ದೃಢ ನಿರ್ಧಾರದಿಂದ ಪ್ಲಾಸ್ಟಿಕ್‌ ತ್ಯಜಿಸಿ

Team Udayavani, Oct 1, 2019, 5:09 PM IST

ಸಕಲೇಶಪುರ: ಎಲ್ಲರೂ ದೃಢ ನಿರ್ಧಾರದೊಂದಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಪ್ಲಾಸ್ಟಿಕ್‌ ಬಳಕೆಯನ್ನುಸಂಪೂರ್ಣ ತ್ಯಜಿಸಲು ಪ್ರತಿಜ್ಞೆ ಮಾಡ ಬೇಕೆಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಹೇಳಿದರು. ಪಟ್ಟಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆಯಿಂದ ಏರ್ಪಡಿಸಿದ್ದ ಪ್ಲಾಸ್ಟಿಕ್‌ ನಿಷೇಧ ಜಾಗೃತಿ ಜಾಥಾದಲ್ಲಿಮಾತನಾಡಿದ ಅವರು, ಪ್ಲಾಸ್ಟಿಕ್‌ ನಿಂದಾಗುವ ದುಷ್ಪರಿಣಾಮದ ಅರಿವು ಮೂಡಿಸುವುದು ಅಗತ್ಯ ಎಂದರು.

ತಹಶೀಲ್ದಾರ್‌ ರಕ್ಷಿತ್‌ ಮಾತನಾಡಿ, ಪ್ಲಾಸ್ಟಿಕ್‌ಗಳನ್ನು ಅಂಗಡಿಗಳಲ್ಲಿ ಹಾಗೂ ಎಲ್ಲೂ ಕೂಡ ಮಾರಾಟ ಮತ್ತು ಬಳಕೆಮಾಡುವುದು ಬೇಡ. ಬಟ್ಟೆ ಇತರೆ ಬ್ಯಾಗುಗಳನ್ನು ಮಾರಾಟ ಮತ್ತು ಬಳಕೆ ಮಾಡಬೇಕು. ಪ್ಲಾಸ್ಟಿಕ್‌ ಭೂಮಿಗೆಬಿದ್ದರೇ ಅದು ಎಷ್ಟು ವರ್ಷಗಳಾದರೂ ಕರಗುವುದಿಲ್ಲ. ಉತ್ತಮ ಭವಿಷ್ಯಕ್ಕಾಗಿ ಈಗಲೇ ಯೋಚನೆ ಮಾಡಿ ಇಂದಿನಿಂದ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಅಂಗಡಿಗಳಲ್ಲಿ ಯಾರು ಪ್ಲಾಸ್ಟಿಕ್‌ ಮಾರಾಟ ಮಾಡುತ್ತಾರೆ ಅವರಿಗೆ ದಂದ ವಿಧಿಸಲಾಗುತ್ತದೆ ಎಂದರು.

ಪಟ್ಟಣದ ಎಆರ್‌ಟಿ ಕಚೇರಿ ಯಿಂದ ಪುರಭವನದವರೆಗೆ ಜಾಥ ನಡೆಸಲಾಯಿತು. ತಾಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೀಶ್‌, ಸಾರಿಗೆ ಅಧಿಕಾರಿ ಅನಿಲ್‌, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ್‌, ತಾಪಂ ಸದಸ್ಯ ಯಡೇ ಹಳ್ಳಿ ಮಂಜುನಾಥ್‌, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಉದಯ್‌ ಕುಮಾರ್‌, ತಾಪಂ ಸದಸ್ಯೆ ರುಕ್ಮಿಣಿ, ಸಮಾಜ ಸೇವಕ ಅರಸೀ ಕೆರೆಯ ಉಮಾಪತಿ ಮೊದಲಿಯಾರ್‌ ಮತ್ತಿತರರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ