ಗ್ರಾಪಂ ಸದಸ್ಯ ಸ್ಥಾನ 5 ರಿಂದ 25 ಲಕ್ಷಕ್ಕೆ ಹರಾಜು

ದೇಗುಲ, ಭವನ ನಿರ್ಮಾಣದ ಹೆಸರಲ್ಲಿಹಣ ಪಡೆದು ಅವಿರೋಧ ಆಯ್ಕೆಗೆ ನಿರ್ಧಾರ , ಜಿಲ್ಲಾಡಳಿತಕ್ಕೆ ತೀವ್ರ ತಲೆನೋವು

Team Udayavani, Dec 12, 2020, 5:08 PM IST

ಗ್ರಾಪಂ ಸದಸ್ಯ ಸ್ಥಾನ 5 ರಿಂದ 25 ಲಕ್ಷಕ್ಕೆ ಹರಾಜು

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಪ್ರಜಾಪ್ರಭುತ್ವದ ಆಶಯವನ್ನೇ ಗಾಳಿಗೆ ತೂರಿ ಗ್ರಾಪಂ ಸದಸ್ಯರನ್ನು 5 ಲಕ್ಷ ರೂ. ನಿಂದ 25 ಲಕ್ಷ ರೂ.ವರೆಗೂ ಹರಾಜು ಮೂಲಕ ಆಯ್ಕೆ ಮಾಡಿದ್ದು, ಜಿಲ್ಲಾಡಳಿತ, ಚುನಾವಣೆ ಆಯೋಗಕ್ಕೂ ತೀವ್ರ ತಲೆನೋವು ತರಿಸಿದೆ.

ಹಿಂದೆ ಗ್ರಾಮದ ಅಭಿವೃದ್ಧಿ,ದೇಗುಲ ನಿರ್ಮಾಣ, ಜೀರ್ಣೋದ್ಧಾರ, ಇತರೆ ಸಾಮಾಜಿಕ ಸೇವಾ ಕಾರ್ಯಕ್ಕೆ ದೇಣಿಗೆ ನೀಡುವ ಅಭ್ಯರ್ಥಿಗೆ ಷರತ್ತು ವಿಧಿಸಿ ಒಮ್ಮತದಿಂದ ಆಯ್ಕೆ ಮಾಡುವುದು ಅಲ್ಲಲ್ಲಿ ನಡೆಯುತ್ತಿತ್ತು. ಈಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಸದಸ್ಯ ಸ್ಥಾನವನ್ನೇ ಹಣಕ್ಕಾಗಿ ಹರಾಜು ಹಾಕುತ್ತಿರುವ ಬೆಳವಣಿಗೆಗಳು ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತದ್ದಾಗಿದೆ.

ತಾಲೂಕಿನ ಹವಲು ಗ್ರಾಮ ಸೇರಿದಂತೆ ಹಲವು ಕಡೆಗಳಲ್ಲಿ ಭವನ ನಿರ್ಮಾಣ, ದೇಗುಲ ಜೀರ್ಣೋದ್ಧಾರಕ್ಕಾಗಿ ಕನಿಷ್ಠ 5 ಲಕ್ಷ ರೂ.ನಿಂದ 25 ಲಕ್ಷ ರೂ.ವರೆಗೂ ಗ್ರಾಪಂ ಸದಸ್ಯ ಸ್ಥಾನ ಹರಾಜು ಮಾಡಲಾಗುತ್ತಿದೆ. ಈ ವಿಷಯ ತಿಳಿದು, ಬೆಂಗಳೂರು, ಹಾಸನ, ಇತರೆ ನಗರ ಪ್ರದೇಶಗಳಲ್ಲಿ ವಾಸವಾಗಿರುವ ಯುವಕರು, ತಮ್ಮ ಸ್ವಗ್ರಾಮಕ್ಕೆ ಆಗಮಿಸಿ ಹರಾಜು ಮಾಡದಂತೆ ಮನವೊಲಿಕೆ ಮಾಡುತ್ತಿದ್ದಾರೆ.

ನಾವು ದೇವಾಲಯ ನಿರ್ಮಾಣಕ್ಕೆ ಹಣ ನೀಡುತ್ತೇವೆ, ಕೆಲವರಿಂದ ಚಂದ ಸಂಗ್ರಹ ಮಾಡಿ ದೇವಾಲಯಕ್ಕೆ ಹಣ ಕೊಡಿಸುತ್ತೇವೆ, ಈ ರೀತಿ ಹರಾಜು ಮಾಡುವುದು ಬೇಡ ಎಂದು ಪಟ್ಟುಹಿಡಿದಿದ್ದರಿಂದ ಹಲವು ಗ್ರಾಮಲ್ಲಿ ಹರಾಜು ಮಾಡದೆ ಎರಡೂ¾ರು ಮಂದಿ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಸಿಬಿಐ ವಶದಲ್ಲಿದ್ದ ಕೆಜಿಗಟ್ಟಲೇ ಚಿನ್ನ ನಾಪತ್ತೆ: ಕೋರ್ಟ್ ನಲ್ಲಿ ಸಿಬಿಐ ವಾದಿಸಿದ್ದೇನು?

ಬಿಸಿಎಂ ಎ ಸ್ಥಾನ ಹರಾಜು: ಹಿರೀಸಾವೆ ಹೋಬಳಿಯ ದಿಡಗ, ಜಿನ್ನೇಹಳ್ಳಿ,ಬೆಳಗೀಹಳ್ಳಿ, ಕಬ್ಬಳಿ, ಬಾಳಗಂಚಿ, ಮತಿಘಟ್ಟ ಮತ್ತು ಹಿರೀಸಾವೆ, ನುಗ್ಗೇಹಳ್ಳಿ ಹೋಬಳಿ ಬಾಣನಕೆರೆ, ಗೌಡಗೆರೆ ಪಂಚಾಯಿತಿ ಮುತ್ತಕದ ಹೊನ್ನೇಹಳ್ಳಿ 15.50 ಲಕ್ಷ ರೂ.ಗೆ ಬಿಸಿಎಂ ಎ ಸ್ಥಾನ ಹರಾಜುಆಗಿದ್ದು,ಗ್ರಾಮದದೇವಾಲಯಗಳಜೀರ್ಣೋ ದ್ಧಾರಕ್ಕಾಗಿ ಹಣವನ್ನು ಗ್ರಾಮಸ್ಥರು ವಿನಿಯೋಗಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ನಿವೃತ್ತ ಶಿಕ್ಷಕನಿಂದ ಹರಾಜು: ಬಾಗೂರು ಹೋಬಳಿ ನವಿಲೆ ಗ್ರಾಮ ಪಂಚಾಯ್ತಿಯ ಆದಿಹಳ್ಳಿ ಗ್ರಾಮದಲ್ಲಿ ಸರ್ಕಾರಿ ಉದ್ಯೋಗದಿಂದ ನಿವೃತ್ತಿಯಾಗಿರುವ ವ್ಯಕ್ತಿಯೋರ್ವ 25 ಲಕ್ಷ ರೂ.ಗೆ ಸದಸ್ಯ ಸ್ಥಾನ ಹರಾಜು ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಎದುರಾಳಿ ಅಭ್ಯರ್ಥಿ 12 ಲಕ್ಷ ರೂ. ಗ್ರಾಮಕ್ಕೆ ಕೊಡುವುದಾಗಿ ಹೇಳಿದ್ದರು. ಈ ವೇಳೆ ಹಾಜರಿದ್ದ ನಿವೃತ್ತ ಶಿಕ್ಷಕ ದೇವಸ್ಥಾನಕ್ಕೆ ನಾನು 25 ಲಕ್ಷ ರೂ. ಕೊಡುತ್ತೇನೆಎಂದಿದ್ದರಿಂದ ಗ್ರಾಮ ಸ್ಥರು ಸಭೆ ಸೇರಿ ಚರ್ಚಿಸಿ ಸದಸ್ಯ ಸ್ಥಾನದ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

2 ಸ್ಥಾನ ತಲಾ 2 ಲಕ್ಷಕ್ಕೆ ಹರಾಜು:

ಕೆಂಬಾಳು ಗ್ರಾಪಂನ ಬೈರಾಪುರದಲ್ಲಿ ಎರಡು ಸ್ಥಾನಕ್ಕೆ ಹರಾಜು ಆಗಿದ್ದು, ಬಿಸಿಎಂಎ ಸ್ಥಾನ 2 ಲಕ್ಷ ರೂ., ಸಾಮಾನ್ಯ ಸ್ಥಾನ 5 ಲಕ್ಷ ರೂ., ಕಕ್ಕೇಹಳ್ಳಿಯಲ್ಲಿ ಗ್ರಾಮಸ್ಥರು ಸಭೆ ಸೇರಿ ಗ್ರಾಮಕ್ಕೆ 4.50 ಲಕ್ಷ ರೂ. ಯಾರು ನೀಡುತ್ತಾರೋಅವರನ್ನು ಸದಸ್ಯರನ್ನಾಗಿಮಾಡುವಂತೆ ತಿಳಿಸಿದ್ದರಿಂದ ಸಾಮಾನ್ಯ ಸ್ಥಾನದ ವ್ಯಕ್ತಿಯೋರ್ವ ಹಣ ಕೊಡುವ ಮೂಲಕ ಪರೋಕ್ಷವಾಗಿ ಹರಾಜಿನಲ್ಲಿ ಸದಸ್ಯರಾಗಲು ಹೊರಟಿದ್ದಾನೆ.

ಗೊಂದಲ ಸೃಷ್ಟಿ: ಬಾಗೂರು ಹೋಬಳಿ ಅಣತಿ ಗ್ರಾಮದಲ್ಲಿ ನಾಲ್ಕು ಸ್ಥಾನಕ್ಕೆ ಮಾತುಕತೆ ನಡೆದಿದ್ದು, ಎರಡು ಸ್ಥಾನ ಬಿಜೆಪಿ ಬೆಂಬಲಿತರು ಒಂದು ಸ್ಥಾನಜೆಡಿಎಸ್‌, ಮತ್ತೂಂದು ಸ್ಥಾನ ಕಾಂಗ್ರೆಸ್‌ಗೆ ಒಪ್ಪಿಗೆಆಗಿತ್ತು. ಆದರೆ, ಸಭೆಯಲ್ಲಿ ಗೊಂದಲ ಸೃಷ್ಟಿ ಆಗಿದ್ದರಿಂದ ನಾಲ್ಕು ಸ್ಥಾನಕ್ಕೆ ಮೂರು ಪಕ್ಷದವರು ಅಭ್ಯರ್ಥಿಯನ್ನುಕಣಕ್ಕೆ ಇಳಿಸಿದ್ದಾರೆ. ಹಿರೀಸಾವೆ ಹೋಬಳಿ ದಿಡಗ ಹಳೇ ಗ್ರಾಮದ ಮೂರು ಸ್ಥಾನಗಳಿಂದ ಮಾರಮ್ಮ ದೇವಸ್ಥಾನ ನಿರ್ಮಾಣಕ್ಕೆ 11 ಲಕ್ಷ ರೂ. ಪಡೆಯಲು

ತೀರ್ಮಾನವಾಗಿದೆ. ಕರಿಕ್ಯಾತನಹಳ್ಳಿ 17 ಲಕ್ಷ ರೂ. ಮತ್ತು ಮೇಳಹಳ್ಳಿ 3 ಲಕ್ಷ ರೂ. ಅನ್ನು ಗ್ರಾಮದ ಅಭಿವೃದ್ಧಿ ಮತ್ತು ದೇವಸ್ಥಾನ ನಿರ್ಮಾಣಕ್ಕೆ ನೀಡಲುಒಪ್ಪಿಗೆಯಾಗಿದೆ. ಹೊಸಹಳ್ಳಿ ಮತ್ತು ನಾಗನಹಳ್ಳಿ ಗ್ರಾಮಗಳ 3 ಸ್ಥಾನಗಳು 16 ಲಕ್ಷ ರೂ.ಗೆ ಮಾತುಕತೆ ನಡೆದಿದ್ದು, ಎರಡು ಗುಂಪುಗಳಿಂದಲೂ ನಾಮಪತ್ರ ಸಲ್ಲಿಕೆ ಆಗಿದೆ. ಹಿಂಪಡೆಯುವ ಒಳಗೆ ಗ್ರಾಮಸ್ಥರುಸಭೆ ಸೇರಿ ಅಂತಿಮ ತೀರ್ಮಾನ ಮಾಡಲಿದ್ದಾರೆ.

ವರ್ಷದ ಹಿಂದೆಯೇ ಕೊಟ್ಟಿದ್ರು: ಕಬ್ಬಳಿ ಗ್ರಾಮ ಪಂಚಾಯಿತಿಯ ದಾಸರಹಳ್ಳಿ ವೀರಭದ್ರ ದೇವಸ್ಥಾನ ನಿರ್ಮಾಣಕ್ಕೆ ವ್ಯಕ್ತಿಯೊಬ್ಬರು ವರ್ಷದ ಹಿಂದೆಯೇ 5 ಲಕ್ಷ ರೂ. ನೀಡಿದ್ದು ಇವರ ಆಯ್ಕೆ ಸುಲಭವಾಗಿದೆ. ಮಂಡಲೀಕನಹಳ್ಳಿಯ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಹಣ ಕೊಡುವುದಾಗಿ ವ್ಯಕ್ತಿಯೊಬ್ಬರು ಒಪ್ಪಿಕೊಂಡಿದ್ದು ಗ್ರಾಮಸ್ಥರು ಸಮ್ಮತಿಸಿದ್ದಾರೆ.

ಬೆಳಗೀಹಳ್ಳಿ ಪಂಚಾಯಿತಿಯ ಚಿಕ್ಕೋನಹಳ್ಳಿ ಒಂದು ಸ್ಥಾನಕ್ಕೆ4 ಲಕ್ಷ ರೂ. ನಿಗದಿಯಾಗಿದ್ದು,ಕೆಲವರ ಒಪ್ಪಿಗೆ ಇಲ್ಲದೆ ಮತ್ತೆ ಸಭೆ ನಡೆಯಬೇಕಿದೆ, ಇದೇ ಪಂಚಾಯ್ತಿವ್ಯಾಪ್ತಿಯಬದ್ದಿಕೆರೆ ಗ್ರಾಮದ2 ಸ್ಥಾನಗಳು 16.5 ಲಕ್ಷಕ್ಕೆ ನಿಗದಿಯಾಗಿದ್ದು, ಬಸವೇಶ್ವರಸ್ವಾಮಿ ರಥ ನಿರ್ಮಾಣಕ್ಕೆ ಹಣ ಬಳಸಲು ಗ್ರಾಮಸ್ಥರು ಒಪ್ಪಿಕೊಂಡಿದ್ದಾರೆ.

ಹಿರೀಸಾವೆ ಪಂಚಾಯ್ತಿಯ ಕೊಳ್ಳೇನಹಳ್ಳಿಯಲ್ಲಿ 4 ಲಕ್ಷ ರೂ.ಗೆ ಹರಾಜು ಪ್ರಕ್ರಿಯೆ ನಡೆದು ಗ್ರಾಮದಲ್ಲಿ ಒಮ್ಮತ ಸಿಗದ ಪರಿಣಾಮ ಚುನಾವಣೆಗೆ ಸಿದ್ಧರಾಗಿದ್ದಾರೆ. ಶ್ರವಣಬೆಳಗೊಳ, ಕಸಬಾ ಹಾಗೂ ದಂಡಿಗನಹಳ್ಳಿ ಹೋಬಳಿಯ ಕೆಲ ಗ್ರಾಮದಲ್ಲಿ ಮುಖಂಡರು ಗೌಪ್ಯ ಸಭೆ ಸೇರಿ ಹಣಕ್ಕೆ ತೀರ್ಮಾನ ಮಾಡಿದ್ದು, ಅವಿರೋಧ ಆಯ್ಕೆಗೆ ಮುಂದಾಗಿದ್ದಾರೆ.

ಗ್ರಾಮಸ್ಥರು ವಿರೋಧ ಇಲ್ಲದೆ ಇದ್ದರೆ ಆ ವ್ಯಕ್ತಿ ಅವಿರೋಧವಾಗಿ ಆಯ್ಕೆಯಾಗಲು ಚುನಾವಣೆಯಲ್ಲಿ ಅವಕಾಶ ಇರುತ್ತದೆ.ಇದರ ಬದಲಾಗಿ ಹಣದ ಮೂಲಕ ಅವಿರೋಧ ಆಯ್ಕೆ ಮಾಡುವುದು ತರವಲ್ಲ. ಜಗದೀಶ್‌, ಉಪವಿಭಾಗಾಧಿಕಾರಿ

 

ಶಾಮಸುಂದರ್‌ ಕೆ.ಅಣ್ಣೆನಹಳ್ಳಿ

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್‌ಡಿಡಿ

BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್‌ಡಿಡಿ

Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ

Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ

13

Lok Sabha elections: ಬೇಲೂರು; ಕೈ ಒಳಜಗಳ, ಜೆಡಿಎಸ್‌ಗೆ ಲಾಭ? 

Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್‌ ರೇವಣ್ಣ ಪ್ರಚಾರಕ್ಕೆ ಚಾಲನೆ

Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್‌ ರೇವಣ್ಣ ಪ್ರಚಾರಕ್ಕೆ ಚಾಲನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.