
ಎಲ್ಲರಿಂದಲೂ ಸಮ್ಮತಿ ಸಿಕ್ಕಿದರೆ ಮಾತ್ರ ಹಾಸನ ಕ್ಷೇತ್ರದಲ್ಲಿ ಸ್ಪರ್ಧೆ: ರಾಜೇಗೌಡ
Team Udayavani, Mar 20, 2023, 5:11 AM IST

ಹಾಸನ: ನಾನು ಯಾರ ಪರವಾದ ಅಭ್ಯರ್ಥಿಯಲ್ಲ. ಜೆಡಿಎಸ್‌ನಲ್ಲಿ ಎಲ್ಲರಿಂದಲೂ ಸಮ್ಮತಿ ಸಿಕ್ಕಿದರೆ ಮಾತ್ರ ಸ್ಪರ್ಧೆಗಿಳಿಯುವೆ ಎಂದು ಪಕ್ಷದ ಹಿರಿಯ ಮುಖಂಡ ಕೆ.ಎಂ.ರಾಜೇಗೌಡ ( ಕೆಎಂಆರ್) ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಾಕಾಂಕ್ಷಿಗಳಲ್ಲಿ ನನ್ನ ಹೆಸರು ಪ್ರಸ್ತಾಪವಾದ ನಂತರ ನನ್ನ ಬಗ್ಗೆ ವಿಭಿನ್ನ ಹೇಳಿಕೆಗಳು ಕೇಳಿ ಬರುತ್ತಿವೆ. ನಾನು ಯಾರ ಪರ, ವಿರುದ್ಧವೂ ಇಲ್ಲ. ಯಾರ ಬಿಂಬಿತ ಅಭ್ಯರ್ಥಿಯೂ ಅಲ್ಲ. ರೇವಣ್ಣ ಅವರೇ ಅಭ್ಯರ್ಥಿ ಎಂಬ ಮಾತುಗಳು ಈಗ ಕೇಳಿಬರುತ್ತಿವೆ. ಆದರೆ ನಾನು ಸರ್ವಸಮ್ಮತ ಅಭ್ಯರ್ಥಿಯಾದರೆ, ಪಕ್ಷದ ಎಲ್ಲ ಮುಖಂಡರೂ ಸಂಘಟಿತರಾಗಿ ಚುನಾವಣೆಯಲ್ಲಿ ಬೆಂಬಲ ನೀಡಿ ಹೋರಾಟ ಮಾಡುವ ನಿಖರ ಭರವಸೆ ನೀಡಿದರೆ ಮಾತ್ರ ಸ್ಪರ್ಧಿಸುತ್ತೇನೆ. ಪಕ್ಷದಲ್ಲಿ ಒಮ್ಮತ ಮೂಡಿ ಸ್ಪರ್ಧೆಗಿಳಿಯಿರಿ ಎಂದರೆ ಸ್ಪರ್ಧಿಸುವೆ. ಇಲ್ಲವೇ ಪಕ್ಷದ ಮುಖಂಡರು ಸೂಚಿಸುವ ಅಭ್ಯರ್ಥಿ ಪರ ಪ್ರಚಾರ ಮಾಡುವೆ ಎಂದರು.
ಚುನಾವಣೆಯಲ್ಲಿ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿ ಘೋಷಣೆ ಆಗುವವರೆಗೂ ನಾನು ಪ್ರಚಾರ ಮಾಡಲು ಹೋಗುವುದಿಲ್ಲ. ನಮ್ಮ ಪಕ್ಷದಲ್ಲಿ ಒಗ್ಗಟ್ಟಿರಬೇಕು. ಒಟ್ಟಾಗಿ ಹೋಗಬೇಕು ಎಂಬುದು ನನ್ನ ಅಪೇಕ್ಷೆ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
