ಸವಾರರಿಗೆ ಮಾರಕವಾದ ಹೊಳೆ ಬೆಳ್ಳೂರು ರಸ್ತೆ


Team Udayavani, Sep 29, 2021, 2:59 PM IST

ಸವಾರರಿಗೆ ಮಾರಕವಾದ ಹೊಳೆ ಬೆಳ್ಳೂರು ರಸ್ತೆ

ಆಲೂರು: ಮೂರ್ನಾಲ್ಕು ವರ್ಷಗಳಿಂದ ತಾಲೂಕಿನ ಹೊಳೆ ಬೆಳ್ಳೂರು ರಸ್ತೆಯಲ್ಲಿ ಅಪಾರ ಪ್ರಮಾಣದ ಗುಂಡಿ ಬಿದ್ದು ಜನಸಾಮಾನ್ಯರು ಓಡಾಡಲು ತುಂಬಾತೊಂದರೆ ಅನುಭವಿಸುತ್ತಿದ್ದಾರೆ. ಆದರೂ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂಬಂಧ ಇಲಾಖೆ ಗಮನಹರಿಸಲಿ: ಆಲೂರು ಪಟ್ಟಣಕ್ಕೆ 5 ಕಿ.ಮೀ.ದೂರದಲ್ಲಿರುವ ಹೊಳೆ ಬೆಳ್ಳೂರುರಸ್ತೆ ಈ ಹಿಂದೆ ಸಂಪೂರ್ಣವಾಗಿ ಗುಂಡಿ ಬಿದ್ದ ಹಿನ್ನೆಲೆ 3-4 ವರ್ಷಗಳ ಹಿಂದೆ ಬಂಡಿ ತಿಮ್ಮನಹಳ್ಳಿ, ಚಿಕ್ಕಣಗಾಲು ಹೊಸಳ್ಳಿ, ಕುಂಬಾರಹಳ್ಳಿ, ಕುಂಬಾರಹಳ್ಳಿಕೊಪ್ಪಲು, ನಾಕಲಗೋಡು ಕೊಪ್ಪಲು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ಪಕ್ಕದಲ್ಲಿಎತ್ತಿನಹೊಳೆ ಕಾಲುವೆ ಹಾದು ಹೋಗಿರುವುದರಿಂದರಸ್ತೆಯಲ್ಲಿ ಎತ್ತಿನ ಹೊಳೆ ಇಲಾಖೆಗೆ ಸೇರಿದ ವಾಹನಗಳು ಓಡಾಡುವುದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು ಸಂಬಂಧಪಟ್ಟ ಇಲಾಖೆ ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆ 3-4 ವರ್ಷಗಳ ಹಿಂದೆಎತ್ತಿನಹೊಳೆ ಯೋಜನೆ ಇಲಾಖೆ 3 ಕೋಟಿ ರೂ.ವೆಚ್ಚದಲ್ಲಿ ಗೇಕರವಳ್ಳಿ ಕೆರೆ ಏರಿಗೆ ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಲಾಗಿದೆ.

ರಸ್ತೆ ಸಮಸ್ಯೆಯಿಂದ 3 ವರ್ಷಗಳಿಂದ ಬಸ್‌ ಬರುತ್ತಿಲ್ಲ  :

ಕೆರೆಯ ಎಡ ಭಾಗದಲ್ಲಿ ಆಳವಾದ ಕೆರೆ ಬಲ ಭಾಗದಲ್ಲಿ ಆಳವಾದ ಗದ್ದೆ ಹಳ್ಳ ಇರುವುದರಿಂದ ಜನಸಾಮಾನ್ಯರು ಕೆರೆ ಏರಿ ಮೇಲೆ ಓಡಾಡಲು ಭಯ ಪಡುವಂತಾಗಿದೆ. ಹೀಗಾಗಿ ಹೊಳೆ ಬೆಳ್ಳೂರಿಗೆ ಬರುತ್ತಿದ್ದ ಬಸ್‌ 3 ವರ್ಷಗಳಿಂದಲೂ ನಿಂತು ಹೋಗಿದ್ದು ಜನ ಸಾಮಾನ್ಯರು ಸುತ್ತಿ ಬಳಸಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಯಾವುದೇ ವಾಹನ ಸವಾರರು ಬರುತ್ತಿಲ್ಲ. ಒಂದು ವೇಳೆ ಬಂದರೂ ರಸ್ತೆ ಗುಂಡಿಯೊಳಗೆ ಬಿದ್ದು ಎಷ್ಟೋ ವಾಹನ ಸವಾರರು ಕೈ ಕಾಲು ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆಂದು ಸ್ಥಳೀಯರೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನುಳಿದ ಕಾಮಗಾರಿ ಮುಗಿಸಲಿ:

ತಾಲೂಕಿನ ಹೊಳೆಬೆಳ್ಳೂರು ರಸ್ತೆ ಸಂಪೂರ್ಣವಾಗಿ ಹಾಳಾದ ಹಿನ್ನೆಲೆ ಜನಸಾಮಾನ್ಯರು ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆಯಾಗಿದೆ. ಈ ಭಾಗದ ಜನಸಾಮಾನ್ಯರ ಹೋರಾಟದ ಫ‌ಲವಾಗಿ ಎತ್ತಿನಹೊಳೆ ಇಲಾಖೆ ವತಿಯಿಂದ ಗೇಕರವಳ್ಳಿ ಕೆರೆ ಏರಿ ಮೇಲೆ ಕಾಂಕ್ರೀಟೀಕರಣ ಮಾಡಲಾಗಿದೆ.ಇನ್ನುಳಿದ ಕಾಮಗಾರಿ ಆದಷ್ಟು ಬೇಗ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ತಾಪಂ ಮಾಜಿ ಸದಸ್ಯ ನಟರಾಜ್‌ ನಾಕಲಗೊಡು ಒತ್ತಾಯಿಸಿದ್ದಾರೆ.

ಬಿಕ್ಕೋಡು ರಸ್ತೆಯಿಂದ ಹೊಳಬೆಳ್ಳೂರು ಗ್ರಾಮದವರೆಗೆ ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದು ಓಡಾಡದಂತಹ ಸ್ಥಿತಿನಿರ್ಮಾಣವಾಗಿದೆ. ಈ ಭಾಗದ ಜನಸಾಮಾನ್ಯರ ಹೋರಾಟದಫ‌ಲವಾಗಿ ಗೇಕರವಳ್ಳಿ ಕೆರೆ ಏರಿ ಮೇಲೆ ಕೇವಲ 750 ಮೀ.ಮಾತ್ರ ಕಾಂಕ್ರಿಟ್‌ ರಸ್ತೆ ನಿರ್ಮಾಣವಾಗಿದೆ. ಆದರೆ ಕೆರೆ ಏರಿ ರಸ್ತೆಯ ಇಕ್ಕೆಲಗಳಲ್ಲಿ ತಡೆಗೊಡೆ ನಿರ್ಮಾಣವಾಗಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. – ವೀಣಾ, ಹುಣಸವಳ್ಳಿ ಗ್ರಾಪಂ ಸದಸ್ಯೆ

 

– ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ

ಟಾಪ್ ನ್ಯೂಸ್

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಕಲೇಶಪುರ: ಪಾಕಿಸ್ತಾನದ ವಿರುದ್ಧ ಸೋತ ಭಾರತ; ಅಭಿಮಾನಿಯಿಂದ ಟಿವಿ ಒಡೆದು ಹಾಕಿ ಆಕ್ರೋಶ

ಸಕಲೇಶಪುರ: ಪಾಕಿಸ್ತಾನದ ವಿರುದ್ಧ ಸೋತ ಭಾರತ; ಅಭಿಮಾನಿಯಿಂದ ಟಿವಿ ಒಡೆದು ಹಾಕಿ ಆಕ್ರೋಶ

2 crore fraud- owner escapes

2 ಕೋಟಿ ವಂಚನೆ: ಮಾಲೀಕ ಪರಾರಿ

Persistent attacks by more than thirty-two elephants

ತೋಟ-ಗದ್ದೆಗಳಿಗೆ ನುಗ್ಗಿದ ಕಾಡಾನೆ ಹಿಂಡು: ಬೆಳೆ ಧಂಸ

ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ

ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ

ಘಟನೆಯಲ್ಲಿ ಓರ್ವ ಸಾವು 6 ಮಂದಿಗೆ ಗಾಯ „ ಆರೋಪಿ ನವೀನ್‌ ಬಂಧನ

ಬುದ್ಧಿ ಹೇಳಿದಕ್ಕೆ ಕಾರು ಹತ್ತಿಸಿ ಕೊಂದ!

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.