ಕಾವೇರಿ ಸ್ವತ್ಛತಾ ಆಂದೋಲನಕ್ಕೆ ಸಹಕರಿಸಿ

ಹುಣ್ಣಿಮೆ ಆರತಿ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಸಿದ್ದ ರಾಜು ಮನವಿ

Team Udayavani, May 23, 2019, 3:21 PM IST

ರಾಮನಾಥಪುರ ಕಾವೇರಿ ನದಿ ದಂಡೆಯಲ್ಲಿ ಕಾವೇರಿ ನದಿ ಸ್ವಚ್ಛತಾ ಅಂದೋಲನಾ ಸಮಿತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ರಾಮನಾಥಪುರ: ಪ್ರಕೃತಿಯನ್ನು ಆರಾಧಿಸುವುದರೊಂದಿಗೆ ಬೆಳೆಸಿ ಉಳಿಸಿ ದಲ್ಲಿ ಮಾತ್ರ ಪರಿಸರದ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿ ಅಧ್ಯಕ್ಷ ಸಿದ್ದರಾಜು ಹೇಳಿದರು.

ಪಟ್ಟಣದ ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಡೆದ ಹುಣ್ಣಿಮೆ ಆರತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಾವೇರಿ ನದಿಯ ಸ್ವಚ್ಛತೆ ಹಾಗೂ ಸಂರಕ್ಷಣೆ ನಿಟ್ಟಿನಲ್ಲಿ ಸ್ವಚ್ಛತಾ ಆಂದೋಲನಾ ಸಮಿತಿ ಕೈಗೊಂಡಿರುವ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬ ನಾಗರಿಕರೂ ಸಹಕರಿಸಿ ಸ್ವಚ್ಛ ಪರಿಸರದ ಉಳಿವಿಗೆ ಕಾರಣಿಭೂತರಾಗ ಬೇಕು ಎಂದು ಮನವಿ ಮಾಡಿದರು.

ಸಮಿತಿ ಜಿಲ್ಲಾ ಅಧ್ಯಕ್ಷ ಎಂ.ಎನ್‌.ಕುಮಾರಸ್ವಾಮಿ ಮಾತನಾಡಿ, ದಕ್ಷಿಣ ಭಾರತದ ಕೋಟ್ಯಂತರ ಜನ, ಜಾನು ವಾರುಗಳಿಗೆ ಜೀವ ಜಲವಾಗಿರುವ ಕಾವೇರಿ ತನ್ನ ತವರೂರಾದ ಕೊಡಗು ಜಿಲ್ಲೆಯ ಮೂಲದಿಂದಲೇ ಕಲುಷಿತ ವಾಗಿ ಹರಿಯುವ ಸ್ಥಿತಿ ಕಂಡುಬರುತ್ತಿ ರುವುದು ನಿಜಕ್ಕೂ ದುರಂತ. ಅರಣ್ಯ ನಾಶ ಹಾಗೂ ಹವಾಮಾನ ವೈಪರೀತ್ಯ ದಿಂದ ಧರೆಯಲ್ಲಿ ಏರುಪೇರು ಉಂಟಾ ಗುವುದರೊಂದಿಗೆ ಅಭಿವೃದ್ಧಿ ಹಾಗೂ ಪ್ರವಾಸೋಧ್ಯಮ ಹೆಸರಿನಲ್ಲಿ ಜೀವನದಿ ಕಾವೇರಿಯ ಉಪನದಿಗಳು ಮಾಯ ವಾಗುವುದರೊಂದಿಗೆ ಪ್ರಮುಖ ನದಿ ಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳು ತ್ತಿರುವುದು ಇತ್ತೀಚಿನ ಬೆಳವಣಿಗೆ ಯಾಗಿದೆ ಎಂದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿ ತಾಲೂಕು ಕಾರ್ಯದರ್ಶಿ ಕಾಳಬೋಮಿ, ಖಜಾಂಚಿ ಕೇಶವ, ಸದಸ್ಯ ರಾದ ವಿಯಕುಮಾರ್‌, ಶ್ರೀರಾಮ, ಅಶ್ವನ್‌, ಮಂಜು, ಸೌಭಾಗ್ಯ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ