Udayavni Special

ಇಂದಿನಿಂದ ಬಿತ್ತನೆ ಆಲೂಗಡ್ಡೆ ಮಾರಾಟ ಆರಂಭ

ಕ್ವಿಂಟಲ್‌ಗೆ 2,150ರಿಂದ 2,250 ರೂ. ನಿಗದಿ „ ಸಹಾಯಧನ ಬಗ್ಗೆ ಪ್ರತಿಕ್ರಿಯಿಸದ ಸರ್ಕಾರ

Team Udayavani, May 11, 2020, 5:19 PM IST

ಇಂದಿನಿಂದ ಬಿತ್ತನೆ ಆಲೂಗಡ್ಡೆ ಮಾರಾಟ ಆರಂಭ

ಸಾಂದರ್ಭಿಕ ಚಿತ್ರ

ಹಾಸನ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಮೇ 11ರಿಂದ ಆರಂಭವಾಗಲಿದೆ. ನಗರದ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಆಲೂಗಡ್ಡೆ ಮಾರಾಟಕ್ಕೆ ಸಿದ್ಧತೆ ನಡೆಸಲಾಗಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸುಕರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ.

13 ಸಾವಿರ ಟನ್‌ ದಾಸ್ತಾನು: ಕಳೆದ ಎರಡು ತಿಂಗಳನಿಂದ ಪಂಜಾಬ್‌ನಿಂದ ಸರಬರಾಜಾಗಿರುವ ಸುಮಾರು 13ಸಾವಿರ ಟನ್‌ ಬಿತ್ತನೆ ಆಲೂಗಡ್ಡೆಯನ್ನು ನಗರದ ಕೈಗಾರಿಕಾ
ಪ್ರದೇಶ ಹಾಗೂ ಕೈಗಾರಿಕಾಭಿವೃದ್ಧಿ ಕೇಂದ್ರದ ವಿವಿಧ ಶೀತಲ ಗೃಹಗಳಲ್ಲಿ ದಾಸ್ತಾನು ಮಾಡಲಾಗಿದೆ. ಶೀತಲಗೃಹಗಳಿಂದ ಆಯಾ ದಿನದ ಮಾರಾಟಕ್ಕೆ ಅಗತ್ಯವಾದಷ್ಟು ಆಲೂ ಗಡ್ಡೆಯನ್ನು ಸಂಜೆ 6.30 ರ ನಂತರ ರಾತ್ರಿ 12 ಗಂಟೆವರೆಗೆ ಎಪಿಎಂಸಿ ಪ್ರಾಂಗಣಕ್ಕೆ ಆಲೂಗಡ್ಡೆಯನ್ನು ಲಾರಿಗಳಲ್ಲಿ ತಂದಿಳಿಸಲು ಸೂಚನೆ ನೀಡಿದ್ದಾರೆ. ಪೊಲೀಸರು ರೈತರ ತಂಡಗಳನ್ನು ಮಾಡಿ ಆಲೂಗಡ್ಡೆ ಮಾರುಕಟ್ಟೆಗೆ ಬಿಡಲಿದ್ದಾರೆ. ಒಂದು ತಂಡ ಆಲೂಗಡ್ಡೆ ಖರೀದಿಸಿದ ನಂತರ ಮತ್ತೂಂದು ರೈತರ ತಂಡವ ಮಾರು ಕಟ್ಟೆ ಪ್ರವೇಶಿಸುವ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ 15 ಸಾವಿರ ಹೆಕ್ಟೇರ್‌ನಲ್ಲಿ ಆಲೂ ಗಡ್ಡೆ ಬಿತ್ತನೆ ಆಗಬಹುದು ಎಂದು ತೋಟ ಗಾರಿಕೆ ಇಲಾಖೆ ಅಂದಾಜು ಮಾಡಿದೆ.

ಇನ್ನೂ ನಿರ್ಧಾರವಾಗದ ಸಬ್ಸಿಡಿ: ಕಳೆದ ವರ್ಷ ಆಲೂಗಡ್ಡೆ ಬಿತ್ತನೆ ಬೀಜ ಹಾಗೂ ಔಷಧಿಗೆ ಶೇ.50 ರಷ್ಟು ಸಹಾಯಧನವನ್ನು ಸರ್ಕಾರ ನೀಡಿತ್ತು. 27.2 ಕೋಟಿ ರೂ. ಸಬ್ಸಿಡಿ ನೀಡಬೇಕು ಎಂದು ಹಾಸನ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆಲೂ ಬಿತ್ತನೆ ಬೀಜಕ್ಕೆ ಸಬ್ಸಿಡಿ ನೀಡುವಂತೆ ಮುಖ್ಯಮಂತ್ರಿಯನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದರೂ ಸಬ್ಸಿಡಿ ನೀಡುವ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಮಾಡಿಲ್ಲ.

2,250 ರಿಂದ 2,150 ರೂ. ನಿಗದಿ: ಜಿಲ್ಲಾಡಳಿತವು ಶಾಸಕರು ಹಾಗೂ ವರ್ತಕರ ಸಭೆ ನಡೆಸಿ ಗುಣ ಮಟ್ಟದ ಸಾಮಾನ್ಯ ಗಾತ್ರದ ಒಂದು ಕ್ವಿಂಟಲ್‌ ಆಲೂಗಡ್ಡೆಗೆ 2,250 ರೂ.
ದಪ್ಪ ಗಾತ್ರದ ಆಲೂಗಡ್ಡೆಗೆ 2,150 ರೂ. ದರ ನಿಗದಿಪಡಿಸಿದೆ. ರೈತರು ಖರೀದಿಸಿದ ಆಲೂಗಡ್ಡೆಗೆ ವರ್ತಕರು ರಶೀದಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ.

ಜಿಲ್ಲಾಡಳಿತ ರೈತರನ್ನು ಕಡೆಗಣಿಸಿದೆ:
ಆಲೂಗಡ್ಡೆ ಮಾರಾಟದ ವ್ಯವಸ್ಥೆ, ದರ ನಿಗದಿಯ ಸಭೆಗಳಿಗೆ ರೈತ ಮುಖಂಡರನ್ನು ಕರೆಯದೇ ಹಾಸನ ಜಿಲ್ಲಾಡಳಿತ ಕಡೆಗಣಿಸಿದೆ. ವರ್ತಕರ ಲಾಬಿಗೆ ಮಣಿದು ಆಲೂಗಡ್ಡೆ ದರ
ನಿಗದಿಪಡಿಸಿದೆ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ ಆಪಾದಿಸಿದ್ದಾರೆ.

ಜಿಲ್ಲಾಡಳಿತದ ನಿರ್ದೇಶನ ಪಾಲನೆ: ಬಿತ್ತನೆ ಆಲೂಗೆಡ್ಡೆ ಖರೀದಿ ಸಂದರ್ಭದಲ್ಲಿ ರೈತರಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಹಾಸನ ಎಪಿಎಂಸಿ ಅಧ್ಯಕ್ಷ ಮಂಜೇಗೌಡ ತಿಳಿಸಿದ್ದಾರೆ. ಔಷಧ, ರಸ ಗೊಬ್ಬರವನ್ನು ಎಪಿಎಂಸಿಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಜಿಲ್ಲಾಡಳಿತ ನಿಗದಪಡಿಸಿದ ದರದಲ್ಲೇ ಬಿತ್ತನೆ ಆಲೂಗಡ್ಡೆ ಮಾರಾಟವಾಗಲಿದೆ ಎಂದಿದ್ದಾರೆ.

ಟಾಪ್ ನ್ಯೂಸ್

ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ಬಾಗಿವೆ ಅಪಾಯಕಾರಿ ಮರಗಳು

ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ಬಾಗಿವೆ ಅಪಾಯಕಾರಿ ಮರಗಳು

ತಾಲೂಕು ಕೇಂದ್ರವಾದರೂ ಕಡಬಕ್ಕಿಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ

ತಾಲೂಕು ಕೇಂದ್ರವಾದರೂ ಕಡಬಕ್ಕಿಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶನ್‌, ರಾಹುಲ್‌

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್‌, ರಾಹುಲ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

250 cases in a single day: Rs 1.25 lakh Fine

ಒಂದೇ ದಿನಕೆ 250 ಕೇಸ್‌: 1.25 ಲಕ್ಷ ರೂ. ದಂಡ

14

ಅಧಿಕಾರ ದುರುಪಯೋಗ: ಎಫ್ಐಆರ್‌

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಜಿಲ್ಲಾ ಕಸಾಪ ಚುನಾವಣೆ ಪ್ರಚಾರ ಶುರು

ಜಿಲ್ಲಾ ಕಸಾಪ ಚುನಾವಣೆ ಪ್ರಚಾರ ಶುರು

ಜಿಲ್ಲೆಯಲ್ಲಿ ಆಯುಧ ಪೂಜೆ ಸರಳ ಆಚರಣೆ

ಜಿಲ್ಲೆಯಲ್ಲಿ ಆಯುಧ ಪೂಜೆ ಸರಳ ಆಚರಣೆ

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

 ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ: ಒಂದು ತಿಂಗಳ ರಾಜಸ್ವ 13.7 ಕೋ.ರೂ.

 ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ: ಒಂದು ತಿಂಗಳ ರಾಜಸ್ವ 13.7 ಕೋ.ರೂ.

ಫ್ರೂಟ್ಸ್‌ ತಂತ್ರಾಂಶ: ಜಿಲ್ಲೆಯಲ್ಲಿ ಶೇ. 48.55ರಷ್ಟು ಮಾತ್ರ ಪ್ರಗತಿ

ಫ್ರೂಟ್ಸ್‌ ತಂತ್ರಾಂಶ: ಜಿಲ್ಲೆಯಲ್ಲಿ ಶೇ. 48.55ರಷ್ಟು ಮಾತ್ರ ಪ್ರಗತಿ

ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ಬಾಗಿವೆ ಅಪಾಯಕಾರಿ ಮರಗಳು

ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ಬಾಗಿವೆ ಅಪಾಯಕಾರಿ ಮರಗಳು

ಜಿಎಸ್‌ಬಿ ಸಮಾಜ: “ವಿದ್ಯಾಕಲ್ಪಕ ವಿದ್ಯಾರ್ಥಿ ವೇತನ’ ವಿತರಣೆ

ಜಿಎಸ್‌ಬಿ ಸಮಾಜ: “ವಿದ್ಯಾಕಲ್ಪಕ ವಿದ್ಯಾರ್ಥಿ ವೇತನ’ ವಿತರಣೆ

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 1,800 ರೂ. ಬಾಡಿಗೆ ನಿಗದಿ

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 1,800 ರೂ. ಬಾಡಿಗೆ ನಿಗದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.