕಳ್ಳಸಾಗಾಣಿಕೆ : ಮಂಗಳೂರು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ

siddu 2

ಆರ್ ಎಸ್ಎಸ್ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್: ಸವಾಲಿನ ಪ್ರಶ್ನೆಗಳ ಸುರಿಮಳೆ

ಹಾಡಹಗಲೇ ರಿಯಲ್‌ ಎಸ್ಟೇಟ್‌ ವ್ಯಾಪಾರಿಯ ಅಪಹರಣ: ಕೆಲವೇ ನಿಮಿಷಗಳೊಳಗೆ ಆರೋಪಿಗಳ ಬಂಧನ

ಹಾಡಹಗಲೇ ರಿಯಲ್​ ಎಸ್ಟೇಟ್​ ಉದ್ಯಮಿಯ ಅಪಹರಣ: ಕೆಲವೇ ನಿಮಿಷಗಳೊಳಗೆ ಆರೋಪಿಗಳ ಬಂಧನ

1-as-dasd

ಗೋವಾದ ವಿಪಕ್ಷದ 5 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ : ಸಿ.ಟಿ.ರವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಾಣಿಗಳ ಭಾವನೆ ಅರಿತು ಚಿಕಿತ್ಸೆ ಕೊಡಿ; ಸಿಇಒ ಕಾಂತರಾಜು

ಪ್ರಾಣಿಗಳ ಭಾವನೆ ಅರಿತು ಚಿಕಿತ್ಸೆ ಕೊಡಿ; ಸಿಇಒ ಕಾಂತರಾಜು

ರಾಗಿ ಮಾರಾಟಕ್ಕೆ ಟ್ರ್ಯಾಕ್ಟರ್‌ ಲೋಡ್‌ ಸಾಲು

ರಾಗಿ ಮಾರಾಟಕ್ಕೆ ಟ್ರ್ಯಾಕ್ಟರ್‌ ಲೋಡ್‌ ಸಾಲು

“ಕೋಡಿಹಳ್ಳಿ’ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ

“ಕೋಡಿಹಳ್ಳಿ’ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ

Untitled-1

ಸಕಲೇಶಪುರ-ಬಿಕ್ಕೋಡು ರಸ್ತೆ ಬಂದ್‌: ಕಿರಿಕಿರಿ

ಹೊಳೆನರಸೀಪುರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಳ

ಹೊಳೆನರಸೀಪುರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಳ

MUST WATCH

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

ಹೊಸ ಸೇರ್ಪಡೆ

Covid test

ಮಹಾರಾಷ್ಟ್ರದಲ್ಲಿ ಬಿ.ಎ.4 ಮತ್ತು ಬಿ.ಎ.5 ಒಮಿಕ್ರಾನ್ ರೂಪಾಂತರಿ ಪತ್ತೆ

1-ssdd

ಏಷ್ಯಾ ಕಪ್‌ ಹಾಕಿ: ಜಪಾನ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಭಾರತ

ಟೋಪಿ ಧರಿಸಿದ ವಿದ್ಯಾರ್ಥಿಗೆ ಥಳಿತ: ಪಿಎಸ್ ಐ,ಉಪನ್ಯಾಸಕ ಸೇರಿ ಏಳು ಜನರ ವಿರುದ್ಧ ದೂರು ದಾಖಲು

ಟೋಪಿ ಧರಿಸಿದ ವಿದ್ಯಾರ್ಥಿಗೆ ಥಳಿತ: ಪಿಎಸ್ ಐ,ಉಪನ್ಯಾಸಕ ಸೇರಿ ಏಳು ಜನರ ವಿರುದ್ಧ ದೂರು ದಾಖಲು

1-f-ffsdf

ಗುದನಾಳದಲ್ಲಿಟ್ಟು ಚಿನ್ನ ಕಳ್ಳಸಾಗಾಣಿಕೆ : ಮಂಗಳೂರು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ

ಬೊಂಬೆನಾಡಿನಲ್ಲಿ ಕಾಂಗ್ರೆಸ್‌ ಪಕ್ಷ ಸದೃಢ: ಪಂಚಮಿ ಪ್ರಸನ್ನ ಪಿ.ಗೌಡ

ಬೊಂಬೆನಾಡಿನಲ್ಲಿ ಕಾಂಗ್ರೆಸ್‌ ಪಕ್ಷ ಸದೃಢ: ಪಂಚಮಿ ಪ್ರಸನ್ನ ಪಿ.ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.