Udayavni Special

ದರೋಡೆ ನಾಟಕವಾಡಿದ ಆರೋಪಿ ಸೆರೆ


Team Udayavani, Dec 10, 2018, 3:44 PM IST

has-1.jpg

ಹಾಸನ: ತಾನು ಕೆಲಸ ಮಾಡುತ್ತಿದ್ದ ಕಂಪನಿಯ 9.5 ಲಕ್ಷ ರೂ. ನಗದನ್ನು ಪಾವತಿಸಿದೆ ದರೋಡೆ ಕೋರರು ಅಪಹರಿಸಿದರು ಎಂದು ನಾಟಕವಾಡಿದ್ದ ನೌಕರರನ್ನು ಪೊಲೀಸರು ಬಂಧಿಸಿ 7 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಸಾಲ ಮಾಡಿಕೊಂಡಿದ್ದ ಚಂದನ್‌ ತನ್ನ ಇಬ್ಬರು ಸ್ನೇಹಿತರನ್ನು ಬಳಸಿಕೊಂಡು ದರೋಡೆಯ ನಾಟಕ ವಾಡಿ ಕಂಪನಿಯ ಹಣ ಲಪಟಾಯಿಸುವ ಪ್ರಯತ್ನ ನಡೆಸಿದ್ದುದು ತನಿಖೆಯ ವೇಳೆ ಬಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಎ.ಎನ್‌. ಪ್ರಕಾಶ್‌ಗೌಡ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಪ್ರಕರಣದ ವಿವರ: ನಗರದ ಕೆ.ಹೊಸಕೊಪ್ಪಲು ಬಡಾವಣೆಯ ನಿವಾಸಿ ಶಾಂತೇಗೌಡ ಎಂಬವರ ಪುತ್ರ ಎಂ.ಎಸ್‌. ಚಂದನ್‌ ಎಂಬಾತ ನಗರದ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿರುವ ಪೂಜಾ ಫಿಡ್ಸ್‌ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ಚಿಕ್ಕಕಣಗಾಲ್‌ ಮತ್ತು ಜನಿವಾರ ಗ್ರಾಮಗಳ ಕೋಳಿ ಫಾರಂಗಳಿಗೆ ಪೂಜಾ ಫಿಡ್ಸ್‌ನಿಂದ ಸರಬರಾಜು ಕೋಳಿಗಳು ಮತ್ತು ಫಿಡ್ಸ್‌ನಿಂದ ವಸೂಲಾದ 9.5ಲಕ್ಷ ರೂ. ನಗದನ್ನು ಕಂಪನಿಗೆ ಪಾವತಿಸ ಬೇಕಾಗಿತ್ತು. ಆದರೆ ನ.25 ರಂದು ಭಾನುವಾರ ವಾಗಿದ್ದರಿಂದ ಕಂಪನಿಗೆ ಪಾವತಿಸದೆ ಚಂದನ್‌ ಮನೆಯಲ್ಲಿಟ್ಟುಕೊಂಡಿದ್ದ. ನ.26 ರ ಸೋಮವಾರ ಸುಮಾರು 11 ಗಂಟೆ ಸಮಯದಲ್ಲಿ ಕಂಪನಿಗೆ ಪಾವತಿಸಲೆಂದು 9.5 ಲಕ್ಷ ರೂ.ಗಳೊಂದಿಗೆ ತನ್ನ ಬೈಕಿನಲ್ಲಿ ಹಾಸನ ಬೈಪಾಸ್‌ ರಸ್ತೆಯ ರೈಲ್ವೆ ಟ್ರ್ಯಾಕ್‌ನ ಬಳಿ ಹೋಗುತ್ತಿದ್ದಾಗ ಹಿಂಬಾಲಿಸಿಕೊಂಡು ಬೈಕ್‌ ನಲ್ಲಿ ಬಂದ ಇಬ್ಬರು ಬೈಕ್‌ನ್ನು ಅಡ್ಡಗಟ್ಟಿ ಚಾಕುವಿನಿಂದ ಹಲ್ಲೆ ನಡೆಸಿ ಬ್ಯಾಗ್‌ನಲ್ಲಿದ್ದ 9.5 ಲಕ್ಷ ರೂ.,ಗಳನ್ನು ಅಪಹರಿಸಿದ್ದರು. ದರೋಡೆ ಕೋರರಿಂದ ಹಲ್ಲೆಗೊಳಗಾಗಿ ಸ್ಥಳದಲ್ಲಿಯೇ ಬಿದ್ದಿದ್ದ ಚಂದನ್‌ನನ್ನು ಕಂಡ ರಸ್ತೆಯಲ್ಲಿ ಸಂಚರಿಸಿದವರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಿಚಾರಣೆಯಿಂದ ಬಯಲಾದ ಸತ್ಯ: ಪೊಲೀಸರು ಸ್ಥಳಕ್ಕೆ ಹೋಗಿ ಚಂದನ್‌ನನ್ನು ಆಸ್ಪತ್ರೆಗೆ ಸಾಗಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದರು. ಚಂದನ್‌ ಬಗ್ಗೆಯೇ ಶಂಕೆ ಬಂದಿದ್ದರಿಂದ ಆತನನ್ನು ವಿಚಾರಣೆ ಗೊಳಪಡಿದಾಗ ತಾನೇ ದರೋಡೆಯ ನಾಟಕ ಸೃಷ್ಟಿಸಿದ್ದನ್ನು ಒಪ್ಪಿಕೊಂಡಿದ್ದಾನೆ. ತಾನು ಬಹಳಷ್ಟ
ಸಾಲ ಮಾಡಿದ್ದರಿಂದ ಸಾಲ ತೀರಿಸಲು ಕಂಪನಿಗೆ ಕಟ್ಟಬೇಕಾಗಿದ್ದ ಹಣವನ್ನು ಲಪಟಾಯಿಸಲು ತನ್ನ ಸೇಹಿತರಾದ ಲೋಕಿ ಉರುಫ್ ಕೆಂಚ ಹಾಗೂ ನವೀನ ಎಂಬವರನ್ನು ಬಳಸಿಕೊಂಡು ಅವರು ದರೋಡೆ ಮಾಡುವಂತೆ ನಾಟಕ ಮಾಡಿದ್ದೆ. ಲೋಕಿ ಮತ್ತು ನವೀನ 2 ಲಕ್ಷ ರೂ. ತೆಗೆದುಕೊಂಡು ಹೋಗಿದ್ದು, 50 ಸಾವಿರ ರೂ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಖರ್ಚಾಗಿದೆ. ಇನ್ನುಳಿದ 7 ಲಕ್ಷ ರೂ. ಹಣ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ವಿಚಾರಣೆ
ವೇಳೆ ಚಂದನ್‌ ಒಪ್ಪಿಕೊಂಡ. ಆನಂತರ ಆತನಿಂದ 7 ಲಕ್ಷ ರೂ. ನಗದು ಹಾಗು ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ. ಚಂದನ್‌ಗೆ ಸಹಕರಿಸಿದ್ದ ಲೋಕಿ ಮತ್ತು ನವೀನ 2 ಲಕ್ಷ ರೂ. ನೊಂದಿಗೆ ತಲೆಮರೆಸಿಕೊಂಡಿದ್ದಾರೆ ಎಂದು ವಿವರಿಸಿದರು.

ಅಪರಾಧ ಹಿನ್ನೆಲೆ: ಚಂದನ್‌ಗೆ ಸಹಕರಿಸಿದ್ದ ಲೋಕಿ ಮತ್ತು ನವೀನ ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, ರೌಡಿಶೀಟರ್‌ಗಳು. ಲೋಕಿಯು ಒಂದು ಅತ್ಯಾಚಾರ, ಒಂದು ಕೊಲೆ, 3 ಸುಲಿಗೆ, 7 ಹೊಡೆದಾಟದ ಪ್ರಕರಣಗಳಲ್ಲಿ ಭಾಗಿಯಾಗಿದ್ದು, 7 ವರ್ಷ 10 ತಿಂಗಳು ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೇ ಜೈಲಿ ನಿಂದ ಹೊರ ಬಂದಿದ್ದ. ನವೀನನೂ ಒಂದು ಕೊಲೆ, ಓಂದು ಸುಲಿಗೆ, 2 ಕೊಲೆ ಯತ್ನ ಮತ್ತು ಒಂದು ಹೊಡೆದಾಟದ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಇವರಿಬ್ಬರ ಪತ್ತೆಗೆ ಬಲೆ ಬೀಸಲಾಗಿದೆ ಎಂದರು.

ಈ ಪ್ರಕರಣವನ್ನು ಭೇದಿಸಲು ಶ್ರಮಿಸಿದ ಇನ್‌ ಸ್ಪೆಕ್ಟರ್‌ ಸತ್ಯನಾರಾಯಣ, ಬಡಾವಣೆ ಠಾಣೆ ಪಿಎಸ್‌ಐ ಸುರೇಶ್‌, ಎಎಸ್‌ಐ ಕೇಶವ ಪ್ರಸಾದ್‌ ಮತ್ತು ಸಿಬ್ಬಂದಿಯವರಾದ ಸೋಮಶೇಖರ್‌, ಲೋಹಿತ್‌, ರಘು, ಪ್ರವೀಣ, ಪದೀಪ್‌ ಅವರ® ತಂಡಕ್ಕೆ 10 ಸಾವಿರ ರೂ. ಬಹುಮಾನ ಘೋಷಣೆ
ಮಾಡಲಾಗಿದೆ ಎಂ ದರು. ಎಎಸ್ಪಿ ಬಿ.ಎನ್‌.ನಂದಿನಿ, ಇನ್‌ಸ್ಪೆಕ್ಟರ್‌ ಸತ್ಯನಾರಾಯಣ ಉಪಸ್ಥಿತರಿದ್ದರು. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಧಾರವಾಡ: 2 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಧಾರವಾಡ: 2 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bele revanna

ಬೆಂಬಲ ಬೆಲೆಯಲ್ಲಿ ತೆಂಗು,ಕೊಬ್ಬರಿ ಖರೀದಿಸಿ

harras aro

ಜೆಡಿಎಸ್‌ನವರಿಂದ ಕಿರುಕುಳ: ಆರೋಪ

durupayoga

ಪ್ರಧಾನ ಮಂತ್ರಿ ಆವಾಸ್‌ ಮನೆಗಳ ನಿರ್ಮಾಣದಲ್ಲಿ ದುರುಪಯೋಗ

covid-19-hassan

ಕೋವಿಡ್‌ 19 ಸೋಂಕಿತರ ಸಂಖ್ಯೆ 140ಕ್ಕೇರಿಕೆ

cobb-bele

ಕೊಬ್ಬರಿ ಬೆಳೆಗಾರರಿಗೆ ವರ್ತಕರಿಂದ ಮೋಸ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

Sleep-Fusion

ಇನ್‌ಲ್ಯಾಂಡ್‌ ಲೆಟರ್‌: ಪ್ರಯಾಣದಲ್ಲಿ ಕನಸಿನ ಸಂಭಾಷಣೆಯಲ್ಲಿ

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಅಗತ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆ: ಸಚಿವ ಸುರೇಶ್‌ ಕುಮಾರ್

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಡ್ರಾಪ್ ಬಾಕ್ಸ್‌ : ಹೆಡ್‌ಫೋನ್‌ಗಿಂತ ಒಳ್ಳೆಯ ಗೆಳೆಯನಿಲ್ಲ

ಡ್ರಾಪ್ ಬಾಕ್ಸ್‌ : ಹೆಡ್‌ಫೋನ್‌ಗಿಂತ ಒಳ್ಳೆಯ ಗೆಳೆಯನಿಲ್ಲ

ಮನೋರಂಜನೆ ಅಸ್ತ್ರವಾದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ನಾನು ನೋಡಿದಂತೆ ಸಿನೆಮಾ : ಮನೋರಂಜನೆ ಅಸ್ತ್ರವಾದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.