ಜಿಲ್ಲೆಯಲ್ಲಿ ದಿವ್ಯಾಂಗರಿಂದ ಶೇ.95ರಷ್ಟು ಮತದಾನ

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ವೀಪ್‌ ಚಟುವಟಿಕೆಗೆ ಉತ್ತಮ ಸ್ಪಂದನೆ: ಅಧಿಕಾರಿಗಳ ಹರ್ಷ

Team Udayavani, Apr 26, 2019, 5:17 PM IST

● ಎನ್‌.ನಂಜುಂಡೇಗೌಡ

ಹಾಸನ: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಹಾಸನ ಕ್ಷೇತ್ರದಲ್ಲಿ ದಾಖಲೆ ಮತದಾನವಾಗಿರು ವಂತೆಯೇ ದಿವ್ಯಾಂಗರಿಂದಲೂ ಶೇ.95ರಷ್ಟು ಮತದಾನವಾಗಿದೆ.

ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಬಗೆಯ ದೈಹಿಕ ನ್ಯೂನ್ಯತೆಗಳಿಂದ ಬಳಲುತ್ತಿರುವ ದಿವ್ಯಾಂಗರು ಶೇ. 95.37ರಷ್ಟು ಮತ ಚಲಾಯಿಸಿ ಮಾದರಿ ಎನಿಸಿದ್ದಾರೆ. ಜಿಲ್ಲೆಯಲ್ಲಿ 12,896 ದಿವ್ಯಾಂಗ ರಿದ್ದು, 7,874 ಪುರುಷ ಹಾಗೂ 5,022 ಮಹಿಳಾ ಮತದಾರರಿದ್ದಾರೆ, ಅದರಲ್ಲಿ 7,582 ಪುರುಷರು ಹಾಗೂ 4,718 ಮಹಿಳಾ ಮತದಾರರು ಸೇರಿದಂತೆ ಒಟ್ಟು 12,300 ಮಂದಿ ಮತ ಚಲಾಯಿಸಿದ್ದಾರೆ.

ವಾಹನ ವ್ಯವಸ್ಥೆ: ಈ ಬಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ಪೀಪ್‌ ಸಮಿತಿ ವತಿಯಿಂದ ದಿವ್ಯಾಂಗರು ಹಾಗೂ ಆಶಕ್ತ ವಯೋವೃದ್ಧರಿಗೆ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದು ಹೆಚ್ಚಿನ ಸಂಖ್ಯೆ ಯಲ್ಲಿ ದಿವ್ಯಾಂಗರು ಹಾಗೂ ಆಶಕ್ತ ಹಿರಿಯ ನಾಗರೀಕರು ಮತಗಟ್ಟೆಗೆ ಬಂದು ತಮ್ಮ ಮತದಾನದ ಹಕ್ಕುಗಳನ್ನು ಚಲಾಯಿಸಲು ಸಹಕಾರಿಯಾಯಿತು.

ಮತದಾನದ ತರಬೇತಿ: ಈ ಬಾರಿ ಸ್ಪೀಪ್‌ ಸಮಿತಿ ವತಿಯಿಂದ ದಿವ್ಯಾಂಗರಿಗೂ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ, ವಿದ್ಯುನ್ಮಾನ ಮತಯಂತ್ರಗಳ ಬಳಕೆ ಬಗ್ಗೆ ತರಬೇತಿ ನೀಡಲಾಯಿತು. ದಿವ್ಯಾಂಗರಿಗೆ ಟ್ರೈಸಿಕಲ್ ರ್ಯಾಲಿ ಏರ್ಪಡಿಸಿ ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು. ಸಂಜ್ಞೆ ಭಾಷೆಯ ತರ್ಜುಮೆ ದಾರರನ್ನು ಹೋಬಳಿವಾರು ನೇಮಿಸಿ ಮತದಾನಕ್ಕೆ 3 ದಿನಗಳಿರುವಂತೆ ಜಿಲ್ಲೆಯ ಎಲ್ಲಾ ಶ್ರವಣದೊಷವುಳ್ಳ ದಿವ್ಯಾಂಗರಿಗೆ ಹೋಬಳಿವಾರು ಮತದಾನದ ಹಾಗೂ ಇವಿಎಂ, ವಿವಿ ಪ್ಯಾಟ್‌ಗಳ ಬಗ್ಗೆ ತರಬೇತಿ ನೀಡ ಲಾಯಿತು. ಅಲ್ಲದೆ ಪ್ರತಿ ಗ್ರಾಮ ಪಂಚಾಯತಿ ಹಂತ ದಲ್ಲಿ ದಿವ್ಯಾಂಗರನ್ನು ಕರೆತರಲು ವಾಹನ, ಸ್ವಯಂ ಸೇವಕರ ಸೇವೆ ಒದಗಿಸಲಾಗಿತ್ತು. ಗಾಲಿ ಕುರ್ಚಿ ವ್ಯವಸ್ಥೆ, ರ್‍ಯಾಂಪ್‌ ಬ್ರೈಲ್ಲಿಪಿ ಸೌಲಭ್ಯ, ಭೂತಗನ್ನಡಿ ವ್ಯವಸ್ಥೆ ಮಾಡಲಾಗಿತ್ತು.

ಸಂಜ್ಞಾ ಭಾಷೆ ತರ್ಜುಮೆದಾರರ ನೇಮಕ: ಜಿಲ್ಲೆ ಯಲ್ಲಿ 1,182 ಶ್ರವಣದೊಷವುಳ್ಳ ಮತದಾರರಿದ್ದು, ಮತದಾನದ ದಿನದಂದು ಹೋಬಳಿ ಕೇಂದ್ರಕ್ಕೆ ಒಬ್ಬರಂತೆ 38 ಕಡೆಗಳಲ್ಲಿ ಸಂಜ್ಞಾ ಭಾಷೆ ತರ್ಜುಮೆ ದಾರರನ್ನು ನೇಮಿಸಲಾಗಿತ್ತು. 662 ಮತಗಟ್ಟೆಗಳಲ್ಲಿ ಮತಗಟ್ಟೆ ಹೊರಭಾಗದಲ್ಲಿ ಟೀವಿ ಅಳವಡಿಸಿ ಸಂಜ್ಞೆ ಭಾಷೆಯ ವಿಡಿಯೋ ಪ್ರಸಾರ ಮಾಡುವ ಮೂಲಕ ಮತದಾದ ಬಗ್ಗೆ ಮಾಹಿತಿ ನೀಡಲಾಗಿತ್ತು.

ನಿರಂತರವಾಗಿ ದಿವ್ಯಾಂಗರ ಮತದಾರರಿಗೆ ಮಾಹಿತಿ ನೀಡಿ, ಸಂಪರ್ಕ ಇರಿಸಿಕೊಂಡು ಮತಗಟ್ಟೆಗೆ ಕರೆತಂದು ಮತದಾನ ಮಾಡಿಸಲಾಯಿತು. ಎಲ್ಲಾ ಮತಗಟ್ಟೆಗಳಲ್ಲಿ ಛತ್ರಿಯ ನೆರಳಿನ ಸಹಾಯದಿಂದ ಬಿಸಿಲಿನ ತಾಪ ಉಂಟಾಗದಂತೆ ನೆರವು ನೀಡಲಾಗಿತ್ತು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಲಿಂಗ ಅಲ್ಪ ಸಂಖ್ಯಾತರೂ ಸಹ ಮತದಾರರ ಜಾಗೃತಿ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಿಂಗ ಅಲ್ಪ ಸಂಖ್ಯಾತರಾದ ವರ್ಷಾ ಮತ್ತು ಶ್ರಾವಣಿ ಅವರು ಮಾತನಾಡಿ, ಈ ಬಾರಿ ಜಿಲ್ಲಾ ಪಂಚಾಯಿತಿ ಸಭಾಂಗಣದಕ್ಕೆ ಆಹ್ವಾನಿಸಿ ವಿಶೇಷವಾಗಿ ಲಿಂಗ ಅಲ್ಪ ಸಂಖ್ಯಾತರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯುನ್ಮಾನ ಮತಯಂತ್ರಗಳ ಬಳಕೆ, ವಿ.ವಿ.ಪ್ಯಾಟ್ ಬಳಕೆ ಮಾಹಿತಿ ನೀಡಿ ಕಡ್ಡಾಯ ಮತ ದಾನದಮಹತ್ವದ ಬಗ್ಗೆ ಪ್ರೇರಣೆ ನೀಡಿದ್ದು ಲಿಂಗ ಅಲ್ಪ ಸಂಖ್ಯಾತರು ಮತಹಾಕಲು ಕಾರಣವಾಗಿದೆ ಎಂದರು.

ಸ್ಪೀಪ್‌ ಅಧ್ಯಕ್ಷರ ಕೃತಜ್ಞತೆ: ಜಿಲ್ಲಾ ಸ್ಪೀಪ್‌ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್‌. ವಿಜಯ ಪ್ರಕಾಶ್‌ ಅವರು ಈ ಬಗ್ಗೆ ಪ್ರತಿಕಿಯಿಸಿ ಜಿಲ್ಲಾ ಸ್ಪೀಪ್‌ ಸಮಿತಿ ಹಾಗೂ ಜಿಲ್ಲಾಡಳಿತದ ಪ್ರಯತ್ನ ವಿಫ‌ಲ ನೀಡಿದೆ ಎಂದಿದ್ದಾರೆ. ಜಿಲ್ಲೆಯಲ್ಲಿ ಶೇ 95.37ರಷ್ಟು ದಿವ್ಯಾಂಗರು ಮತಚಲಾಯಿಸಿ ಇತರರಿಗೆ ಮಾದರಿ ಎನಿಸಿದ್ದಾರೆ. ಎಂತಹ ದೈಹಿಕ ಕಷ್ಟವಿದ್ದರೂ ಛಲದಿಂದ ಬಂದು ಮತಹಾಕಿದ ದಿವ್ಯಾಂಗ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

 

ಜಿಲ್ಲಾಧಿಕಾರಿ ಅಭಿನಂದನೆ

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರೂ ಪ್ರತಿಕ್ರಿಯಿಸಿ, ದಿವ್ಯಾಂಗರಿಗೆ ಮತದಾನದ ಬಗ್ಗೆ ಇರುವ ಕಾಳಜಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಸ್ಪೀಪ್‌ ಸಮಿತಿಯಿಂದಾದ ಜಾಗೃತಿ ಮತ್ತು ಜಿಲ್ಲೆಯಾದ್ಯಂತ ಮಾಡಿದ್ದ ಸೌಲಭ್ಯಗಳು ಸಮರ್ಪಕವಾಗಿ ಅನುಷ್ಠಾನ ಗೊಳಿಸಿದ್ದಕ್ಕಾಗಿ ಎಲ್ಲಾ ಅಧಿಕಾರಿ ಸಿಬ್ಬಂದಿಗೆ, ಸ್ವಯಂ ಸೇವಕರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ರಾಜ್ಯ ಸರಕಾರ ತನ್ನ ಸ್ವಂತ ತೆರಿಗೆ ಮೂಲದಿಂದ ನಿಗದಿತ ಆದಾಯ ಸಂಗ್ರಹ ಗುರಿ ತಲುಪುವಲ್ಲಿ ಬಹುತೇಕ ಯಶಸ್ಸು ಕಾಣುವಂತಿದೆ. ಆದರೆ ನೆರೆ ಪರಿಹಾರ ಮತ್ತು...

  • ಇ ತ್ತೀಚೆಗೆ ನವನವೀನ ಮಾದರಿಯ ಸ್ಮಾರ್ಟ್‌ ಫಿಟೆ°ಸ್‌ ಬ್ಯಾಂಡ್‌ ಹಾಗೂ ಸ್ಮಾರ್ಟ್‌ವಾಚ್‌ಗಳು ಬಿಡುಗಡೆಯಾಗುತ್ತಿವೆ. ಇವುಗಳು ಇಂದು ನಮ್ಮ ಕೆಲಸವನ್ನು ಸುಲಭ ಮಾಡುತ್ತಿವೆ....

  • ಇಂದು ಆಕರ್ಷಕ ಬೈಕ್‌ಗಳು ಹೆಚ್ಚು ಜನ ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಇಲ್ಲಿ ರಸ್ತೆಗಿಳಿಯಲು ಸಿದ್ಧವಾಗಿರುವ ಬೈಕ್‌ ಒಂದನ್ನು ಪರಿಚಯಿಸಲಾಗಿದೆ. ಬಜಾಜ್‌...

  • ಉಡುಪಿ ಜಿಲ್ಲೆಯ ಕೋಟದ ಹೆದ್ದಾರಿ ಸನಿಹದಲ್ಲಿ, ಮಸೀದಿಯ ಹಿಂದೆ ಇರುವ ಆ ಮನೆಯ ಅಂಗಳದಲ್ಲಿ ಹತ್ತಾರು ಜನ ಕಾದಿದ್ದರು. ಎಲ್ಲರ ಮುಖದಲ್ಲಿಯೂ "ಮಿನಿಸ್ಟರ್‌ ಎಷ್ಟು...

  • ದೆಹಲಿಯಲ್ಲಿ ಗುರು ಶ್ರದ್ಧಾನಂದರೊಂದಿಗೆ ಇದ್ದ ಸಮಯ. ಡಯರ್‌ನ ಸಿಡಿಗುಂಡುಗಳು ನೂರಿನ್ನೂರಲ್ಲ, ಸಾವಿರಕ್ಕೂ ಹೆಚ್ಚು ಮಂದಿಯನ್ನು ಕೇವಲ ಹದಿನೈದು ನಿಮಿಷದಲ್ಲಿ...