ಹಾಸನ: ಹೋಟೆಲ್ ಹಿಂಭಾಗ ಯುವತಿಯ ಮೃತದೇಹ ಪತ್ತೆ : ಕುತೂಹಲಕ್ಕೆ ಕಾರಣವಾದ ಕೈಯ ಹಚ್ಚೆ
Team Udayavani, Oct 20, 2019, 3:56 PM IST
ಹಾಸನ: ಇಲ್ಲಿನ ಹೋಟೆಲ್ ಒಂದರ ಹಿಂಭಾಗದಲ್ಲಿ ಯುವತಿಯೋರ್ವಳ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅರಕಲಗೂಡು ಮೂಲದ ಭವಿತಾ (23) ಮೃತಪಟ್ಟ ಯುವತಿ. ಈಕೆ ಕಳೆದೆರಡು ವಾರಗಳಿಂದ ಇಲ್ಲಿನ ಹೋಟೆಲ್ ಒಂದರಲ್ಲಿ ರೂಮ್ ಮಾಡಿಕೊಂಡು ವಾಸಾವಾಗಿದ್ದು, ರವಿವಾರ ಬೆಳಗ್ಗೆ ಅದೇ ಹೋಟೆಲ್ ಹಿಂಬದಿ ಆಕೆಯ ಶವ ಪತ್ತೆಯಾಗಿದೆ.
ಯುವತಿಯ ಪೋಷಕರು ಈ ಬಗ್ಗೆ ದೂರು ನೀಡಿದ್ದಾರೆ. ಯುವತಿ ದೇಹದ ಕೆಲವು ಭಾಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದು, ಅದರಲ್ಲಿ ಪುನೀತ್ ಎಂಬವನ ಹೆಸರನ್ನು ಆಕೆ ಹಚ್ಚೆ ಹಾಕಿಕೊಂಡಿದ್ದಳು ಎನ್ನಲಾಗಿದೆ.