ಆನೆ ಕಾರಿಡಾರ್‌ಗೆ ರಾಜ್ಯ ಸರ್ಕಾರದಿಂದ ಭೂಮಿ ಖರೀದಿ


Team Udayavani, Mar 1, 2019, 7:13 AM IST

aane-kari.jpg

ಸಕಲೇಶಪುರ: ಆನೆ ಕಾರಿಡಾರ್‌ ಯೋಜನೆಗಾಗಿ ರೈತರು ಸ್ವಯಂ ಪ್ರೇರಣೆಯಿಂದ ಅರಣ್ಯ ಇಲಾಖೆಗೆ ನೀಡಲು ಮುಂದಾಗಿರುವ ಹೆತ್ತೂರು ಹೋಬಳಿಯ 8 ಗ್ರಾಮಗಳ ಭೂಮಿಯನ್ನು ರಾಜ್ಯ ಸರ್ಕಾರದಿಂದಲೇ ಖರೀದಿಸುವ ಪ್ರಯತ್ನ ನಡೆಸಲಾಗುವುದು ಎಂದು ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ತಾಲೂಕಿನ ಹೆತ್ತೂರು ಹೋಬಳಿಯ ಅತ್ತಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ಗ್ರಾಮಸ್ಥರೊಂದಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. 

ಅರಣ್ಯ ಇಲಾಖೆಗೆ ಭೂಮಿ ನೀಡಲು ಸಿದ್ಧ: ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ಹೆತ್ತೂರು ಹೋಬಳಿ ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿದೆ.   ಕಾಡಾನೆಗಳು ಹಾಗೂ ಕಾಡುಪ್ರಾಣಿಗಳ ಹಾವಳಿ ಸಹ ವ್ಯಾಪಕವಾಗಿರುವುದರಿಂದ ನಾವೆಲ್ಲಾ ಉತ್ತಮ ಪರಿಹಾರ ಕೊಟ್ಟಲ್ಲಿ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ಸಿದ್ಧರಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಗ್ರಾಮಸ್ಥರು ಆತಂಕ ಪಡುವುದು ಬೇಡ, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಹೆತ್ತೂರು ಹೋಬಳಿಯ ವನಗೂರು ಹಾಗೂ ಹೊಂಗಡಹಳ್ಳ ಗ್ರಾಪಂ ವ್ಯಾಪ್ತಿಯ 8 ಗ್ರಾಮಗಳ 450 ಕುಟುಂಬದ ಸುಮಾರು 2,200 ಎಕರೆ ಭೂಮಿಯನ್ನು  ರಾಜ್ಯ ಸರ್ಕಾರವೇ ಈ ಗ್ರಾಮಗಳ ಭೂಮಿ ಖರೀದಿಸುವ ಬಗ್ಗೆ ಚಿಂತನೆ ನಡೆಸಿದ್ದು ಇದ್ಕಕಾಗಿ 450 ಕೋಟಿ ಹೊರೆ ರಾಜ್ಯ ಸರ್ಕಾರಕ್ಕೆ ಬೀಳಲಿದೆ ಎಂದರು. 

ಶಾಸಕ ಎಚ್‌.ಕೆ ಕುಮಾರಸ್ವಾಮಿ, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್‌,ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್‌,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ. ಸಿಂಹ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ಸಕಲೇಶಪುರ ವಲಯ ಅರಣ್ಯಾಧಿಕಾರಿ ರವೀಂದ್ರ ಮುಂತಾದವರು ಉಪಸ್ಥಿತರಿದ್ದರು.

ಶಾಸಕರ ವಿರುದ್ಧ ಆಕ್ರೋಶ: ಅರಣ್ಯ ಸಚಿವರು ಹೋಬಳಿಗೆ ಬಂದರು ಮಾಹಿತಿ ನೀಡಲು ನಿಮಗೇನ್ರಿ ತೊಂದರೆ, ಎಂದು ಹೆತ್ತೂರು ಗ್ರಾಮದ ಜನರು ಶಾಸಕ ಎಚ್‌.ಕೆ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡರು. ಚಿಕ್ಕಮಗಳೂರಿನಿಂದ ಆಗಮಿಸಿದ ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ತಾಲೂಕಿನ ಆನೇಮಹಲ್‌ ಗ್ರಾಮದಲ್ಲಿ ಸ್ವಾಗತಿಸಿದ ಶಾಸಕರು ಹೆತ್ತೂರು ಗ್ರಾಮದ ಮೂಲಕ ಅತ್ತಿಹಳ್ಳಿ ಗ್ರಾಮಕ್ಕೆ ಕರೆದೊಯ್ದದರು.  

ಅರಣ್ಯ ಸಚಿವರು ಬರುವ ವಿಷಯ ತಿಳಿದ ಹೆತ್ತೂರು ಗ್ರಾಮಸ್ಥರು ಗ್ರಾಮದ ರಸ್ತೆಯಲ್ಲಿ ಸೇರಿದ್ದರೂ  ಸಚಿವರು ಕಾರು ನಿಲ್ಲಿಸದೇ ತೆರಳಿದ್ದರು. ಇದಕ್ಕೆ ಶಾಸಕರೇ ಕಾರಣ ಎಂದು ಆರೋಪಿಸಿದ ಗ್ರಾಮಸ್ಥರು, ಅತ್ತಿಹಳ್ಳಿ ಗ್ರಾಮದಲ್ಲಿ ಸಭೆ  ನಂತರ ಸಚಿವರನ್ನು ವಾಪಸ್‌ ಗ್ರಾಮಕ್ಕೆ ಕರೆಸುವಲ್ಲಿ ಯಶಸ್ವಿಯಾದರು.  

ಸಭೆಯಲ್ಲಿ ಮಾತನಾಡಿದ ಕೆಲವರು, ಏಲಕ್ಕಿ ಬೆಳೆ ನಾಶವಾಗಿರುವುದರಿಂದ ಈ ಪ್ರದೇಶದಲ್ಲಿ ಪರ್ಯಾಯ ಬೆಳೆ ಬೆಳೆಯಲು ಮರ ಕಡಿಯಲು ಅಮುಮತಿ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಸಚಿವರು ಈ ಬಗ್ಗೆ ಶೀಘ್ರದಲ್ಲೆ ಸಕರಾತ್ಮಕ ನಿಲುವು ತೆಳೆಯುವುದಾಗಿ ತಿಳಿಸಿದರು. 

ಟಾಪ್ ನ್ಯೂಸ್

accident

ಭೀಕರ ಅಪಘಾತ: ಅಂತ್ಯಕ್ರಿಯೆಗೆ ತೆರಳುತ್ತಿದ್ದ 15 ಮಂದಿ ದುರ್ಮರಣ

cm-bomm

ಹೊಸವರ್ಷ ಆಚರಣೆ ವಿಚಾರದ ಬಗ್ಗೆ ತೀರ್ಮಾನ ಮಾಡಿಲ್ಲ : ಸಿಎಂ

1-sadsa

ಮೆಕ್ಸಿಕೋ: ಡ್ರಗ್ಸ್ ಕಳ್ಳಸಾಗಣೆ ತಂಡಗಳ ಭಾರಿ ಗುಂಡಿನ ಚಕಮಕಿ; 8 ಸಾವು

covid 19

ದೇಶದಲ್ಲಿ ಮತ್ತೆ ಹೆಚ್ಚಿದ ಕೋವಿಡ್ 19 ಹೊಸ ಪ್ರಕರಣಗಳ ಸಂಖ್ಯೆ!

rashid khan

16 ಕೋಟಿ ರೂ.ಗಾಗಿ ಪಟ್ಟು ಹಿಡಿದ ರಶೀದ್ ಖಾನ್: ಇಕ್ಕಟ್ಟಲ್ಲಿ ಸಿಲುಕಿದ ಸನ್ ರೈಸರ್ಸ್ !

3clean

ದಾಂಡೇಲಿ: ಗಬ್ಬು ನಾರುತ್ತಿರುವ ಸಂಡೆ ಮಾರ್ಕೆಟ್ ಹೊರ ಆವರಣ

baba-ramdev

ಮೋದಿಯವರ ಉದ್ದೇಶ ಒಳ್ಳೆಯದು: ರೈತರಿಗೆ ಬಾಬಾ ರಾಮ್ ದೇವ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾಧುಗಳ ಬೇಟಿ

ದೇಗುಲಗಳಿಗೆ ನಾಗಾ ಸಾಧುಗಳು ಭೇಟಿ

ಅಕ್ರಮ ದಾಖಲೆ ಸೃಷ್ಟಿಸಿ ಪಪಂ ಆ ಪರಭಾರೆ

ಅಕ್ರಮ ದಾಖಲೆ ಸೃಷ್ಟಿಸಿ ಪಪಂ ಆ ಪರಭಾರೆ

ನೇರ್ಲಿಗೆ ಸರ್ಕಾರಿ ಶಾಲೆ ಕಟ್ಟಡ ಕುಸಿತ

ನೇರ್ಲಿಗೆ ಸರ್ಕಾರಿ ಶಾಲೆ ಕಟ್ಟಡ ಕುಸಿತ

ಕಸಾಪದಲ್ಲಿ ಪರಿಶುದ್ಧತೆಗೆ ಆದ್ಯತೆ

ಕಸಾಪದಲ್ಲಿ ಪರಿಶುದ್ಧತೆಗೆ ಆದ್ಯತೆ

ಅಪ್ಪ ಬಿಜೆಪಿ ಮಗ ಕಾಂಗ್ರೆಸ್‌- ನಿಷ್ಠೆ ಯಾರಿಗೆ-

ಅಪ್ಪ ಬಿಜೆಪಿ, ಮಗ ಕಾಂಗ್ರೆಸ್‌: ನಿಷ್ಠೆ ಯಾರಿಗೆ?

MUST WATCH

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

udayavani youtube

ಮೈಮೇಲೆ ದೇವರು ಬಂದಿದ್ದಾರೆ ಎಂದು ಲಸಿಕೆ ಹಾಕಲು ಬಂದವರನ್ನೇ ಯಾಮಾರಿಸಿದ ವ್ಯಕ್ತಿ

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಹೊಸ ಸೇರ್ಪಡೆ

ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ: ರತ್ನಾಕರ ಜಿ. ಪೂಜಾರಿ

ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ: ರತ್ನಾಕರ ಜಿ. ಪೂಜಾರಿ

7worship

ಲಿಂ| ರಾಚೋಟೇಶ್ವರ ಸ್ವಾಮೀಜಿ ಪುಣ್ಯಾರಾಧನೆ

6eye

ನೇತ್ರದಾನ ಎಲ್ಲಕ್ಕಿಂತ ಶ್ರೇಷ್ಠ ದಾನ: ಡಾ| ಕ್ರಾಂತಿಕಿರಣ

accident

ಭೀಕರ ಅಪಘಾತ: ಅಂತ್ಯಕ್ರಿಯೆಗೆ ತೆರಳುತ್ತಿದ್ದ 15 ಮಂದಿ ದುರ್ಮರಣ

5bjp

ಪರಿಷತ್ತು ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.