ಅಧಿಕ ಮಳೆಗೆ ಕೊಳೆಯುತ್ತಿದೆ ಕಾಫಿ ಬೆಳೆ


Team Udayavani, Oct 17, 2020, 4:38 PM IST

hasan-tdy-1

ಸಕಲೇಶಪುರ: ಕಾಫಿ ಹಾಗೂ ಏಲಕ್ಕಿ ನಾಡೆಂದೇ ಗುರುತಿಸಿಕೊಂಡಿರುವ ತಾಲೂಕಿನಲ್ಲಿ ಈ ಬಾರಿ ಮೂರು ನಾಲ್ಕು ತಿಂಗಳಿನಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ. ಇದರಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಸುರಿದ ಅತಿವೃಷ್ಟಿ ಮಳೆಗೆಕಾಫಿ, ಮೆಣಸು, ಭತ್ತದ ಬೆಳೆಗೆ ವ್ಯಾಪಕ ಹಾನಿಯುಂಟಾಗಿತ್ತು.ಸಾಮಾನ್ಯವಾಗಿ ಈ ವೇಳೆಗೆ ತಾಲೂಕಿನ ಮಲೆನಾಡು ಭಾಗ ದಲ್ಲಿಮಳೆ ಪ್ರಮಾಣ ತೀರಾ ಇಳಿಮುಖವಾಗಿರುತ್ತದೆ. ಆದರೆ, ಈ ಬಾರಿ ಅಕ್ಟೋಬರ್‌ ಪ್ರಾರಂಭವಾಗಿ 16 ದಿನ ಕಳೆದರೂ ಮಳೆಬಿಡುವು ನೀಡುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಕೃಷಿಕರು ತತ್ತರಿಸಿಹೋಗಿದ್ದಾರೆ.

ಒಣಗಿಸುವುದಕ್ಕೂ ಕಷ್ಟವಾಗಿದೆ: ಸಾಮಾನ್ಯವಾಗಿ ನವೆಂಬರ್‌ನಲ್ಲಿ ಅರೇಬಿಕಾ ಕಾಫಿ ಕೊಯ್ಲಿಗೆ ಬರುತ್ತದೆ. ಆದರೆ, ಈ ಬಾರಿ ಸುರಿದ ಭಾರೀ ಮಳೆಯಿಂದ ತೇವಾಂಶ ಹೆಚ್ಚಾಗಿ ಬೇಗನೆ ಕಾಫಿಹಣ್ಣಾಗಿದೆ. ಸದ್ಯ ಹಣ್ಣಾಗಿರುವ ಕಾಫಿ ಬೀಜವನ್ನಾದ್ರೂ ಕೊಯ್ಲುಮಾಡೋಣ ಅಂದರೆ ಮಳೆ ಅವಕಾಶ ನೀಡುತ್ತಿಲ್ಲ. ಕೊಯ್ಲು ಮಾಡಿರುವ ಅರೇಬಿಕಾ ಕಾಫಿ ಹಣ್ಣನ್ನು ಹೇಗೆ ಒಣಗಿಸುವುದು ಎಂಬ ಚಿಂತೆ ಬೆಳೆಗಾರರನ್ನುಕಾಡುತ್ತಿದೆ.

ಕೊಳೆಯುತ್ತಿರುವ ಹಣ್ಣು: ಈಗಾಗಲೇ ಮಳೆಯಿಂದ ಶೇ.50 ಕಾಫಿ ಹಣ್ಣು ಗಿಡದಲ್ಲೇ ಉದುರಿ ಹೋಗಿದೆ. ಉಳಿದಿರುವ ಫ‌ಸಲನ್ನು ಕೊಯ್ಲು ಮಾಡಲು ಕೂಲಿ ಆಳುಗಳು ಸಿಗುತ್ತಿಲ್ಲ, ಇತ್ತಮಳೆಯೂ ಎಡೆಬಿಡದ ಕಾರಣ ಹಣ್ಣು ಗಿಡದಲ್ಲೇ ಕೊಳೆ ಯುತ್ತಿದೆ. ಇದು ಅರೇಬಿಕಾ ಕಾಫಿ ಬೆಳೆಗಾರರ ಗೋಳಾದರೆ, ಇನ್ನು ರೋಬಾಸ್ಟ ಬೆಳೆಗಾರರ ಸ್ಥಿತಿ ಇನ್ನೂ ಶೋಚನೀಯ ವಾಗಿದೆ. ಮಳೆಯಿಂದ ಕಾಫಿ ಹಣ್ಣಿನ ಜೊತೆ ಎಲೆಯೂಕೊಳೆಯಲಾರಂಭಿಸಿದೆ.

ಡಿಸೆಂಬರ್‌ನಲ್ಲಿ ಕೊಯ್ಲಿಗೆ ಬರುತ್ತಿತ್ತು: ಮಳೆ ನೀರು ನಿಂತುಹಣ್ಣು, ಎಲೆಕೊಳೆಯುತ್ತಿದೆ. ಇದು ರೈತರನ್ನು ಆತಂಕಕ್ಕೆ ದೂಡಿದೆ.ಸಾಮಾನ್ಯವಾಗಿ ಡಿಸೆಂಬರ್‌ ಅಂತ್ಯಕ್ಕೆ ರೋಬಾಸ್ಟ ಕಾಫಿ ಫ‌ಸಲಿಗೆಬರುತ್ತದೆ. ಆದರೆ, ಈ ಬಾರಿ ಸುರಿಯುತ್ತಿರುವಮಳೆಯಿಂದಾಗಿ ಕೆಲವು ತೋಟಗಳಲ್ಲಿ ರೋಬಾಸ್ಟ ಹಣ್ಣಾಗು ತ್ತಿದೆ. ಇದುಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ರೋಗಕ್ಕೆ ತುತ್ತಾಗುವ ಸಾಧ್ಯತೆ: ಧಾರಣೆ ಕುಸಿತ, ಇಳುವರಿ ಕುಂಟಿತ, ರೋಗ, ಸಾಲಬಾಧೆಯಿಂದ ಕಂಗೆಟ್ಟಿರುವ ಬೆಳೆಗಾರರಿಗೆ, ಇದೀಗ ಮತ್ತೂಮ್ಮೆ ಸುರಿಯುತ್ತಿರುವ ಮಳೆ ಗಾಯದಮೇಲೆ ಬರೆ ಎಳೆದಿದೆ. ಒಂದೆಡೆಕಾಫಿ ನೆಲಕಚ್ಚಿದ್ದು, ಮತ್ತೂಂ ದೆಡೆಕಾಳು ಮೆಣಸಿನ ಬಳ್ಳಿಕೊಳೆತು ಹೋಗುತ್ತಿದೆ. ಇನ್ನು ಉಳಿದಿರುವ ಗಿಡ ಗಳು ಬಿಸಿಲು ಬಂದ ನಂತರ ಹಳದಿ ರೋಗಕ್ಕೆ ತುತ್ತಾಗುವಸಾಧ್ಯತೆಯಿದೆ. ಮಳೆಯಿಂದಾಗಿ ಹಲವು ಕಾಫಿ ತೋಟಗಳಲ್ಲಿ ಬದುಗಳು ಒಡೆದು ಹೋಗಿದ್ದು, ಪುನರ್‌ ನಿರ್ಮಾಣ ಮಾಡ ಬೇಕಾಗಿದೆ. ತಾಲೂಕಿನಲ್ಲಿ ಬೆಳೆಯಲಾಗಿದ್ದ ಅಡಕೆ ಬೆಳೆ ಬಹುತೇಕವಾಗಿ ನಾಶವಾಗಿದೆ. ಕಾಫಿ ಬೆಳೆಗಾರರಿಗೆ ಕೂಲಿ ಕಾರ್ಮಿಕರಿಗೆಕೊಡಲು ಹಣವಿಲ್ಲದಂತಾಗಿದೆ.

ಒಟ್ಟಾರೆಯಾಗಿ ತಾಲೂಕಿನಲ್ಲಿ ಬೆಳೆಗಾರರ ಪರಿಸ್ಥಿತಿ ಚಿಂತಾಜನಕ ವಾಗಿದ್ದು, ಇದು ರೀತಿ ಮಳೆ ಮುಂದುವರಿದಲ್ಲಿ ಅರೇಬಿಕಾ ಬೆಳೆಗಾರರಿಗೆ ತೀವ್ರಪೆಟ್ಟುಬೀಳುವ ಸಾಧ್ಯತೆಯಿದೆ.2 ದಿನಗಳಿಂದ ಮಳೆ ಬಿಡುವು ಕೊಟ್ಟಿದ್ದು, 15 ದಿನಗಳ ನಂತರ ತಾಲೂಕಿನ ಜನ ಬಿಸಲುಕಾಣುವಂತಾಗಿದೆ.

ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಕಾಫಿ, ಮೆಣಸು, ಅಡಕೆ ಶೇ.50ಕ್ಕೂ ಹೆಚ್ಚು ನಾಶವಾಗಿದೆ.ಕಾಫಿ, ಮೆಣಸು ದರಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಕುಸಿದಿದೆ. ಈಹಿನ್ನೆಲೆಯಲ್ಲಿ ಸರ್ಕಾರಕಾಫಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. ಮೋಹನ್‌ಕುಮಾರ್‌, ಅಧ್ಯಕ್ಷ, ಕರ್ನಾಟಕ ಬೆಳೆಗಾರರ ಒಕ್ಕೂಟ

ವಾರದಿಂದ ವಾಡಿಕೆಗೂ ಹೆಚ್ಚು ಮಳೆಯಾಗಿದೆ.ಕಾಫಿ,ಮೆಣಸು ಉದುರಿ ಹೋಗುತ್ತಿದೆ. ಸರ್ಕಾರಕೂಡಲೇ ರೈತರ ನೆರವಿಗೆ ಧಾವಿಸಬೇಕು. ಚಿದನ್‌, ಕಾಫಿ ಬೆಳೆಗಾರ, ಹೊಂಗಡಹಳ್ಳ

 

ಸುಧೀರ್‌ ಎಸ್‌.ಎಲ್‌.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.