ತುಂಬಿದ ಚೆಕ್ ‌ಡ್ಯಾಂ, ಕೃಷಿ ಹೊಂಡ; ರೈತರಿಗೆ ಖುಷಿ

ಕೋವಿಡ್ ಲಾಕ್‌ಡೌನ್‌ನಲ್ಲಿ ನರೇಗಾಕ್ಕೆ ಹೆಚ್ಚಿನ ಪ್ರೋತ್ಸಾಹ „

Team Udayavani, Oct 18, 2020, 6:09 PM IST

hasan-tdy-1

ಚನ್ನರಾಯಪಟ್ಟಣ: ಕಳೆದ 15 ದಿನದಿಂದ ನಿರಂ ತರವಾಗಿ ಸುರಿಯುತ್ತಿರುವ ಮಳೆ ಕೃಷಿಕರಲ್ಲಿ ಒಂದಷ್ಟು ಭರವಸೆ ಮೂಡಿಸಿದ್ದು ಹಲವು ವರ್ಷದಿಂದ ಪಾಳು ಗುಂಡಿಗಳಾಗಿದ್ದ ಚೆಕ್‌ ಡ್ಯಾಂ, ಕೃಷಿ ಹೊಂಡಗಳಲ್ಲಿ ನೀರು ತುಂಬಿ ತುಳುಕುತ್ತಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣ ವಾಗಿರುವ ಚೆಕ್‌ಡ್ಯಾಂ ಮತ್ತು ಕೃಷಿಹೊಂಡಗಳಿಂದ ಅಂತರ್ಜಲ ವೃದ್ಧಿ, ರಾಸುಗಳಿಗೆ, ಪ್ರಾಣಿ, ಪಕ್ಷಿಗಳಿಗೆ ನೆರವಾಗುತ್ತಿದೆ. ಒಂದೆರಡು ದಶಕದಿಂದ ಹಳ್ಳ ಕೊಳ್ಳಗಳಲ್ಲಿ ನೀರಿಲ್ಲದೆ ಇದ್ದರಿಂದ ಪರಿಸರದಲ್ಲಿನ ಪ್ರಾಣಿ ಪಕ್ಷಿಗಳು ನಾಲೆ ಪ್ರದೇಶ ಹಾಗೂ ನದಿ ತೀರವನ್ನು ಅವಲಂಬಿಸಿದ್ದವು. ಆದರೆ, ಈಗ ಮಳೆ ನಿರಂತವಾಗಿ ಸುರಿಯುತ್ತಿದ್ದು ತಾಲೂಕಿನ ಹಲವು ಗ್ರಾಮಗಳಲ್ಲಿ ಕಟ್ಟೆ, ಚೆಕ್‌ಡ್ಯಾಂ, ಕೃಷಿ ಹೊಂಡಗಳು ಸಂಪೂರ್ಣ ಜಲಾವೃತವಾಗಿವೆ.

ಪಕ್ಷಿಗಳ ದಾಹ ತೀರುತ್ತಿದೆ: ತಾಲೂಕಿನ ರೈತರು ಕೋವಿಡ್ ವೇಳೆಯಲ್ಲಿ ತಮ್ಮ ಕೃಷಿ ಭೂಮಿಯಲ್ಲಿ ಗ್ರಾಪಂ ಉದ್ಯೋಗ ಖಾತ್ರಿ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ಮೂಲಕ ಕೃಷಿ ಹೊಂಡ ನಿರ್ಮಿ ಸಿದ್ದರು. ದಶಕದಿಂದ ಕೃಷಿ ಹೊಂಡಗಳಲ್ಲಿ ಗಿಡಗಳುಬೆಳೆದು ಮುಚ್ಚುಕೊಳ್ಳುವ ಹಂತಕ್ಕೆ ತಲುಪುತ್ತಿದ್ದವು.

ಕೋವಿಡ್ ವೇಳೆ ಕಾಮಗಾರಿ: ಕೋವಿಡ್ ವೇಳೆ ದೇಶ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗಿತ್ತು. ಈ ವೇಳೆ ಉದ್ಯೋಗ ಖಾತ್ರಿ ಯೋಜನೆ ಮೂಲಕ ರೈತರಿಗೆ ಆರ್ಥಿಕವಾಗಿ ಸಹಾಯ ನೀಡಲು ಮುಂದಾಗಿದ್ದು ಕೃಷಿ ಹೊಂಡ, ಚೆಕ್‌ಡ್ಯಾಂ, ಹೊಲ ಹಾಗೂ ತೋಟಗಳಿಗೆ ಬದು ನಿರ್ಮಾಣ ಮಾಡಲಾಗಿತ್ತು. ಈ ವೇಳೆಹೊಲಗದ್ದೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಂಡಿದ್ದ ಫ‌ಲವಾಗಿ ಹೊಂಡಗಳು ಜಲಾವೃತಗೊಂಡಿವೆ.

ಕೂಲಿಗಾಗಿ ನಿರ್ಮಾಣ: ಹಲವು ರೈತರ ಮಕ್ಕಳುನಗರ ಪ್ರದೇಶದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದರು.ಕೋವಿಡ್ ವೇಳೆ ಎಲ್ಲರೂ ಸ್ವಗ್ರಾಮ ಸೇರಿದರು. ಈ ವೇಳೆ ರೈತ ಕುಟುಂಬಕ್ಕೆ ಅರ್ಥಿಕವಾಗಿ ಹಿನ್ನಡೆಯಾಯಿತು. ದಿಕ್ಕು ತೋಚದ ವೇಳೆ ನರೇಗಾ ಯೋಜನೆಗೆ ಕೇಂದ್ರದ ಮೋದಿ ಹಾಗೂ ರಾಜ್ಯದಯಡಿಯೂರಪ್ಪ ಸರ್ಕಾರ ಸುತ್ತೋಲೆ ಕಳುಹಿಸಿ ಗುರಿಸಾಧನೆಗೆ ಸಮಯ ನಿಗದಿ ಮಾಡಿತ್ತು. ಈ ವೇಳೆ ರೈತರು ತಮ್ಮದೇ ಕೃಷಿ ಭೂಮಿಯಲ್ಲಿ ಕೃಷಿ ಹೊಂಡನಿರ್ಮಿಸಿದ್ದರು. ಗ್ರಾಮದ ಹಳ್ಳಗಳಲ್ಲಿ ಚೆಕ್‌ ಡ್ಯಾಂ ನಿರ್ಮಾಣ ಮಾಡುವ ಕೂಲಿ ಕೆಲಸದಲ್ಲಿ ತೊಡಗಿ ಬಂದ ಹಣದಲ್ಲಿ ಜೀವನ ನಿರ್ವಹಣೆ ಮಾಡಿದ್ದರು. ಮರಳುಗಾಡಿನ ಓಯಸಸ್‌: ತಾಲೂಕಿನ ಹಲವು ಗ್ರಾಮದಲ್ಲಿ ರಾಸುಗಳಿಗೆ ನೀರುಣಿಸಲು ತೊಂದರೆ ಅನುಭವಿಸುತ್ತಿದ್ದ ರೈತರ ಪಾಲಿಗೆ ಕೃಷಿ ಹೊಂಡ ಹಾಗೂ ಚೆಕ್‌ ಡ್ಯಾಂಗಳೀಗ ಮರಳುಗಾಡಿನ ಓಯಸಿಸ್‌ನಂತಾಗಿದ್ದು ಕೃಷಿ ಹೊಂಡಗಳು ರೈತರ ಸಾಕು ಪ್ರಾಣಿಗಳಿಗೆ ಜೀವಜಲ ನೀಡುತ್ತಿವೆ.

ಅಂತರ್ಜಲ ವೃದ್ಧಿ: ಕೃಷಿ ಹೊಂಡಗಳಿಂದ ಭೂಮಿಯಲ್ಲಿ ನೀರು ಇಂಗಿದರೆ ತೆಂಗಿನ ಮರಕ್ಕೆ ಸಹಾಯ ವಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ಫ‌ಸಲು ನಿರೀಕ್ಷೆಯಲ್ಲಿದ್ದಾರೆ.

ಕೋವಿಡ್ ವೇಳೆ ಸರ್ಕಾರಉದ್ಯೋಗ ಖಾತ್ರಿ ಯೋಜನೆ ಯಲ್ಲಿಕೃಷಿ ಹೊಂಡ ನಿರ್ಮಿಸುವಂತೆ ಆದೇಶಿಸಿತ್ತು. ಪ್ರತಿ ಗ್ರಾಪಂ ಪಿಡಿಒಗಳಿಗೆ ಗುರಿ ನಿಗದಿ ಮಾಡಿ ದ್ದ ರಿಂದ 700 ಹೆಚ್ಚುಕೃಷಿ ಹೊಂಡ ತಾಲೂ ಕಿನಲ್ಲಿ ನಿರ್ಮಾಣವಾಗಿವೆ. ಕೃಷಿ ಹೊಂಡದ ಲಾಭ ಏನೆಂಬುದು ಈಗ ತಿಳಿಯುತ್ತಿದೆ. ಸುನೀಲ್‌, ತಾಪಂ ಇಒ

ಕೃಷಿ ಹೊಂಡಗಳಿಗೆ ಹಣ ವ್ಯಯಿಸುವುದಕ್ಕಿಂತ ಹಳ್ಳಕೊಳ್ಳಗಳು, ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗುವಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗಿದೆ. ಗ್ರಾಮದ ಗೋಕಟ್ಟೆಗೆ ನೀರು ಬಂದಿದ್ದು ಸುತ್ತಲಿನ 60ಕ್ಕೂ ಹೆಚ್ಚು ಬಾವಿಗಳಲ್ಲಿ ಅಂತರ್ಜಲ ವೃದ್ಧಿ ಸಿದೆ. ಎ.ಎನ್‌.ಜಯರಾಮ್‌, ಅಣ್ಣೇನಹಳ್ಳಿ ಗ್ರಾಮದ ಕೃಷಿಕ

 

-ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್‌ಡಿಡಿ

BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್‌ಡಿಡಿ

Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ

Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ

13

Lok Sabha elections: ಬೇಲೂರು; ಕೈ ಒಳಜಗಳ, ಜೆಡಿಎಸ್‌ಗೆ ಲಾಭ? 

Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್‌ ರೇವಣ್ಣ ಪ್ರಚಾರಕ್ಕೆ ಚಾಲನೆ

Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್‌ ರೇವಣ್ಣ ಪ್ರಚಾರಕ್ಕೆ ಚಾಲನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.