Udayavni Special

ಪಪಂ: 44.39 ಕೋಟಿ ರೂ. ಬಜೆಟ್‌ ಮಂಡನೆ


Team Udayavani, Feb 24, 2021, 2:09 PM IST

ಪಪಂ: 44.39 ಕೋಟಿ ರೂ. ಬಜೆಟ್‌ ಮಂಡನೆ

ಅರಕಲಗೂಡು: ಪಪಂನ 2021-22ನೇ ಸಾಲಿನ 44,39,37,610 ರೂ.ನ ಆಯ-ವ್ಯಯವನ್ನು ಅಧ್ಯಕ್ಷ ಹೂವಣ್ಣ ಮಂಡಿಸಿದರು. ದೊಡ್ಡ ಮೊತ್ತದ ಮೊದಲ ಬಜೆಟ್‌ ಇದಾಗಿದ್ದು, 44,34,67,840 ರೂ. ಖರ್ಚು, 4,69,770 ರೂ. ಉಳಿತಾಯ ತೋರಿಸಲಾಗಿದೆ. ಬಜೆಟ್‌ ಮಂಡನೆ ನಂತರ ಮಾತನಾಡಿದ ಪಪಂ ಅಧ್ಯಕ್ಷ ಹೂವಣ್ಣ, ಎಲ್ಲಾ ವಾರ್ಡ್‌ಗಳನ್ನು ಆಧುನೀಕರಣ ಮಾಡುವ ಹಿನ್ನೆಲೆಯಲ್ಲಿ ಈ ಬಾರಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಪೌರಕಾರ್ಮಿಕರಿಗಿಲ್ಲ ಆದ್ಯತೆ: ಸಭೆಯಲ್ಲಿ ಸದಸ್ಯ ವಾಟಾಳ್‌ ರಮೇಶ್‌ ಮಾತನಾಡಿ, ಇದೇಮೊದಲ ಬಾರಿಗೆ ದೊಡ್ಡ ಗಾತ್ರದ ಬಜೆಟ್‌ ತಯಾರಿಸಿದ್ದು ಸ್ವಾಗತಾರ್ಹ. ಇದರ ಗುರಿಯನ್ನುಮುಟ್ಟಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಆದರೆ, ಪಪಂನ ಸರ್ವತೋಮುಖ ಅಭಿವೃದ್ಧಿಗೆಶ್ರಮಿಸುವ ತಳಹದಿ ಆಗಿರುವ ಪೌರಕಾರ್ಮಿಕರಿಗೆ ಆದ್ಯತೆ ನೀಡದಿರುವುದುಬೇಸರದ ಸಂಗತಿ ಎಂದು ಹೇಳಿದರು.

ನೀರಿನ ತೆರಿಗೆ ಮನ್ನಾ ಮಾಡಿ: ಪಪಂ ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮೀಣ ಜನರು ಇದ್ದು, ಶೇ.70 ಬಡತನ ರೇಖೆಯಲ್ಲಿ ಜೀವಿಸುತ್ತಿದ್ದಾರೆ. ಹೀಗಾಗಿ ಕುಡಿಯುವ ನೀರಿನತೆರಿಗೆಯನ್ನು ಮನ್ನಾ ಮಾಡುವ ಮೂಲಕ ಕೋವಿಡ್ ಸಂಕಷ್ಟದಲ್ಲಿರುವ ನಾಗರಿಕರಿಗೆ ಸಹಕಾರ ನೀಡುವಂತೆ ಸಭೆಯಲ್ಲಿ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಪಪಂ ಅಧ್ಯಕ್ಷ ಹೂವಣ್ಣ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು, ಹೆಚ್ಚು ಅನುದಾನವನ್ನು ಗಳಿಸುವ ಮೂಲಕ ಇದಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ನಿರ್ಣಯಿಸಿ: ಸಭೆ ಮುಗಿದು 15 ದಿನ ಕಳೆದರೂ ಸಭಾ ನಡಾವಳಿ ಬರೆಯದೇ ಸಭೆಗೆ ಅಗೌರವ ತರುತ್ತಿರುವುದು ಒಳಿತಲ್ಲ ಎಂದು ಪಪಂ ಸಿಬ್ಬಂದಿಯನ್ನು ಎಚ್ಚರಿಸಿದ ಸದಸ್ಯ ಕೃಷ್ಣಯ್ಯ, ಅರಕಲಗೂಡು ಪಪಂನಲ್ಲಿಆಯ್ಕೆಯಾದ ದಿನದಿಂದಲೂ ಅನೇಕ ಸಭೆಗಳು ನಡೆದಿವೆ. ಆ ಸಭೆಯಲ್ಲಿ ನಿರ್ಣಯಿಸುವ ನಿರ್ಣಯಗಳನ್ನು ಸಭೆಯೊಳಗೆ ನಮೂದಿಸದೇ,ಸಭೆಯ ನಂತರದಲ್ಲಿ ಬರೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ನಡಾವಳಿ ಪುಸ್ತಕ ಬರೆಯುತ್ತಿಲ್ಲ: ಇತ್ತೀಚಿನ ದಿನಗಳಲ್ಲಿ ಪಪಂನ ಸಭೆಯ ನಡಾವಳಿಯನ್ನು 15 ದಿನಗಳಾದರೂ ಬರೆಯಲ್ಲಿ ಪಪಂನ ಕಟ್ಟಡ  ದಿಂದ ಹೊರಭಾಗಕ್ಕೆ ತೆಗೆದುಕೊಂಡು ಹೋಗಿಬರೆಯುತ್ತಾರೆ. ಇದು ಸರಿಯಾದ ಬೆಳವಣಿಗೆ ಯಲ್ಲ. ಅಧ್ಯಕ್ಷರು ಇತ್ತ ಗಮನ ನೀಡಿ ಸಭೆ  ಯಲ್ಲೇ ನಡಾವಳಿ ಪುಸ್ತಕವನ್ನು ಬರೆಯುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಪ್ರಸಂಗವು ನಡೆಯಿತು. ಇವರ ಪ್ರಶ್ನೆಗೆ ಉತ್ತರಿಸದೇ ಅಧಿಕಾರಿಗಳು ಮೌನಕ್ಕೆ ಶರಣಾದರು.

ಟಾಪ್ ನ್ಯೂಸ್

ಕಡಬ; ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

ಕಡಬ; ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

hftut

ಲಾಕ್‌ಡೌನ್‌ ವದಂತಿ: ಗಂಗಾವತಿಯಲ್ಲಿ ಅಗತ್ಯ ವಸ್ತುಗಳ ದರ ದುಪ್ಪಟ್ಟು

ಕೇರಳದ ಬೆಸ್ತರ ಹತ್ಯೆ ಪ್ರಕರಣ: ಪರಿಹಾರ ಮೊತ್ತ ವಿಳಂಬಕ್ಕೆ ಸುಪ್ರೀಂ ಅಸಮಾಧಾನ

ಕೇರಳದ ಬೆಸ್ತರ ಹತ್ಯೆ ಪ್ರಕರಣ: ಪರಿಹಾರ ಮೊತ್ತ ವಿಳಂಬಕ್ಕೆ ಸುಪ್ರೀಂ ಅಸಮಾಧಾನ

fgdfgd

ಮತಗಳ ಲೆಕ್ಕದ ಜತೆ ಸೋಲು-ಗೆಲುವಿನ ಲೆಕ್ಕಾಚಾರ

fbhgdfhdf

18 ವರ್ಷಕ್ಕಿಂತ ಮೇಲ್ಪಟ್ಟವರೂ ಕೋವಿಡ್-19 ಲಸಿಕೆ ಪಡೆಯಲು ಅನುಮತಿಸಿದ ಕೇಂದ್ರ ಸರ್ಕಾರ

ಸಾರಿಗೆ ನೌಕರರು ಮತ್ತು ಸರಕಾರದ ನಡುವೆ ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ: ಡಿಸಿಎಂ ಸ್ಪಷ್ಟನೆ

ಸಾರಿಗೆ ನೌಕರರು – ಸರಕಾರದ ನಡುವೆ ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ: ಡಿಸಿಎಂ ಸ್ಪಷ್ಟನೆ

dgsdgsgf

ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

incident held at hasana

ಎಲ್ಲೆಂದರಲ್ಲಿ ಗಂಡು ಕರು ಬಿಟ್ಟು ಹೋಗುತ್ತಿರುವ ಜನ

Hospitalized Infected

ಆಸ್ಪತ್ರೆಗೆ ದಾಖಲಾದ ಸೋಂಕಿತರು ಊರೆಲ್ಲಾ ಓಡಾಟ!

Awarding of awards to 10 journalists

10 ಮಂದಿ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

Fire if gas is refilling

ಗ್ಯಾಸ್‌ ರೀಪೀಲ್ಲಿಂಗ್‌ ವೇಳೆ ಬೆಂಕಿ: ಆಟೋ ಭಸ್ಮ

programme held at holenarasipura

ಕಡವಿನಕೋಟೆ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ

MUST WATCH

udayavani youtube

ಕೋವಿಡ್ ಆತಂಕ; ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಭೇಟಿ ರದ್ದು

udayavani youtube

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

ಹೊಸ ಸೇರ್ಪಡೆ

ಕಡಬ; ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

ಕಡಬ; ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

ದಗಜಹಗ್ದ

ಕೊರೊನಾ ಕರ್ಫ್ಯೂ ಜಾರಿ

jghjgh

ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಗೆ ಮುಂದಾದ ಗ್ರಾಪಂ ಸಿಬ್ಬಂದಿ

hftut

ಲಾಕ್‌ಡೌನ್‌ ವದಂತಿ: ಗಂಗಾವತಿಯಲ್ಲಿ ಅಗತ್ಯ ವಸ್ತುಗಳ ದರ ದುಪ್ಪಟ್ಟು

ಜಮಗ್ಗಬದ್ಚ

ಹೊನ್ನಾಳಿ-ನ್ಯಾಮತಿ ಸಮಗ್ರ ಅಭಿವೃದ್ಧಿ ಗುರಿ: ರೇಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.